Cyber Crime: IIT ಇಂಜಿನಿಯರ್, MBA, MCA ವಿದ್ಯಾರ್ಥಿಗಳೇ ವಂಚನೆ ಮಾಡಲು ಶುರು ಮಾಡಿದರೆ ಹೇಗೆ? ಹೊರಬಿತ್ತು ಅಚ್ಚರಿಯ ಪ್ರಕರಣ.
ಮುಂಬೈ ಪೊಲೀಸ್ ನ ಸೈಬರ್ ಸೆಲ್ ಕ್ರೈಂ ಬ್ರಾಂಚ್ ಅಂತರ್ ರಾಜ್ಯ ವಂಚನೆ ನಡೆಸುವ ಗ್ಯಾಂಗ್ ಒಂದನ್ನು ಬೆಳಕಿಗೆ ತಂದಿದ್ದಾರೆ. ಈ ಗ್ಯಾಂಗ್ ಮುಂಬೈಯಲ್ಲಿ ಕೋಟ್ಯಾಧಿಪತಿಗಳಿಗೆ ಟಾರ್ಗೆಟ್ ಮಾಡುತ್ತಿತ್ತು. ಈ ಗ್ಯಾಂಗ್ ನಲ್ಲಿಯ ವಂಚಕರು ದೊಡ್ಡ ದೊಡ್ಡ ಕಂಪನಿಗಳ ಮಾಲೀಕರಿಗೆ, CEO, ಮತ್ತೆ ಹೆಸರಾಂತ ಕಂಪನಿಗಳ CFO ಗಳಿಗೆ ಸರಿಯಾಗಿ ಜಾಲ ಹಾಕುತ್ತಿದ್ದರು. ಈ ವಂಚಕರ ವಿರುದ್ಧ ಕೇವಲ ಮುಂಬಯಿ ಮತ್ತು ನವೀಮುಂಬಯಿ ಈ ಎರಡು ಪಟ್ಟಣಗಳಿಂದ 16 ಕೇಸುಗಳು ದಾಖಲಾಗಿವೆ.
ಅಚ್ಚರಿ ಪಡುವ ವಿಷಯವೇನೆಂದರೆ ಈ ಎಲ್ಲಾ ಆರೋಪಿಗಳು ಹಾಯ್ ಡಿಗ್ರಿ ಹೋಲ್ಡರ್ ಆಗಿದ್ದಾರೆ. ಇವರಲ್ಲಿ IIT ಅಹಮದಾಬಾದ್ ನ ಇಂಜಿನಿಯರ್, MBA, MCA, ಮೆಕ್ಯಾನಿಕಲ್ ಇಂಜಿನಿಯರ್, ಹೋಟೆಲ್ ಮ್ಯಾನೇಜ್ಮೆಂಟ್ ಓದಿದವರು ಶಾಮೀಲಾಗಿದ್ದಾರೆ. ಬಟ್ಟೆಯಿಂದ ಮುಖ ಮುಚ್ಚಿಕೊಳ್ಳುತ್ತಿರುವ ಈ ಎಲ್ಲ ವಂಚಕರು ಸೈಬರ್ ಫ್ರಾಡ್ ಮಾಡುವುದರಲ್ಲಿ ತುಂಬಾ ಚಾಲಾಕಿಗಳಾಗಿದ್ದಾರೆ. ಉಚ್ಚ ಶಿಕ್ಷಣ ಪಡೆದ ಇವರ ಬಗ್ಗೆ ತಿಳಿದುಕೊಂಡಷ್ಟು ಅಚ್ಚರಿ ಮೂಡುತ್ತದೆ.

ಒಟ್ಟು 16 ಪ್ರಕರಣಗಳಲ್ಲಿ ಇವರ ವಿರುದ್ಧ ಕೇಸು ದಾಖಲು.
