VIDEO : ಕೋವಿಡ್ ಪತ್ತೆಗೆ ಶ್ವಾನ ಬಳಕೆ! ಆಸ್ಪತ್ರೆ – ಏರ್ ಪೋರ್ಟ್ ಗಳಲ್ಲೂ ನಾಯಿಗಳನ್ನು ಬಳಸಲಾಗುತ್ತಿದೆ!
ಇಲ್ಲಿ ಎರಡು ವಿಡಿಯೊ ಇದ್ದು, ಅವುಗಳನ್ನು ನೋಡುವ ಮೊದಲು ಈ ಮಾಹಿತಿ ಓದಿ… ಇದೊಂದು ಪರಿಣಾಮಕಾರಿ ಪ್ಲಾನ್ ಆಗಿದ್ದು, ಅತ್ಯಂತ ಸುಲಭವಾಗಿ ಹಾಗೂ ಅತೀ ಶಿಘ್ರದಲ್ಲಿ ಕರೊನ ರೋಗಿಗಳನ್ನು ಪತ್ತೆ ಹಚ್ಚಬಹುದಾಗಿದೆ. ಈ ನಿಟ್ಟಿನಲ್ಲಿ ತರಬೇತಿಗೊಳಿಸಲಾದ ನಾಯಿಗಳು ಈಗಾಗಲೇ ಪ್ರಪಂಚದ ಹತ್ತಾರು ರಾಷ್ಟ್ರಗಳಲ್ಲಿ ಏರ್ ಪೋರ್ಟ್, ಆಸ್ಪತ್ರೆ ಮತ್ತು ದೊಡ್ಡ ಹೊಟೆಲ್ ಗಳಲ್ಲಿ ಈ ಕೆಲಸ ಮಾಡುತ್ತಿವೆ.
ಅಚ್ಚರಿಯ ಸಂಗತಿಯೇನೆಂದರೆ, ಕೋವಿಡ್ ಲಕ್ಷಣ ಇಲ್ಲದವರಲ್ಲೂ ಕೂಡ ನಾಯಿಗಳು ಕೊರೋನ ವೈರಸ್ ಪತ್ತೆ ಮಾಡಿ ಖಚಿತವಾಗಿ ಮಾಹಿತಿ ನೀಡುತ್ತಿವೆ! ಈ ಅಧ್ಯಯನ ನಿನ್ನೆ ಪ್ರಕಟವಾಗಿದ್ದು, ಇದರ ನಂತರ ಇನ್ನೂ ಹಲವಾರು ದೇಶಗಳು ಇದನ್ನು ಅಳವಡಿಸಿಕೊಳ್ಳುವ ಸಂಭವ ಇದೆ. ಲಂಡನ್ ಸ್ಕೂಲ್ ಆಫ್ ಟ್ರಾಪಿಕಲ್ ಮೆಡಿಸಿನ್ (The London School of Hygiene & Tropical Medicine-LSHTM) ನ ಸಂಶೋಧಕರು ಈ ಸಂಶೋಧನೆ ನಡೆಸಿದ್ದಾರೆ.
ಕೊರೊನ ಪಾಸಿಟಿವ್ ಆಗಿರುವ ಕೆಲವು ವ್ಯಕ್ತಿಗಳಲ್ಲಿ ಯಾವುದೇ ಲಕ್ಷಣ ತೋರುತ್ತಿಲ್ಲ, ಒಂದೇ ಸಲಕ್ಕೆ ಶ್ವಾಸಕೋಶಕ್ಕೆ ಇನ್ಫೆಕ್ಷನ್ ಹರಡಿದ ಮೇಲೆ ಗೊತ್ತಾಗುತ್ತಿದೆ, ಇದೊಂದು ಆ’ತಂ’ಕಕಾರಿ ಬೆಳವಣಿಗೆಯಾಗಿದ್ದು, ಸಾ’ವಿನ ಸಂಖ್ಯೆ ತೀವ್ರ ಗತಿಯಲ್ಲಿ ಏರಲು ಇದು ಪ್ರಮುಖ ಕಾರಣವಾಗಿತ್ತು. ಭಾರತದಲ್ಲಂತೂ ಈ ಸಮಸ್ಯೆ ಅತಿಯಾಗಿದೆ.
