ಡಿ ಬಾಸ್ ಅವರು ತಮ್ಮ ಎದೆಯ ಮೇಲೆ ‘ ನನ್ನ♥️ ಸೆಲೆಬ್ರಿಟೀಸ್ ‘ ಅಂತ ಹಚ್ಛೆ ಹಾಕಿಸಿಕೊಳ್ಳಲು ಕಾರಣ ಏನಂತ ಸ್ವತಃ ತಾವೇ ಹೇಳಿದ್ದಾರೆ! ವಿಡಿಯೋ ನೋಡಿ!!

ಅಭಿಮಾನಿಗಳು ಹೀರೋಗಳ ಹೆಸರನ್ನ ಹಚ್ಛೆ ಹಾಕಿಸುವ ಅಭಿಮಾನವನ್ನು ನೋಡಿದ್ದೀವಿ ಆದರೆ ಇಡೀ ಚಿತ್ರರಂಗದ ಇತಿಹಾಸದಲ್ಲೇ ಇದೇ ಮೊದಲು ಒಬ್ಬ ಹೀರೋ ತನ್ನ ಅಪಾರ ಅಭಿಮಾನಿಗಳ ಪ್ರೀತಿಯನ್ನು ತನ್ನ ಎದೆಯ ಮೇಲೆ ಮೆರೆಸುವ ಏಕೈಕ ವ್ಯಕ್ತಿ ಎಂದರು ಸಾಲದು. ಅಭಿಮಾನಿಗಳು ತಮ್ಮ ಹೀರೋಗಳ ಸಲುವಾಗಿ ಮಾಡಬಾರದನ್ನು ಮಾಡುತ್ತಾರೆ. ಆದರೆ ಚಿತ್ರರಂಗದ ಇತಿಹಾಸದಲ್ಲಿಯೇ ಇದೆ ಮೊದಲ ಬಾರಿ ಅಭಿಮಾನಿಗಳನ್ನು ತನ್ನ ಕೆಚ್ಚೆದೆಯ ಮೇಲೆ ಬರೆದುಕೊಂಡಿರುವ ಏಕೈಕ ನಟ ಎಂದರೆ ನಮ್ಮ ಡಿ ಬಾಸ್.

ಕ್ರಾಂತಿ ಸಿನಿಮಾ ಬಂದಾಗಿನಿಂದಲೂ ದರ್ಶನ ಅವರು ತುಂಬಾನೇ ಚರ್ಚೆಯಲ್ಲಿದ್ದಾರೆ. ಅಂತಹದರಲ್ಲಿ ಅವರೊಂದಿಗೆ ನಡೆದಿರುವ ಒಂದು ಕೆಟ್ಟ ಘಟನೆ ಸಹ ಅವರನ್ನು ಬೇಸರ ಮಾಡಿತು. ಇಷ್ಟೆಲ್ಲಾ ಆದರೂ ಸಹ ಯಾರನ್ನು ದೋಷದೆ ಎಲ್ಲರೂ ನನ್ನ ಅಭಿಮಾನಿಗಳು ಎಂದು ಆ ಕರಾಳವಾದ ಘಟನೆಯನ್ನು ಮರೆತು ಬಿಟ್ಟರು. ಎಲ್ಲ ಹೀರೋಗಳಲ್ಲಿ ಈ ಗುಣ ಕಂಡು ಬರುವದಿಲ್ಲ. ದರ್ಶನ್ ಅವರು ಅಭಿಮಾನಿಗಳಿಗೆ ತೋರುವ ಪ್ರೀತಿ ಹಾಗೂ ಚಿತ್ರರಂಗದಲ್ಲಿ ಅವರು ಬೆಳೆದ ರೀತಿ ನೋಡಿದರೆ ಅವರು ಪಟ್ಟಿರುವ ಕಷ್ಟ ಹಾಗೂ ಪರಿಶ್ರಮ ಎರಡು ಸಹ ತಿಳಿದು ಬರುತ್ತೆ.

