ಚಿರತೆಯ ಬೇ ಟೆಯ ಕಲೆ ನೋಡಿ ಆಶ್ಚರ್ಯಚಕಿತರಾದ ನೆಟ್ಟಿಗರು: ಮರದ ಮೇಲಿಂದ ನೆಗೆದು ಬೇ ಟೆಯನ್ನು ಹಿಡಿದ ಚಿರತೆ! ನೋಡಿ ಈ Video

ವನ್ಯ ಜೀವಿಗಳ ಫೋಟೋಗ್ರಫಿ ಮತ್ತು ಅವುಗಳ ಜೀವನದ ಆಸಕ್ತಿಕರ ಘಟನೆಗಳ ವೀಡಿಯೋಗ್ರಫಿ ನಿಜಕ್ಕೂ ಕೂಡಾ ಬಹಳ ಆಸಕ್ತಿಕರವಾದಂತಹ ವಿಷಯ ಎಂದೇ ನಾವು ಹೇಳಬಹುದು. ವನ್ಯ ಜೀವಿಗಳ ಜೀವನವೇ ಒಂದು ವೈವಿಧ್ಯ ಹಾಗೂ ರೋಚಕ ಎನ್ನುವುದರಲ್ಲಿ ಎರಡು ಮಾತಿಲ್ಲ. ವನ್ಯ ಜೀವಿಗಳ ವಿಷಯಕ್ಕೆ ಬಂದಾಗ ಓಟದಲ್ಲಿ, ಬೇಟೆಯನ್ನು ಆ ಕ್ರ ಮ ಣ ಮಾಡಿ ಅವುಗಳನ್ನು ಹಿಡಿಯುವುದರಲ್ಲಿ ಚಿರತೆಯನ್ನು ನಾವು ಮರೆಯಲು ಸಾಧ್ಯವೇ ಇಲ್ಲ. ಎಲ್ಲಾ ಪ್ರಾಣಿಗಳು ಕೂಡಾ ತಮ್ಮದೇ ಆದಂತಹ ಕೌಶಲ್ಯ ಹಾಗೂ ಚಾಣಾಕ್ಷತನವನ್ನು ಪ್ರದರ್ಶನ ಮಾಡಿ ತಮ್ಮ ಬೇ ಟೆಯನ್ನು ಹಿಡಿಯುತ್ತವೆ. ಇಂತಹ ಸನ್ನಿವೇಶಗಳ ವೀಡಿಯೋಗಳು ಕೂಡಾ ಭರ್ಜರಿ ವೈರಲ್ ಆಗುತ್ತವೆ.

ಸಾಮಾನ್ಯವಾಗಿ ಬೇಟೆಯ ದೃಶ್ಯ ಎಂದರೆ ಅಲ್ಲಿ ಹುಲಿಯೋ, ಸಿಂಹವೋ ಅಥವಾ ಚಿರತೆಯೋ ಇನ್ನಾವುದೋ ಪ್ರಾಣಿಯ ಬೆನ್ನು ಹತ್ತಿ ಹೋಗಿ, ಅವುಗಳನ್ನು ಹಿಡಿಯುವ ದೃಶ್ಯಗಳು ಇರುತ್ತವೆ. ಆದರೆ ಈಗ ವೈರಲ್ ಆಗಿರುವ ವೀಡಿಯೋ ಸಾಮಾನ್ಯವಾದ ಪ್ರಾಣಿಗಳು ಬೇ ಟೆಯಾಡುವ ವಿಧಾನಕ್ಕೆ ಸಂಪೂರ್ಣವಾಗಿ ಭಿನ್ನವಾಗಿದೆ‌. ಈ ವೈರಲ್ ವೀಡಿಯೋದಲ್ಲಿ ಚಿರತೆಯೊಂದು ಸಾಮಾನ್ಯ ರೀತಿಯಲ್ಲಿ ಅಲ್ಲದೇ ನೆಲದ ಮೇಲೆ ನಿಂತು ತನ್ನ ಬೇ ಟೆಯನ್ನು ಹೊಂಚು ಹಾಕಿ ಹಿಡಿಯುವ ಬದಲಾಗಿ ಮರದ ಮೇಲೆ ನಿಂತು ಬೇಟೆಗೆ ಕಾದಿದ್ದು ನೋಡಿ ನೆಟ್ಟಿಗರು ಕೂಡಾ ಆಶ್ಚರ್ಯ ಪಟ್ಟಿದ್ದಾರೆ.

