VIDEO : ಗ್ರುಪ್ ಫೋಟೊ ತಗೆಸಿಕೊಳ್ಳಲು ಬೆಕ್ಕನ್ನು ಬಾಯಲ್ಲಿ ಹಿಡಿದು ತಂದ ಮುದ್ದು ಶ್ವಾನ, ಕ್ಯೂಟ್ ವಿಡಿಯೊ ನೋಡಿ
ಇದೊಂದು ಅಪರೂಪದ ವಿಡಿಯೊ, ಮುದ್ಮುದ್ದು ಶ್ವಾನಗಳು ಒಂದು ಕ್ಯೂಟ್ ಬೆಕ್ಕಿನೊಂದಿಗೆ ವಾಸಿಸುತ್ತಿರುತ್ತವೆ.ಅವುಗಳನಡುವೆ ಅದೆಂಥ ಸ್ನೇಹವೆಂದರೆ, ಒಂದನ್ನು ಬಿಟ್ಟು ಇನ್ನೊಂದು ಇರಲ್ಲ. ಇನ್ನು ಗ್ರುಪ್ ಫೋಟೊ ತಗೆಸಿಕೊಳ್ಳಲು ತಮ್ಮ ಸ್ನೇಹಿತನನ್ನು ಬಿಡುವುದುಂಟಾ! ಅದಕ್ಕೇ ಮೂರರಲ್ಲಿ ಒಂದು ನಾಯಿ ಳಗೆ ಹೋಗಿ ಬೆಕ್ಕನ್ನು ಬಾ’ಯಿಯಲ್ಲಿ ಸೂಕ್ಷ್ಮವಾಗಿ ಹಿಡಿದು ತಂದಿದೆ. ಅದೇ ವಿಡಿಯೊ ಇದು.
ನಮ್ ಫೋಟೊ ತಗಿತಿದಾರೆ ಅಂತ ಮನುಷ್ಯರಿಗೇ ಕೆಲವು ಸಲ ಗೊತ್ತಾಗಲ್ಲ, ಅಂಥದ್ರಲ್ಲಿ ಈ ನಾಯಿಗಳಿಗೆ ಅದು ಹೇಗೆ ಗೊತ್ತಾಗುತ್ತೊ, ಅದರಲ್ಲೂ ಇದು ಗ್ರುಪ್ ಫೋಟೊ, ಇದರಲ್ಲಿ ಎಲ್ಲರೂ ಇರಬೇಕು ಅಂತ ಹೇಗೆ ಯೋಚಿಸುತ್ತವೊ ಕಾಣೆ! ಇನ್ನು ಮನುಷ್ಯರಲ್ಲೂ ಹಲವರು ಗ್ರುಪ್ ಫೋಟೊ ತಗೆಸಿಕೊಳ್ಳೋಕೆ ಹಿಂಜರಿಯುತ್ತಾರೆ, ಕಾರಣ ನಾಚಿಕೆ. ಆಗ ಅವರನ್ನು ಅವರ ಕಡೆಯವರು ಎಳೆದು ತಂದು ನಿಲ್ಲಿಸುತ್ತಾರೆ, ಇದೂ ಸೇಮ್ ಹಾಗೆಯೇ ಇದೆ.
Dog fans ಎಂಬ ಟ್ವಿಟರ್ ಖಾತೆದಾರರು ಈ ವಿಡಿಯೊ ಅಪ್ ಲೋಡ್ ಮಾಡಿದ್ದು, ಸಾಕಷ್ಟು ವೈರಲ್ ಆಗುತ್ತಿದೆ. ಒಂದೇ ದಿನದಲ್ಲಿ ಸಾವಿರಾರು ವಿವ್ಸ್ ಕಂಡಿರುವ ಅದನ್ನು ಸಾಕಷ್ಟು ಜನ ಮೆಚ್ಚಿ ಶೇರ್ ಮಾಡಿಕೊಂಡಿದ್ದಾರೆ. Dog taking the cat to take a picture ಎಂಬ ಶಿರ್ಷಿಕೆಯೊಂದಿಗೆ ವಿಡಿಯೊ ಅಪ್ ಲೋಡ್ ಮಾಡಲಾಗಿದ್ದು ಇದೊಂದು ಸೊಗಸಾದ ವಿಡಿಯೊ ಅನ್ನಬಹುದು.
ಹಾಗೆ ಬೆಕ್ಕನ್ನು ಜಾಗರೂಕವಾಗಿ ತಂದು ಹತ್ತಿರ ನಿಲ್ಲಿಸಿಕೊಂಡ ಮೇಲೆ ಅದು ಮೇಲೆ ನಾಯಿಗಳ ಸರಿಸಮಾನ ಬರಲಿಲ್ಲ. ಆಗ ಮಧ್ಯದ ಶ್ವಾನ ತಾನೇ ಒಂದು ಸ್ಟೆಪ್ ಕೆಳಗಿಳಿದು ಅದರ ಹೆಗಲ ಮೇಲೆ ಕೈ ಹಾಕಿದ ದೃಶ್ಯವಂತೂ ಅದ್ಭುತ. ಆಗ ಬೆಕ್ಕನ್ನು ತಂದ ಶ್ವಾನ ಕೂಡ ಕೆಳಗಿಳಿದು ಅದರೊಂದಿಗೆ ನಿಂತಿತು. ಕೊನೆಯ ಶ್ವಾನ ಕೆಳಬರಲಿಲ್ಲ, ಆಗ ಮಧ್ಯದ ಶ್ವಾನ ಅದರ ಕಡೆ ಕೆಳಗೆ ಬರುವಂತೆ ನೋಡಿದ ಪರಿ ಹೇಗಿದೆ ಅಬ್ಸರ್ವ್ ಮಾಡಿ!
Dog taking the cat to take a picture!#dogs #DogsofTwittter #dogsofinstagram
— Dog fans (@funnydo25814387) May 19, 2021
📹: please dm for credit/removal pic.twitter.com/GBY3D4dRwb
-Team Infotrend