ದರ್ಶನ ಅವರ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡುವ ಪ್ರತಿಯೊಬ್ಬ ನಟ ಅಥವಾ ನಟಿಯರಿಗೆ ಪ್ರೋತ್ಸಾಹ ಕೊಡುವಂತಹ ವ್ಯಕ್ತಿತ್ವ ಹೊಂದಿದ್ದಾರೆ. ಬೇರೆ ನಟರ ಹಾಗೆ ಹೊಸಬರು ಸಹ ಬೆಳೆದು ನಿಲ್ಲಬೇಕು ಅನ್ನೋ ಉದ್ದೇಶ ಅವರದ್ದು ಹೀಗಾಗಿ ಅವರು ಪ್ರತಿಯೊಬ್ಬರನ್ನು ಪ್ರೋತ್ಸಾಹಿಸಿ ತಮ್ಮ ಕೈಲಾದಷ್ಟು ಸಹಾಯ ಸಹ ಮಾಡುತ್ತಾರೆ. ದರ್ಶನ ಅವರಿಗೆ ಅಭಿಮಾನಿಗಳು ಎಂದರೆ ತುಂಬಾನೇ ಪ್ರೀತಿ, ಅಭಿಮಾನಿಗಳೇ ನನ್ನ ದೇವರು ಅಂತ ಅದೆಷ್ಟೋ ಸಲ ಹೇಳಿದ್ದಾರೆ.

ಕ್ರಾಂತಿ ಸಿನಿಮಾ ಹಿಟ್ ಆದ ನಂತರ ದರ್ಶನ ಅವರಿಗೆ ತಮ್ಮ ಅಭಿಮಾನಿಗಳ ಮೇಲಿರಿವ ಪ್ರೀತಿ ಇನ್ನಷ್ಟು ಹೆಚ್ಚಾಗಿದೆ. ತಮ್ಮ ಅಭಿಮಾನಿಗಳು ಸಲುವಾಗಿ ಏನಾದರೂ ಮಾಡಬೇಕು ಅನ್ನೋ ಉದ್ದೇಶದಿಂದ ನಿನ್ನೆ ದರ್ಶನ್ ತಮ್ಮ ಎದೆಯ ಮೇಲೆ ‘ನನ್ನ♥️ಸೆಲೆಬ್ರಿಟೀಸ್’ ಅಂತ ಹಚ್ಛೆ ಹಾಕಿಸಿಕೊಂಡಿದ್ದಾರೆ. ಅವರು ಈ ಹಚ್ಛೆ ಹಾಕಿಸಿಕೊಳ್ಳುವ ಮುನ್ನ ಇದರ ಕಾರಣ ಸಹ ಹೇಳಿದ್ದಾರೆ. ಈ ವೀಡಿಯೋದಲ್ಲಿ ನೀವೇ ನೋಡಿ ದರ್ಶನ್ ಅವರು ಏನು ಹೇಳಿದ್ದಾರೆ ಅಂತ.

ವಿಡಿಯೋ ನೋಡಿ.

https://youtu.be/5OBNdQhfGyk

ದರ್ಶನ್ ಅವರ ಈ ವಿಡಿಯೋ ಯುಟ್ಯೂಬ್ ನಲ್ಲಿ ಡಿ ಬಾಸ್ ಕಂಪನಿ ಎಂಬ ಹೆಸರಿನ ಚಾನೆಲ್ ಮುಖಾಂತರ ಶೇರ್ ಮಾಡಲಾಗಿದೆ. ನಿನ್ನೆಯಷ್ಟೇ ಶೇರ್ ಮಾಡಿರುವ ಈ ವೀಡಿಯೋ ಇದುವರೆಗೆ ಎರಡು ಲಕ್ಷಕ್ಕೂ ಹೆಚ್ಚು ನೆಟ್ಟಿಗರು ವೀಕ್ಷಣೆ ಮಾಡಿದ್ದಲ್ಲದೆ ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚು ಜನರು ಲೈಕ್ ಸಹ ಮಾಡಿದ್ದಾರೆ.