ಐಎಎಸ್ ಹಾಗೂ ಐಪಿಎಸ್ ಗಳಲ್ಲಿ ಯಾರು ಹೆಚ್ಚು ಶಕ್ತಿಶಾಲಿ? ಅವರ ಸಂಬಳ ಎಷ್ಟಿರುತ್ತದೆ?
ಭಾರತದ ಅತ್ಯುಚ್ಛ ಸರಕಾರಿ ಹುದ್ದೆಗಳಾದ ಐಎಎಸ್ ಹಾಗೂ ಐಪಿಎಸ್ ಹುದ್ದೆಗಳಿಗೆ ಪ್ರತಿ ವರ್ಷ ಸಾಕಷ್ಟು ಜನರು ಅಪ್ಲಿಕೇಶನ್ ಹಾಕುತ್ತಾರೆ, ಆದರೆ ಅದರಲ್ಲಿ ಕೆಲವರಿಗೆ ಮಾತ್ರ ಆಯ್ಕೆಯಾಗುವ ಅವಕಾಶ ಸಿಗುತ್ತದೆ. ಪ್ರಿಲಿಮ್ಸ್, ಮೈನ್ಸ್ ಹಾಗೂ ಇಂಟರ್ವ್ಯೂ ಗಳನ್ನು ಪಾಸು ಮಾಡಿದವರಿಗೆ ಈ ಅತಿ ದೊಡ್ಡ ನೌಕರಿ ಪ್ರಾಪ್ತವಾಗುತ್ತದೆ. ಅವರು ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳಾಗುತ್ತಾರೆ.
ಆದರೆ ಇವೆರಡು ಪೋಸ್ಟ್ ಗಳಲ್ಲಿ ಯಾವುದು ಹೆಚ್ಚು? ಹಾಗೂ ಇವೆರಡು ಪೋಸ್ಟ್ ಗಳಲ್ಲಿ ಏನೂ ವ್ಯತ್ಯಾಸ ಇದೆ? ಎಷ್ಟು ಸ್ಯಾಲರಿ ಇದೆ ಎಂದು ನೋಡೋಣ…
UPSC ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದು ಹೆಚ್ಚಿನ ರ್ಯಾಂಕ್ ಪಡೆಯುವವರು ಐಎಎಸ್ (Indian Administrative Service) ಅಧಿಕಾರಿಗಳಾಗುತ್ತಾರೆ. ಅವರು ಸರ್ಕಾರದ ಮಂತ್ರಿ ಮಂಡಲಗಳಲ್ಲಿ ಕೆಲವು ಪೋಸ್ಟ್ ಗಳನ್ನು ಅಲಂಕರಿಸುತ್ತಾರೆ, ಜಿಲ್ಲಾಧಿಕಾರಿಗಳಾಗುತ್ತಾರೆ, ಜೊತೆಗೆ ಹಲವಾರು ಆಯಕಟ್ಟಿನ ಹುದ್ದೆಗಳಿಗೇರುತ್ತಾರೆ.

UPSC ಪರೀಕ್ಷೆಯಲ್ಲಿ ಐಎಎಸ್ ಸ್ಥಾನಗಳ ನಂತರದ ರ್ಯಾಂಕ್ ಪಡೆದವರು ಐಪಿಎಸ್ ( Indian Police Service) ಗಳಾಗುತ್ತಾರೆ. ಇವರು ಪೊಲೀಸ್ ಇಲಾಖೆಯಲ್ಲಿ ದೊಡ್ಡ ದೊಡ್ಡ ಅಧಿಕಾರಿಗಳಾಗುತ್ತಾರೆ. ಟ್ರೈನಿ ಐಪಿಎಸ್ ಅಧಿಕಾರಿಗಳಿಂದ ಹಿಡಿದು ಡಿಸಿಪಿ, ಎಸ್ಪಿ, ಡಿಜಿಪಿ, ಇಂಟಲಿಜೆನ್ಸ್ ಬ್ಯುರೋ, ಸಿಬಿಐ ಚೀಪ್ ಸ್ಥಾನದವರೆಗೂ ಹೋಗಬಹುದು.
ಐಎಎಸ್ ಹಾಗೂ ಐಪಿಎಸ್ ಗಳ ನಡುವಿನ ವ್ಯತ್ಯಾಸಗಳೇನು?
*ಐಎಎಸ್ ಅಧಿಕಾರಿಗಳಿಗೆ ಯಾವುದೇ ಡ್ರೆಸ್ ಕೋಡ್ ಇರುವುದಿಲ್ಲ, ಆದರೆ ಐಪಿಎಸ್ ಅಧಿಕಾರಿಗಳು ಪೊಲೀಸ್ ಡ್ರೆಸ್ ಹಾಕಿಕೊಳ್ಳಬೇಕಾಗುತ್ತದೆ,
*ಐಎಎಸ್ ಅಧಿಕಾರಿಗಳು ತಮ್ಮೊಂದಿಗೆ ಒಬ್ಬರೂ ಅಥವಾ ಇಬ್ಬರು ಬಾಡಿ ಗಾರ್ಡ್ಸ್ ಕರೆದುಕೊಂಡು ಹೋಗುತ್ತಾರೆ ಆದರೆ ಐಪಿಎಸ್ ಅಧಿಕಾರಿಗಳು ಪೂರ್ತಿ ಪೊಲೀಸ್ ಬಟಾಲಿಯನ್ ಕರೆದುಕೊಂಡು ಹೋಗಬಹುದು.