ಹೌದು ಈ ವೀಡಿಯೋದಲ್ಲಿ ನಾವು ಗಮನಿಸಿದಾಗ ಒಂದು ಚಿರತೆ ಬೇ ಟೆಯನ್ನು ಅರಸಿ ಮರವನ್ನು ಏರಿದೆ. ಅದು ತನ್ನ ಬೇಟೆಯನ್ನು ಯಾವ ದಿಕ್ಕಿನಿಂದ ಬರುತ್ತಿದೆ ಎನ್ನುವುದನ್ನು ಮರದ ಮೇಲೆ ನಿಂತು ಗಮನಿಸಿದೆ‌. ಬಹುಶಃ ಜಿಂಕೆ ಕೂಡಾ ಚಿರತೆ ಹೀಗೆ ಮರದ ಮೇಲೆ ನಿಂತು ತನ್ನ ಮೇಲೆ ಆ ಕ್ರ ಮಣ ಮಾಡುವುದು ಎನ್ನುವುದನ್ನು ಊಹೆ ಮಾಡಲಿರಕ್ಕಿಲ್ಲ ಎನ್ನಬಹುದು. ಚಿರತೆ ಮರದ ಮೇಲಿಂದ ಜಿಂಕೆ ಅಲ್ಲಿಗೆ ಬರುವುದನ್ನು ನೋಡಿ, ಅದಕ್ಕಾಗಿ ಹೊಂಚು ಹಾಕಿದೆ. ಜಿಂಕೆ ಹತ್ತಿರ ಬರುತ್ತಿರುವ ಸೂಚನೆ ಸಿಕ್ಕಾಗ ಮರದ ಮೇಲಿಂದ ಸ್ವಲ್ಪ ಕೆಳಗೆ ಬಂದಿದೆ ಚಿರತೆ.

ಹಾಗೆ ಜಿಂಕೆ ಹತ್ತಿರ ಬಂದ ಕೂಡಲೇ ಚಿರತೆ ಮರದ ಮೇಲಿಂದ ಕೆಳಗೆ ನೆಗೆದು ತನ್ನ ಬೇ ಟೆಯನ್ನು ಯಶಸ್ವಿಯಾಗಿ ಹಿಡಿದಿದೆ. ಚಿರತೆಯ ಈ ಬೇ ಟೆಯ ವಿಧಾನ ನೋಡಿದ ನೆಟ್ಟಿಗರು ಕೂಡಾ ಅದರ ಕೌಶಲವನ್ನು ಮೆಚ್ಚಿ ಹೊಗಳಿದ್ದಾರೆ. ವಿಡಿಯೋ ಶೇರ್ ಆದ ಮೇಲೆ ಈಗಾಗಲೇ ಅದನ್ನು ಒಂದು ಲಕ್ಷಕ್ಕೂ ಅಧಿಕ ಜನರು ವೀಕ್ಷಣೆ ಮಾಡಿದ್ದರೆ, ಒಂದು ಸಾವಿರಕ್ಕೂ ಅಧಿಕ ಮಂದಿ ಲೈಕ್ ನೀಡಿದ್ದಾರೆ. ನೂರಾರು ಜನರು ವೀಡಿಯೋ ಬಗ್ಗೆ ತಮ್ಮ ಕಾಮೆಂಟ್ ಗಳನ್ನು ಕೂಡಾ ಬರೆದು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.‌

ಒಬ್ಬರು ಚಿರತೆಯ ಶಕ್ತಿ, ಬಲ ಹಾಗೂ ಅದರ ಸಾಮರ್ಥ್ಯ ನಿಜಕ್ಕೂ ಅದ್ಭುತ ಎಂದು ಉದ್ಗಾರವನ್ನು ಮಾಡಿದ್ದಾರೆ. ಮತ್ತೊಬ್ಬರು ನಿಜಕ್ಕೂ ಇದು ಅದ್ಭುತ ಬೇಟೆಯಾಡುವಾಗ ಪ್ರಾಣಿಗಳು ತೋರುವ ತಾಳ್ಮೆಯನ್ನು ನೋಡಿದಾದ ಆಶ್ಚರ್ಯ ಎನಿಸುವುದು ಎಂದಿದ್ದಾರೆ. ಕೆಲವರು ಚಿರತೆಗಳು ನಿಜಕ್ಕೂ ಬೇಟೆ ಆಡುವುದರಲ್ಲಿ ವಿಸ್ಮಯವನ್ನು ಹುಟ್ಟಿಸುವುದರಲ್ಲಿ ಎರಡು ಮಾತಿಲ್ಲ ಎಂದರೆ ಮತ್ತೊಬ್ಬರು ಇದು ಬಹಳ ಆಶ್ಚರ್ಯಕರವಾದ ಬೇಟೆಯಾಗಿದೆ. ಸಾ ವು ಸ್ವರ್ಗದಿಂದ ಬಂದಿತು ಅನ್ನೋದಿಕ್ಕೆ ಉದಾಹರಣೆ ಇದ್ದ ಹಾಗೆ ಇದೆ ಎಂದು ಕೂಡಾ ಬರೆದುಕೊಂಡಿದ್ದಾರೆ.