ಸಾವಿರ ವರ್ಷಗಳಲ್ಲೇ ಕಂಡು ಕೇಳರಿಯದ ಭೀಕರ ಪ್ರವಾಹಕ್ಕೆ ತುತ್ತಾದ ಚೀನಾ: “ಜಗತ್ತಿಗೆ ಕೊರೊನ ಕೊಟ್ಟ ಪರಿಣಾಮ!” ಅಂತಿದ್ದಾರೆ ಜನ

ಜಗತ್ತಿನಲ್ಲಿಯ ಇಂದಿನ ಮಾರಣಾಂತಿಕ ಕೊರೋನಾ ಕಾರಣಕ್ಕೆ ಚೀನಾವೇ ಜವಾಬ್ದಾರಿಯಾಗಿದೆ ಎಂದು ಎಲ್ಲೆಡೆಯೂ ಹಿಡಿಶಾಪ ಹಾಕುತ್ತಿದ್ದಾರೆ. ವುಹಾನಿನ ಮೀಟ್ ಮಾರ್ಕೆಟ್ನಲ್ಲಿ ಮಾರಾಟ ಮಾಡಲಾಗುವ ಬಾವಲಿಯ ಮಾಂಸದಿಂದ ಕೋರೋನಾ ಹರಡಲು ಕಾರಣವಾಯಿತು ಅಥವಾ ಇಲ್ಲಿಯದೇ ಲ್ಯಾಬ್ ನಿಂದ ವೈರಸ್ ತಯಾರಿಸಿ ಎಲ್ಲೆಡೆಯೂ ಪಸರಿಸಿದರು ಎಂಬ ಮಾತು ಕೇಳಿಬರುತ್ತಿದೆ. ಇದಕ್ಕೆಲ್ಲ ಚೀನಾ ಪ್ರತ್ಯಕ್ಷವಾಗಿ ಕಾರಣವಾದರೂ ಸಹಿತ ಇಲ್ಲಿಯವರೆಗೆ ಚೀನಾ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಂಡಿಲ್ಲ.

ಆದರೆ ದೇವರು ಮಾತ್ರ ಇದೆಲ್ಲವನ್ನೂ ನೋಡುತ್ತಿರುತ್ತಾನೆ. ಚೀನಾದ ಈ ಕೃತ್ಯದಿಂದ ಸಂತಾಪಗೊಂಡ ಉಳಿದ ದೇಶದವರು ಚೀನಾಗೆ ಏನು ಮಾಡಲಿಕ್ಕಿಲ್ಲ, ಆದರೆ ದೇವರು ಮಾತ್ರ ಚೀನಾದ ಕುಕೃತ್ಯಕ್ಕೆ ಶಿಕ್ಷೆ ಚೆನ್ನಾಗಿ ನೀಡುತ್ತಿದ್ದಾನೆ ಎನ್ನಲಾಗುತ್ತಿದೆ.

ರಿಪೋರ್ಟ್ ಗಳ ಪ್ರಕಾರ ಚೀನಾದಲ್ಲಿ ಸಾವಿರ ವರ್ಷಗಳ ನಂತರ ಇಂತಹ ಪ್ರಳಯಾಂತಕ ಪ್ರವಾಹವು ಬಂದಿದೆ ಎಂದು ಹೇಳಲಾಗುತ್ತಿದೆ. ಇಷ್ಟೊಂದು ವರ್ಷಗಳಲ್ಲಿ ಈ ರೀತಿಯ ಕುಂಭದ್ರೋಣ ಮಳೆ ಎಂದಿಗೂ ಆಗಿರಲಿಲ್ಲವೆಂದೂ ಹೇಳಲಾಗುತ್ತಿದೆ. ದೇಶದಲ್ಲಿ ತುಂಬಾ ಭಯಾನಕವಾದ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಬ್ಲೂಂಬರ್ಗ್ ನ್ಯೂಸ್ ಏಜೆನ್ಸಿ ನೀಡಿದ ಮಾಹಿತಿಯ ಪ್ರಕಾರ, ಇಲ್ಲಿಯವರೆಗೆ 16 ಜನರು ಮೃತ್ಯುವಿಗೆ ಈಡಾಗಿದ್ದಾರೆ ಎಂದು ಗೊತ್ತಾಗಿದೆ.

