ದಾನ ಪತ್ರದ ಮೂಲಕ ಬಂದಿರುವ ಆಸ್ತಿಯನ್ನು ಖರೀದಿಸುವ ಮುನ್ನ ಎಚ್ಚರ ವಹಿಸಿ…ಯಾವ ಸ್ವತ್ತನ್ನು ದಾನಪತ್ರ ಮಾಡಲು ಸಾಧ್ಯವಿಲ್ಲವೆಂಬುದು ತಿಳಿದಿದೆಯೇ?
ಕಾನೂನಿನ ಅರಿವು ಎಲ್ಲರಿಗೂ ಅವಶ್ಯಕ. ಯಾವುದೇ ಒಂದು ಆಸ್ತಿಯನ್ನು ದಾನಪತ್ರ ಮಾಡಬೇಕೆಂದರೆ ಅದು ಚಿರಾಸ್ತಿ ಆಗಿರಬಹುದು ಅಥವಾ ಸ್ಥಿರಾಸ್ತಿ ಆಗಿರಬಹುದು. ಅದು ದಾನವಾಗಿ ನೀಡುವ ವ್ಯಕ್ತಿಯ ಸ್ವ ಆಸ್ತಿಯಾಗಿರಬೇಕು ಅಥವಾ ಆಸ್ತಿಯ ಮೇಲೆ ಸಂಪೂರ್ಣ ಮಾಲೀಕತ್ವವನ್ನು ಅವನು ಹೊಂದಿದವನಾಗಿರಬೇಕು. ಇಂತಹ ಆಸ್ತಿಯನ್ನು ಮಾತ್ರ ದಾನವಾಗಿ ಬೇರೆಯವರಿಗೆ ನೀಡಲು ಸಾಧ್ಯ. ಯಾವುದೇ ದಾನ ಪತ್ರವಾಗಿರಲಿ ಅದು ರಿಜಿಸ್ಟರ್ ಆದಮೇಲೆಯೇ ಮಾನ್ಯತೆ ಗಳಿಸುವುದು.ಅನ್ ರೆಜಿಸ್ಟರ್ಡ (Unregistered) ದಾನ ಪತ್ರಗಳನ್ನು ಕಾನೂನು ಮಾನ್ಯಗೊಳಿಸುವುದಿಲ್ಲ. ಅದನ್ನು ಜಾರಿಗೆ ತರಲು ಸಾಧ್ಯವಾಗುವುದಿಲ್ಲ.
ದಾನ ಪತ್ರವನ್ನು ನೀಡಬೇಕಾದರೆ ದಾನ ನೀಡುವಂತಹ ವ್ಯಕ್ತಿಯು ಸಂಪೂರ್ಣ ಸ್ವ ಇಚ್ಛೆಯಿಂದ ನೀಡಬೇಕಾಗುತ್ತದೆ. ವ್ಯಕ್ತಿಗೆ ಭಯ ಹುಟ್ಟಿಸುವ ಮೂಲಕ, ಬೆದರಿಕೆ ಹಾಕುವ ಮೂಲಕ ಅಥವಾ ಯಾವುದೇ ಒತ್ತಡ ಹೇರುವ ಮೂಲಕ ದಾನ ಪತ್ರವನ್ನು ಬರೆಯಿಸಿಕೊಂಡಿರಬಾರದು. ಸಾಮಾನ್ಯವಾಗಿ ದಾನ ಪತ್ರವನ್ನು ರಕ್ತ ಸಂಬಂಧಿಗಳಲ್ಲಿ ಮಾಡುತ್ತಾರೆ. ಯಾವುದೇ ಸಂಬಂಧವಿಲ್ಲದ ವ್ಯಕ್ತಿಗೂ ಕೂಡ ಈ ದಾನ ಪತ್ರವನ್ನು ನೀಡಬಹುದಾಗಿದೆ. ಆದರೆ ದಾನಪತ್ರವನ್ನು ರಕ್ತ ಸಂಬಂಧಗಳಲ್ಲಿ ನೀಡುವಾಗ ಮಾತ್ರ ಕೆಲವು ವಿನಾಯತಿಗಳು ದೊರೆಯುತ್ತವೆ. ದಾನ ಪತ್ರಗಳನ್ನು ಮಾಡಿಸುವಾಗ ಯಾರು ನೀಡುತ್ತಿದ್ದಾರೆ ಮತ್ತು ಯಾರು ತೆಗೆದುಕೊಳ್ಳುತ್ತಿದ್ದಾರೆ ಅವರ ಸಂಪೂರ್ಣ ಮಾಹಿತಿಯ(Id proof)ಅವಶ್ಯಕತೆ ಇರುತ್ತದೆ.
