ಮೊಟ್ಟೆಗಳೊಂದಿಗೆ ಈ ಪದಾರ್ಥಗಳನ್ನು ಸೇವಿಸಬೇಡಿ, ಪೌಷ್ಟಿಕಾಂಶ ಸಿಗುವ ಬದಲು ಆರೋಗ್ಯದ ಮೇಲೆ ಕೆಟ್ಟ ಪರಿಣಾಮವಾಗುತ್ತದೆ!
ಮೊಟ್ಟೆಯೊಂದಿಗೆ ಅಪಾಯಕಾರಿ ಆಹಾರ ಸಂಯೋಜನೆಯ ವಿವರ ಈ ಲೇಖನದಲ್ಲಿದೆ… ನೀವು ಉಪಹಾರದಲ್ಲಿ ಏನನ್ನಾದರೂ ಆರೋಗ್ಯಕರವಾಗಿರುವುದನ್ನು ಸೇವಿಸಲು ಬಯಸಿದಾಗ ಮೊದಲು ನೆನಪಾಗುವುದು ಮೊಟ್ಟೆ. ಮೊಟ್ಟೆಗಳನ್ನು ಪ್ರೋಟೀನ್ ನ ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ಪ್ರೋಟೀನ್ ಜೊತೆಗೆ, ಕ್ಯಾಲ್ಸಿಯಂ, ವಿಟಮಿನ್-ಬಿ, ಬಯೋಟಿನ್, ರಿಬೋಫ್ಲಾವಿನ್, ಥಯಾಮಿನ್ ಮತ್ತು ಸೆಲೆನಿಯಮ್ ಸಹ ಇದರಲ್ಲಿವೆ.
ಮೊಟ್ಟೆ ದೇಹವನ್ನು ಅನೇಕ ರೀತಿಯ ಸಮಸ್ಯೆಗಳಿಂದ ದೂರವಿರಿಸಲು ಸಹಾಯ ಮಾಡುತ್ತದೆ. ಇದರ ಹೊರತಾಗಿಯೂ, ನೀವು ಎಲ್ಲದರೊಂದಿಗೆ – ಯಾವಾಗ ಬೇಕಾವಾಗ ಮೊಟ್ಟೆಗಳನ್ನು ತಿನ್ನಲು ಸಾಧ್ಯವಿಲ್ಲ ಎಂದು ನಿಮಗೆ ತಿಳಿದಿದೆಯೇ? ಹೌದು, ಮೊಟ್ಟೆಗಳೊಂದಿಗೆ ಹಲವು ಆಹಾರ ಸಂಯೋಜನೆಗಳು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಅದರ ಬಗ್ಗೆ ತಿಳಿದುಕೊಳ್ಳೋಣ.
ಮೊಟ್ಟೆ ಮತ್ತು ಸಕ್ಕರೆ :
ಮೊಟ್ಟೆ ಮತ್ತು ಸಕ್ಕರೆಯ ಸಂಯೋಜನೆಯನ್ನು ಆರೋಗ್ಯಕ್ಕೆ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಅಮೈನೋ ಆಮ್ಲಗಳು ಇವೆರಡರಲ್ಲೂ ಇರುತ್ತವೆ. ಇದರ ಅತಿಯಾದ ಸೇವನೆಯು ರಕ್ತದಲ್ಲಿ ಹೆಪ್ಪುಗಟ್ಟುವಿಕೆಯ ತೊಂದರೆಗಳಿಗೆ ಕಾರಣವಾಗಬಹುದು. ಈ ಕಾರಣಕ್ಕಾಗಿ ಮೊಟ್ಟೆಗಳೊಂದಿಗೆ ಅಥವಾ ಒಂದಾದ ಮೇಲೊಂದು ತಕ್ಷಣ ಸಕ್ಕರೆ ಸೇವಿಸಬೇಡಿ.