ಮುಂಬಯಿ ಪೊಲೀಸರ ಸೈಬರ್ ಸೇಲ್ ನ ವಿಶೇಷ ತಂಡದ ಮುಂದೆ ಕುಳಿತ ಈ ಆರೋಪಿಗಳಲ್ಲಿ, ಜಾನ್ ಡೇವಿಡ್ ಹೋಟೆಲ್ ಮ್ಯಾನೇಜ್ಮೆಂಟ್ ಗ್ರಾಜುಯೇಟ್ ಇದ್ದಾನೆ. ನಂದಕುಮಾರ್ ಚಂದ್ರಶೇಖರ್ MCA, ಪವಾತ್ ರಾಣಿ ಪಾರ್ಥಸಾರಥಿ MBA, ಅಯ್ಯಪ್ಪನ್ ಮರುಗಸೇನ್ ಮೆಕ್ಯಾನಿಕಲ್ ಇಂಜಿನಿಯರ್, ಪ್ರೇಮ ಸಾಗರ್ ರಾಮ ಸ್ವರೂಪ ಸ್ಟೂಡೆಂಟ್ ಮತ್ತು ಇನ್ನು ಒಬ್ಬ ತಲೆ ಮೆಡಿಸಿಕೊಂಡ ಆರೋಪಿ ಆಶಿಶ್ ರವೀಂದ್ರನಾಥನ್ IIT ಅಹಮದಾಬಾದ್ ನಿಂದ ಇಂಜಿನಿಯರಿಂಗ್ ಮಾಡಿದ್ದಾನೆ.
ಈಗ ಒಂದು ತಂಡದಲ್ಲಿ ಇಂಥ ಹಾಯ್ ಎಜುಕೇಟೆಡ್ ಚಾಲಾಕಿಗಳು ಇದ್ದಾರೆಂದರೆ ಅವರ ಗುರಿಯೂ ಸಹ ತುಂಬಾ ದೊಡ್ಡದೇ ಆಗಿರಬೇಕು ಅಲ್ಲವೇ? ಪೊಲೀಸರು ಈ ತಂಡವನ್ನು ಅರೆಸ್ಟ್ ಮಾಡಿದ ನಂತರ ಸುಮಾರು 16 ಪ್ರಕರಣಗಳು ತನ್ನಂತಾನೆ ಭೇದಿಸಲ್ಪಟ್ಟಿವೆ. ಇದಕ್ಕಾಗಿ ಸೈಬರ್ ಸೆಲ್ ನ ಮುಂಬೈ ಪೊಲೀಸರು ಹಗಲು ರಾತ್ರಿ ಬೆವರು ಹರಿಸುತ್ತಿದ್ದರು.
ಟೆಕ್ನೋಲಜಿ, ಮ್ಯಾನೇಜ್ಮೆಂಟ್ ಮತ್ತು ಕ್ರಿಯೇಟಿವಿಟಿಯ ಮಾಸ್ಟರ್ ಪ್ಲಾನ್.
ಪ್ರಸ್ತುತ ತಂಡ ತುಂಬಾ ಜಾಣತನದಿಂದ, ಶ್ರೀಮಂತ ಕಂಪನಿಯ ಮಾಲೀಕರಿಗೆ ಅಥವಾ CEO ಗಳಿಗೆ ಇಲ್ಲವೇ ದೊಡ್ಡ ದೊಡ್ಡ ಹುದ್ದೆಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ಟಾರ್ಗೆಟ್ ಮಾಡುತ್ತಿದ್ದರು. ಈ ಗ್ಯಾಂಗ್ ನ ಎಲ್ಲ ಸದಸ್ಯರಿಗೂ ಕಾರ್ಪೊರೇಟ್ ಕಂಪನಿಯ ಹಾಗೆ ಒಂದೊಂದು ಕೆಲಸಗಳನ್ನು ಒಪ್ಪಿಸಲಾಗಿತ್ತು. ಇವರೆಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ಸಾಕಷ್ಟು ಎಕ್ಸ್ಪರ್ಟ್ ಆಗಿದ್ದಾರೆ.
ಈ ಗ್ಯಾಂಗ್ ನಲ್ಲಿಯ ಒಬ್ಬ ಸದಸ್ಯ ಟಾರ್ಗೆಟ್ ಮಾಡಬೇಕಾಗಿರುವ ಶ್ರೀಮಂತರ ಪಟ್ಟಿಯನ್ನು ತಯಾರಿಸುತ್ತಿದ್ದ. ಮುಂಬೈಯಲ್ಲಿ ಹೊಸ ಕಾರನ್ನು ಖರೀದಿಸುವ ವ್ಯಕ್ತಿಯ ಸಂಪೂರ್ಣ ಡೀಟೇಲ್ಸ್ ಇವರ ಹತ್ತಿರ ಉಪಲಬ್ಧವಿರುತ್ತಿತ್ತು. ಸೇಲ್ಸ್ ಅಥವಾ ಮಾರ್ಕೆಟಿಂಗ್ ನಲ್ಲಿಯ ಜನರ ಜೊತೆಗಿನ ಒಡನಾಟದಿಂದಾಗಿ ಈ ಮಾಹಿತಿಯನ್ನು ಪಡೆಯುತ್ತಿದ್ದರು.
