ಇರಾನ್ ದೇಶದ ಹುಡುಗಿಯರು ಈಪರಿ ಸುಂದರವಾಗಿರಲು ಕಾರಣ ಏನ್ ಗೊತ್ತಾ?

ಡೇಲಿ ಮೀರರ್ ಸಮೀಕ್ಷೆಯ ಪ್ರಕಾರ, ಪ್ರಪಂಚದಲ್ಲಿ ಅತಿ ಸುಂದರ ಹುಡುಗಿಯರು ಇರುವುದು ಇರಾನ್ ನಲ್ಲಿ ಅಂತೆ. ಅಲ್ಲಿನ ಮಹಿಳೆಯರನ್ನು ಅತ್ಯಂತ ಸುಂದರವೆಂದು ಪರಿಗಣಿಸಲಾಗಿದೆ. ಅವರ ಸೌಂದರ್ಯಕ್ಕೆ ಇರಾನಿನ ಭೌಗೋಳಿಕ ಮತ್ತು ಅನುವಂಶಿಕ ಕಾರಣಗಳು ಪ್ರಮುಖವಾದರೂ, ಅವರ ಸುಂದರ ತ್ವಚೆಗೆ ಇತರ ಹಕವು ಕಾರಣಗಳು ಕೂಡ ಇವೆ. ಅವು ಯಾವುವು ಅಂತ ನೋಡುವಾ ಬನ್ನಿ…

ಅವರ ಕೆಲವು ಆಹಾರ ಮತ್ತು ಮನೆಮದ್ದುಗಳಿಗೂ ಅವರ ಸೌಂದರ್ಯದ ಕ್ರೇಡಿಟ್ ಹೋಗುತ್ತದೆ. ಅವರು ಸಾಂಪ್ರದಾಯಿಕವಾಗಿ ತಮ್ಮ ಆಹಾರದಲ್ಲಿ ಇಂತಹ ವಸ್ತುಗಳನ್ನು ನಿಯಮಿತವಾಗಿ ತೆಗೆದುಕೊಳ್ಳುತ್ತಾರೆ, ಇದು ಅವರ ಚರ್ಮವನ್ನು ಮಿನುಗುವಂತೆ ಮತ್ತು ಕೂದಲನ್ನು ಹೊಳೆಯುವಂತೆ ಮಾಡುತ್ತದೆ.

ಇರಾನಿನ ಮಹಿಳೆಯರು ಸುಂದರತೆಗೆ ಮಾತ್ರವಲ್ಲ, ಆರೋಗ್ಯವಂತರು ಕೂಡ ಹೌದು, ಮತ್ತು ಎತ್ತರದ ದೇಹದಾರ್ಡ್ಯ ಅವರದು. ಇವರು ನಿಯಮಿತವಾಗಿ ಗುಲಾಬಿ ನೀರಿನಿಂದ ಮುಖ ತೊಳೆದು ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುತ್ತಾರೆ. ಮುಖ ತೊಳೆಯುವಾಗ – ಸ್ನಾನ ಮಾಡುವಾಗ ಅವರು ರೋಸ್ ವಾಟರ್ ನಿರಂತರವಾಗಿ ಬಳಸುತ್ತಾರೆ.

ಇರಾನಿನ ಮಹಿಳೆಯರ ಕೆಟ್ಟ ಚರ್ಮವನ್ನು ಕಡಿಮೆ ಮಾಡುವ ಹಿಂದಿನ ರಹಸ್ಯ ಇದು, ಇರಾನಿನ ಮಹಿಳೆಯರು ಪ್ರತಿದಿನ ಜೇನುತುಪ್ಪವನ್ನು ಸೇವಿಸುತ್ತಾರೆ. ಅವರು ವಾಲ್ ನಟ್ಸ್ ಕೂಡ ತಿನ್ನುತ್ತಾರೆ, ಹೀಗಾಗಿ ವಿಟಮಿನ್ ಇ ಕೊರತೆಯನ್ನು ಅವು ನಿವಾರಿಸುತ್ತವೆ. ಮತ್ತು ತೂಕ ನಿಯಂತ್ರಣದಲ್ಲಿ ಉಳಿಯುತ್ತದೆ.

ಯಾವ ವ್ಯಕ್ತಿಗಳು ಅಥವಾ ವಸ್ತುಗಳು ಸುಂದರ ವಾಗಿರುತ್ತವೆಯೋ ಅವು ಪ್ರತಿಯೊಬ್ಬರ ಗಮನ ಸೆಳೆದುಕೊಳ್ಳುತ್ತವೆ. ಅದೇ ರೀತಿಯಾಗಿ ಸುಂದರ್ ಮಹಿಳೆಯು ಸಹ ಪ್ರತಿಯೊಬ್ಬ ವ್ಯಕ್ತಿಯ ಗಮನ ತನ್ನೆಡೆಗೆ ಗಮನ ಸೆಳೆದುಕೊಳ್ಳಲು ಅರ್ಹಳಾಗಿರುತ್ತಾಳೆ. ನಮ್ಮ ದೇಶದಲ್ಲಿಯ ಕೆಲವು ಪ್ರತಿಶತ ಮಹಿಳೆಯರು ಮಾತ್ರ ತುಂಬಾ ಸುಂದರವಾಗಿದ್ದರೆ, ಇರಾನ್ ದೇಶದ ಪ್ರತಿಯೊಬ್ಬ ಮಹಿಳೆ ಸುಂದರತೆಯ ನಿಟ್ಟಿನಲ್ಲಿ ಅಗ್ರಗಣ್ಯ.