ಮೊಟ್ಟೆ ಮತ್ತು ಚಹಾ :
ತುಂಬಾ ಜನ ಬೆಳಿಗ್ಗೆ ಉಪಹಾರದಲ್ಲಿ ಜನರು ಸಾಮಾನ್ಯವಾಗಿ ಮೊಟ್ಟೆಗಳೊಂದಿಗೆ ಒಂದು ಕಪ್ ಬಿಸಿ ಚಹಾವನ್ನು ಕುಡಿಯಲು ಇಷ್ಟಪಡುತ್ತಾರೆ. ಹಾಗೆ ಮಾಡುವುದರಿಂದ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮೊಟ್ಟೆಗಳೊಂದಿಗೆ ಚಹಾವನ್ನು ಸೇವಿಸುವುದರಿಂದ ನಿಮ್ಮ ಜೀರ್ಣಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಮತ್ತು ಮಲಬದ್ಧತೆಗೆ ಕಾರಣವಾಗಬಹುದು.
ಮೊಟ್ಟೆ ಮತ್ತು ಸೋಯಾ ಹಾಲು (Soya Milk) :
ವೈದ್ಯರ ಪ್ರಕಾರ ದೈನಂದಿನ ಹಾಲಿನ ಸೇವನೆಯು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ ನೀವು ಸೋಯಾ ಹಾಲನ್ನು ಸೇವಿಸಿದರೆ, ಅದನ್ನು ಮೊಟ್ಟೆಗಳೊಂದಿಗೆ ಸೇವಿಸಬೇಡಿ. ಹಾಗೆ ಮಾಡುವುದರಿಂದ ನಿಮ್ಮ ಆರೋಗ್ಯಕ್ಕೆ ಹಾನಿಯಾಗುತ್ತದೆ.

ವಾಸ್ತವವಾಗಿ ಸೋಯಾ ಹಾಲಿನಲ್ಲಿ ತರಕಾರಿ ಪ್ರೋಟೀನ್, ಕೊಬ್ಬುಗಳು, ಕಾರ್ಬ್ಸ್, ಜೀವಸತ್ವಗಳು ಮತ್ತು ಖನಿಜಗಳಂತಹ ಪೋಷಕಾಂಶಗಳಿವೆ. ನೀವು ಅದನ್ನಷ್ಟೇ ಮಾತ್ರ ಕುಡಿಯುತ್ತಿದ್ದರೆ ಅದು ನಿಮಗೆ ತುಂಬಾ ಪೌಷ್ಟಿಕವಾಗಿದೆ. ಆದರೆ ಮೊಟ್ಟೆಗಳೊಂದಿಗೆ ಸೇವಿಸಿದಾಗ ದೇಹದಲ್ಲಿನ ಪ್ರೋಟೀನ್ ಗಳನ್ನು ಹೀರಿಕೊಳ್ಳಲು ಸಹಾಯ ಮಾಡುವ ಪ್ರೋಟೀಜ್ ಗಳ ಚಟುವಟಿಕೆಯನ್ನು ಕಡಿಮೆ ಮಾಡುತ್ತದೆ.
ಮೊಟ್ಟೆಗಳೊಂದಿಗೆ ತಪ್ಪಿಸಬೇಕಾದ ಇತರ ಕೆಲವು ಆಹಾರಗಳೆಂದರೆ… ಹಣ್ಣುಗಳು (ವಿಶೇಷವಾಗಿ ಕಲ್ಲಂಗಡಿಗಳು), ಚೀಸ್, ಹಾಲು ಮತ್ತು ಅದರ ಉತ್ಪನ್ನಗಳು ಹಾಗೂ ಬೀನ್ಸ್. ಉಳಿದಂತೆ ದಿನಕ್ಕೊಂದಾದರೂ ಮೊಟ್ಟೆ ಸೇವಿಸಲು ಮರೆಯಬೇಡಿ, ಈಗಿನ ಕಾಲದ ಆಹಾರ ಅಷ್ಟೊಂದು ಪೌಷ್ಟಿಕವಾಗಿರುವುದಿಲ್ಲ ಎಂಬುದು ನಿಮಗೆ ಗೊತ್ತಿದೆ, ಅಲ್ಲದೇ ಈಗಿನ ಅವಸರದ ಪ್ರಪಂಚದಲ್ಲಿ ಸರಿಯಾಗಿ ಊಟ ಮಾಡಲು ಸಮಯವಿಲ್ಲ, ಹೀಗಿರುವಾಗ ದಿನಕ್ಕೊಂದು ಮೊಟ್ಟೆ ನಿಮ್ಮ ದೇಹವನ್ನು ಬಲಶಾಲಿಗೊಳಿಸುವುದು.