ಈ ಎಲ್ಲ ವಂಚಕರು ತಮ್ಮ ಕೆಲಸವನ್ನು ಹಂಚಿಕೊಂಡಿದ್ದರು.
ಎರಡನೇ ವ್ಯಕ್ತಿ ಸಿಟಿ ಬ್ಯಾಂಕಿನ ಡೈನರ್ಸ್ ಕ್ಲಬ್ ಕಾರ್ಡ್ ಉಚಿತವಾಗಿ ನೀಡುವ ದುರಾಸೆಗೆ ಬಲಿ ಮಾಡುತ್ತಿದ್ದ. ಯಾರು ಇವರ ಬಲೆಗೆ ಬೀಳುತ್ತಿದ್ದರೋ ಅವರಿಗೆ ಒಂದು ಲಿಂಕ್ ಕಳುಹಿಸಿ ಅವರ ಸಂಪೂರ್ಣ ಡೇಟಾ ಅಥವಾ ಮಾಹಿತಿ ಹ್ಯಾಕ್ ಮಾಡಿಕೊಳ್ಳುತ್ತಿದ್ದರು. ವ್ಯಕ್ತಿ ಒಂದು ವೇಳೆ ಐ ಫೋನ್ ಉಪಯೋಗಿಸುವವನಿದ್ದರೆ, ಆತನಿಗೆ ಉಚಿತವಾಗಿ ಆಂಡ್ರಾಯ್ಡ್ ಫೋನನ್ನು ಕೇವಲ ಎರಡೇ ಎರಡು ಗಂಟೆಗಳಲ್ಲಿ ಉಪಲಬ್ಧ ಮಾಡಿಕೊಡುತ್ತಿದ್ದರು. ಬರೀ ಎರಡು ಗಂಟೆಗಳಲ್ಲಿ ಪೋರ್ಟರ್ ಮುಖಾಂತರ ಟಾರ್ಗೆಟ್ ವರೆಗೆ ಕಳುಹಿಸಿಕೊಡಲಾಗುತ್ತಿತ್ತು. ಆಂಡ್ರಾಯ್ಡ್ ಫೋನ್ ನೀಡುವ ಹಿಂದಿನ ಮುಖ್ಯ ಉದ್ದೇಶ ಅವರ ಕಾರ್ಡ್ ವೆರಿಫಿಕೇಷನ್ ಮಾಡುವ ಹೆಸರಿನಲ್ಲಿ ವ್ಯಕ್ತಿಯ ಮಾಹಿತಿ ವಂಚಕರಿಗೆ ಸಹಜವಾಗಿ ತಲುಪುತ್ತಿತ್ತು. ಆಂಡ್ರಾಯ್ಡ್ ಫೋನನಲ್ಲಿ ಮೊದಲೇ ಎರಡು ಆಪ್ ಗಳು ಇವರು ಇಟ್ಟಿರುತ್ತಿದ್ದರು, ಇದರಿಂದ ಟಾರ್ಗೆಟ್ ಆದ ವ್ಯಕ್ತಿಗೆ ಮೊದಲ ಎರಡು OTP ಅಥವಾ ಬ್ಯಾಂಕಿನ ಮೆಸೇಜ್ ತಲುಪುತ್ತಿರಲಿಲ್ಲ.
ಜ್ಯುವೆಲರಿ ಶಾಪ್ ನಿಂದಲೂ ಖರೀದಿ ಮಾಡುತ್ತಿದ್ದರು.
