ಭಾವುಕ ವಿಡಿಯೊ : ಮರುಜನ್ಮ ನೀಡಿದ ವೈದ್ಯರಿಗೆ ಕಾಲು ಮುಟ್ಟಿ ನಮಸ್ಕರಿಸಿದ ಕೊರೋನ ಪೇಶೆಂಟ್
ಕೊರೋನ ಎರಡನೇ ದೇಶದಲ್ಲಿ ತಾಂಡವವಾಡುತ್ತಿದ್ದು, ಸಾಕಷ್ಟು ಜನ ಇದಕ್ಕೆ ಬಲಿಯಾಗಿದ್ದಾರೆ. ಕೊರೊನ ಒಂದನೇ ಅಲೆಯಲ್ಲಿ ಕೊರೋನ ಅಪಾಯಕ್ಕಿಂದ ಜಾಸ್ತಿ ಭಯ ಹುಟ್ಟಿಸಿತ್ತು. ಆದರೆ ಎರಡನೇ ಅಲೆಯಲ್ಲಿ ಜನ ಭಯ ಬಿದ್ದಿಲ್ಲ, ಕೊರೋನ ಮಾತ್ರ ಸೈಲೆಂಟಾಗಿ ತನ್ನ ಕೆಲಸ ಮಾಡಿ ಮುಗಿಸುತ್ತಿದೆ. ಒಂದನೇ ಅಲೆ ಭಾರತದಲ್ಲಿ ಎಷ್ಟು ಕಡಿಮೆ ಪ್ರಭಾವ ಬೀರಿತ್ತೆಂದರೆ, ಜನ ಬರಬರುತ್ತಾ ಕೊರೋನ ಅಂದರೆ ತಮಾಷೆ ಮಾಡತೊಡಗಿದರು.
ಒಂದನೇ ಅಲೆಯಲ್ಲಿ ನಮಗೆ ಆಕ್ಸಿಜನ್ ಕೊರತೆ ಬಗ್ಗೆ ಅರಿವು ಕೂಡ ಇರಲಿಲ್ಲ. ಎರಡನ ಅಲೆಯಲ್ಲಿ ಅದು ತನ್ನ ವಿರಾಟ ರೂಪ ಪ್ರದರ್ಶಿಸತೊಡಗಿತು. ಸಧ್ಯ ಈ ವೈರಸ್ ಅದ್ಯಾವ ಮಟ್ಟಿಗೆ ವ್ಯಾಪಿಸಿದೆಯೆಂದರೆ, ಸಂಪೂರ್ಣ ಆರೋಗ್ಯ ವ್ಯವಸ್ಥೆಯನ್ನು ಬುಡಮೇಲು ಮಾಡುವ ಹಂತ ತಲುಪಿದೆ. ಅದರ ಜೊತೆ ಏಗಾಡಿ ಸಾಕಾಗಿರುವ ಆರೋಗ್ಯ ಇಲಾಖೆ ಸಿಬ್ಬಂದಿಯ ಸಾಹಸ ಮೆಚ್ಚುವಂಥದ್ದು.
ಸದಾ ಜೀವ ಕೈಯಲ್ಲಿ ಹಿಡಿದುಕೊಂಡೇ ಕೆಲಸ ಮಾಡುವ ಸ್ಥಿತಿ ಅವರದು. ಆದರೂ ಎದೆಗುಂದದೇ ರೋಗಿಗಳ ಪ್ರಾಣ ಉಳಿಸುವಲ್ಲಿ ವೈದ್ಯರು, ನರ್ಸ್ ಸೇರಿದಂತೆ ಆರೋಗ್ಯ ಕಾರ್ಯಕರ್ತರು ಅವಿರತ ಶ್ರಮಿಸುತ್ತಿದ್ದಾರೆ.
ಹೊರಗೆ ಸಾಮಾಜಿಮ ಮಾಧ್ಯಮದಲ್ಲಿ ವೈದ್ಯರು – ಆಸ್ಪತ್ರೆಯನ್ನು ಟೀಕಿಸಿ ಪೋಸ್ಟ್ – ಕಾಮೆಂಟ್ ಹಾಕುವುದು ಸುಲಭ, ಅಂಥವರು ಒಮ್ಮೆ ಇಂಥ ಆಸ್ಪತ್ರೆ ಕಡೆ ತಲೆ ಹಾಕಿ ಬರಲಿ. ಬಿರು ಬೇಸಿಗೆಯಲ್ಲೂ ಸದಾಕಾಲ ಪಿಪಿಇ ಕಿಟ್ ನಲ್ಲಿ ಬೇಯುತ್ತಾ ಅವರು ಮಾಡುತ್ತಿರುವ ಕೆಲಸ ಅಬಿನಂದನಾರ್ಹ.
ವೈದ್ಯರ – ನರ್ಸ್ ಗಳ ಕಷ್ಟ ಅಲ್ಲಿ ಚಿಕಿತ್ಸೆ ಪಡೆದು ವಾಸಿಯಾಗುತ್ತಿರುವ ರೋಗಿಗಳಿಗೆ ಚೆನ್ನಾಗಿ ಗೊತ್ತು. ಅದಕ್ಕೆಂದೇ ಇಲ್ಲೊಬ್ಬ ವ್ಯಕ್ತಿ ತನ್ನನ್ನು ಹುಷಾರು ಮಾಡಿದ ವೈದ್ಯರಿಗೆ ಕಾಲು ಮುಟ್ಟಿ ನಮಸ್ಕರಿಸಿ ತನ್ನ ಧನ್ಯವಾದ ಅರ್ಪಿಸಿದ್ದಾನೆ.ಖಂಡಿತ ವೈದ್ಯರು ಇದಕ್ಕೆ ಅರ್ಹರಿದ್ದಾರೆ ಎಂದೇ ಹೇಳಬೇಕು.
ವಿಡಿಯೊ ಎಲ್ಲಿ ಚಿತ್ರೀಕರಿಸಿದ್ದು ಎಂದು ತಿಳಿದು ಬಂದಿಲ್ಲವಾದರೂ, ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಕೋವಿಡ್ ಸೆಂಟರ್ ನಲ್ಲಿರುವ ಎಲ್ಲ ಸಿಬ್ಬಂದಿಗೆ ಆ ಕೊರೋನ ವಾಸಿಯಾದ ವ್ಯಕ್ತಿ ಕಾಲು ಮುಟ್ಟಿ ನಮಸ್ಕರಿಸಿ ಡಿಸ್ಚಾರ್ಜ್ ಆದರು. ವಿಡಿಯೊ ಇಲ್ಲಿದೆ ನೋಡಿ.
Corona patient saluted the doctor pic.twitter.com/SQmqw5zQ3b
— Crazy Creator (@CrazyCreator13) May 7, 2021
-Team Infotrend