ಸಖತ್ Video; ತಾವು ಸಾಕಿದ ಪುಟ್ಟ ನಾಯಿಮರಿಗೆ, ತಮ್ಮ ಒಂದೇ ಒಂದು ಕೃತ್ಯದಿಂದ ಅಕ್ಷರಶಃ ಹುಚ್ಚು ಹಿಡಿಸಿದ ದಂಪತಿಗಳು;
ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ ಕಂಡುಬರುವ ಕೆಲವು ವಿಡಿಯೋಗಳು ತುಂಬಾ ಅರ್ಥಗರ್ಭಿತವಾಗಿದ್ದರೆ ಕೆಲವು ವಿಡಿಯೋಗಳು ಸಖತ್ ತಮಾಷೆಯಿಂದಲೂ ಕೂಡಿರುತ್ತವೆ. ಇಂಥ ಚುಟುಕು ವಿಡಿಯೋಗಳು ಕೆಲವೇ ಕ್ಷಣಗಳಲ್ಲಿ ತುಂಬಾ ಸುಂದರವಾದ ಕಾನ್ಸೆಪ್ಟ್ ಕ್ಲಿಯರ್ ಮಾಡುತ್ತವೆ. ಹೀಗಾಗಿ ಇಂಥ ವಿಡಿಯೋಗಳನ್ನು ನೋಡಲು ನೆಟ್ಟಿಗರಿಗೆ ತುಂಬಾ ಇಷ್ಟವಾಗುತ್ತದೆ.
ಈಗ ನಿಮಗಾಗಿ ಒಂದು ವಿಡಿಯೋ ಈ ಲೇಖನದಲ್ಲಿ ತಂದಿದ್ದೇವೆ. ಈ ವಿಡಿಯೋ ನಿಮಗೂ ಇಷ್ಟವಾಗುತ್ತದೆ ಎಂದು ನಂಬಿದ್ದೇನೆ. ಸಾಕು ಪ್ರಾಣಿಗಳಲ್ಲಿ ಎಲ್ಲರಿಗೂ ಅತಿ ಹೆಚ್ಚು ಇಷ್ಟವಾಗುವ ಪ್ರಾಣಿಗಳೆಂದರೆ ನಾಯಿ ಮತ್ತು ಬೆಕ್ಕು. ಈ ಪ್ರಾಣಿಗಳ ವಿಶೇಷ ವಿಡಿಯೋಗಳು ನೋಡಲು ತುಂಬಾ ಇಷ್ಟವಾಗುತ್ತವೆ.
ಸದ್ಯದ ವಿಡಿಯೋದಲ್ಲಿ ದಂಪತಿಗಳಿಬ್ಬರೂ ನಾಯಿಯ ಪುಟ್ಟಮರಿಯ ಜೊತೆಗೆ ಒಂದು ಆಟ ಆಡಿದ್ದಾರೆ. ಈ ಆಟದಲ್ಲಿ ನಾಯಿಯು ಅಕ್ಷರಶಃ ಹುಚ್ಚನಂತಾಗಿದೆ. ಅಂಥ ಯಾವ ಆಟವನ್ನು ನಾಯಿಯ ಈ ಮರಿಯ ಜೊತೆಗೆ ಆಡಿದ್ದಾರೆ ನೋಡೋಣ ಬನ್ನಿ.
ನಾಯಿಯ ಪುಟ್ಟಮರಿಯನ್ನು ಮಧ್ಯದಲ್ಲಿ ನಿಲ್ಲಿಸಿ ಇಬ್ಬರು ದಂಪತಿಗಳು ಅತ್ತಿತ್ತ ನಿಲ್ಲುತ್ತಾರೆ. ಈ ಸಂದರ್ಭದಲ್ಲಿ ನಾಯಿಯ ಮರಿಯು ಅವರ ಜೊತೆ ಕೇಕೆ ಹಾಕುವ ಮೂಡ್ ನಲ್ಲಿದೆ. ಆಗ ಇಬ್ಬರೂ ದಂಪತಿಗಳು ಕ್ಷಣದಲ್ಲಿ ವಿರುದ್ಧ ದಿಕ್ಕಿನಲ್ಲಿ ಓಡಿ ಬಿಡುತ್ತಾರೆ. ಆಗ ನೋಡಿ ಪುಟ್ಟ ಮರಿಯ ಮಜಾ..! ಈ ನಾಯಿ ಮರಿಯೂ ತಾನು ಯಾರಿಗೆ ಫಾಲೋ ಮಾಡಲಿ ಎಂಬ ಕನ್ಫ್ಯೂಸ್ ನಲ್ಲಿ ಬಿದ್ದು ಬರೀ ಇಬ್ಬರಿಗೂ ಒಮ್ಮೆ ಅತ್ತ ಒಮ್ಮೆ ಇತ್ತ ಪಿಳಿಪಿಳಿ ನೋಡಲು ಶುರುಮಾಡುತ್ತದೆ. ಇದಾದ ನಂತರ ನಾಯಿಯ ಅವಸ್ಥೆ ಏನಾಗಿದೆ ಅದು ಕೊಟ್ಟ ರಿಯಾಕ್ಷನ್ ಹೇಗಿತ್ತು? ನೋಡಿ ಈ ಕೆಳಗಿನ ವಿಡಿಯೋದಲ್ಲಿ.
ನೋಡಿ ಈ ವಿಡಿಯೋ..
View this post on Instagram
ಈ ಹುಚ್ಚೆಂತಾದ ನಾಯಿಮರಿ ಮುದ್ದಾದ ಹಾಗೂ ತಮಾಷೆಯ ವಿಡಿಯೋ ಇಂಟರ್ನೆಟ್ ನಲ್ಲಿ ಜೋರಾಗಿ ವೈರಲ್ ಆಗಿದ್ದು ಈ ವರೆಗೆ ಈ ವಿಡಿಯೋವನ್ನು ಮಿಲಿಯನ್ ಸಂಖ್ಯೆಯಲ್ಲಿ ವೀಕ್ಷಿಸಿದ್ದಲ್ಲದೆ ಲಕ್ಷಾವಧಿ ಸಂಖ್ಯೆಯಲ್ಲಿ ಜನರು ಲೈಕ್ ಸಹ ಮಾಡಿದ್ದಾರೆ.