ಎರಡು ನಾಯಿಕೂಡಿ ಕತ್ತೆಗೆ ಕಚ್ಚಲು ಹೋದವು, ಮರಳಿ ನಾಯಿಗಳಿಗೆ ಬೆನ್ನಟ್ಟಿ ಕಚ್ಚಿ ಓಡಿಸಿದ ಕತ್ತೆ!!
ಸೋಶಿಯಲ್ ಮೀಡಿಯಾದಲ್ಲಿ ನಿಮಗೆ ಎಲ್ಲಾ ಸಂಬಂಧಗಳಿಗೆ ಸಂಬಂಧಿಸಿದ ವಿಡಿಯೋಗಳು ನೋಡಲು ಸಿಗುತ್ತವೆ. ಒಮ್ಮೆ ತಾಯಿ-ಮಗಳ, ತಂದೆ-ಮಗನ, ಸಹೋದರ-ಸಹೋದರಿಯರ, ಪತಿ-ಪತ್ನಿಯ, ತಂದೆ-ಮಗಳ ಅಷ್ಟೇ ಏಕೆ ಗುರು–ಶಿಷ್ಯರ ವಿಡಿಯೋಗಳು ಸಹ ನೋಡಲು ಸಿಗುತ್ತವೆ.
ಈ ರೀತಿ ಸಂಬಂಧಗಳಿಗೆ ಸಂಬಂಧಿಸಿದ ವೀಡಿಯೊಗಳನ್ನು ನೋಡಲು ನೇಟಿಜನ್ಸ್ ಗಳು ತುಂಬಾ ಇಷ್ಟ ಪಡುತ್ತಾರೆ. ಅದಕ್ಕಾಗಿಯೇ ಈ ರೀತಿಯ ಕಂಟೆಂಟ್ ಗಳು ತುಂಬಾ ವೈರಲ್ ಆಗುತ್ತವೆ. ಈಗ ಇದೇ ರೀತಿಯ ಒಂದು ವಿಡಿಯೋ ನಿಮಗಾಗಿ ತಂದಿದ್ದೇವೆ. ಈ ವಿಡಿಯೋ ನಾಯಿ ಮತ್ತು ಕತ್ತೆ ನಡುವಿನ ವೀಡಿಯೋ ಇದೆ.
ಪ್ರಸ್ತುತ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಒಂದು ಕತ್ತೆ ತನ್ನಷ್ಟಕ್ಕೆ ತಾನು ರಸ್ತೆಯ ಮೇಲೆ ಹೊರಟಿರುತ್ತದೆ ಈ ಒಂಟಿಯಾಗಿ ಹೋರಟ ಕತ್ತೆಯನ್ನು ಗಮನಿಸಿದ ಎರಡು ಬೀದಿ ನಾಯಿಗಳು ಸುಮ್ಮನೆ ಕೂಡಲಿಲ್ಲ. ಈ ಕತ್ತೆಗೆ ಬೆನ್ನು ಹತ್ತುತ್ತವೆ ಹಾಗೆ ಬೊಗಳುತ್ತ ಅದರ ಹಿಂದೆ ಹಿಂದೆಯೇ ಹೋಗುತ್ತಿರುತ್ತವೆ. ಆಗ ಕತ್ತೆ ಇವುಗಳನ್ನು ಗಮನಕ್ಕೆ ತಗೆದುಕೊಳ್ಳದೆ ತನ್ನ ಪಾಡಿಗೆ ತಾನು ಹೊರಟಿರುತ್ತದೆ. ಆದರೂ ಸಹ ನಾಯಿಗಳು ಬೊಗಳುತ್ತ ಇದಕ್ಕೆ ಕಚ್ಚಲು ಓಡಿ ಹೋಗುತ್ತವೆ ತದನಂತರ ರೊಚ್ಚಿಗೆದ್ದ ಕತ್ತೆ ಇವುಗಳಿಗೆ ಚೆನ್ನಾಗಿ ಪಾಠ ಕಲಿಸಬೇಕು ಎಂದು ನಿರ್ಧರಿಸಿತು. ಆಗ ಕತ್ತೆ ಹಿಂದೆ ತಿರುಗಿ ಎರಡು ನಾಯಿಗಳಿಗೆ ಬೆನ್ನಟ್ಟುತ್ತದೆ, ಇದನ್ನು ಕಂಡು ನಾಯಿಗಳು ಗಾಬರಿಯಿಂದ ಓಡಿ ಹೋಗಲು ಪ್ರಯತ್ನ ಮಾಡುತ್ತವೆ. ಆದರೆ ಕತ್ತೆ ತುಂಬಾ ಜೋರಾಗಿ ಓಡಿ ಹೊಗಿ ಒಂದು ನಾಯಿಯ ಬಾಲವನ್ನು ಹಿಡಿದು ಅದಕ್ಕೆ ಜೋರಾಗಿ ಕಚ್ಚುತ್ತದೆ. ಆಗ ನಾಯಿ ನೋವಿನಿಂದ ಅಲ್ಲಿಂದ ಓಡಿ ಹೋಗುತ್ತದೆ ಇನ್ಮುಂದೆ ನಾಯಿ ತನ್ನ ಜೀವನದಲ್ಲಿ ಯಾವ ಕತ್ತೆಗೂ ಸಹ ಕಚ್ಚುವ ಸಾಹಸ ಮಾಡುವದಿಲ್ಲ. ಈ ರೀತಿಯಾದ ಪಾಠ ಕಲಿಸಿದ ಕತ್ತೆ.
ನೋಡಿ ವಿಡಿಯೋ……
View this post on Instagram