ಪುಟ್ಟ ಮಗು ನಾಯಿಯೊಂದಿಗೆ ಎಷ್ಟು ಮುದ್ದು ಮಾಡುತ್ತಾಳೆ ನೋಡಿ, ‘ನಿಷ್ಕಲ್ಮಶವಾದ ಪ್ರೀತಿ’ ಎಂದ ನೆಟ್ಟಿಗರು!!

ಮಕ್ಕಳು ದೇವರ ಸಮಾನ ಅನ್ನುತ್ತಾರೆ. ಮಕ್ಕಳ ಮನಸ್ಸು ನಿಷ್ಕಲ್ಮಶವಾಗಿರುತ್ತದೆ. ಮಕ್ಕಳನ್ನು ಎಲ್ಲರೂ ಪ್ರೀತಿಸುತ್ತಾರೆ. ಮನಷ್ಯರಷ್ಟೇ ಅಲ್ಲ ಪ್ರಾಣಿ ಗಳು ಸಹ ಮಕ್ಕಳನ್ನು ತುಂಬಾನೇ ಇಷ್ಟ ಪಡುತ್ತವೆ. ಮಕ್ಕಳು ಸದಾ ನಗುತ್ತ ಮುಂಬರುವ ಜೀವನದ ಅರಿವಿಲ್ಲದೆ ಹಸನ್ಮುಖವಾಗಿ ಜೀವನ ನಡೆಸುತ್ತಾರೆ. ಪ್ರಾಣಿಗಳು ಸಹ ಒಮ್ಮೆ ಅವುಗಳಿಗೆ ಪ್ರೀತಿ ತೋರಿಸಿದರೆ ಸಾಕು ಅವು ನಮ್ಮನ್ನು ಜೀವನಪೂರ್ತಿಯಾಗಿ ಪ್ರೀತಿಸುತ್ತವೆ.

ಮಕ್ಕಳು ಹಾಗೂ ಪ್ರಾಣಿಗಳ ನಡುವಿನ ವೀಡಿಯೋ ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತವೆ. ಏಕೆಂದರೆ ಮಕ್ಕಳ ಹಾಗೂ ಪ್ರಾಣಿಗಳ ವೀಡಿಯೋ ನೆಟ್ಟಿಗರಿಗೆ ತುಂಬಾನೇ ಇಶ್ಟವಾಗುತ್ತವೆ. ಅಂತಹದರಲ್ಲಿ ಮಗು ಮತ್ತು ಯಾವುದೇ ಪ್ರಾಣಿ ನಡುವಿನ ವೀಡಿಯೋ ಇದ್ದರೆ ಸಾಕು ಅದು ನೆಟ್ಟಿಗರಿಗೆ ತುಂಬಾನೇ ಇಷ್ಟವಾಗುತ್ತದೆ. ಸದ್ಯಕ್ಕೆ ಅಂತಹದೇ ಒಂದು ವೀಡಿಯೋ ನಾವು ನಿಮಗೋಸ್ಕರ ತಂದಿದ್ದೇವೆ.

ಪ್ರಸ್ತುತ ವೀಡಿಯೋದಲ್ಲಿ ಒಂದು ಪುಟ್ಟ ಮಗು ಮತ್ತು ನಿಯತ್ತಿಗೆ ಹೆಸರು ವಾಸಿಯಾಗಿರುವ ನಾಯಿ ಇಬ್ಬರ ನಡುವಿನ ಅದ್ಭುತವಾದ ಸ್ನೇಹ, ಪ್ರೀತಿಯನ್ನು ನೀವು ಕಾಣಬಹುದು. ಪುಟ್ಟ ಮಗು ತನ್ನ ನಾಯಿಯನ್ನು ಎಷ್ಟು ಮುದ್ದಾಡುತ್ತಾಳೆ, ಅಲ್ಲದೆ ನಾಯಿ ಸಹ ಆ ಪುಟ್ಟ ಮಗುವಿನ ಪ್ರೀತಿಗೆ ಸ್ಪಂದಿಸುವ ರೀತಿ ನೋಡಿದರೆ ನೀವು ಸಹ ರಿಯಲಿ ಗ್ರೇಟ್ ಎನ್ನುವಿರಿ. ಎರಡು ಜೀವಿಗಳ ಅದ್ಭುತವಾದ ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ.

ವಿಡಿಯೋ ನೋಡಿ.

 

View this post on Instagram

 

A post shared by Gk (@happy_for_my_life_1990)

ಈ ಆತ್ಮೀಯತೆಯ ವೀಡಿಯೋ ಸೋಶಿಯಲ್ ಮೀಡಿಯಾ ಅಂದರೆ ಇನ್ಸ್ಟಾಗ್ರಾಮ್ ನಲ್ಲಿ happy_for_my_life ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವೀಡಿಯೋವನ್ನು ಸುಮಾರು ಮೂರು ಮಿಲಿಯನ್ ಗಿಂತಲೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಈ ಮುದ್ದಾದ ಜೀವಿಗಳ ವೀಡಿಯೋವನ್ನು ನೋಡಿ ಸುಮಾರು ಎರಡು ಲಕ್ಷಕ್ಕಿಂತಲೂ ಹೆಚ್ಚು ನೆಟ್ಟುಗರು ಲೈಕ್ ಸಹ ಮಾಡಿದ್ದಾರೆ.