ಈ ಆಟಗಾರ ಕ್ರಿಕೇಟಿಗಾಗಿ ಮನೆ, ಆಸ್ತಿ ಎಲ್ಲ ಮಾರಿದನು! ದೇಶವನ್ನೇ ತೊರೆದನು : ಈಗ ಮೊದಲ ಪಂದ್ಯದಲ್ಲೇ ಡಬಲ್ ಸೆಂಚ್ಯೂರಿ ಭಾರಿಸಿದ್ದಾನೆ!

ಒಬ್ಬ ಆಟಗಾರನು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಲು ತುಂಬಾ ಶ್ರಮಿಸುತ್ತಾನೆ. ಅವನು ವರ್ಷಗಳಿಂದ ಅಭ್ಯಾಸ ಮಾಡುತ್ತಾನೆ ಮತ್ತು ಅವಕಾಶ ಸಿಕ್ಕ ಸಂದರ್ಭಗಳಲ್ಲಿ ತನ್ನನ್ನು ತಾನು ಸಾಬೀತುಪಡಿಸಿಕೊಳ್ಳುವುದು ಅವನ ಅಂತಿಮ ಗುರಿಯಾಗಿರುತ್ತದೆ. ಆದಾಗ್ಯೂ ಕಠಿಣ ಪರಿಶ್ರಮದ ಜೊತೆಗೆ ಅನೇಕ ದೊಡ್ಡ ತ್ಯಾಗಗಳನ್ನು ಮಾಡಿದ ಕೆಲವು ಆಟಗಾರರಿದ್ದಾರೆ. ಕ್ರಿಕೆಟ್ ಜಗತ್ತಿನಲ್ಲಿ ಅಂತಹ ಒಂದು ಹೆಸರು ಡೆವೊನ್ ಕಾನ್ವೇ.

ಇವರು ಕ್ರಿಕೇಟ್ ಗಾಗಿ ತನ್ನ ಮನೆ, ಆಸ್ತಿ ಮತ್ತು ಎಲ್ಲವನ್ನೂ ಮಾರಿದನು, ತನ್ನ ದೇಶವನ್ನು ತೊರೆದು ಬೇರೆ ದೇಶಕ್ಕೆ ವಲಸೆ ಹೋಗುತ್ತಾನೆ. ಈಗ ತಾನು ವಾಸವಿರುವ ದೇಶದ ಪರ ಅಂತರಾಷ್ಟ್ರೀಯ ಪಂದ್ಯಗಳಿಗೆ ಪಾದಾರ್ಪಣೆ ಮಾಡಿದ್ದಾನೆ. ಅಷ್ಟೇ ಅಲ್ಲ, ಚೊಚ್ಚಲ ಪಂದ್ಯದಲ್ಲಿಯೇ ಡಬಲ್ ಸೆಂಚ್ಯೂರಿ ಭಾರಿಸಿ ತನ್ನ ಸಾಮರ್ಥ್ಯ ಸಾಬಿತು ಮಾಡಿದ್ದಾನೆ.

ಈ ಆಟಗಾರನ ಹೆಸರು ಡೆವೊನ್ ಕಾನ್ವೇ (Devon Conway) ಅಂತ. ಇವರು ಮೂಲತ ದಕ್ಷಿಣ ಆಫ್ರಿಕಾದ ಆಟಗಾರರಾಗಿದ್ದು, ಅವರು ತಮ್ಮ ದೇಶದಲ್ಲಿ ಗೊಟೆಂಗ್ ಪರ 26 ವರ್ಷ ವಯಸ್ಸಿನವರೆಗೆ ಆಡಿದ್ದರು, ಆದರೆ ಅವಕಾಶಗಳ ಕೊರತೆಯಿಂದಾಗಿ ಅವರು ತಮ್ಮ ದೇಶವನ್ನು ತೊರೆದು ನ್ಯೂಜಿಲೆಂಡ್‌ನಲ್ಲಿ ನೆಲೆಸಲು ನಿರ್ಧರಿಸಿದರು.

