ಡಂಪರ್ ಡ್ರೈವರ್ ಗೆ ಸೈಟ್ ನಲ್ಲಿ ಸರಕು ಅನ್ಲೋಡ್ ಮಾಡುವ ಬಗೆಯನ್ನು ಆಕ್ಟಿಂಗ್ ಮೂಲಕ ಹೇಳಿದ ಸೂಪರ್ವೈಸರ್…

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ವಿಡಿಯೋಗಳು ಇಂಟರ್ನೆಟ್ ಯೂಸರ್ ಗಳಿಗೆ ಅನೇಕ ಅಚ್ಚರಿಯ ದೃಶ್ಯಗಳನ್ನು ತೋರಿಸುತ್ತದೆ. ಸಾಮಾಜಿಕ ಜಾಲತಾಣಗಳಿಂದಾಗಿ ಜಗತ್ತಿನ ಮೂಲೆ ಮೂಲೆಗಳಲ್ಲಿ ನಡೆದ ತುಂಬಾ ವಿಚಿತ್ರ ಹಾಗೂ ರೋಚಕ ದೃಶ್ಯಗಳು ನೋಡಲು ಸಿಗುತ್ತವೆ.

ಈ ಜಗತ್ತಿನಲ್ಲಿ ಅನೇಕ ರೀತಿಯ, ಅನೇಕ ನಮೂನೆಯ ಜನರು ನೋಡಲು ಸಿಗುತ್ತಾರೆ. ಒಬ್ಬೊಬ್ಬರದ್ದು ಒಂದೊಂದು ರೀತಿ ಜೀವನ ನಡೆಸುವ ಕೌಶಲ್ಯ, ಪದ್ಧತಿ ಬೇರೆಯೇ ಆಗಿರುತ್ತದೆ. ಅವರ ಒಂದೊಂದು ಸ್ಟೈಲ್ ಗಳನ್ನು ನೋಡಿದಾಗ ಸುಮ್ಮನೆ ಕುಳಿತಾಗಲೂ ಅವರ ನೆನಪು ಆದರೆ ಆಯ್ತು ಅಲ್ಲಿಯೇ ನಗು ಬರಲು ಶುರು ಆಗುತ್ತದೆ. ಸದ್ಯ ನಿಮಗೆ ಇದೇ ರೀತಿಯ ಒಂದು ಅಪರೂಪದ ವ್ಯಕ್ತಿಯನ್ನು ಭೇಟಿ ಮಾಡಿಸಲಿದ್ದೇವೆ. ಈ ವ್ಯಕ್ತಿಯನ್ನು ನೋಡಿದ ನಂತರ ನೀವು ಮರೆಯಲಿಕ್ಕೆ ಸಾಧ್ಯವಿಲ್ಲ.

ಪ್ರತಿಯೊಬ್ಬ ವ್ಯಕ್ತಿ ಏನಾದರೂ ಒಂದು ಕಲೆಯನ್ನು ಇನ್ನೊಬ್ಬರಿಗೆ ಹೇಳುವ ಅಥವಾ ಕಲಿಸುವ ಪದ್ಧತಿ ಸಂಪೂರ್ಣ ಭಿನ್ನವಾಗಿರುತ್ತದೆ. ಇಲ್ಲಿ ನೊಡಲಿರುವ ವಿಡಿಯೋದಲ್ಲಿ ವ್ಯಕ್ತಿ ಡಂಪರ್ ಡ್ರೈವರ್ ಗೆ ಸೈಟ್ ನಲ್ಲಿ ಸರಕು ಹೇಗೆ?ಯಾವ ಪ್ರಕಾರ ಇಳಿಸಬೇಕು ಎಂಬುದನ್ನು ತುಂಬಾ ಚೆನ್ನಾಗಿ ಹಾಗೂ ಆಕ್ಟಿಂಗ್ ಮೂಲಕ ಹೇಳುತ್ತಿದ್ದಾನೆ. ಯಾವನೋ ಒಬ್ಬ ಆತನ ಗೆಳಯ ಗೊತ್ತಿಲ್ಲದಂತೆ ಇದನ್ನು ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾನೆ. ನೋಡಲು ಸಖತ್ ತಮಾಷೆಯ ಹಾಗೂ ಇಂಟರೆಸ್ಟಿಂಗ್ ವಿಡಿಯೋ ಇದಾಗಿದೆ. ನೀವು ಸಹ ಒಮ್ಮೆ ನೋಡಿ ಪ್ರಸ್ತುತ ವ್ಯಕ್ತಿಯ ಆಕ್ಟಿಂಗ್ ಹೇಗಿದೆ ಅಂತ.

ನೋಡಿ ಈ ವಿಡಿಯೋ…

 

View this post on Instagram

 

A post shared by Sagar Rathod (@mr_sagar_5100_)

ಈ ವಿಶೇಷ ವಿಡಿಯೋ ದೃಶ್ಯವನ್ನು ಸಾಮಾಜಿಕ ಜಾಲತಾಣವಾದ instagram ನಲ್ಲಿ mr_sagar_5100_ ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ 10.2 ಮಿಲಿಯನ್ ಗಳ ವರೆಗೆ ವೀಕ್ಷಣೆಯನ್ನು ಪಡೆದಿದ್ದು ಸುಮಾರು ಮೂರು ಲಕ್ಷಕ್ಕೆ ಸಮೀಪ ಮೆಚ್ಚುಗೆಯನ್ನು ಗಳಿಸಿದೆ.

ಪ್ರಸ್ತುತ ದೃಶ್ಯವನ್ನು ನೋಡಿ ನೆಟ್ಟಿಗರು ತುಂಬಾ ಇಂಪ್ರೆಸ್ ಆಗಿ, ಸಾವಿರಕ್ಕೂ ಹೆಚ್ಚು ಜನರು ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತ ಮಾಡಿದ್ದಾರೆ. ತನ್ನ ಪ್ರತಿಕ್ರಿಯೆಯಲ್ಲಿ ಒಬ್ಬ ನೆಟ್ಟಿಗ ” ಸೈಟ್ ಹೇಳುವ ಹೊಸ ಪದ್ಧತಿ” ಎಂದಿದ್ದಾನೆ. ಇದನ್ನು ನೋಡಿದ ಬೇರೊಬ್ಬ ನೆಟ್ಟಿಗ, “ನನಗೆ ಇದೇ ರೀತಿಯ ಕ್ಲೀನರ್ ಬೇಕಾಗಿದ್ದಾನೆ” ಎಂದು ಕಮೆಂಟ್ ಮಾಡಿದ್ದಾನೆ. ಇನ್ನೊಬ್ಬ “ಏನೇ ಹೇಳಿ ಈ ಅಂಕಲ್ ಮಾತ್ರ ಸೂಪರ್ ಆಗಿದ್ದಾನೆ” ಎಂದು ಕಮೆಂಟ್ ಮಾಡಿದ್ದಾನೆ.