ಯಾವ ಸಮಯದಲ್ಲಿ ಟಾರ್ಗೆಟ್ ಆದ ವ್ಯಕ್ತಿ ತನ್ನ ಸಿಮ್ ಕಾರ್ಡ್ ಐಫೋನ್ ನಿಂದ ಆಂಡ್ರಾಯ್ಡ್ ಫೋನ್ ನಲ್ಲಿ ಯೂಸ್ ಮಾಡುತ್ತಿದ್ದನೋ, ಸರಿಯಾಗಿ ಅದೇ ಸಮಯಕ್ಕೆ ಈ ಗ್ಯಾಂಗ್ ನ ಸದಸ್ಯ ಮೊದಲೇ ತನಿಷ್ಕ್ ಜ್ಯುವೆಲರಿ ಅಥವಾ ರಿಲಯನ್ಸ್ ಡಿಜಿಟಲ್ ನಿಂದ ಲಕ್ಷಾವಧಿ ರೂಪಾಯಿಗಳ ಆನ್ಲೈನ್ ಖರೀದಿ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅವರು ಲಕ್ಷಾವಧಿ ರೂಪಾಯಗಳ ಶಾಪಿಂಗ್ ಕ್ಷಣದಲ್ಲಿ ಮಾಡಿಬಿಡುತ್ತಿದ್ದರು.
ಹಣವನ್ನು ಅಕೌಂಟ್ ಗೆ ಟ್ರಾನ್ಸ್ಫರ್ ಮಾಡಿಕೊಳ್ಳುತ್ತಿದ್ದರು.
ಆನ್ಲೈನ್ ಪೇಮೆಂಟ್ ಮಾಡಿದ ನಂತರ ಗ್ಯಾಂಗ್ ನ ಇನ್ನೊಬ್ಬ ಮೆಂಬರ್ ಡೆಲಿವರಿ ತೆಗೆದುಕೊಳ್ಳಲು ಹೋಗುತ್ತಿದ್ದ ಮತ್ತು ತನಿಷ್ಕ ಜ್ಯುವೆಲ್ಲರಿಯಿಂದ ಜ್ಯುವೆಲ್ಲರಿ ತೆಗೆದು ಕೊಂಡು ಬೇರೆ ಜ್ಯುವೆಲರಿ ಶಾಪ್ ಗಳ ಮಾಲೀಕರಿಗೆ ಮಾರಾಟ ಮಾಡುತ್ತಿದ್ದರು. ರಿಲೈನ್ಸ್ ಡಿಜಿಟಲ್ ನಿಂದ ಎಲೆಕ್ಟ್ರಿಕ್ ವಸ್ತುಗಳನ್ನು ಖರೀದಿಸಿ ಬೇರೆಯವರಿಗೆ ಮಾರಾಟ ಮಾಡುತ್ತಿದ್ದರು. ಇಲ್ಲಿ ಈ ತಂಡದ ಸದಸ್ಯರ ಬ್ಯಾಂಕರ್ ಗಳ ಪಾತ್ರ ತುಂಬಾ ಮಹತ್ವದ್ದಿದೆ. ಈ ತಂಡದಲ್ಲಿಯ ಒಬ್ಬ ವ್ಯಕ್ತಿಗೆ ಹಣದ ಕೊಡಕೊಳ್ಳುವ ವ್ಯವಹಾರದ ಜವಾಬ್ದಾರಿಯನ್ನು ಒಪ್ಪಿಸಲಾಗಿತ್ತು. ವಂಚನೆಯಿಂದ ಸಂಪಾದಿಸಿದ ಹಣವನ್ನು ಒಂದು ಅಕೌಂಟ್ ನಿಂದ ಇನ್ನೊಂದು ಅಕೌಂಟ್ ಗೆ, ಮತ್ತೆ ಆ ಕೌಂಟ್ ನಿಂದ ಮೂರನೆಯ ಅಕೌಂಟ್ ಗೆ ಟ್ರಾನ್ಸ್ಫರ್ ಮಾಡಲಾಗುತ್ತಿತ್ತು. ಈ ತಂಡದಲ್ಲಿ ಮಾಸ್ಟರ್ ಮೈಂಡ್ ಎಲ್ಲಾ ಹಣವನ್ನು ತಂಡದ ಪ್ರತಿಯೊಬ್ಬ ಸದಸ್ಯನಿಗೆ ಸರಿಯಾಗಿ ಹಂಚುತ್ತಿದ್ದನು.
ಹರಿಯಾಣ ರಾಜ್ಯದ ಸದಸ್ಯನೊಬ್ಬ ಉಪಲಬ್ಧ ಮಾಡಿಕೊಡುತ್ತಿದ್ದ ಸಿಮ್.