ದೇಶಿ ಕ್ರಿಕೇಟ್ ನಲ್ಲಿ ಅವರು ಸಾಕಷ್ಟು ರನ್ ಗಳಿಸುತ್ತಿದ್ದರೂ ಅವರಿಗೆ ಅವಕಾಶ ಕೊಡುತ್ತಿರಲಿಲ್ಲ. ಅವರಿಗೆ ನಿರ್ಧಿಷ್ಟ ಬ್ಯಾಟಿಂಗ್ ಕ್ರಮಾಂಕವೇ ಇರಲಿಲ್ಲ. T-20 ಯಲ್ಲಿ ಓಪನರ್, ಒನ್ ಡೆ ನಲ್ಲಿ 5 ನೇ ಕ್ರಮಾಂಕ ಕೊಡುತ್ತಿದ್ದರು. ಇನ್ನು ಟೆಸ್ಟ್ ಪಂದ್ಯಗಳಿಗೆ ಅವರನ್ನು ಯಾರಾದರೂ ಗಾಯಗೊಂಡರಷ್ಟೇ ಆಯ್ಕೆ ಮಾಡುತ್ತಿದ್ದರು.

ಅವರು ದೇಶ ಬಿಡುವ ಮೊದಲು ಆಡಿದ ಕೊನೆಯ ಪಂದ್ಯದಲ್ಲೂ ಕೂಡ ಅವರು ಡಬಲ್ ಸೆಂಚ್ಯೂರಿ ಭಾರಿಸಿದ್ದರು. ಅದರಿಂದ ಅವರಿಗೆ ಅವಕಾಶ ಸಿಗುವ ಬದಲು ಮತ್ತಷ್ಟು ನಿರ್ಲಕ್ಷ್ಯ ಮಾಡಲಾಯಿತು. ಭಾಗ್ಯದ ಬಾಗಿಲು ತೆರೆಯುವ ಬದಲು ಮುಚ್ಚತೊಡಗಿತು. ಅದಕ್ಕಾಗೇ ಕಾನ್ವೆ ದೇಶ ಬಿಟ್ಟರು.

ಕಾನ್ವೇ ದಕ್ಷಿಣ ಆಫ್ರಿಕಾವನ್ನು ತೊರೆದು ನ್ಯೂಜಿಲೆಂಡ್‌ನ ರಾಜಧಾನಿಯಾದ ವೆಲ್ಲಿಂಗ್ಟನ್‌ನಲ್ಲಿ ವಾಸಿಸತೊಡಗಿದರು. ಅವರು ಒಂದು ದಿನ ಅಂತರರಾಷ್ಟ್ರೀಯ ಕ್ರಿಕೆಟ್ ಆಡೇ ಆಡುತ್ತೇನೆ ಎಂದು ಕನಸು ಕಾಣುತ್ತಾರೆ ಮತ್ತು ಇದು ಸಾಧ್ಯ ಕೂಡ ಆಗಿದೆ. ಏಕೆಂದರೆ ಈ ದಕ್ಷಿಣ ಆಫ್ರಿಕಾದ ಆಟಗಾರ ಕಳೆದ ಮೂರು ವರ್ಷಗಳಿಂದ ನ್ಯೂಜಿಲೆಂಡ್‌ನ ಪ್ರಜೆಯಾಗಿದ್ದು, ಈಗ ದೇಶದ ಅಂತರರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಈ ಎಡಗೈ ಬ್ಯಾಟ್ಸ್‌ಮನ್ ನ್ಯೂಜಿಲೆಂಡ್‌ನಲ್ಲಿ ನೆಲೆಸಿದ ಕೂಡಲೇ ರನ್ ಗಳಿಸತೊಡಗಿದರು. ನ್ಯೂಜಿಲೆಂಡ್‌ನ ದೇಶೀಯ ಕ್ರಿಕೆಟ್‌ ನಲ್ಲಿ ವೆಲ್ಲಿಂಗ್ಟನ್ ಪರ ಆಡಿದ 17 ಪ್ರಥಮ ದರ್ಜೆ ಪಂದ್ಯಗಳಲ್ಲಿ, ಅವರು 72.63 ರ ಸರಾಸರಿಯಲ್ಲಿ 1598 ರನ್ ಗಳಿಸಿದರು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕ್ಯಾಂಟರ್‌ಬರಿ ವಿರುದ್ಧ ಟ್ರಿಪಲ್ ಶತಕ ಬಾರಿಸಿದ್ದರು. ಕಾನ್ವೇ ಅವತ್ತು ಅಜೇಯ 323 ರನ್ ಗಳಿಸಿದ್ದರು.

