ಮರಳಿ ಯತ್ನವ ಮಾಡು ಎಂಬುದಕ್ಕೆ ಮಸ್ತ್ ಉದಾಹರಣೆ ಈ ಮಗು! ಇಂಟ್ರೆಸ್ಟಿಂಗ್ VIDEO
ಈ ಮಗುವಿಗೆ ಬರೀ ಏಳು ವರ್ಷ ವಯಸ್ಸು, ಆದರೆ ಛಲ ಹೇಗಿದೆ ನೋಡಿ! ಹಿಡಿದ ಕೆಲಸ ಬಿಡಬಾರದು ಎಂಬುದು ಆಕೆಯ ಧ್ಯೇಯವಾಗಿದೆ. ಅದೇನೇ ಆದರೂ ಅಂದುಕೊಂಡಿದ್ದು ಬಿಡಬಾರದು ಅಂತ ನಿರ್ಧರಿಸಿದ ಹಾಗಿದೆ ಈ ಮಗು. ಮೊದಮೊದಲು ಜಾರಿದರೂ ಅದು ದೃತಿಗೆಡಲಿಲ್ಲ, ಕೊನೆಗೂ ಅಂದುಕೊಂಡಿದ್ದು ಸಾಧಿಸಿಯೇ ಬಿಟ್ಟ.
ಅಲ್ಲಿದ್ದ ಪಿಲ್ಲರ್ ಏರಬೇಕೆಂಬುದು ಅವನ ಆಸೆ (ಅಲ್ಲಿರುವುದು ಹೆಣ್ಣು ಮಗು ಅಲ್ಲ!), ಅದರಂತೆ ಪ್ರಯತ್ನ ಆರಂಭಿಸಿತು. ಆದರೆ ಹಲವು ಸಲ ಪ್ರಯತ್ನ ಮಾಡಿದರೂ ಮಗುವಿಗೆ ಏರಲಾಗಲಿಲ್ಲ. ಬೇರೆ ಯಾರಾದರೂ ಆಗಿದ್ದರೆ ಅಷ್ಟಕ್ಕೇ ಸುಮ್ಮನಾಗುತ್ತಿದ್ದರು. ಈವನ್ ದೊಡ್ಡವರೂ ಕೂಡ ಹೋಗ್ಲಿಬಿಡು ಅಂತ ಹಿಂಜರಿಯುತ್ತಿದ್ದರು. ಆದರೆ ಮಗು ಅದನ್ನು ಸವಾಲಾಗಿ ತಗೆದುಕೊಂಡಿತು.
ಸಾಕಷ್ಟು ಸಲ ಪ್ರಯತ್ನ ಮಾಡಿ ಮಾಡಿ ಕೊನೆಗೂ ಅದು ಕಂಬ ಏರುವಲ್ಲಿ ಯಶಸ್ವಿಯಾಯಿತು. ಇಲ್ಲಿರುವುದು ಕೇವಲ 59 ಸೆಕೆಂಡ್ ವಿಡಿಯೊ, ಆದರೆ ಆ ಮಗು ಈ ಕಂಬ ಏರಲು ಸಾಕಷ್ಟು ಸಮಯ ಪ್ರಯತ್ನ ಮುಂದುವರೆಸಿತ್ತು. ಆ ದೃಶ್ಯಾವಳಿಗಳನ್ನು ಕಟ್ ಕಟ್ ಮಾಡಿ ಜೋಡಿಸಿ ಒಂದು ವಿಡಿಯೊ ಮಾಡಲಾಗಿದೆ.
ಡಾ.M.V ರಾವ್ ಎಂಬ ಆಂದ್ರ ಪ್ರದೇಶ ಮೂಲದ ಐಎಎಸ್ ಆಫೀಸರ್ ಈ ವಿಡಿಯೊವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಮೊದಲ ಬಾರಿಗೆ ಶೇರ್ ಮಾಡಿದ್ದು, ನಂತರ ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಶೇರ್ ಮಾಡುವಾಗ ರಾವ್ ರವರು This Kid is my Guru ಎಂದು ಶಿರ್ಷಿಕೆ ಕೊಟ್ಟಿದ್ದಾರೆ. ಅಂದರೆ ಆ ಮಗು ಅವರಿಗೆ ಗುರು ಇದ್ದ ಹಾಗೆ ಅಂತೆ. ಮರಳಿ ಯತ್ನವ ಮಾಡು ಎಂಬ ವಿಷಯದಲ್ಲಿ ಆಕೆ ನಿಜಕ್ಕೂ ಎಲ್ಲರಿಊ ಗುರುವೇ ಸರಿ.
This Kid is my Guru 😊 👏 💐🍫 pic.twitter.com/eiUPxxLzzG
— Dr. M V Rao, IAS (@mvraoforindia) May 27, 2021
ಮಗುವಿನ ಹೆಸರನ್ನು ಅರತ್ ಹೊಸೈನಿ ಎನ್ನಲಾಗಿದ್ದು ಇದು ಫುಟಬಾಲ್ ತರಬೇತಿ ಪಡೆಯುತ್ತಿದೆ. ಖಂಡಿತ ಕ್ರೀಡಾ ಕ್ಷೇತ್ರದಲ್ಲಿ ಮುಂದುವರೆಯುವ ಎಲ್ಲ ಲಕ್ಷಣ ಹಾಗೂ ಎಲ್ಲ ಅರ್ಹತೆ ಮಗುವಿಗೆ ಇದೆ. ಛಲಬಿಡದ ಅದರ ಮನಸ್ಥಿತಿಯೇ ಸಾಕು ಅದು ಯಶಸ್ಸುಗೊಳ್ಳಲು, ವಿಡಿಯೊ ಮೇಲಿದೆ ನೋಡಿ.
-Team Infotrend