ಆದರೆ ನಾಯಿಗಳು ಈ ಲಕ್ಷಣ ಇಲ್ಲದವರಲ್ಲೂ ಕೂಡ ವೈರಸ್ ಇದೆಯಾ ಎಂದು ಪತ್ತೆ ಹಚ್ಚಲಿವೆ. ಸೋಂಕು ಇದ್ದರೂ ಲಕ್ಷಣವಿಲ್ಲದ ವ್ಯಕ್ತಿಗಳಿಗೆ ಸಂಬಂಧಿತ ವಿಶಿಷ್ಟ ವಾಸನೆಯ ರಾಸಾಯನಿಕ ಸಂಯುಕ್ತವನ್ನು ನಾಯಿಗಳು ಪರ್ಫೆಕ್ಟಾಗಿ ಪತ್ತೆ ಹಚ್ಚಬಲ್ಲವು. ಇದು ಸಂಶೋಧಕರಿಗೆ ಸಿಕ್ಕ ದೊಡ್ಡ ಯಶಸ್ಸಾಗಿದ್ದು, ಹಲವು ಲಕ್ಷಣವಿಲ್ಲದ ರೋಗಿಗಳ ಪ್ರಾಣ ಉಳಿಸಲು ಸಹಕಾರಿಯಾಗಲಿದೆ.
ಸಂಶೋಧನೆಯಲ್ಲಿ ಬಳಕೆಯಾದ ನಾಯಿಗಳು ಪಾಸಿಟಿವ್ ಎಂದು ಗುರುತಿಸಿದ ವ್ಯಕ್ತಿಗಳ ಸ್ವಾಬ್ ಟೆಸ್ಟ್ ಮಾಡಿಸಿ ಕೂಡ ನೋಡಲಾಗಿದ್ದು, ಶೇಕಡಾ 90 ರಷ್ಟು ನಿಖರ ಮಾಹಿತಿ ನೀಡಿವೆ! ಪ್ರಾಣಿಯೊಂದು ಅತ್ಯಂತ ಸುಲಭವಾಗಿ ಇಷ್ಟು ನಿಖರವಾಗಿ ಮಾಹಿತಿ ನೀಡುವುದು ಸಾಮಾನ್ಯ ಸಂಗತಿಯಲ್ಲ. ನಿಜಕ್ಕೂ ಇದು ಎಲ್ಲ ದೃಷ್ಟಿಯಿಂದಲೂ ಉತ್ತಮ ಬೆಳವಣಿಗೆ.
ಆಘ್ರಾಣಿಸುವ ಅಗಾಧ ಶಕ್ತಿಯನ್ನು ಹೊಂದಿರುವ ನಾಯಿಗಳು ಕ್ಯಾನ್ಸರ್, ಮಲೆರಿಯಾ, ಅಪಸ್ಮಾರ ಮುಂತಾದ ಕಾಯಿಲೆಗಳನ್ನು ಕೂಡ ಪತ್ತೆಹಚ್ಚಬಲ್ಲವು ಎಂಬ ಅಂಶ ನಿಮಗೆ ಗೊತ್ತಿರಬಹುದು. ಆ ಬಗ್ಗೆ ನಡೆದ ಅಧ್ಯಯನಗಳು ಈಗಾಗಲೇ ಅದನ್ನು ಸಾಬೀತುಪಡಿಸಿವೆ. ಈಗ ಹೊಸದಾಗಿ ಕೊರೋನ ವೈರಸ್ ಅನ್ನು ಕೂಡ ಪತ್ತೆ ಹಚ್ಚುವ ಸಾಮರ್ಥ್ಯ ನಾಯಿಗಳಿಗೆ ಇರುವುದು ಅಚ್ಚರಿಯ ಸಂಗತಿಯಾಗಿದೆ.
ಸುಮಾರು 200 ಜನ ಕೊರೋನ ರೋಗಿಗಳ ಸಾಕ್ಸ್ (ಕಾಲುಚೀಲ) ಗಳನ್ನು ಸಂಗ್ರಹಿಸಿ ಅಧ್ಯಯನಕ್ಕೆ ಬಳಸಲಾಗಿತ್ತು. ಪ್ರಯೋಗಾಲಯಗಳಲ್ಲಿ ಒಟ್ಟು ಆರು ನಾಯಿಗೆ ತರಬೇತಿ ನೀಡಿ ಅಧ್ಯಯನ ನಡೆಸಲಾಯಿತು. ಮೊದಲೇ ಹೇಳಿದಂತೆ ಈಗಾಗಲೇ ಹಲವು ದೇಶಗಳಲ್ಲಿ ವಿಮಾನ ನಿಲ್ದಾಣಗಳಲ್ಲಿ ನಾಯಿಗಳನ್ನು ಕೋವಿಡ್ ಪೇಶೆಂಟ್ ಪತ್ತೆ ಹಚ್ಚಲು ಬಳಸಲಾಗುತ್ತಿದೆ.
