VIDEO : ಕರ್ನಾಟಕ ಜನರಲ್ಲಿ ದುನಿಯಾ ವಿಜಿ ಮನವಿ, ಏನ್ ಹೇಳಿದಾರೆ ನೋಡಿ…
ಇಡೀ ಜಗತ್ತಿನಾದ್ಯಂತ ಕರೋನ ಎಂಬ ಹೆಮ್ಮಾರಿಯು ಹೇಗೆಲ್ಲ ಆಟ ಆಡಿಸುತ್ತಿದೆ ಎಂದು ನಿಮಗೆಲ್ಲ ಗೊತ್ತೇ ಇದೆ. ಪ್ರತಿ ನಿತ್ಯ ಪಾಸಿಟಿವ್ ಕೇಸ್ ಗಳ ಸಂಖ್ಯೆ ಹೆಚ್ಚಾಗುತ್ತಲೇ ಇವೆ, ಆದರೆ ಸಂತೋಷಕರ ಸುದ್ದಿ ಎಂದರೆ ಎಷ್ಟು ಜನ ಕರೋನ ಪಾಸಿಟಿವ್ ಆಗಿ ಒಳಗೆ ಹೋಗುತ್ತಿದ್ದಾರೋ ಅದಕ್ಕಿಂತಲೂ ಹೆಚ್ಚು ಜನ ಗುಣಮುಖರಾಗಿ ಹೊರಗೆ ಬರುತ್ತಿದ್ದಾರೆ. ಸಾವಿನ ಪ್ರಮಾಣ ಸಾಕಷ್ಟು ತಗ್ಗಿದೆ, ಇದು ಒಳ್ಳೆಯ ಬೆಳವಣಿಗೆ.
ಜೊತೆಗೆ ಎಷ್ಟೋ ಜನರು ಮನೆಯಲ್ಲಿಯೇ ಪೇಷಂಟ್ ಗಳನ್ನು ಇಟ್ಟುಕೊಂಡು ಒಳ್ಳೆಯ ಡಾಕ್ಟರ್ ಸಲಹೆ ಪಡೆದು ಅವರನ್ನು ಮನೆಗೆ ಕರೆಸಿಕೊಂಡು ಟ್ರೀಟ್ಮೆಂಟ್ ಕೊಡಿಸಿ ತಮ್ಮವರನ್ನು ಉಳಿಸಿಕೊಳ್ಳುತ್ತಿದ್ದಾರೆ. ಇಂಥವರ ಸಾಲಿಗೆ ದುನಿಯಾ ವಿಜಯ್ ಅವರು ಸಹ ಸೇರುತ್ತಾರೆ. ವಿಜೀಯವರು ತಮ್ಮ ತಂದೆ ತಾಯಿಯನ್ನು ಉಳಿಸಿಕೊಳ್ಳಲು ಏನೆಲ್ಲಾ ಮಾಡಿದ್ದಾರೆ ಹಾಗೂ ಸಾಮಾಜಿಕ ಕಳಕಳಿಯಿಂದ ಸಾರ್ವಜನಿಕರಿಗೆ ಏನೇನು ಸಲಹೆ ನೀಡಿದ್ದಾರೆ ನೋಡಿ…
ಇತ್ತೀಚಿಗಷ್ಟೇ ನಟ ದುನಿಯಾ ವಿಜಯ್ ಅವರ ತಂದೆ – ತಾಯಿಗೆ ಕರೋನ ಪಾಸಿಟಿವ್ ಆಗಿತ್ತು. ಇದರಿಂದ ಭಯ ಭೀತಾರಾಗದೆ ನಟ ವಿಜಯ್ ಅವರು ತಮ್ಮ ತಂದೆ ತಾಯಿಗೂ ಧೈರ್ಯ ತುಂಬುತ್ತ ಮನೆಯಲ್ಲಿಯೇ ಇರಿಸಿಕೊಂಡು ಒಬ್ಬ ಒಳ್ಳೆಯ ವೈದ್ಯರನ್ನು ಮನೆಗೆ ಕರೆಸಿಕೊಂಡು ಅವರಿಗೆ ಚಿಕಿತ್ಸೆ ಕೊಡಿಸಿದರು. ಅವರ ಸಲಹೆಯಂತೆಯೇ ನಡೆದುಕೊಂಡರು.
