VIDEO : ಮಹಿಳೆಯು ತೊಡೆಯ ನಡುವೆ ಕಲ್ಲಂಗಡಿ ಹಣ್ಣುಗಳನ್ನು ಇಟ್ಟುಕೊಂಡು ಪುಡಿಮಾಡಿ ವಿಶ್ವ ದಾಖಲೆಯನ್ನು ಸೃಷ್ಟಿಸಿದ ವಿಡಿಯೊ ನೋಡಿ

ಪ್ರಪಂಚದಾದ್ಯಂತ ಅನೇಕ ವಿಚಿತ್ರ ವ್ಯಕ್ತಿಗಳು ಇದ್ದಾರೆ, ಕೆಲವರು ತಮ್ಮ ಕೈಯಿಂದ ಇಟ್ಟಿಗೆ ಒಡೆದರೆ, ಮತ್ತೆ ಕೆಲವರು ತಲೆಯಿಂದ ತೆಂಗಿನಕಾಯಿ ಒಡೆದು ಫೇಮಸ್ ಆಗಿದಾರೆ. ತಮ್ಮ ಕಲೆಯಿಂದ ಎಲ್ಲರನ್ನೂ ಅಚ್ಚರಿಗೊಳಿಸುವವರು ಹಲವರಿದ್ದರೆ, ದಾಖಲೆ ಮಾಡುವುದಕ್ಕಾಗಿಯೇ ಹಲವು ಕಲೆ ಕಲಿತವರೂ ಇದ್ದಾರೆ. ಇಂದು ನಾವು ಅಂತಹ ಒಬ್ಬ ಮಹಿಳೆಯನ್ನು ನಿಮ್ಮನ್ನು ಪರಿಚಯಿಸಲಿದ್ದೇವೆ.

ಈಕೆಯ ಹೆಸರು ಈಗ ಗಿನ್ನೆಸ್ ವಿಶ್ವ ದಾಖಲೆಯಲ್ಲಿ ಸೇರಿದೆ. ಉಕ್ರೇನ್ ಮೂಲದ ಈ ಮಹಿಳೆ ಅವರು 3 ಕಲ್ಲಂಗಡಿ ಹಣ್ಣುಗಳನ್ನು ತನ್ನ ತೊಡೆಯ ಇಟ್ಟುಕೊಂಡು ಅದುಮಿ ಪುಡಿಗುಟ್ಟಿಸಿದ್ದಾರೆ! ಅತ್ಯಂತ ವೇಗವಾಗಿ ಈ ಕೆಲಸ ಮಾಡಿ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಮಹಿಳೆಯ ಹೆಸರು ಓಲ್ಗಾ ಲಿಯಾಶ್ಚುಕ್ ಅಂತ. ತನ್ನ ತೊಡೆಯ ನಡುವೆ 3 ಕಲ್ಲಂಗಡಿಗಳನ್ನು ಚಟ್ನಿ ಮಾಡಲು ಈಕೆ ಕೇವಲ 14.65 ಸೆಕೆಂಡುಗಳನ್ನು ತಗೆದುಕೊಂಡಳು!

ಅವರ ಸಾಧನೆಯ ವೀಡಿಯೊವನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ತನ್ನ ಸಾಮಾಜಿಕ ಮಾಧ್ಯಮ ಪುಟದಲ್ಲಿ ಹಂಚಿಕೊಂಡಿದೆ, ಅದು ಈಗ ವೈರಲ್ ಆಗುತ್ತಿದೆ. ಓಲ್ಗಾ ಅವರು ವಿಶ್ವದ ಬಲಶಾಲಿ ಮಹಿಳೆ ಆಗಬೇಕೆಂದು ಬಯಸಿದ್ದರು. ಅದಕ್ಕಾಗಿ ಇಂದಿಗೂ ಆಕೆ ಕಷ್ಟಪಟ್ಟು ಸಾಧನೆ ಮಾಡುತ್ತಾಳೆ. ಈ ವೀಡಿಯೊದಲ್ಲಿ ಓಲ್ಗಾ ತನ್ನ ತೊಡೆಯ ನಡುವೆ ದೊಡ್ಡ ಕಲ್ಲಂಗಡಿಗಳನ್ನು ಇಟ್ಟು ಅದುಮುವುದು ಸೆರೆಯಾಗಿದೆ.

ನೋಡಲು ಸುಲಭ ಅನಿಸಿದರೂ ಈ ಕೆಲಸ ಅಷ್ಟು ಸುಲಭದ್ದಲ್ಲ, ಎರಡೂ ಅಂಗೈ ನಡುವೇ ಹಿಡಿದು ಹಿಚುಕಿದಷ್ಟೂ ಒತ್ತಡ ತೊಡೆಯಿಂದ ಅಮುಕಿದಾಗ ಬರುವುದಿಲ್ಲ. ಅಲ್ಲಿ ಶಕ್ತಿ ರವಾನೆಯಾಗಲು ಅವಕಾಶವೇ ಇರುವುದಿಲ್ಲ ಅಥವಾ ಗ್ರಿಪ್ ಇರುವುದಿಲ್ಲ. ಆದರೂ ಆಕೆ ನಿರಂತರ ಸಾಧನೆಯಿಂದ ಇದನ್ನು ರೂಢಿಸಿಕೊಂಡಿದ್ದಾಳೆ.

ಈ ದಾಖಲೆಯನ್ನು ಯಶಸ್ವಿಯಾಗಿ ಮಾಡಿದ ಓಲ್ಗಾ, “ಇತರ ದಾಖಲೆಗಳಿಗಿಂತ ಇದು ಸುಲಭ ಎಂದು ಭಾವಿಸಿದ್ದರು, ಆದರೆ ಇದು ತುಂಬಾ ಕಷ್ಟಕರವಾಗಿತ್ತು” ಎಂದು ಹೇಳುತ್ತಾರೆ. ಈಗ ಸಾಮಾಜಿಕ ಮಾಧ್ಯಮದಲ್ಲಿ ಗಿನ್ನೆಸ್ ವಿಶ್ವ ದಾಖಲೆಯ ಈ ವೀಡಿಯೊವನ್ನು ಲಕ್ಷಾಂತರ ಜನರು ಇಷ್ಟಪಟ್ಟಿದ್ದಾರೆ, ಆಕೆಯ ಬಲಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ, ವಿಡಿಯೊ ಕೆಳಗಿದೆ ನೋಡಿ…

-Team Infotrend