VIDEO : ಡ್ಯೂಟಿ ಮೇಲಿದ್ದಾಗಲೇ ಟುಕ್ರ ಟುಕ್ರು ವಿಡಿಯೊ ಮಾಡಿದ ದೆಹಲಿ ಪೊಲೀಸರಿಗೆ ಡಿಸಿಪಿ ನೋಟಿಸ್!
ದೆಹಲಿ ಪೊಲೀಸರ ಟುಕ್ರ ಟುಕ್ರು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ ಇಬ್ಬರು ದೆಹಲಿ ಪೊಲೀಸ್ ನೌಕರರ ಶೋ-ಕಾಸ್ ನೋಟಿಸ್ ಕಳುಹಿಸಲಾಗಿದೆ. ವೈರಲ್ ವೀಡಿಯೊದಲ್ಲಿ ಮಹಿಳಾ ಪೊಲೀಸ್ ಸಹ ಕಾಣಿಸಿಕೊಂಡಿದ್ದಾರೆ. ಈ ಇಬ್ಬರನ್ನು ಮಾಡೆಲ್ ಟೌನ್ ಪೊಲೀಸ್ ಠಾಣೆಯಲ್ಲಿ ನಿಯುಕ್ತಿ ಮಾಡಲಾಗಿದೆ. ದೆಹಲಿ ಪೊಲೀಸರ ಪ್ರಕಾರ ಕರ್ತವ್ಯದಲ್ಲಿರುವಾಗ ವೀಡಿಯೊಗಳನ್ನು ಮಾಡಿದ್ದಕ್ಕಾಗಿ ಇಬ್ಬರೂ ಪೊಲೀಸರಿಗೆ ನೋಟಿಸ್ ಕಳುಹಿಸಲಾಗಿದೆ.
ಈ 15 ಸೆಕೆಂಡ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿದೆ. ಆ ವಿಡಿಯೊ ಇಲ್ಲಿ ಕೊನೆಗೆ ಇದೆ. ಜೂನ್ 7 ರಂದು ಡಿಸಿಪಿ (ವಾಯುವ್ಯ) ಉಷಾ ರಂಗ್ನಾನಿ ನೋಟಿಸ್ ಕಳುಹಿಸಿದ್ದಾರೆ. ಈ ಇಬ್ಬರೂ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿರುವುದು ಹಾಗೂ ಬೇಜವಾಬ್ಧಾರಿಯಿಂದ ವರ್ತಿಸಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ.
ಮಾಡೆಲ್ ಟೌನ್ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳಾ ಮುಖ್ಯಸ್ಥ ಕಾನ್ಸ್ಟೇಬಲ್ ಶಶಿ ಮತ್ತು ಕಾನ್ಸ್ಟೇಬಲ್ ವಿವೇಕ್ ಮಾಥುರ್ ಅವರು ಲಾಕ್ ಡೌನ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಗಮನಕ್ಕೆ ಬಂದಿದೆ. ಹೀಗಿದ್ದಾಗೂ ಕೊರೋನ ಗೈಡ್ ಲೈನ್ಸ್ ಹಾಗೂ ಇಲಾಖೆಯ ಶಿಸ್ತು ಮರೆತಿದ್ದಾರೆ. ಅವರ ಎರಡು ವಿಡಿಯೊ ಕೆಳಗಿವೆ.
ಈ ಸಮಯದಲ್ಲಿ ಅನೇಕ ಮನರಂಜನೆ ವೀಡಿಯೊಗಳನ್ನು ತಯಾರಿಸಲಾಗಿದ್ದು ಅವೆಲ್ಲ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪೋಸ್ಟ್ ಮಾಡಲಾಗಿದೆ. ವೀಡಿಯೊಗಳು ತುಂಬಾ ವೈರಲ್ ಆಗುತ್ತಿವೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಇಬ್ಬರೂ ಪೊಲೀಸರು ಸಮವಸ್ತ್ರದಲ್ಲಿದ್ದಾರೆ ಮತ್ತು ಬಾಲಿವುಡ್ ಚಿತ್ರದ ಟುಕ್ರ ಟುಕ್ರು ದೇಖ್ತೆ ಹೋ ಕ್ಯಾ… ಚೆಹ್ರಾ ತೇರಾ ಹಾಡಿಗೆ ಅಭಿನಯಿಸಿದ್ದಾರೆ.
ನೋಟಿಸ್ ನಲ್ಲಿ… ಈ ವೀಡಿಯೊಗಳಲ್ಲಿ ಕಾನ್ಸ್ಟೇಬಲ್ ವಿವೇಕ್ ಮಾಸ್ಕನ್ನು ಸಹ ಧರಿಸಿರಲಿಲ್ಲ ಮತ್ತು ಇಬ್ಬರೂ ಸಾಮಾಜಿಕ ಅಂತರವನ್ನು ಅನುಸರಿಸಿರಲಿಲ್ಲ. ಶಿಸ್ತುಬದ್ಧ ಪೊಲೀಸ್ ಪಡೆಯ ಸದಸ್ಯರಾಗಿರುವುದರಿಂದ ಇಬ್ಬರ ನಡವಳಿಕೆಯು ತಮ್ಮ ಕರ್ತವ್ಯದ ಸಮಯದಲ್ಲಿ ವೃತ್ತಿಪರರಲ್ಲದವರಾಗಿ ಕಂಡುಬರುತ್ತದೆ ಎಂದಿದೆ.
ಈ ಇಬ್ಬರ ಈ ಕಾರ್ಯವನ್ನು ಅವರ ಅಧಿಕೃತ ಕರ್ತವ್ಯಗಳಲ್ಲಿನ ನಿರ್ಲಕ್ಷ್ಯ ಎನ್ನಲಾಗುತ್ತದೆ. ಆದ್ದರಿಂದ ಅವರ ಈ ನಡವಳಿಕೆಯನ್ನು ಖಂಡಿಸಿ ಶೋ ಕಾಸ್ ನೋಟಿಸ್ಗಳನ್ನು ಇಬ್ಬರಿಗೂ ಕಳುಹಿಸಲಾಗಿದೆ. ನೋಟಿಸ್ ಬಂದ 15 ದಿನಗಳೊಳಗೆ ಉತ್ತರ ನೀಡಬೇಕು ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.
— Atul Bhatia (@atul_bhatia1) June 8, 2021
ಹಾಗೆ ಮಾಡಲು ವಿಫಲವಾದರೆ ಅವರ ರಕ್ಷಣೆಯಲ್ಲಿ ಅವರಿಗೆ ಏನೂ ಹೇಳುವುದು ಇಲ್ಲ ಎಂದು ಭಾವಿಸಿ ಈ ವಿಷಯವನ್ನು ಏಕಪಕ್ಷೀಯವಾಗಿ ನಿರ್ಧರಿಸಲಾಗುವುದು. ಅಂದರೆ ಇಲಾಖೆ ಅವರ ಮೇಲೆ ಕ್ರಮ ತಗೆದುಕೊಳ್ಳುವುದು. 15 ಸೆಕೆಂಡಿನ ವಿಡಿಯೊಕ್ಕಾಗಿ ಈಗ ಇಬ್ಬರೂ ಸಸ್ಪೆಂಡ್ ಆಗುವ ಭೀ’ತಿ’ಯಲ್ಲಿದ್ದಾರೆ. ಅವರ ಎರಡು ವಿಡಿಯೊ ಮೇಲಿವೆ ನೋಡಿ…
-Team Infotrend