ಕರೋನ ಬಂದು ಗುಣವಾದ ಮೇಲೆ Antibodies ಎಷ್ಟು ದಿನ ಇರುತ್ತವೆ?

ಭಾರತದಲ್ಲಿ ಕರೋನ ಎರಡನೇ ಅಲೆ ಕೊಟ್ಟ ಹೊಡೆತ ಅಂತಿಂತದ್ದಲ್ಲ, ನಗರಗಳನ್ನು ಮುಗಿಸಿ ಈಗ ಹಳ್ಳಿ ಹಳ್ಳಿಗೂ ಧಾಂಗುಡಿ ಇಡುತ್ತಿರುವ ವಿಷಯ ನಿಮಗೆಲ್ಲ ಗೊತ್ತೇ ಇದೆ. ಆದ್ದರಿಂದ ಇಡೀ ದೇಶವನ್ನು ಕರೋನ ಎಂಬ ಹೆಮ್ಮಾರಿಯಿಂದ ರಕ್ಷಿಸಿಕೊಳ್ಳಲು ಇಡೀ ದೇಶದ ಜನರಿಗೆಲ್ಲ ವ್ಯಾಕ್ಸಿನ್ ಹಾಕಿ ರಕ್ಷಿಸುವತ್ತ ಸರ್ಕಾರ ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತಲೇ ಇದೆ.

ಇದರ ನಡುವೆ ಇಟಲಿಯ ಸಂಶೋಧನಕಾರರೊಬ್ಬರು Antibodies ನಿಂದ ಹಿಡಿದು ಕೆಲವು ಮಹತ್ವಪೂರ್ಣ ವಿಷಯಗಳ ಬಗ್ಗೆ ಹೇಳಿದ್ದಾರೆ. ಅವರ ಪ್ರಕಾರ ಕರೋನ ಬಂದು ಹೋದ ಮೇಲೆ ಎಂಟು ತಿಂಗಳ ಬಳಿಕವೂ ಸೊಂಕೀತರ ರಕ್ತದಲ್ಲಿ antibodies ಇರುತ್ತವಂತೆ.

ಮಿಲಾನ್ ನಗರದ ಸೈನ್ ರಾಫೆಲ್ ಆಸ್ಪತ್ರೆಯ ಮುಖ್ಯ ಡಾಕ್ಟರ್ ಹೇಳುವ ಪ್ರಕಾರ, ಈ ರೋಗದ ಗಂಭೀರತೆಯು ಸೊಂಕೀತರ ವಯಸ್ಸಿನ ಮೇಲೆ ಹಾಗೂ ಯಾವುದಾದರೊಂದು ಬೇರೆ ರೋಗದ ಹಿಡಿತದಲ್ಲಿ ಬಂದ ಹೊರತಾಗಿಯೂ ಈ Antibodies ರಕ್ತದಲ್ಲಿ ಇದ್ದೆ ಇರುತ್ತವಂತೆ. ಈ ವೈರಸ್ ಕುರಿತಾಗಿ ವೈದ್ಯರು ಹೇಳುವ ಪ್ರಕಾರ ದೇಹದಲ್ಲಿ Antibodies ಹುಟ್ಟಿಕೊಂಡ ಕೂಡಲೇ ವೈರಸ್ ನಿಂದಾಗಬಹುದಾದ ಅಪಾಯ ಕಡಿಮೆಯಾಗುತ್ತದೆ.

ಈ ಶೋಧನಾರ್ಥಿಗಳು ಇಟಲಿಯ ISS ನ್ಯಾಷನಲ್ ಹೆಲ್ತ್ ಇನ್ಸ್ಟಿಟ್ಯೂಟ್ ನೊಂದಿಗೆ ಸೇರಿಕೊಂಡು ಈ ವಿಷಯದ ಮೇಲೆ ಅಧ್ಯಯನ ಮಾಡುತ್ತಿದ್ದಾರೆ. ಅಧ್ಯಯನಕ್ಕಾಗಿ ಹೋದ ವರ್ಷ ಎಮರ್ಜೆನ್ಸಿ ವಾರ್ಡ್ ನಲ್ಲಿ ಟ್ರೀಟ್ಮೆಂಟ್ ತೆಗೆದುಕೊಂಡು ಬದುಕಿದ 162 ಜನ ಕರೋನ ಲಕ್ಷಣವಿರುವ ರೋಗಿಗಳಿಂದ ಕಳೆದ ಮಾರ್ಚ್ ನಲ್ಲಿ ಅವರ ಬ್ಲಡ್ ಸ್ಯಾಂಪಲ್ ನ್ನು ತೆಗೆದುಕೊಳ್ಳಲಾಗಿತ್ತು, ನಂತರ ಅದರಿಂದ ಉಳಿದುಕೊಂಡವರ ರಕ್ತದ ಮಾದರಿಯನ್ನು ನವೆಂಬರ್ ನಲ್ಲಿ ಮತ್ತೊಮ್ಮೆ ತೆಗೆದುಕೊಳ್ಳಲಾಯಿತು. ಇವರುಗಳಲ್ಲಿ 29 ಜನ ತೀರಿಕೊಂಡಿದ್ದರು.

