ಈ ಮಾಸ್ಕ್ ಧರಿಸುವುದರಿಂದ ವೈದ್ಯರಿಗೆ ತೊಂದರೆ, ದಯವಿಟ್ಟು ಈ ಮಾಸ್ಕ್ ಕೊಳ್ಳಬೇಡಿ ಎಂದು ವಿನಂತಿಸಿದ ವೈದ್ಯರು!
ಕೊರೋನ ವಕ್ಕರಿಸಿಕೊಂಡಾಗಿನಿಂದ ಅಂದರೆ ಸುಮಾರು ಒಂದು ವರ್ಷದಿಂದ ನಾವೆಲ್ಲ ಮಾಸ್ಕ್ ಮೊರೆ ಹೋಗಿದ್ದೇವೆ. ಮಾಸ್ಕ್ ಗಳಲ್ಲಿ ತರಹೆವಾರಿ ಮಾಸ್ಕ್ ಇವೆ. ಎರಡು ಮೂರು ರುಪಾಯಿ ಮಾಸ್ಕ್ ನಿಂದ ಹಿಡಿದು ಲಕ್ಷದವರೆಗೆ ಬೆಲೆ ಬಾಳುವ ಮಾಸ್ಕ್ ಧರಿಸುವ ಜನ ಭಾರತದಲ್ಲಿದ್ದಾರೆ. ಇವತ್ತು ನಾವಿಲ್ಲಿ ಯಾವ ಮಾಸ್ಕ್ ಧರಿಸಬಾರದು ಎಂದು ತಿಳಿಯೋಣ. ಅದರಿಂದ ನಮಗೆ ತೊಂದರೆ ಇಲ್ಲವಾದರೂ ವೈದ್ಯರಿಗೆ ತೊಂದರೆಯಿದೆ.
ಹೌದು,
ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿ ಧರಿಸುವ ಸರ್ಜಿಕಲ್ ಮಾಸ್ಕ್ ಗಳನ್ನು ಇಂದು ನಾವು ಧರಿಸುತ್ತಿದ್ದೇವೆ. ತುಂಬಾ ಸಿಂಪಲ್ ಆಗಿ ಇರುವ ಇವುಗಳನ್ನು ಸಾಕಷ್ಟು ಜನ ಬಳಸುತ್ತಿದ್ದಾರೆ. ನೋಡಲು ಒಂದಣೆ ಪದರು ಇದೆಯೇನೋ ಅನಿಸಿದರೂ ಮೂರು ಲೇಯರ್ ಉಳ್ಳ ಅವುಗಳನ್ನು ವೈದ್ಯರಿಗಾಗಿಯೇ ತಯಾರಿಸಿದ್ದು. ಅವುಗಳನ್ನು ಕಳೆದೊಂದು ವರ್ಷದಿಂದ ನಾವೇ ಖರೀದಿಸುತ್ತಿದ್ದೇವೆ. ಹೀಗಾಗಿ ಆಸ್ಪತ್ರೆಗಳಿಗೆ ಸರಿಯಾದ ಸಮಯಕ್ಕೆ ಮಾಸ್ಕ್ ಗಳು ದೊರಕುತ್ತಿಲ್ಲ.
ಆ್ಯಕ್ಚುಲಿ ಇವು ಬಳಸಿ ಬಿಸಾಡುವ ಮಾಸ್ಕ್ ಗಳು, ಹೆಚ್ಚೆಂದರೆ ಆರು ತಾಸು ಧರಿಸಬೇಕಷ್ಟೆ. ನಂತರ ಅವುಗಳನ್ನು ನಿಯಮಾನುಸಾರ ಡಸ್ಟ್ ಬಿನ್ ಸೇರಿಸಬೇಕು. ಆದರೆ ನಮ್ಮ ಜನ ಅವುಗಳನ್ನೇ ಎಂಟೆಂಟು ದಿನ ಹಾಕಿಕೊಳ್ಳುತ್ತಿದ್ದಾರೆ! ಅವು ಗುಂಜಾಳೆದ್ದು – ಗಬ್ಬೆದ್ದು ಹೋದರೂ ಬಿಡದೇ ಧರಿಸುತ್ತಿದ್ದಾರೆ. ಹೀಗೆ ಇಂಥ ಮಾಸ್ಕ್ ಧರಿಸುವ ಬದಲು ಧರಿಸದಿರುವುದೇ ಒಳ್ಳೆಯದು.
ಬೆಲೆ ತುಂಬಾ ಕಡಿಮೆ ಎಂಬ ಕಾರಣಕ್ಕೆ ಎಲ್ಲರೂ ಅವುಗಳನ್ನೇ ತಗೆದುಕೊಳ್ಳುತ್ತಾರೆ. ಆದರೆ ಮನೆಗೆ ಹೋಗಿ ತಗೆದು ಹಾಗೇ ಇಡುತ್ತಾರೆ, ಅವುಗಳನ್ನು ಮಕ್ಕಳು ಮುಟ್ಟುತ್ತಾರೆ, ಎಲ್ಲೆಂದರಲ್ಲಿ ಇಡುತ್ತಾರೆ, ಇದು ಮತ್ತಷ್ಟು ಅಪಾಯ. ಕೆಲವರು ಬಳಸಿ ಎಲ್ಲೆಂದರಲ್ಲಿ ಎಸೆಯುತ್ತಾರೆ, ಇದರಿಂದ ಕಸ ಎತ್ತುವ ಕಾರ್ಮಿಕರು, ವಿಂಗಡಿಸುವ ಕೆಲಸಗಾರರಿಗೆ ಅಪಾಯ. ಆದ್ದರಿಂದ ಬಳಸಿ ಬೀಸಾಡುವ ಈ ಮಾಸ್ಕ್ ಗಳನ್ನು ಯಾರೂ ಕೊಳ್ಳಬೇಡಿ.

ಹಾಗಿದ್ದರೆ ಯಾವ ಮಾಸ್ಕ್ ಉತ್ತಮ ಎಂದು ನೋಡುವುದಾದರೆ, ಸರ್ಜಿಕಲ್ ಮಾಸ್ಕ್ ಬಿಟ್ಟು ಬೇರೆ ಯಾವುದಾದರೂ ಬಳಸಿ. ತೀರ ಒಂದೇ ತೆಳ್ಳನೆಯ ಪದರ ಇರುವ ಬಟ್ಟೆಯ ಮಾಸ್ಕ್ ಬೇಡ. ದಪ್ಪನೆಯ ಅಥವಾ ಡಬಲ್ ಲೇಯರ್ ಕಾಟನ್ ಬಟ್ಟೆಯ ಮಾಸ್ಕ್ ದಿ ಬೆಸ್ಟ್. ಅವುಗಳನ್ನು ಸುಲಭವಾಗಿ ತೊಳೆದು ಬಳಸಬಹುದು.
ಹಾಗೆಯೇ ಈ ಮೂಲಕ ವೈದ್ಯರಿಗೂ ಸಹಾಯ ಮಾಡಿದ ಹಾಗಾಗುತ್ತದೆ, ದಯವಿಟ್ಟು ಎಲ್ಲರೂ ಸ್ಥಳಿಯ ಟೈಲರ್ ಹೊಲೆದ ಎರಡು ಪದರದ ಕಾಟನ್ ಮಾಸ್ಕ್ ಗಳನ್ನೇ ಬಳಸಿ ಮತ್ತು ದಿನಾಲು ತೊಳೆಯಲೇಬೇಕು.
-Team Infotrend