ಸದಾ ಗಡ್ಡ ಹೊಂದಿದ ತಂದೆಯನ್ನೇ ನೋಡಿದ ಮಗು, ಕ್ಲೀನ್ ಶೇವ್ ನಂತರದ ಮುಖ ನೋಡಿ ಮಗು ಕೊಟ್ಟ ರಿಯಾಕ್ಷನ್…👌👌

ಮುಗ್ಧ ಮಕ್ಕಳ ವಿಡಿಯೋಗಳು ಯಾರನ್ನೇ ಆಗಲಿ ಮಂತ್ರಮುಗ್ದಮಾಡುತ್ತವೆ. ಈ ವಿಡಿಯೋಗಳಲ್ಲಿ ಮಕ್ಕಳ ನೈಸರ್ಗಿಕ ಮುಗ್ಧತೆ ವಿಡಿಯೋ ನೋಡುಗರನ್ನು ಕ್ಷಣದಲ್ಲಿ ಮೋಹಗೊಳಿಸುತ್ತದೆ. ಮಕ್ಕಳ ಆಟ ಚೆಂದ, ಮಕ್ಕಳ ನೋಟ ಚೆಂದ ಪುಟಾಣಿ ಮಕ್ಕಳು ಮನೆಯಲ್ಲಿ ಇದ್ದರೆ ಅಲ್ಲಿ ಬೇಸರ ಅನ್ನೋದೆ ಇರಲ್ಲ. ಹೀಗೆಲ್ಲಾ ಹೇಳೋ ನಾವು ಅನೇಕ ಸಂದರ್ಭಗಳಲ್ಲಿ ಈ ಮಕ್ಕಳು ನೀಡೋ ಎಕ್ಸ್‌ಪ್ರೆಷನ್ ಗಳನ್ನು ನೋಡಿರೋದೇ ಇಲ್ಲ. ಆದರೆ ಕೆಲವರು ಹಾಗಲ್ಲ ತಮ್ಮ ಮಕ್ಕಳಿಗೆ ತಾವು ಮಕ್ಕಳಾಗಿದಾಗ ಏನೆಲ್ಲಾ ಆಟ ಆಡಿದ್ರು, ಹೇಗೆಲ್ಲಾ ತುಂಟಾಟ ಮಾಡಿದ್ರು ಅನ್ನೋದನ್ನು ತೋರಿಸೋಕೆ, ಆ ಮಧುರವಾದ ಸ್ಮರಣೆಯ ಕ್ಷಣಗಳನ್ನು ಅಂದರೆ ಫೋಟೋಗಳಲ್ಲಿ ವೀಡಿಯೋಗಳಲ್ಲಿ ತಮ್ಮ ಮಕ್ಕಳ ಮುದ್ದು ಮುದ್ದಾದ ಆಟಗಳನ್ನು, ಹಾಡುಗಳನ್ನು, ತುಂಟಾಟಗಳನ್ನು ಎಲ್ಲವನ್ನೂ ಕೂಡಾ ಸಂಗ್ರಹಿಸಿ ಇಡ್ತಾರೆ. ಇನ್ನೂ ಕೆಲವರು ತಮ್ಮ ಮಕ್ಕಳ ಈ ಮುದ್ದಾದ ಎಕ್ಸ್‌ಪ್ರೆಷನ್ ಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡು ತಮ್ಮ ಸಂತೋಷವನ್ನು ಎಲ್ಲರಿಗೂ ಹಂಚೋದು ಕೂಡಾ ಉಂಟು. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಇದೇ ರೀತಿಯ ಸುಂದರ ವಿಡಿಯೋ ಒಂದು ಎಲ್ಲರಿಗೂ ಸಮ್ಮೋಹನಗೊಳಿಸುತ್ತಿದೆ ಎಂದರೆ ತಪ್ಪಾಗಲಾರದು.

