Challenge: ತೀಕ್ಷ್ಣ ದೃಷ್ಟಿ ಉಳ್ಳವರಿಗೆ ಮಾತ್ರ ಸಾಧ್ಯ! ಈ ಚಿತ್ರದಲ್ಲಿರುವ ನಾಲ್ಕು ಮಹಿಳೆಯರನ್ನು ಶೋಧಿಸಲು ಸಾಧ್ಯವೇ! 99 % ಜನರಿಗೆ ಅಸಾಧ್ಯವಾದ ಉತ್ತರ ನಿಮಗೆ ಬಂದೀತೆ?

ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿರುವ ಅನೇಕ ಚಿತ್ರಗಳು ತುಂಬಾ ವಿಚಿತ್ರ ಕಾರಣದಿಂದ ವೈರಲ್ ಆಗುತ್ತವೆ. ಕಣ್ಣಿಗೆ ಕಾಣಿಸುವ ಪ್ರಸ್ತುತ ಚಿತ್ರ ಸಾಮಾನ್ಯವಾಗಿ ಕಂಡರೂ ಅದರಲ್ಲಿ ತುಂಬಾ ಗೂಢತೆ ಅಡಗಿರುತ್ತದೆ. ಒಟ್ಟಿನಲ್ಲಿ ಚಿತ್ರ ಕಣ್ಣಿಗೆ ಕಂಡ ಹಾಗೆ ಇರದೆ ಅದು ಬೇರೆಯೇ ಆಗಿರುತ್ತದೆ. ಇಂಥ ಚಿತ್ರಗಳಿಗೆ ಆಪ್ಟಿಕಲ್ ಇಲ್ಯುಜನ್ ಚಿತ್ರಗಳೆಂದು ಕರೆಯುತ್ತಾರೆ. ಈ ರೀತಿಯ ನಿಗೂಢ ಚಿತ್ರಗಳು ನೇಟಿಜನ್ಸ್ ಗಳಿಗೆ ತುಂಬಾನೇ ತಲೆ ತಿನ್ನುತ್ತವೆ. ಈ ವೈರಲ್ ಆಗುವ ಫೋಟೋಗಳಲ್ಲಿ ಪಜಲ್ಸ್ ಫೋಟೋಗಳು ನೇಟಿಜನ್ಸ್ ಗಳ ಮನಸ್ಸನ್ನು ಗೆಲ್ಲುವುದರ ಜೊತೆಗೆ ತಲೆಯೂ ತಿನ್ನುತ್ತವೆ. ಆ ರಹಸ್ಯವನ್ನು ಹುಡುಕುವುದು ಕೆಲವರಿಗೆ ತುಂಬಾ ಇಷ್ಟದ ಕೆಲಸ ಅಥವಾ ಆಟವಾಗಿರುತ್ತದೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಬೇರೆಯಾದ ಚಿತ್ರವೊಂದು ಓಡಾಡುತ್ತಿದೆ. ಆ ಚಿತ್ರದಲ್ಲಿ ಮೇಲ್ನೋಟಕ್ಕೆ ಒಬ್ಬಳೇ ಮಹಿಳೆ ಕಂಡರೂ ಅಲ್ಲಿ ಅಡಗಿರುವ ನಾಲ್ಕು ಮಹಿಳೆಯರನ್ನು ಶೋಧಿಸಬೇಕಾಗಿದೆ. ಹಾಗಾದರೆ ಶೋಧಿಸಿ ತೋರಿಸುತ್ತೀರಾ?

ಈ ರೀತಿಯ ರಹಸ್ಯವನ್ನು ಹುಡುಕಲು ಒಳ್ಳೆಯ ದೃಷ್ಟಿ ಮತ್ತು ಮಾನಸಿಕ ಏಕಾಗ್ರತೆಯ ಅವಶ್ಯಕತೆ ಇರುತ್ತದೆ. ಏಕೆಂದರೆ ಈ ರೀತಿಯ ಫೋಟೋಗಳು ಬುದ್ಧಿಯ ಜೊತೆಗೆ ಆಟ ಆಡುತ್ತವೆ. ಈ ಚಿತ್ರವನ್ನು ಯುಕ್ರೇನ್ ನ ಒಲೆಗ್ ಶುಪ್ಲಿಯಾಕ್ (Oleg Shupliak) ಹೆಸರಿನ ಆರ್ಟಿಸ್ಟ್ ತೆಗೆದಿದ್ದಾನೆ.

‘ಫೋರ್ ವುಮೆನ್’ ಹೆಸರಿನ ಈ ಚಿತ್ರವನ್ನು ಒಲೆಗ್ ಶುಪ್ಲಿಯಾಕ್ ಅವರು 2013 ರಲ್ಲಿ ತೆಗೆದಿದ್ದಾರೆ. ಈ ಚಿತ್ರದಲ್ಲಿರುವ ನಾಲ್ಕು ಮಹಿಳೆಯರನ್ನು ನೀವು ಶೋಧಿಸುವಲ್ಲಿ ಯಶಸ್ಸು ಸಾಧಿಸಿದ್ದಾದರೆ ನಿಮಗೆ ಕಾಂಗ್ರಟ್ಸ್.

ಆದರೆ ನಿಮ್ಮ ಕಣ್ಣುಗಳು ಈ ಚಿತ್ರದಲ್ಲಿರುವ ನಾಲ್ಕೂ ಮಹಿಳೆಯರನ್ನು ಹುಡುಕುವಲ್ಲಿ ಎಡವಿದ್ದರೆ ನಾವೇ ನಿಮಗೆ ಉತ್ತರವನ್ನು ಹೇಳಿ ಕೊಡುತ್ತೇವೆ.

ಮೊದಲ ದೃಷ್ಟಿಯಲ್ಲಿಯೇ ನಿಮಗೆ ಒಬ್ಬಳು ಮಹಿಳೆ ಕಂಡು ಬರುತ್ತಾಳೆ ಆಕೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದಾಳೆ. ಎರಡನೆಯ ಮಹಿಳೆ ಆಕೆ ಮೊಬೈಲ್ ಹಿಡಿದ ಬಲಗೈಯ ಮುಂಗೈ ಹತ್ತಿರ ಕಣ್ಣು, ಮೂಗು ಮತ್ತು ಬಾಯಿ ಕಂಡು ಬರುತ್ತಿವೆ. ಇನ್ನು ಮೂರನೆಯ ಸ್ತ್ರೀ ಆಕೆಯ ಬಲಗೈನ ಅಂಗೈಯಲ್ಲಿ ನೋಡಿ ಅಲ್ಲಿ ಪುಟ್ಟ ಮಹಿಳೆಯೊಬ್ಬಳು ಕಂಡು ಬರುತ್ತಿದ್ದಾಳೆ. ನಾಲ್ಕನೆಯ ಮಹಿಳೆಯನ್ನು ಹುಡುಕಲು ಅಷ್ಟೊಂದು ಕಷ್ಟವಿಲ್ಲ. ಮಹಿಳೆಯ ಹೊಟ್ಟೆಗೆ ನೋಡಿದಾಗ ಅಲ್ಲಿ ತುಟಿಗಳು ಕಾಣುತ್ತಿವೆ. ಹಾಗೆಯೇ ಅದರ ಮೇಲೆಯೇ ಮೂಗು, ಕಣ್ಣುಗಳು (ಎರಡನೆಯ ಮಹಿಳೆಯು ಮೊಬೈಲ್ ಹಿಡಿದ ಬಲಗೈಯ ಮುಂಗೈ ಮೂಗು ) ಕಾಣುತ್ತಿದೆ.