Video; ಡಿ ಕೆ ಶಿವಕುಮಾರ್ ಅವರ ಮಾತಿಗೆ ರಾಹುಲ್ ಗಾಂಧಿಯವರು ಯಾಕೆ ಇಷ್ಟೊಂದು ಬೆಚ್ಚಿ ಬಿದ್ದರು?

ಭಾರತದಲ್ಲಿ ರಾಜಕೀಯ ತುಂಬಾ ಇಂಟರೆಸ್ಟಿಂಗ್ ಹಾಗೂ ಮಹತ್ವದ ವಿಷಯವಾಗಿದೆ. ಜನರಿಗೆ ಇದರಲ್ಲಿ ತುಂಬಾ ಅಭಿರುಚಿ ಇರುತ್ತದೆ. ರಾಜಕೀಯದಲ್ಲಿ ನೆಲೆಯೂರಬೇಕಾದರೆ ವ್ಯಕ್ತಿ ಅಥವಾ ನಾಯಕ ಎಲ್ಲ ರೀತಿಯ ಪ್ರಯತ್ನವನ್ನು ಮಾಡಬೇಕಾಗುತ್ತದೆ. ಇಲ್ಲಿ ಪ್ರತಿಯೊಂದು ಪಕ್ಷದ ಪ್ರತಿನಿಧಿಗಳು ಪ್ರಾಮಾಣಿಕತೆಯೊಂದಕ್ಕೆ ಕಡಿಮೆ ಮಹತ್ವ ಹಾಗೂ ಉಳಿದೆಲ್ಲ ಘಟಕಗಳಿಗೆ ಹೆಚ್ಚು ಮಹತ್ವ ನೀಡುತ್ತಾರೆ.

ನಾಯಕರು ರಾಜಕೀಯದಲ್ಲಿ ತಮ್ಮ ಪ್ರತಿಷ್ಠೆ ಸ್ಥಾಪಿಸಬೇಕಾದರೆ ಎದುರಿನಿಂದ ಇಲ್ಲದೆ ಹೋದರೂ ಹಿಂದಿನಿಂದಾದರೂ ಸಾಮ, ದಾಮ, ದಂಡ ಮಾರ್ಗಗಳನ್ನು ಅನುಸರಿಸುತ್ತಾರೆ. ಇನ್ನೂ ಕೆಲವು ನಾಯಕರು ಆಕ್ಟಿಂಗ್ನಲ್ಲಿ ತುಂಬಾ ಮುಂದಿರುತ್ತಾರೆ. ತಮ್ಮ ಪ್ರತಿಸ್ಪರ್ಧಿಗಳ ನಕಲು ಮಾಡುವುದರಲ್ಲಿ ತುಂಬಾ ಎಕ್ಸ್ಪರ್ಟ್ ಆಗಿರುತ್ತಾರೆ. ಇದಕ್ಕೆ ಸರಿಯಾದ ಉದಾಹರಣೆ ಹೇಳಬೇಕಾದರೆ, ಮಹಾರಾಷ್ಟ್ರದ MNS ಪಕ್ಷದ ನಾಯಕ ರಾಜ್ ಠಾಕರೆ. ವಿಭಿನ್ನ ನಾಯಕರ ನಕಲು ಇವರದು ಎತ್ತಿದ ಕೈ. ನಕಲು ಮಾಡುವುದರಲ್ಲಿ ಪ್ರಧಾನಿ ಮೋದಿ ಅವರು ಸಹ ಹಿಂದೆ ಇಲ್ಲ.

ಸದ್ಯ ಇಲ್ಲಿ ನೋಡಲಿರುವ ವಿಡಿಯೋ ಕರ್ನಾಟಕ ಕಾಂಗ್ರೆಸ್ ನ ಬಾಹುಬಲಿ ನಾಯಕ ಡಿಕೆ ಶಿವಕುಮಾರದ್ದು. ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಲು ಸದ್ಯ ಎಲ್ಲ ರೀತಿಯ ಪ್ರಯತ್ನವನ್ನು ಅವರು ಮಾಡುತ್ತಿದ್ದಾರೆ. ರಾಹುಲ್ ಗಾಂಧಿಯವರ ಭಾರತ ಜೋಡೋ ಯಾತ್ರೆಯಲ್ಲಿಯ ಒಂದು ಸನ್ನಿವೇಶ ಇಲ್ಲಿ ನೋಡಬಹುದು.