ದಾನವಾಗಿ ನೀಡುವ ಆಸ್ತಿಯ ಮಾಲೀಕತ್ವವನ್ನು ಹೇಗೆ ಪಡೆದರು ಎಂಬ ವಿಷಯಕ್ಕೆ ಆಧಾರಿತವಾಗಿ ಎಲ್ಲಾ ದಾಖಲೆಗಳು ಇರಬೇಕು. ಆಸ್ತಿಯನ್ನು ರಿಜಿಸ್ಟರ್ ಮಾಡುವಾಗ ಯಾವ ಯಾವ ರೀತಿಯ ದಾಖಲಾತಿಗಳನ್ನು ಸಲ್ಲಿಸುತ್ತೇವೆಯೋ ಅವೆಲ್ಲ ದಾಖಲಾತಿಗಳು ಅವಶ್ಯಕತೆಯೂ ದಾನ ಪತ್ರಕ್ಕೆ ಇರುತ್ತದೆ. Gift deed ಅನ್ನು ಇಬ್ಬರ ಸಾಕ್ಷಿಯ ಸಮ್ಮುಖದಲ್ಲಿ ರೆಜಿಸ್ಟರ್ ಮಾಡಬೇಕಾಗುತ್ತದೆ. ದಾನ ಪತ್ರವನ್ನು ನೀವೇ ಮಾಡಲು ಮುಂದಾದರೆ ನುರಿತ ವಕೀಲರಲ್ಲಿ ಮಾತನಾಡಿ ಇದಕ್ಕೆ ಸಂಬಂಧಪಟ್ಟ ಎಲ್ಲಾ ಅಂಶಗಳನ್ನು ಸೇರಿಸಿ ಪತ್ರವನ್ನು ಮಾಡಬೇಕಾಗುತ್ತದೆ.ದಾನ ಪತ್ರಗಳನ್ನು ಮಾಡುವವರ ಬಳಿ ಬರೆಸಿಕೊಂಡು, ಡಾಕ್ಯುಮೆಂಟ್ನ ಪ್ರತಿಯನ್ನು ತರಬೇಕಾಗುತ್ತದೆ. ನೀವೇ ಸ್ವತಹ ದಾನ ಪತ್ರವನ್ನು ಮಾಡುವಾಗ ನುರಿತವರ ಬಳಿ ಮಾಡಿಸುವುದು ಒಳಿತು. ಅವರು ಯಾವುದೇ ಕಾನೂನಿನ ವ್ಯಾಜ್ಯಗಳು ಬಾರದಂತೆ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸೇರಿಸಿ ರಿಜಿಸ್ಟ್ರೇಷನ್ ಮಾಡಿಸಿಕೊಡುತ್ತಾರೆ.