ಈ ಸುಂದರವಾದ ವಿಡಿಯೋದಲ್ಲಿ ಕಂಡುಬರುವ ದೃಶ್ಯ ತುಂಬಾ ವಿಶೇಷವಾಗಿದೆ. ಇಲ್ಲಿ ಮಗು, ಮುಖ ಮುಚ್ಚಿಕೊಂಡು ಬಂದ ತನ್ನ ತಂದೆಯನ್ನು ನೋಡಿದ ಕ್ಷಣ ಚೆನ್ನಾಗಿ ಆಟ ಆಡಲು ಶುರು ಮಾಡುತ್ತಾನೆ. ಇಲ್ಲಿ ನೆನಪಿಸಿಕೊಡಬೇಕಾದ ಒಂದು ವಿಷಯವೇನೆಂದರೆ ಮಗು ಈ ಮೊದಲು ತನ್ನ ತಂದೆಗೆ ಬರೀ ಗಡ್ಡದಿಂದ ತುಂಬಿದ ಮುಖವನ್ನೇ ನೋಡಿದೆ. ಈಗ ತಂದೆ ತನ್ನ ಮಗುವಿನ ಜೊತೆಗೆ ಮುಖ ಮುಚ್ಚಿಕೊಂಡು ಆಟ ಆಡುತ್ತಾ ಆಡುತ್ತಾ ನಂತರ ಮುಖದ ಮೇಲಿನ ವಸ್ತ್ರವನ್ನು ಕೆಳಗೆ ಜಾರಿ ಬಿಡುತ್ತಾನೆ. ಆಗ ನೋಡಿ ಸೂಪರ್ ಕ್ಲೈಮಾಕ್ಸ್. ಮಗು ತಂದೆಯ ಮುಖ ನೋಡಿದ ತಕ್ಷಣವೇ ಒಮ್ಮೆಲೆ ಸ್ತಬ್ಧವಾಗಿಬಿಡುತ್ತದೆ. ನಂತರ ಪ್ರಸ್ತುತ ಎದುರಿನ ವ್ಯಕ್ತಿ ತಂದೆಯಲ್ಲದೆ ಬೇರೆ ಯಾರೋ ಇರಬಹುದೆಂದು ತಿಳಿದು ಹುಳುಹುಳು ಮುಖ ನೋಡಲು ಶುರುಮಾಡುತ್ತದೆ. ಮಗುವಿನ ಮುಖದ ಮೇಲೆ ಆಶ್ಚರ್ಯ ಸ್ಪಷ್ಟವಾಗಿ ಕಂಡು ಬರುತ್ತದೆ. ಕೆಲವೇ ಕ್ಷಣಗಳ ನಂತರ ಮಗು ಮತ್ತೊಂದು ಚಟುವಟಿಕೆಯನ್ನು ಮಾಡುತ್ತದೆ. ಅದೇನೆಂದರೆ, ತಂದೆಯ ಮುಖದ ಮೇಲಿನ ಗಡ್ಡ ಎಲ್ಲಿ ಹೋಯಿತು? ಎಂದು ಪ್ರಶ್ನಾರ್ಥಕವಾಗಿ ಮುಖದ ಮೇಲೆ ಕೈ ಆಡಿಸುತ್ತದೆ. ಈ ಸಂದರ್ಭದಲ್ಲಿ ಮಗು ಒಂದು ಹಂತದಲ್ಲಿ ತುಂಬಾ ಅಳುವ ಪರಿಸ್ಥಿತಿಗೂ ಬಂದಿರುತ್ತೆ.

ನೋಡಿ ಮಗುವಿನ ಈ ಸೂಪರ್ ವಿಡಿಯೋ…

ViralHog ಹೆಸರಿನ ಐಡಿಯಿಂದ ಟ್ವಿಟರ್ ನಲ್ಲಿ ಶೇರ್ ಮಾಡಿದ ಮಗುವಿನ ಈ ಅದ್ಭುತ ರಿಯಾಕ್ಷನ್ ಇರುವ ವೀಡಿಯೋವನ್ನು ಈಗಾಗಲೇ ಸುಮಾರು 5 ಲಕ್ಷ ಜನರು ನೋಡಿದ್ದಾರೆ. ಅಧಿಕಾಧಿಕ ಜನರು ಇದನ್ನು ಲೈಕ್ ಮಾಡುತ್ತಿದ್ದಾರೆ. ವೀಡಿಯೋ ನೋಡಿದ ನೆಟ್ಟಿಗರೊಬ್ಬರು ಮಗುವಿನ ಈ ಎಕ್ಸ್‌ಪ್ರೆಷನ್ ಗೆ ಬೆಲೆ ಕಟ್ಟಲಾಗದು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಗಡ್ಡ ಇದ್ದಾಗ ಮುಖ ಬಹುಶಃ ಚೆನ್ನಾಗಿತ್ತೇನೋ ಅದು ತೆಗೆದ ಮೇಲೆ ಭ ಯಾ ನಕ ಅದಕ್ಕೆ ಮಗು ಮುಖ ನೋಡಿ ಭ ಯ ಪಟ್ಟಿದೆ ಎಂದು ವ್ಯಂಗ್ಯ ಮಾಡಿದ್ದಾರೆ.