ಪ್ರಸ್ತುತ ವಿಡಿಯೋ ದೃಶ್ಯದಲ್ಲಿ ರಾಹುಲ್ ಗಾಂಧಿಯವರ ಜೊತೆಗೆ ಡಿಕೆಶಿ ಅವರು ಜನಸಾಮಾನ್ಯರ ಜೊತೆಗೆ ಸಂದರ್ಶನ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆಯರು ಕಣ್ಣೀರು ಒರೆಸಿಕೊಳ್ಳುತ್ತಿರುವುದನ್ನು ನೋಡಬಹುದು. ಇದೇ ವೇಳೆ ಡಿಕೆಶಿ ಅವರು ಮಾತನಾಡುತ್ತಲೇ ಮಧ್ಯದಲ್ಲಿ ಒಮ್ಮೆಲೇ ಭಾವುಕರಾಗುತ್ತಾರೆ. ಡಿಕೆಶಿಯವರ ಈ ಬದಲಾವಣೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೂ ಬೆಚ್ಚಿ ಬೀಳಿಸುತ್ತದೆ. ಇದನ್ನು ನಾವು ಸುಮ್ಮನೆ ಎನ್ನುತ್ತಿಲ್ಲ ಕ್ಯಾಮೆರಾದಲ್ಲಿ ಸೆರೆಯಾದ ಈ ದೃಶ್ಯ ಹೇಳುತ್ತಿದೆ.

ನೋಡಿ ಈ ವಿಡಿಯೋ…

 

View this post on Instagram

 

A post shared by troll vasu (@troll_vasu)

ಮಾತಿನ ಮಧ್ಯ ಡಿಕೆಶಿ ಅವರ ಹಠಾತ್ ಬದಲಾದ ವರಸೆ ರಾಹುಲ್ ಗಾಂಧಿಯವರನ್ನು ತಕ್ಷಣ ನೋಡುವಂತೆ ಮಾಡಿದ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ troll_vasu ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಡಿಕೆಶಿ ಅವರು ನಿಜವಾಗಿಯೂ ಭಾವುಕರಾಗಿದ್ದಾರೆಯೇ ಅಥವಾ ಅವರು ಆಕ್ಟಿಂಗ್ ಮಾಡುತ್ತಿದ್ದಾರೆಯೇ ಎಂಬುದನ್ನು ನೀವೇ ಹೇಳಬೇಕು.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಸಮ್ಮಿಶ್ರ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಅದರಲ್ಲಿ ಒಬ್ಬ ಯೂಸರ್ “ದ ಬೆಸ್ಟ್ ಆಕ್ಟರ್ ಇನ್ ಪಾಲಿಟಿಕ್ಸ್” ಎಂದರೆ, ಇನ್ನೊಬ್ಬ ನೆಟ್ಟಿಗ ‘ನೀವು ಇನ್ನೂ ಮೋದಿ ಮತ್ತು ಯೋಗಿಯವರ ಆಕ್ಟಿಂಗ್ ನೋಡಿಲ್ಲ ಅಂತ ಕಾಣಿಸುತ್ತೆ’ ಎಂದಿದ್ದಾನೆ. ಇನ್ನೊಬ್ಬ ಕಿಲಾಡಿ ಯೂಸರ್ ‘ರೀ ನೀವು ಸಿನಿಮಾ ಮಾಡ್ರಿ ನಿಮಗೆ ಆಸ್ಕರ್ ಗ್ಯಾರಂಟಿ’ ಎಂದಿದ್ದಾನೆ. ಎಲ್ಲಕ್ಕಿಂತ ಮಹತ್ವದ್ದು ‘ ರಾಹುಲ್ ಗಾಂಧಿಯವರ ರಿಯಾಕ್ಷನ್ ನೊಡ್ರೋ’ ಎಂದು ಮತ್ತೊಬ್ಬ ಪ್ರತಿಕ್ರಿಯಿಸಿದ್ದಾನೆ.