ಹಾಗಾದರೆ ದಾನಪತ್ರದಲ್ಲಿ ಯಾವೆಲ್ಲಾ ಅಂಶಗಳನ್ನು ಸೇರಿಸಬೇಕು? ತಿಳಿದುಕೊಳ್ಳಿ. ದಾನವನ್ನು ನೀಡುತ್ತಿರುವ ವ್ಯಕ್ತಿಯ ಹೆಸರು, ತಂದೆಯ ಹೆಸರು, ವಿಳಾಸ ಮತ್ತು ದಾನವನ್ನು ತೆಗೆದುಕೊಳ್ಳುತ್ತಿರುವ ವ್ಯಕ್ತಿಯ ಹೆಸರು ವಿಳಾಸ ಸಂಪೂರ್ಣ ಮಾಹಿತಿಯನ್ನು ಸೇರಿಸಬೇಕು.ಅಲ್ಲದೆ ದಾನ ಪತ್ರವನ್ನು ಮಾಡುತ್ತಿರುವ ಉದ್ದೇಶವನ್ನು ಸಹ ಉಲ್ಲೇಖಿಸಬೇಕು. ವ್ಯಕ್ತಿಯ ಉದ್ಯೋಗ ಮತ್ತು ಸ್ವತ್ತನ್ನು ಹೇಗೆ ಪಡೆದರು ಎಂಬುದರ ಕುರಿತಾಗಿ ಮಾಹಿತಿಯನ್ನು ನೀಡಬೇಕು. ದಾನವಾಗಿ ನೀಡುವ ಆಸ್ತಿಯ ಸಂಪೂರ್ಣ ವಿವರ ಸೇರಿಸಬೇಕು. ಚೆಕ್ಕು ಬಂದಿ, ವಿಸ್ತೀರ್ಣ, ಸರ್ವೇ ನಂಬರ್ ಅನ್ನು ಉಲ್ಲೇಖಿಸಿರಬೇಕು. ದಾನ ಪತ್ರವನ್ನು ಪಡೆದಿರುವ ವ್ಯಕ್ತಿಯು ಆ ಆಸ್ತಿಯ ಬಳಕೆಗೆ ಅಥವಾ ಮಾರಾಟಕ್ಕೆ ಅಥವಾ ವರ್ಗಾವಣೆ ಮಾಡಲು ಹಕ್ಕನ್ನು ಹೊಂದಿರುತ್ತಾನೆ ಎಂಬುದನ್ನು ಕೂಡ ಉಲ್ಲೇಖಿಸಬೇಕು. ಈ ಮೇಲಿನ ಎಲ್ಲಾ ಅಂಶಗಳು ಅತಿ ಮುಖ್ಯವಾಗಿರುತ್ತದೆ.
ಷರತ್ತುಗಳನ್ನು ಒಳಗೊಂಡ ದಾನ ಪತ್ರಗಳನ್ನು ಕೂಡ ಮಾಡಬಹುದು. ಷರತ್ತುಗಳ ಉಲ್ಲಂಘನೆಯಾದಾಗ ಆ ದಾನ ಪತ್ರವು ಅಮಾನ್ಯಗೊಳ್ಳುತ್ತದೆ. ಅಂತಹ ಸಂದರ್ಭದಲ್ಲಿ ದಾನ ಪತ್ರವನ್ನು ಹಿಂದಕ್ಕೆ ಪಡೆಯಬಹುದು ಎಂಬುದನ್ನು ಕೂಡ ಉಲ್ಲೇಖಿಸಬಹುದಾಗಿದೆ. ಈ ಅಂಶವನ್ನು ಸೇರಿಸಲೇಬೇಕು ಎಂಬ ಕಾಯ್ದೆ ಇಲ್ಲ. ಆದರೆ ಅವಶ್ಯಕತೆ ಇದ್ದವರು ಸೇರಿಸುವ ಅವಕಾಶವಿದೆ.
ಗ್ರಾಮೀಣ ಭಾಗದಲ್ಲಿ, ನಗರ ಪ್ರದೇಶಗಳಲ್ಲಿ, ಬಿಬಿಎಂಪಿ ಅಡಿಯಲ್ಲಿ ದಾನ ಪತ್ರವನ್ನು ರಿಜಿಸ್ಟರ್ ಮಾಡುವಾಗ ಕಟ್ಟಬೇಕಾದ ಸ್ಟ್ಯಾಂಪ್ ಡ್ಯೂಟಿ ಮತ್ತು ರಿಜಿಸ್ಟರ್ ಫೀ… ಯಾವ ಸಂದರ್ಭದಲ್ಲಿ ಟ್ಯಾಕ್ಸ್ ಅನ್ನು ಕಟ್ಟಬೇಕು? ಯಾವಾಗ ವಿನಾಯಿತಿ ದೊರೆಯುತ್ತದೆ? ಎಂದೆಲ್ಲ ಮಾಹಿತಿಗಳನ್ನು ತಿಳಿದುಕೊಳ್ಳಲು ಕೆಳಗೆ ನೀಡಿರುವ ವಿಡಿಯೋವನ್ನು ವೀಕ್ಷಿಸಿ.