ನಡೆಯಲು ಆಗದ ಪರಿಸ್ಥಿತಿಯಲ್ಲಿದ್ದ ಅವರ ತಂದೆ ತಾಯಿಯನ್ನು ಪುಟ್ಟ ಮಕ್ಕಳನ್ನು ನೋಡಿಕೊಳ್ಳುವಂತೆ ನೋಡಿಕೊಂಡು ಆರೈಕೆ ಮಾಡಿದರು. ಅವರನ್ನು ಸಂತೈಸುತ್ತ ಕೈ ತುತ್ತು ಮಾಡಿ ತಿನಿಸುತ್ತ, ನಮಗೆ ಏನೂ ಆಗೇ ಇಲ್ಲ ಎಂಬಂತೆ ಅವರ ತಂದೆ ತಾಯಿ ಫೀಲ್ ಆಗುವಂತೆಯೂ ನೋಡಿಕೊಂಡರು, ಜೊತೆಗೆ ತಾವು ಕೂಡ ಸಾಕಷ್ಟು ಎಚ್ಚರಿಕೆ ವಹಿಸುತ್ತಿದ್ದರು.
ಇವರು ಹೇಳುವ ಪ್ರಕಾರ ಕರೋನ ಬಂದರೆ ಸತ್ತೇ ಹೋಗುವುದಿಲ್ಲ, ಬದಲಾಗಿ ಕೆಲವು ಮುನ್ನೆಚ್ಚರಿಕೆವಹಿಸಿ ಆ ರೋಗಿಗಗಳನ್ನು ನೋಡಿಕೊಂಡರೆ ಅವರಿಗೂ ಕೂಡ ಮನಸ್ಸಿಗೆ ಮುದವೆನಿಸಿ ಆದಷ್ಟು ಬೇಗ ಹುಷಾರಾಗುತ್ತಾರೆ ಎನ್ನುತ್ತಾರೆ ನಟ ವಿಜಯ್. ಹೀಗೆಯೇ ನಾನು ನಮ್ಮ ತಂದೆ ತಾಯಿಯನ್ನು ಉಳಿಸಿಕೊಂಡಿರುವುದು ಎಂದು ಬಹಳ ಹೆಮ್ಮೆಯಿಂದ ಹೇಳುತ್ತಾರೆ.
ಕರೋನ ಪಾಸಿಟಿವ್ ಬಂದಿತು ಎಂದಾಕ್ಷಣ ಪಾಸಿಟಿವ್ ಬಂದ ಮನೆಯ ಸದಸ್ಯರನ್ನು ವಿಲನ್ ರೀತಿಯಲ್ಲಿ ನೋಡುವುದನ್ನು ಮೊದಲು ಬಿಡಿ, ಇದೇನು ಆಜೀವಪರ್ಯಂತ ಇರುವಂತ ರೋಗವಲ್ಲ. ಇದನ್ನು ಹೋಗಲಾಡಿಸಲು ಒಬ್ಬ ಒಳ್ಳೆಯ ಮಾರ್ಗದರ್ಶನ ಹಾಗೂ ಟ್ರೀಟ್ಮೆಂಟ್ ನೀಡಬಲ್ಲ ವೈದ್ಯರು ಸಾಕು.
ಜೊತೆಗೆ ರೋಗಿಗಳನ್ನು ಧೈರ್ಯದಿಂದ ಮತ್ತು ಪ್ರೀತಿಯಿಂದ ನೋಡಿಕೊಳ್ಳುವ ಮನೆಯ ಸದಸ್ಯರು ಇದ್ದರೆ ಈ ಹೆಮ್ಮಾರಿಯನ್ನು ಮಣಿಸುವುದು ಅಷ್ಟು ಕಷ್ಟದ ಕೆಲಸವಲ್ಲ ಎನ್ನುತ್ತಾರೆ ನಟ ವಿಜಯ್. ಇದು ನಿಜ ಕೂಡ ಹೌದು. ಎಷ್ಟೊ ಕಡೆ ಕೊರೋನ ಬಂದ ಮನೆಯವರನ್ನು ಯಾವುದೊ ದೊಡ್ಡ ರೋಗ ಬಂದವರಂತೆ ಮನೆಗೆ ಸೇರಿಸಿಕೊಳ್ಳದೆ ಇರುವುದನ್ನು ನಾವು ನೋಡಿದ್ದೇವೆ.