ಕಾನ್ವೇ ವೆಲ್ಲಿಂಗ್ಟನ್‌ ನ ಒಂದು ಸಣ್ಣ ಮನೆಯಲ್ಲಿ ವಾಸಿಸುತ್ತಾರೆ ಮತ್ತು ಅವರಿಗೆ ಒಂದು ಸಣ್ಣ ಕಾರು ಇದೆ. ಆದರೆ ಅವರು ದಕ್ಷಿಣ ಆಫ್ರಿಕಾದಲ್ಲಿ ವಾಸವಾಗಿದ್ದಾಗ ಅವರ ಜೀವನಶೈಲಿ ತುಂಬಾ ಚೆನ್ನಾಗಿತ್ತು. ಅವರು ಐಷಾರಾಮಿ ಕಾರನ್ನು ಓಡಿಸುತ್ತಿದ್ದರು, ತುಂಬಾ ಶ್ರೀಮಂತರಾಗಿದ್ದರು ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಇದನ್ನೆಲ್ಲ ಮಾರಿಬಿಟ್ಟರು.

ಕಾನ್ವೇ ವಿರಾಟ್-ಡಿವಿಲಿಯರ್ಸ್ ಅವರಿಂದ ಕಲಿತರು :
ಸಂದರ್ಶನವೊಂದರಲ್ಲಿ ಡೆವೊನ್ ಕಾನ್ವೇ ಅವರು ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಮತ್ತು ಜೋ ರೂಟ್ ಅವರಿಂದ ಸಾಕಷ್ಟು ಕಲಿತಿದ್ದೇನೆ ಎಂದು ಬಹಿರಂಗಪಡಿಸಿದರು. ಚೆಂಡು ಬರುವ ಮೊದಲು ಈ ಮೂವರು ಆಟಗಾರರ ಕಾಲುಗಳ ಚಲನೆಯನ್ನು ಕಾನ್ವೇ ಗಮನಿಸುತ್ತಾರಂತೆ. ಸಧ್ಯ ಕಾನ್ವೆ ಅತ್ಯಂತ ಯಶಸ್ವಿ ಬ್ಯಾಟ್ಸಮನ್.

ಡಬಲ್ ಸೆಂಚ್ಯೂರಿ :
ನ್ಯೂಜಿಲೆಂಡ್ ಓಪನರ್ ಆಗಿ ಕಣಕ್ಕಿಳಿದ ಕಾನ್ವೆ, ಪಾದಾರ್ಪಣೆ ಪಂದ್ಯದಲ್ಲಿಯೇ ದಾಖಲೆಗಳ ಮೇಲೆ ದಾಖಲೆ ಬರೆದರು. ಲಾರ್ಡ್ಸ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅವರು ದ್ವಿ ಶತಕ ಹೊಡೆದರು. ಈ ಮೂಲಕ ಇಂಗ್ಲೀಷ್ ನೆಲದಲ್ಲಿ ಅತಿ ದೊಡ್ಡ ಇನ್ನಿಂಗ್ಸ್ ಆಡಿದ ಮೊದಲ ಓಪನರ್ ಅವರಾದರು.

ಇನ್ನು ಲಾರ್ಡ್ಸ್ ಮೈದಾನದಲ್ಲಿ 25 ವರ್ಷದ ಹಿಂದೆ ಅತಿ ಹೆಚ್ಚು ರನ್ ಭಾರಿಸಿದ್ದ ಸೌರವ್ ಗಂಗೂಲಿಯವರ ದಾಖಲೆ ಕೂಡ ಮುರಿದರು. ಈ ಮೊದಲೇ ವೆಲ್ಲಿಂಗ್ಟನ್ ರನ್ ಮಶಿನ್ ಎಂದು ಕರೆಸಿಕೊಂಡಿದ್ದ ಕಾನ್ವೆ ಈ ಪಂದ್ಯದ ಮೂಲಕ ಆತ ಆಸ್ತಿ ಮಾರಿಕೊಂಡಿದ್ದು, ದೇಶ ಬಿಟ್ಟಿದ್ದು ಸಾರ್ಥಕವಾಯಿತು ಎಂಬುದನ್ನು ಸಾಬೀತು ಮಾಡಿದರು.
-Team Infotrend