ರೈಲಿನಲ್ಲಿಯೂ ನೀರು..

ಚೀನಾದಲ್ಲಿಯ ಕಂಡುಬಂದ ಕೆಲವು ಫೋಟೋಗಳ ಪ್ರಕಾರ ಅಲ್ಲಿಯ ಪ್ಯಾಸೆಂಜರ್ ಟ್ರೈನ್ ಗಳಲ್ಲಿ ಜನರ ಕುತ್ತಿಗೆಯವರೆಗೆ ನೀರು ಬಂದಿದೆ. ಅನೇಕ ಜನರು ಅಲ್ಲಲ್ಲಿ ನೀರಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಇವರನ್ನೆಲ್ಲ ಬಚಾವ್ ಮಾಡುವ ಸಲುವಾಗಿ ಸೈನ್ಯ ಸಜ್ಜಾಗಿದೆ. ರಸ್ತೆ ಮೇಲಂತೂ ನೀರಿನಲ್ಲಿ ಮುಳುಗಿದ ಕಾರುಗಳು ಅಕ್ಷರಶ: ಆಟಿಗೆ ಸಾಮಾನುಗಳಂತೆ ಕಾಣುತ್ತಿವೆ.

ಸರ್ಕಾರದ ಸಮಸ್ಯೆ ಹೆಚ್ಚಿತು-

ಕಳೆದ ಶನಿವಾರದಿಂದ ಚೀನಾದಲ್ಲಿ ಅಹೋರಾತ್ರಿ ಕುಂಭದ್ರೋಣ ಮಳೆ ಸುರಿಯುತ್ತಿದೆ. ಇಲ್ಲಿಯವರೆಗೆ ಚೀನಾದ ಜೊಂಗ್ ಜೋವು ನಲ್ಲಿ ಕಳೆದ ಮೂರೇ ಮೂರು ದಿವಸಗಳಲ್ಲಿ ಸುಮಾರು 700 mm ದಾಖಲೆಯ ಮಳೆ ಸುರಿದಿದೆ. ಈ ಪ್ರದೇಶದಲ್ಲಿ ವರ್ಷಪೂರ್ತಿ 600 mm ಅಷ್ಟೇ ಮಳೆಯಾಗುತ್ತದೆ. ಮಳೆಯ ಈ ಭೀಕರತೆಯನ್ನು ನೋಡಿ ಅನೇಕ ಕಡೆ ರೆಡ್ ಅಲರ್ಟ್ ಜಾರಿ ಮಾಡಿದ್ದಾರೆ.

ಚೀನಾದ ಈ ಮಳೆಯ ಈ ರುದ್ರತಾಂಡವದ ಫೋಟೋಗಳು ಈಗಾಗಲೇ ತುಂಬಾ ವೈರಲ್ ಆಗುತ್ತಿವೆ. ಇದನ್ನು ನೋಡಿದ ಅನೇಕರು ತಮ್ಮ ಕಳವಳವನ್ನು ವ್ಯಕ್ತ ಮಾಡುತ್ತಿದ್ದಾರೆ. ಇನ್ನು ಕೆಲವರು ಚೀನಾ ಮಾಡಿದ ದುಷ್ಕೃತ್ಯಕ್ಕೆ ದೇವರು ಸರಿಯಾಗಿ ಶಿಕ್ಷೆ ನೀಡುತ್ತಿದ್ದಾನೆ ಎಂದು ಶಪಿಸುತ್ತಿದ್ದಾರೆ. ಜಗತ್ತನ್ನು ವಿನಾಶದ ಅಂಚಿಗೆ ಸೇರಿಸಿ ತಾನು ಮಾತ್ರ (ಚೀನಾ) ತುಂಬಾ ಶಾಂತವಾಗಿ ಕುಳಿತಿತ್ತು. ಆದ್ದರಿಂದಲೇ ಚೀನಾಕ್ಕೆ ದೇವರು ಬೆತ್ತದ ಏಟನ್ನು ನೀಡಿದ್ದಾನೆ ಎಂದು ಮಾತನಾಡುತ್ತಿದ್ದಾರೆ.