*ಐಎಎಸ್ ಅಧಿಕಾರಿಗಳಿಗೆ ಮೆಡಲ್ ನೀಡಿ ಸನ್ಮಾನಿಸಲಾಗುತ್ತದೆ, ಆದರೆ ಐಪಿಎಸ್ ಅಧಿಕಾರಿಗಳಿಗೆ “ಸ್ವಾರ್ಡ್ ಆಫ್ ಆನರ್ ಅವಾರ್ಡ್” ಮೂಲಕ ಗೌರವಿಸಲಾಗುತ್ತದೆ.
ಐಎಎಸ್ ಹಾಗೂ ಐಪಿಎಸ್ ಗಳ ಕಾರ್ಯವೇನು?
ಐಎಎಸ್ ಗಳ ಹೆಗಲ ಮೇಲೆ ಪೂರ್ತಿ ಜಿಲ್ಲೆಯ ಸಾರ್ವಜನಿಕ ಆಡಳಿತ, ನೀತಿ ರಚನೆ ಹಾಗೂ ಅವುಗಳ ಅನುಷ್ಠಾನದ ಹೊಣೆ ಇದ್ದರೆ, ಐಪಿಎಸ್ ಅಧಿಕಾರಿಗಳ ಮೇಲೆ ಅವರ ಕಾರ್ಯ ಕ್ಷೇತ್ರದ ಶಾಂತಿ ಸುವ್ಯವಸ್ಥೆ ಹಾಗೂ ಕ್ರೈ’ಮ್ ಕಂಟ್ರೋಲ್ ಮಾಡುವ ಜವಾಬ್ದಾರಿ ಇರುತ್ತದೆ.

ಐಎಎಸ್ ಹಾಗು ಐಪಿಎಸ್ ಅಧಿಕಾರಿಗಳ ಸ್ಯಾಲರಿ ಎಷ್ಟಿರುತ್ತದೆ?
ಇವರಿಗೆ ಸಾಕಷ್ಟು ಕೆಲಸದ ಒತ್ತಡ ಇರುವದರಿಂದ ಇವರ ಕೆಲಸದ ಆಧಾರದ ಮೇಲೆ ಸ್ಯಾಲರಿ ನಿರ್ಧರಿತವಾಗುತ್ತದೆ, ಹೀಗಾಗಿ ಇವರಿಗೆ ಉತ್ತಮ ಸಂಬಳ ನೀಡಲಾಗುತ್ತದೆ. ಏಳನೇ ಪೇ ಸ್ಕೇಲ್ ನಂತರ ಇವರ ಸಂಬಳ 56,100 ರೂಗಳಿಂದ ಎರಡೂವರೆ ಲಕ್ಷ ರೂಪಾಯಿ ಗಳವರೆಗೆ ಇದೆ. ಇದೆ ರೀತಿಯಲ್ಲಿ ಐಪಿಎಸ್ ಅಧಿಕಾರಿಗಳಿಗೆ 56100 ರಿಂದ 2,25,000 ರೂಪಾಯಿಗಳವರೆಗೆ ಇರುತ್ತದೆ. ಇವುಗಳೊಂದಿಗೆ ವಿವಿಧ ಸರಕಾರಿ ಸೌಲಭ್ಯಗಳು ಕೂಡ ಇರುತ್ತವೆ.
ಯಾರು ಶಕ್ತಿಶಾಲಿಯಾಗಿರುತ್ತಾರೆ?
ಒಂದು ಜಿಲ್ಲೆಗೆ ಒಬ್ಬರೇ ಐಎಎಸ್ ಇರಲು ಸಾಧ್ಯ ಆದರೆ ಒಂದು ಜಿಲ್ಲೆಗೆ ಒಬ್ಬರಿಗಿಂತ ಹೆಚ್ಚು ಐಪಿಎಸ್ ಗಳು ಇರಬಹುದು. ಇಷ್ಟೇ ಅಲ್ಲದೇ ಐಎಎಸ್ ಗಳು ಜಿಲ್ಲೆಯ ಉಚ್ಛ ಸ್ಥಾನದಲ್ಲಿ ಇರುವದರಿಂದ ಒಂದು ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ನೇಮಿಸಬಹುದಾಗಿದೆ. ಆದರೆ ಐಪಿಎಸ್ ಗಳನ್ನು ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ ಗಳಾಗಿ ನೇಮಿಸಬಹುದು.
ಐಎಎಸ್ ಅಧಿಕಾರಿಗಳು ಹಾಗೂ ಐಪಿಎಸ್ ಅಧಿಕಾರಿಗಳ ನಡುವೆ ಹೆಚ್ಚೇನೂ ವ್ಯತ್ಯಾಸ ಇರುವುದಿಲ್ಲ, ಬದಲಾಗಿ ಇಬ್ಬರೂ ಕೂಡ UPSC ಪರೀಕ್ಷೆ ಬರೆದೆ ಬರುತ್ತಾರೆ, ಆದರೆ ರ್ಯಾಂಕ್ ಗಳಲ್ಲಿ ಮೇಲೆ ಕೆಳಗೆ ಇರುತ್ತದೆ ಅಷ್ಟೇ. ಈ ಎಲ್ಲಾ ಕಾರಣಗಳಿಂದ ಇಬ್ಬರೂ ಸಮಾನರೇ, ಆದರೆ ಸ್ವಲ್ಪ ಮಟ್ಟಿಗೆ ಐಎಎಸ್ ಅಧಿಕಾರಿಗಳು ಮೇಲೆ ಎಂದು ಕಾಣಿಸುತ್ತಾರೆ.
-ಮಂಜುನಾಥ್