ಇಂಥ ದೊಡ್ಡ ವಂಚನೆ ಮಾಡಲು ಈ ಗ್ಯಾಂಗ್ ಬೇರೆ ಬೇರೆ ಹೆಸರುಗಳ ಮೂಲಕ ಸುಮಾರು 1600 ಸಿಮ್ ಗಳನ್ನು ಉಪಯೋಗಿಸಿಕೊಂಡಿದ್ದಾರೆ. ಈ ಎಲ್ಲಾ ಸಿಮ್ ಗಳನ್ನು ಹರಿಯಾಣದ ವ್ಯಕ್ತಿಯೊಬ್ಬ ವ್ಯವಸ್ಥೆ ಮಾಡುತ್ತಿದ್ದ. ಇಲ್ಲಿಯವರೆಗೆ ಒಟ್ಟು 5 ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ. ಇವರಲ್ಲಿ ಒಬ್ಬ ಗುಜರಾತಿನ ಅಹಮದಾಬಾದ್ ನವನಾಗಿದ್ದರೆ, ಒಬ್ಬ ಹರಿಯಾಣ, 3 ಜನ ತಮಿಳುನಾಡು ಮತ್ತು ಇನ್ನೊಬ್ಬ ಉತ್ತರಪ್ರದೇಶದವನಾಗಿದ್ದಾನೆ.
ವಂಚನೆಯ ಈ ಪ್ರಕರಣಗಳಲ್ಲಿ ಮುಖ್ಯ ಮಾಸ್ಟರ್ ಮೈಂಡ್, ಆಶಿಶ್ ರವೀಂದ್ರನಾಥನ್ ಎಂದು ತಿಳಿದುಬಂದಿದೆ. ಈತ ಮೊದಲ ಅಪರಾಧವನ್ನು ತನ್ನ 19ನೆಯ ವಯಸ್ಸಿನಲ್ಲಿ 2009 ರಲ್ಲಿ ಮಾಡಿದ್ದನು, ಆಗ ಪೊಲೀಸರ ಕೈಗೆ ಸಿಕ್ಕಿಬಿದ್ದು ಈಗ ಒಂದು ತಂಡವನ್ನೇ ತಯಾರಿಸಿ ಅದರ ಲೀಡರ್ ಆಗಿದ್ದಾನೆ. ಈ ಹೊಸ ಗ್ಯಾಂಗ್ ಮುಖಾಂತರ ಇಲ್ಲಿಯವರೆಗೆ ಕೋಟ್ಯಾವಧಿ ರೂಪಾಯಿಗಳನ್ನು ವಂಚನೆ ಮಾಡಿದ್ದಾನೆ. ಸದ್ಯ ಮುಂಬಯಿ ಪೊಲೀಸ್ ಇವರಿಂದ ಸುಮಾರು ನಾಲ್ಕು ಲಕ್ಷ ರೂಪಾಯಿ ಕ್ಯಾಷ್, ಕಾರು, ಮೊಬೈಲ್, ಬಿಟ್ ಕಾಯಿನ್ ನಲ್ಲಿ ಹೂಡಿಕೆ ಮಾಡಿದ ಸಿಂಗಾಪುರ ಡಾಲರ್ ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ. ಸದ್ಯ ಹೊಸ ಕಾರನ್ನು ಖರೀದಿಸುವ ವ್ಯಕ್ತಿಯ ಬಗ್ಗೆ ಈ ವಂಚಕರು ಹೇಗೆ ಪತ್ತೆ ಹಚ್ಚಿಕೊಳ್ಳುತ್ತಿದ್ದರು ಎಂಬುದನ್ನು ತಿಳಿದುಕೊಳ್ಳಲು ಮುಂಬಯಿ ಪೊಲೀಸ್ ಕಾರ್ಯಪ್ರವೃತ್ತವಾಗಿದೆ. ಈ ಅಂಕಿ ಅಂಶಗಳು ಬರಿ ಮುಂಬಯಿ ಮತ್ತು ನವಿಮುಂಬಯಿ, ಎರಡು ಪಟ್ಟಣಗಳದ್ದು ಅಷ್ಟೇ ಆಗಿದೆ. ಇದರ ಹೊರತಾಗಿ ಇನ್ನು ಎಲ್ಲೆಲ್ಲಿ ಯಾವ ರೀತಿ ಜಾಲ ಹಾಕಿದ್ದಾರೆ ಎಂಬುದರ ಬಗ್ಗೆಯೂ ಮುಂಬಯಿ ಪೊಲೀಸರು ತನಿಖೆ ಜೋರಾಗಿ ನಡೆಸಿದ್ದಾರೆ.