ISS ನೊಂದಿಗೆ ಹೇಳಿಕೆ ನೀಡಿದ ಈ ಶೋಧನಾರ್ಥಿಗಳು ಕರೋನ ಪಾಸಿಟಿವ್ ಬಂದು ಹುಷಾರಾದ ರೋಗಿಗಳ ದೇಹದಲ್ಲಿ ಈ ರೋಗದೊಂದಿಗೆ ಹೋರಾಡುವ ಶಕ್ತಿ ಅವರ ದೇಹದಲ್ಲಿ ಮುಂದಿನ ಎಂಟು ತಿಂಗಳುಗಳವರೆಗೂ ಇರುತ್ತದೆ. ಇವರುಗಳಲ್ಲಿ ಕೇವಲ ಮೂರು ಜನರಿಗೆ ಮಾತ್ರ ಬಹಳ ದಿನಗಳವರೆಗೆ Antibodies ಇರಲಿಲ್ಲ.

ಇನ್ನೂ ಈ ಅಧ್ಯಯನ Nature Communication Scientific Journal ನಲ್ಲಿ ಉಲ್ಲೇಖಿಸಿದ ಪ್ರಕಾರ ಕರೋನ ವೈರಸ್ ನಿಂದ ರಕ್ಷಿಸಿಕೊಳ್ಳಲು ಈ Antibodies ಉತ್ಪತ್ತಿಯಾಗುವುದು ಬಹುಮುಖ್ಯ ಪಾತ್ರವಹಿಸುತ್ತದೆ. ಕರೋನವನ್ನು ಬಹಳ ಗಂಭೀರ ಪ್ರಮಾಣದ ರೋಗವೆಂದು ಪರಿಗಣಿಸಿದವರನ್ನು ಕುರಿತು ಈ ಸಂಶೋಧಕರು ಹೇಳಿದ್ದಿಷ್ಟು, ಯಾರ ದೇಹವು 15 ದಿನಗಳವರೆಗೂ Antibodies ತಯಾರಿಸಲು ಶಕ್ತವಾಗಿರುವುದಿಲ್ಲವೋ ಅವರು ಮಾತ್ರ ಈ ರೋಗಕ್ಕೆ ತುತ್ತಾಗುತ್ತಾರೆಂದು ತಿಳಿಸಿ ಹೇಳಿದ್ದಾರೆ.

ಈ ಅಧ್ಯಯನದಲ್ಲಿ ಎರಡನೇ ಮೂರರಷ್ಟು ಪುರುಷರನ್ನು ಶಾಮೀಲು ಮಾಡಿದ್ದರು, ಅವರ ಸರಾಸರಿ ಜೀವಿತಾವಧಿಯು 63 ವರ್ಷ ಇದ್ದಿತ್ತು ಇವರುಗಳಲ್ಲಿ 57% ಪ್ರತಿಶತ ರೋಗಿಗಳು ಮೊದಲೇ ಬೇರೆ ರೋಗಗಳಿಂದ ಬಳಳುತ್ತಿದ್ದವರೇ ಇದ್ದರು, ಅದರಲ್ಲಿ ಹೆಚ್ಚು ಜನ ಬಿಪಿ ಹಾಗೂ ಡಯಬಿಟಿಸ್ ಪೇಷಂಟ್ ಗಳಿದ್ದರು.

ಡಾಕ್ಟರ್ ಹೇಳುವ ಪ್ರಕಾರ ನಮ್ಮ ಇಮ್ಮ್ಯೂನಿ ಸಿಸ್ಟಮ್ ನ ಆಧಾರದ ಮೇಲೆ ನಮ್ಮ ದೇಹದಲ್ಲಿ Antibodies ಯಾವಾಗ ಬೆಳವಣಿಗೆ ಆಗುತ್ತವೆ ಎಂದು ತಿಳಿಯಬಹುದು. Antibodies ಎಂದರೆ ಅವುಗಳು ಮತ್ತೇನೂ ಅಲ್ಲ, ಇವುಗಳೇ B cells, ಇವುಗಳೇ ಆ ವೈರಸ್ ಗಳೊಂದಿಗೆ ಹೋರಾಡುವ ಶಕ್ತಿ ಹೊಂದಿರುವುವು.

ಎಕ್ಸ್ಪರ್ಟ್ಸ್ ಹೇಳುವ ಪ್ರಕಾರ ಮೊದಲ ಬಾರಿಗೆ ಈ ವೈರಸ್ ಗೆ ತುತ್ತಾದವರ ದೇಹ ಇದರ ವಿರುದ್ಧ ಹೋರಾಡುವ ಶಕ್ತಿಯನ್ನು ಅಷ್ಟೊಂದು ಹೊಂದಿರುವುದಿಲ್ಲ, ಆದರೆ ಅಕಸ್ಮಾತ್ ನಂತರ ಮತ್ತೊಮ್ಮೆ ಈ ವೈರಸ್ ಗೆ ತುತ್ತಾದರೆ ರೋಗಿಯ ದೇಹ ವೈರಸ್ ವಿರುದ್ಧ ಹೊರಾಡುವ ಶಕ್ತಿಯನ್ನು ಬೆಳೆಸಿಕೊಂಡಿರುವುದಲ್ಲದೆ ಬೇಗನೆ Antibodies ಗಳ ಬೆಳವಣಿಗೆ ಆಗುತ್ತದೆ.
-Team Infotrend