ಆಸ್ಪತ್ರೆ ಸೇರಿದ ದಿವ್ಯಾ ಉರುಡುಗ : ಗಳಗಳನೆ ಕಣ್ಣೀರು ಹಾಕಿದ ಅರವಿಂದ್!
ಕನ್ನಡ ಬಿಗ್ ಬಾಸ್ ನಲ್ಲಿನ ಜೋಡಿ ಟಾಸ್ಕ್ ನಿಂದ ಜೋಡಿಯಾದ ದಿವ್ಯಾ – ಅರವಿಂದ್ ಜೋಡಿ ಬರಬರುತ್ತಾ ಮತ್ತಷ್ಟು ಹತ್ತಿರವಾಗುತ್ತಾ ಬಂತು. ದಿವ್ಯಾಳಿಗಾಗಿ ತನ್ನ ಪಾಲಿನ ಆಹಾರವನ್ನು ಎತ್ತಿಟ್ಟು ಕೊಡುವುದು, ದಿವ್ಯಾ ಬಟ್ಟೆ ಒಗೆದು ಕೊಡುವುದನ್ನು ಕೂಡ ಅರವಿಂದ್ ಮಾಡಿದ. ಆದರೆ ಈಗ ಅದಕ್ಕೆ ತೆರೆ ಬಿದ್ದಿದೆ.
ಅನಾರೋಗ್ಯ ಕಾರಣಕ್ಕೆ ಬಿಗ್ ಬಾಸ್ ಮನೆಯಿಂದ ಆಸ್ಪತ್ರೆ ಸೇರಿರುವ ದಿವ್ಯಾ ಮರಳಿ ಆ ಮನೆಗೆ ಹೋಗುವುದು ಬಹುಶಃ ಸಾಧ್ಯವಿಲ್ಲ. ಒಂದು ವೇಳೆ ಬೇಗ ಹುಷಾರಾದರೂ ಕೂಡ ಕೋವಿಡ್ ಕಾರಣಕ್ಕೆ ಆಕೆ ಕ್ವಾರಂಟೈನ್ ಆಗದೇ ಮನೆಯೊಳಗೆ ಹೋಗುವ ಹಾಗಿಲ್ಲ. ಈಗಾಗಲೇ 67 ದಿನ ಕಳೆದಿದ್ದು ಉಳಿದ ದಿನಗಳಲ್ಲಿ ಇವೆಲ್ಲ ಸಾಧ್ಯವಿಲ್ಲ ಎನ್ನಲಾಗುತ್ತಿದೆ. ಹೀಗಾಗೇ ಅರವಿಂದ್ ಅತ್ತಿದ್ದು.
ದಿವ್ಯಾಳ ಸಾಮಾನುಗಳನ್ನೆಲ್ಲ ಪ್ಯಾಕ್ ಮಾಡಿ ಸ್ಟೋರ್ ರೂಮಿನಲ್ಲಿ ಇಡಲು ಕ್ಯಾಪ್ಟನ್ ಮೂಲಕ ಬಿಗ್ ಬಾಸ್ ಆದೇಶಿಸಿದ ಕೂಡಲೇ ಅರವಿಂದ್ ಗೆ ದುಖಃ ಉಕ್ಕಿ ಬಂತು. ಇನ್ನು ಅವಳು ವಾಪಸ್ ಬರಲ್ಲ ಎಂದು ಕಣ್ಣೀರು ಹಾಕಿದರು! ಪ್ರತಿದಿನ ಬೆಳಿಗ್ಗೆಯಿಂದ ಸಂಜೆವರೆಗೆ ನನ್ ಜೊತೆನೇ ಇರ್ತಿದ್ಲು, ನಿಮ್ಮ ಜೊತೆ ಜಗಳ ಮಾಡಿದರೂ ನನ್ನ ಜೊತೆ ಇರುತ್ತಿದ್ದಳು, ಈಗ ಎಲ್ಲ ಮುಗೀತು ಎಂದು ಅರವಿಂದ ಗಳಗಳನೆ ಕಣ್ಣೀರು ಹಾಕಿದರು!
ದಿವ್ಯಾಗೆ ಸ್ಕ್ಯಾನಿಂಗ್ ಮಾಡಿಸಬೇಕು ಎಂದು ವೈದ್ಯರು ಹೇಳಿದ್ದರಿಂದ ಅವರನ್ನು ಬಿಗ್ ಬಾಸ್ ಮನೆಯಿಂದ ಆಚೆ ಕರೆಸಿಕೊಳ್ಳಲಾಗಿದೆ. ನಂತರ ಬಿಗ್ ಬಾಸ್ ಮನೆಯ ಸದಸ್ಯರಿಗೆ “ಯೂರಿನರಿ ಇನ್ಫೆಕ್ಷನ್ ಕಂಡುಂದಿರುವುದರಿಂದ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ”ಎಂದು ತಿಳಿಸಿದರು. ಆಗ ಗದ್ಗದಿತರಾದ ಅರವಿಂದ ಇಲ್ಲಿಗಿಂತ ಅಲ್ಲಿ ಚೆನ್ನಾಗಿರ್ತಾಳೆ ಎಂದು ತಮಗೆ ತಾವೇ ಸಮಾದಾನ ಮಾಡಿಕೊಂಡರು!
-Team Infotrend