ಚಿತ್ರ ಜೂಮ್ ಮಾಡಿ ನೋಡಿ; ಕಣ್ಣಿಗೆ ತುಂಬಾ ಸರಳವೆನ್ನಿಸಿದರೂ ಈ ಫೋಟೋದಲ್ಲಿ ಅಡಗಿವೆ 4 ಡಿಜಿಟ್ ಗಳು! ಯಾವವು ಗೊತ್ತಾಗುತ್ತಾ?

ಸೋಶಿಯಲ್ ಮೀಡಿಯಾದಲ್ಲಿ ಈ ರೀತಿಯ ಫೋಟೋಗಳು ತುಂಬಾ ಹೆಚ್ಚಾಗಿ ಕಂಡುಬರುತ್ತವೆ. ಇವು ನಮ್ಮ ಮೆದುಳಿಗೆ ಹಾಗೂ ತೀಕ್ಷ್ಣ ದೃಷ್ಟಿಗೆ ಸವಾಲಾಗುತ್ತವೆ. ಹಾಗೆ ನೋಡಲಾಗಿ ಈ ಫೋಟೋಗಳು ಒಪ್ಟಿಕಲ್ ಇಲ್ಲುಷನ್ ಗೆ ಸಂಬಂಧಿಸಿರುತ್ತವೆ. ಇವು ಎಷ್ಟೇ ನೋಡಿದರೂ ಈ ರೀತಿಯ ಫೋಟೋಗಳು ನೋಡುಗರ ಕಣ್ಣುಗಳಿಗೆ ಮೋಸ ಮಾಡುತ್ತವೆ. ಈ ರೀತಿಯ ಕೋಡ್ ವರ್ಡ್ ಗಳನ್ನು ಬಿಡಿಸಲು ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗುತ್ತದೆ. ಇದೇ ಕಾರಣಕ್ಕಾಗಿ ಈ ರೀತಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಟ್ರೆಂಡ್ ಆಗುತ್ತದೆ.

ಈಗ ನೀವು ಇಲ್ಲಿ ನೋಡುವ ಫೋಟೋ ತುಂಬಾನೇ ಸರಳ ಮತ್ತು ಸಹಜವಾಗಿದೆ. ಸಂಪೂರ್ಣ ಫೋಟೋ ಕೆಂಪು ಬಣ್ಣಿನಲ್ಲಿ ಮಿಂದಂತೆ ಕಂಡುಬರುತ್ತದೆ. ಫೋಟೋ ಸರಿಯಾಗಿ ನೋಡಲು ಇದರಲ್ಲಿ ಯಾವುದಾದರೂ ಧಾನ್ಯಗಳು ಅಥವಾ ಹೂವುಗಳು ಇರುವಂತೆ ಕಂಡುಬರುತ್ತದೆ. ಇನ್ನಷ್ಟು ಸೂಕ್ಷ್ಮವಾಗಿ ವೀಕ್ಷಿಸಿದಾಗ ಈ ಚಿತ್ರದಲ್ಲಿ ಕೆಲವೊಂದು ಅಂಕಗಳು ಅಡಗಿ ಕುಳಿತಿವೆ. ನಿಮ್ಮ ತೀಕ್ಷ್ಣವಾದ ದೃಷ್ಟಿಗೆ ಇಲ್ಲಿರುವ ನಂಬರ್ ಗಳು ಮೋಸ ಮಾಡಬಹುದು.

ಈ ಚಿತ್ರದಲ್ಲಿ ಅಡಗಿರುವ ನಂಬರ್ಗಳು ಹೇಳಲು ನಿಮಗೆ ಸಾಧ್ಯವೇ?

ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುವವರೂ ಈ ಫೋಟೋದಲ್ಲಿ ಅಡಗಿರುವ ಡಿಜಿಟ್ ಗಳನ್ನು ಶೋಧಿಸಲು ತುಂಬಾ ಪ್ರಯತ್ನಿಸುತ್ತಿದ್ದಾರೆ. ಅವರು ಎಷ್ಟೇ ಪ್ರಯತ್ನ ಮಾಡಿ ಉತ್ತರ ಶೋಧಿಸಿದರೂ ಅವುಗಳಲ್ಲಿ ತುಂಬಾ ಜನರ ಉತ್ತರಗಳು ತಪ್ಪಾಗಿವೆ. ನಿಮ್ಮ ಕಣ್ಣುಗಳಿಗೆ ಈ ಚಿತ್ರದಲ್ಲಿ ಅಡಗಿದ ಅಂಕಗಳು ಸರಿಯಾಗಿ ಕಂಡುಬಂದರೆ ನಿಮಗೆ ಹೃತ್ಪೂರ್ವಕ ಶುಭಾಶಯಗಳು. ಹಾಗೂ ನಿಮ್ಮ ಕಣ್ಣುಗಳು ಸೂಕ್ಷ್ಮವಾದದ್ದನ್ನು ಗ್ರಹಿಸುವ ಶಕ್ತಿ ಹೊಂದಿವೆ ಅಂತಲೇ ಅರ್ಥ.

ಯಾವ ನಂಬರ್ ಗಳಿವೆ ನೋಡಿ…

ಒಂದು ವೇಳೆ ನಿಮಗೆ ಈ ಚಿತ್ರದಲ್ಲಿ ಕಂಡುಬರುವ ನಂಬರ್ಗಳು ಶೋಧಿಸುವಲ್ಲಿ ಸಾಧ್ಯವಾಗದಿದ್ದರೆ ನಾವೇ ನಿಮಗೆ ಸಹಾಯ ಮಾಡುತ್ತೇವೆ. ಹೊಸ ಚಿತ್ರದಲ್ಲಿಯ ನಂಬರ್ಗಳನ್ನು ಶೋಧಿಸುವ ಸಲುವಾಗಿ ನಿಮ್ಮ ಕೈಯಲ್ಲಿರುವ ಮೊಬೈಲ್ ಸ್ಕ್ರೀನ್ ನಿಮ್ಮ ಕಣ್ಣುಗಳಿಂದ ಸ್ವಲ್ಪ ದೂರ ಮಾಡಿ ನೋಡಿ. ಈಗ ನಿಮ್ಮ ಕಣ್ಣುಗಳಿಗೆ ಅಲ್ಲಿರುವ ನಂಬರ್ ಗಳು ಕಾಣಿಸುತ್ತವೆ. ಈಗ ನಿಮ್ಮ ಕಣ್ಣುಗಳನ್ನು ಸ್ವಲ್ಪ ಚಿಕ್ಕದು ಮಾಡಿ ನೋಡಿ ಉತ್ತರ ಗೊತ್ತಾಗುತ್ತದೆ.

ಇಷ್ಟಾದರೂ ನಿಮಗೆ ನಂಬರ್ ಸರಿಯಾಗಿ ಕಾಣದಿದ್ದರೆ ನಾವೇ ಉತ್ತರವನ್ನು ಹೇಳುತ್ತೇವೆ. ಪ್ರಸ್ತುತ ಚಿತ್ರದಲ್ಲಿ 3,3,1 ಮತ್ತು 3 ಈ ನಾಲ್ಕು ಅಂಕಗಳು ಕಂಡುಬರುತ್ತವೆ. ಒಂದು ವೇಳೆ ನೀವು ಹೇಳಿದ ಉತ್ತರ ಇದೇ ರೀತಿ ಸರಿಯಾಗಿದ್ದರೆ ನಿಮ್ಮ ಕಣ್ಣುಗಳು ಹದ್ದಿಗಿಂತಲೂ ತೀಕ್ಷ್ಣವಾಗಿವೆ.