ವಿದೇಶ ಯಾತ್ರೆ ಮಾಡಬಯಸುವವರು ತಮ್ಮ ಕಾಯಿಲೆ ಮುಚ್ಚಿಟ್ಟುಕೊಳ್ಳಲು, ಅಂದರೆ ಏರ್ ಪೋರ್ಟ್ ನಲ್ಲಿ ಚೆಕ್ ಮಾಡಿದಾಗ ದೇಹದ ತಾಪಮಾನ ಇಳಿಸಿಕೊಳ್ಳುವ ಅಥವಾ ಇನ್ಯಾವುದೇ ಬಚಾವಾಗುವ ತಂತ್ರ ಬಳಸಿ ಬಂದಿದ್ದರೂ ನಾಯಿಗಳು ಖಚಿತವಾಗಿ ಕೊರೋನ ಇರುವ ಪ್ಯಾಸೆಂಜರ್ ಗಳನ್ನು ಪತ್ತೆ ಹಚ್ಚುತ್ತಿವೆ.
ಬೃಹತ್ ಜನಸಂಖ್ಯೆಯುಳ್ಳ ಭಾರತದಲ್ಲಿಯಂತೂ ಕೊರೋನ ಟೆಸ್ಟ್ ಮಾಡಿಸುವುದೇ ಒಂದು ದೊಡ್ಡ ಸಮಸ್ಯೆಯಾಗಿದೆ. ಕೆಲವರು ಟೆಸ್ಟ್ ಗೆ ಒಪ್ಪದಿದ್ದರೆ ಮತ್ತೆ ಕೆಲವರು ಬೇಕೆಂತಲೇ ಪಾಸಿಟಿವ್ ತೋರಿಸಿಕೊಂಡು ಅದರಿಂದ ಸಿಗಬಹುದಾದ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಲ್ಯಾಬ್ ಗಳಲ್ಲಿ ದುಡ್ಡಿಗಾಗಿ ಪಾಸಿಟಿವ್ ಕಳ್ಳಾಟವಾಡಿರುವ ಸಾಕಷ್ಟು ಪ್ರಕರಣಗಳು ಪತ್ತೆಯಾಗಿವೆ, ಹೀಗಿರುವಾಗ ನಾಯಿಗಳ ಬಳಕೆ ಇಲ್ಲಿ ಸಕತ್ ವರ್ಕೌಟ್ ಆಗಲಿದೆ.
ಆಸ್ಪತ್ರೆ ಹಾಗೂ ದೊಡ್ಡ ದೊಡ್ಡ ಹೊಟೆಲ್ ಗಳಲ್ಲು ಕೂಡ ಇವುಗಳ ಬಳಕೆಯಾಗುತ್ತಿದ್ದು, ಇಲ್ಲೆಲ್ಲ ನಾಯಿಗಳು ಶೇಕಡಾ 91 ರಷ್ಟು ನಿಖರವಾಗಿ ಕೇಸ್ ಪತ್ತೆ ಹಚ್ಚಿದ ಉದಾಹರಣೆಗಳಿವೆ. ಇದೊಂದು ಕ್ರಾಂತಿಕಾರಿ ಬೆಳವಣಿಗೆಯಾಗಿದ್ದು ಇದರಿಂದ ವೈದ್ಯಕೀಯ ವ್ಯವಸ್ಥೆಗೆ ಸಾಕಷ್ಟು ಸಹಾಯವಾಗುವ ನಿರೀಕ್ಷೆ ಇದೆ. ಇದಕ್ಕೆ ಸಂಬಂಧಪಟ್ಟ ಎರಡು ಚಿಕ್ಕ ವಿಡಿಯೊ ಮೇಲೆ ಇವೆ, ನೋಡಿ…
-Team Infotrend