VIDEO : ಕಸ ಸ್ವಚ್ಚಗೊಳಿಸದ ಕಾರಣಕ್ಕೆ ಕಂಟ್ರಾಕ್ಟರ್ ತಲೆ ಮೇಲೆ ಮೋರಿಯ ಹೊಲಸು ಕಸ ಸುರಿಸಿದ ಶಾಸಕ! ವಿಡಿಯೊ ನೋಡಿ, ಸರಿನಾ ತಪ್ಪಾ ನೀವೇ ಹೇಳಿ

ಈ ಘಟನೆ ನಡೆದಿರುವುದು ಮುಂಬೈನಲ್ಲಿ,ಅಲ್ಲಿನ ಶಿವಸೇನಾ ಶಾಸಕರೊಬ್ಬರು ಕಸ ತಗೆದು ಸರಿಯಾಗಿ ನಿರ್ವಹಣೆ ಮಾಡದ ಕಂಟ್ರಾಕ್ಟರ್ ನನ್ನು ರಸ್ತೆಯಲ್ಲಿ ಕೂರಿಸಿ ಕಾರ್ಯಕರ್ತರಿಂದ ಅವರ ಮೇಲೆ ಹೊಲಸು ಕಸ ಸುರಿಸಿದ್ದಾರೆ. ರಸ್ತೆ ಬದಿಯ ಕಸವನ್ನು ತಗೆಸದ ಕಾರಣಕ್ಕೆ ಮಳೆ ನೀರು ಬ್ಲಾಕ್ ಆಗಿ ಜನರಿಗೆ ಸಮಸ್ಯೆಯಾಗಿತ್ತು. ಮೊನ್ನೆ ಸುರಿದ ಮಳೆ ಭಾರಿ ಆವಾಂತರ ಮಾಡಿತ್ತು, ಇದರಿಂದ ಸಿಟ್ಟಿಗೆದ್ದ ಶಾಸಕ ಹೀಗೆ ಮಾಡಿದ್ದಾನೆ.

ಮುಂಬೈನ ಚಾಂದಿವಲಿಯ ಶಿವಸೇನಾ ಶಾಸಕ ದಿಲೀಪ್ ಲಾಂಡೆ ಮುಂದೆ ನಿಂತು ಕಂಟ್ರಾಕ್ಟರ್ ಗೆ ಈ ರೀತಿ ಶಿಕ್ಷೆ ಕೊಡಿಸಿದ್ದಾರೆ. ನಂತರ ಈ ವಿಡಿಯೊ ವೈರಲ್ ಆದ ಮೇಲೆ “ಕಂಟ್ರಾಕ್ಟರ್ ತನ್ನ ಕೆಲಸವನ್ನು ತಾನು ಸರಿಯಾಗಿ ಮಾಡ್ ಕಾರಣಕ್ಕೆ ನಾನು ಹೀಗೆ ಮಾಡಿದೆ” ಎಂದು ತಾನು ಮಾಡಿದ ಕೆಲಸವನ್ನು ಸಮರ್ಥಿಸಿಕೊಂಡಿದ್ದಾನೆ.

ಮಳೆ ನೀರು ಮೋರಿ ನೀರಿನ ಜೊತೆ ಬೆರೆತು ರಸ್ತೆಯಲ್ಲಿ ಹರಿಯುತ್ತಾ ಇಡೀ ಪ್ರದೇಶವನ್ನು ಗಬ್ಬೆಬ್ಬಿಸಿತ್ತು. ಆಗ ಜನರೊಂದಿಗೆ ಅಲ್ಲಿಗೆ ಬಂದು ಸ್ಥಳ ಪರಿಶೀಲನೆ ಮಾಡಿದ ಶಾಸಕರು ಕಂಟ್ರಾಕ್ಟರ್ ನನ್ನು ಅಲ್ಲಿಗೆ ಕರೆಸಿ, ಅದೇ ಮೋರಿ ನೀರಿನಲ್ಲಿ ಕುಳಿತುಕೊಳ್ಳಲು ಹೇಳಿ ಕಾರ್ಯಕರ್ತರಿಂದ ಅವರ ಮೇಲೆ ಮೋರಿ ಕಸ ಹಾಕಿಸಿದ್ದಾರೆ, ಆ ದೃಶ್ಯವನ್ನು ವಿಡಿಯೊದಲ್ಲಿ ನೋಡಬಹುದು.

ಕಳೆದ ಹದಿನೈದು ದಿನದಿಂದ ಅಲ್ಲಿನ ರಸ್ತೆಯನ್ನು ಸ್ವಚ್ಚಗಳಿಸಲು ಆ ಕಂಟ್ರಾಕ್ಟರ್ ಗೆ ಶಾಸಕರು ಹೇಳುತ್ತಿದ್ದರಂತೆ, ಆದರೆ ಆತ ಮಾಡಿಸಿರಲಿಲ್ಲ. ನಂತರ ಶಿವಸೇನಾ ಕಾರ್ಯಕರ್ತರು ಆ ಕೆಲಸ ಮಾಡಿದ್ದರಂತೆ, ಈಗ ಈ ಥರ ಆದ ಮೇಲೆ ಇನ್ನು ಮುಂದಾದರೂ ಆತನ ಕೆಲಸ ಆತನೇ ಮಾಡಲಿ ಅಂತ ಹಾಗೆ ಮಾಡಿರುವುದಾಗಿ ಶಾಸಕರು ಹೇಳಿಕೆ ಕೊಟ್ಟಿದ್ದಾರೆ.

ಕಂಟ್ರಾಕ್ಟರ್ ತಲೆ ಮೇಲೆಯೇ ಹೊಲಸು ತುಂಬಿದ ಕಸ ಸುರಿಯುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಆ ವಿಡಿಯೊ ಮೇಲೆ ಇದೆ. ನೋಡಿ ನಿಮಗನಿಸಿದ್ದು ಕಾಮೆಂಟ್ ಮಾಡಿ. ಶಾಸಕರು ಮಾಡಿದ್ದು ಸರಿನಾ ಅಥವಾ ತಪ್ಪಾ? ಶಾಸಕರ ಇದರ ಬದಲು ಬೇರೆ ಏನು ಮಾಡಬೇಕಿತ್ತು ಕಾಮೆಂಟಿಸಿ.
-Team Infotrend