ಯಾವುದೇ ಕಾರಣಕ್ಕೂ ವೈದ್ಯರ ಸರಿಯಾದ ಮಾರ್ಗದರ್ಶನವಿಲ್ಲದೆ ಏನೂ ಟ್ರೀಟ್ಮೆಂಟ್ ಹಾಗೂ ಮೆಡಿಸಿನ್ ನೀಡುವ ಹುಚ್ಚು ಸಾಹಸಕ್ಕೆ ಕೈ ಹಾಕದಿರಿ, ಇದರಿಂದ ಅನುಕೂಲತೆಗಳಿಗಿಂತ ಅನಾನುಕೂಲತೆಗಳೇ ಜಾಸ್ತಿ ಎನ್ನುತ್ತಾರೆ ವಿಜೀ. ವಯಸ್ಸಾದಂತೆ ಮಕ್ಕಳ ಮನಸ್ಸಿನ ಮನಸ್ಥಿತಿ ಹೊಂದುವ ತಂದೆ ತಾಯಿ ಅಜ್ಜ ಅಜ್ಜಿಯರನ್ನು ಒಂದು ಮಗುವಿನಂತೆಯೇ ಟ್ರೀಟ್ ಮಾಡಿ, ಅವರಿಗೆ ತಮ್ಮ ನೋವು ಮರೆಸುವ ಶಕ್ತಿ ನೀಡುವ ಕೆಲಸ ಮಕ್ಕಳದು.
ಇನ್ನೂ ನಟ ದುನಿಯಾ ವಿಜಯ್ ಅವರ ತಂದೆ ತಾಯಿಗೆ ಟ್ರೀಟ್ಮೆಂಟ್ ಮಾಡಲು ಸಹಾಯ ಮಾಡಿದ ಡಾ. ವಿದ್ಯಾನಂದರು ಹಾಗೂ ವಿಜೀಯವರ ಮನೆಗೇನೇ ಬಂದು ತಮ್ಮ ತಂದೆ ತಾಯಿಗೆ ಟ್ರೀಟ್ಮೆಂಟ್ ಕೊಟ್ಟ ಡಾ. ಈಶ್ವರ್ ಅವರಿಗೆ ಮನಪೂರ್ವಕವಾಗಿ ನಮಿಸುತ್ತಾ ಕೃತಜ್ಞತೆ ಸಲ್ಲಿಸಿದರು ನಟ ವಿಜಯ್.
ಕೊನೆಯದಾಗಿ ಒಂದೆರಡು ಮಾತು…
ಇದು ಒಬ್ಬರ ಮನೆಯ ಕಥೆಯಲ್ಲ, ಈ ರೀತಿ ಹಲವಾರು ಜನರು ಪ್ರಯತ್ನ ಪಟ್ಟು ತಮ್ಮ ಮನೆಯ ಹಿರಿಯರನ್ನು ಬದುಕಿಸಿಕೊಂಡಿದ್ದಾರೆ. ಇದೆ ರೀತಿಯಲ್ಲಿ ತಾವುಗಳು ಕೂಡ ಕಂಡೀಶನ್ ಅಷ್ಟೊಂದು ಸೀರಿಯಸ್ ಇಲ್ಲದಿದ್ದರೆ ಅಂದರೆ ಮೈಲ್ಡ್ ಸಿಂಪ್ಟಮ್ಸ್ ಇದ್ದರೆ ಅವರನ್ನು ಮನೆಯಲ್ಲಿಯೇ ಇಟ್ಟುಕೊಂಡು ಒಳ್ಳೆಯ ಡಾಕ್ಟರ್ ಸಹಾಯ ಪಡೆದು ಅವರನ್ನು ಬದುಕಿಸಿಕೊಳ್ಳಿ.