ಈ ಇರಾನ್ ದೇಶದ ಮಹಿಳೆಯರ ಹೊಳಪಿನ ಹಿಂದಿನ ಕಾರಣ ಈ ಕೆಳಗಿನ ನಾಲ್ಕು ಸಂಗತಿಗಳು…

1) ಮೊಸರು – ಜೇನುತುಪ್ಪ : ಇರಾನ್ ದೇಶದ ಮಹಿಳೆಯರು ತಮ್ಮ ಮುಂಜಾನೆಯ ಅಲ್ಪೋಪಹಾರದಲ್ಲಿ ಮೊಸರು ಸೇವನೆ ಮಾಡುವರು. ಅದರಂತೆ ಅಲ್ಪೋಪಹಾರದಲ್ಲಿ ಜೇನುತುಪ್ಪದ ಸೇವನೆಯು ಸಹ ಮಾಡುವರು. ಮೊಸರು ತಿನ್ನುವುದರಿಂದ ಅವರ ಶರೀರದ ತೂಕದ ಪ್ರಮಾಣ ನಿಯಂತ್ರಣದಲ್ಲಿರುವದು. ಅಲ್ಲದೆ ಜೇನುತುಪ್ಪ ಸೇವನೆಯಿಂದ ಮುಖದ ಮೇಲೆ ಬರುವ ಮೊಡವೆಗಳು ಹಾಗೂ ರಂಧ್ರಗಳ ಸಮಸ್ಯೆ ದೂರ ವಾಗುವದು.

2) ಅಕ್ರೋಟ್ : ಪ್ರತಿನಿತ್ಯ ಸುಮಾರು 20 ರಿಂದ 30 ಗ್ರಾಮ್ ವರೆಗೆ ಆಕ್ರೋಟ್ ಸೇವನೆ ಮಾಡುವರು. ಆಕ್ರೋಟ್ ನಮ್ಮ ದೇಹದಲ್ಲಿ ನಿರ್ಮಾಣವಾಗುವ ಕೊಲೆಸ್ಟ್ರಾಲ್ ಪ್ರಮಾಣ ನಿಯಂತ್ರಣದಲ್ಲಿಡುವದರ ಜೊತೆಗೆ ದೇಹದ ತೂಕ ಹೆಚ್ಚಾಗದಂತೆ ಕಾಳಜಿ ವಹಿಸುವದು.

3) ಬಾದಾಮಿ ಹಾಗೂ ತೆಂಗಿನ ಎಣ್ಣೆ : ಇದರಿಂದ ಶರೀರ ಮಸಾಜ್ ಮಾಡಿಕೊಳ್ಳುವರು. ಈ ಎರಡು ಎಣ್ಣೆಗಳಿಂದ ಮಸಾಜ್ ಮಾಡುವದರಿಂದ ನಮ್ಮ ಶರೀರದ ಮೇಲಿನ ತ್ವಚೆಯ ಹೊಳಪು ಹೆಚ್ಚಾಗುವದು ಇದರಿಂದ ಅವರು ಇನ್ನಷ್ಟು ಸುಂದರವಾಗಿ ಕಾಣಲು ಸಹಾಯ ಆಗುವದು.

4) ಮೀನು ಸೇವನೆ : ಇರಾನ್ ದೇಶದ ಪ್ರಮುಖ ಆಹಾರ ಮೀನಾಗಿದೆ. ಏಕೆಂದರೆ ಸಮುದ್ರದ ದಂಡೆ ಇರುವದರಿಂದ ಇಲ್ಲಿಯ ಜನರು ಹೆಚ್ಚಾಗಿ ಮೀನಿನ ಮೇಲೆ ಅವಲಂಬಿತ ರಾಗಿದ್ದಾರೆ. ಹೆಚ್ಚಾಗಿ ಮೀನು ಸೇವನೆ ಮಾಡುವದರಿಂದ ನಮ್ಮ ಬುದ್ಧಿ ಚುರುಕಾಗುವುದರ ಜೊತೆಗೆ ನಮ್ಮ ಶರೀರ ತೇಜೋಮಯವಾಗಿಡಲು ಸಹಾಯ ಮಾಡುವುದು.

ಮೇಲಿನ ಎಲ್ಲ ಕಾರಣಗಳಿಂದ ಹಾಗೂ ಭೌಗೋಳಿಕ ಮತ್ತು ಅನುವಂಶಿಯ ಕಾರಣಗಳಿಗಾಗಿ ಇರಾನ್ ದೇಶದ ಮಹಿಳೆಯರು ತುಂಬಾ ಸುಂದರವಾಗಿರುತ್ತಾರೆ. ಇದು ಪ್ರತಿಷ್ಟಿತ ಡೇಲಿ ಮೀರರ್ ನವರ ಸಮೀಕ್ಷೆಯ ಪಲಿತಾಂಶ.
-Team Infotrend