ಅಕಸ್ಮಾತ್ ಸಮಸ್ಯೆ ಗಂಭೀರ ಎಂದಿನಿಸಿದರೆ ಆಸ್ಪತ್ರೆಗೆ ಹೋಗಿ, ಅದು ಬಿಟ್ಟು ಬೆಡ್ ಸಿಗಲಿಲ್ಲವೆಂದು ಪರದಾಡಬೇಡಿ, ನಿಮ್ಮ ಪರದಾಟ ನೋಡಿ ಪಾಪ ಬದುಕುವ ಆಸೆ ಇದ್ದರು ಸಹ ಆ ರೋಗಿಗಳು ಬದುಕುವ ಸಾಧ್ಯತೆ ಕಡಿಮೆಯಾಗುತ್ತದೆ. ಇನ್ನೂ ಹೆಚ್ಚು ಹೇಳಬೇಕೆಂದರೆ ನಿಮ್ಮ ಸಾಂತ್ವನ ಮತ್ತು ಪ್ರೀತಿ ತುಂಬಿದ ಆರೈಕೆಯೇ ರೋಗಿಗಳಿಗೆ ಸಂಜೀವಿನಿ ಇದ್ದ ಹಾಗೆ.
ವೈದ್ಯರು ನೀಡುವ ಔಷದಿಗಳಿಗೆ ರೋಗಿಗಳ ಮನಸ್ಸು ಮೊದಲು ಸ್ಪಂಧಿಸಬೇಕು, ನಾನು ಬದುಕಬೇಕು ಬದುಕುತ್ತೇನೆ ಎಂಬ ಆಶಾ ಭಾವನೆ ರೋಗಿಗಳ ಮನಸ್ಸಲಿ ಮೂಡಿದರೆ ಅರ್ಧ ಸಾವನ್ನು ಗೆದ್ದಂತೆ, ನಿಮ್ಮ ಪ್ರೀತಿ ತುಂಬಿದ ಮಾತುಗಳು ಹಾಗೂ ಆರೈಕೆಯ ಕಾರಣದಿಂದಲಂತೂ ಅವರು ಪೂರ್ತಿಯಾಗಿ ಗುಣಮುಖರಾಗುವದರಲ್ಲಿ ಯಾವುದೇ ಸಂಶಯವೇ ಇಲ್ಲ.
ವಯಸ್ಸಾದ ಹಿರಿ ಜೀವಗಳು ಮಕ್ಕಳಂತಾಗುತ್ತಾರೆ ಅವರು ಏನು ಮಾಡುತ್ತಾರೆ, ಏನು ಮಾತಾಡುತ್ತಾರೆ ಎನ್ನುವುದು ಕೂಡ ತಿಳಿಯುತ್ತಿರುವುದಿಲ್ಲ, ಹೀಗಾಗಿ ವಯಸ್ಸಾದವರನ್ನು ಮಕ್ಕಳಂತೆ ನೋಡಿ ಕರೋನ ಅಷ್ಟೇ ಅಲ್ಲ ಯಾವ ರೋಗ ರುಜಿನ ಬಂದರೂ ಸಹ ಅಕಸ್ಮಾತ್ ಸಾಂಕ್ರಾಮಿಕ ರೋಗವಾಗಿದ್ದರು ಸಹ ನೀವು ಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿಕೊಂಡು ಅವರ ಆರೈಕೆ ಮಾಡಿ.
ಅವರಿಗೆ ಧೈರ್ಯ ತುಂಬಿಸಿ ಒಳ್ಳೆಯ ಊಟವನ್ನು ನೀಡಿ ಅವರನ್ನು ಬದುಕಿಸಿಕೊಳ್ಳಿ ಇಲ್ಲದಿದ್ದರೆ ಮನೆಗಳು ಹಿರಿಯರಿಲ್ಲದ ಗೂಡಿನಂತಾಗುತ್ತವೆ. ಕೊರೋನ ಗೆದ್ದು ಬಂದ ೆಷ್ಟೊ ತಾಯಂದಿರನ್ನು ಮಕ್ಕಳು ಮನೆಗೆ ಸೇರಿಸಿಕೊಳ್ಳದ ಪ್ರಕರಣಗಳನ್ನು ನಾವು ಪ್ರತಿದಿನ ನೋಡುತ್ತಿದ್ದೇವೆ, ಅವರಿಗೆ ಬಂದ ಪರಸ್ಥಿತಿ ನಿಮಗೂ ಬರಬಹುದು ಎಂಬುದು ನೆನಪಿರಲಿ.
-ಮಂಜುನಾಥ್