ಲಾಕ್ ಡೌನ್ ನಲ್ಲಿ ಪಿಂಪಲ್ ಚಿಕಿತ್ಸೆಗೆ ಇ-ಪಾಸ್ ಕೇಳಿದ ಭೂಪ : ತಲೆಗೆ ಕೈ ಹಚ್ಜಿ ಕುಳಿತ ಪೊಲೀಸರು
ಇದೊಂದು ವಿಚಿತ್ರ ಪ್ರಕರಣ, ವ್ಯಕ್ತಿಯೊಬ್ಬ ತನ್ನ ಮುಖದ ಮೇಲಿನ ಪಿಂಪಲ್ ಗೆ ಚಿಕಿತ್ಸೆ ಪಡೆಯಲು ತನ್ನ ಜಿಲ್ಲೆಯಿಂದ ಬೇರೆ ಜಿಲ್ಲೆಗೆ ಹೋಗಲು ಅನುಮತಿ ಕೇಳಿದ ಪ್ರಸಂಗ ನಡೆದಿದೆ! ಬಿಹಾರ ಕೇಡರ್ನ ಐಎಎಸ್ ಅಧಿಕಾರಿ ಮತ್ತು ಪೂರ್ಣಿಯಾದ ಡಿಎಂ ರಾಹುಲ್ ಕುಮಾರ್ ಇ-ಪಾಸ್ ಗಾಗಿ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಇ-ಪಾಸ್ ಬಯಸಿದ ಕಾರಣ ಈಗ ಎಲ್ಲರ ಹುಬ್ಬೇರಿಸಿದೆ.
ಕೊರೊನಾ ವೈರಸ್ ನಿಂದಾಗಿ ಅನೇಕ ರಾಜ್ಯಗಳಲ್ಲಿ ಲಾಕ್ ಡೌನ್ ವಿಧಿಸಲಾಗಿದೆ. ಬಿಹಾರದಲ್ಲಿ ಕೂಡ ಮೇ 15 ರವರೆಗೆ ಲಾಕ್ ಡೌನ್ ಇದೆ. ಯಾರಾದರೂ ವೈದ್ಯಕೀಯ ತುರ್ತುಸ್ಥಿತಿ ಅಥವಾ ಯಾವುದೇ ಪ್ರಮುಖ ಕೆಲಸದ ಮೇಲೆ ಮನೆಯಿಂದ ಹಾಗೂ ಊರಿಂದ ಹೊರಬರಲು ಬಯಸಿದರೆ ಅದಕ್ಕಾಗಿ ಇ-ಪಾಸ್ ಪಡೆಯಬೇಕಾಗಿದೆ.
ಇ-ಪಾಸ್ಗಾಗಿ ಅರ್ಜಿ ಸಲ್ಲಿಸುವಾಗ ಅವರು ಹೊರಟಿರುವ ಕಾರಣವನ್ನು ನೀಡಬೇಕು, ನಿಮ್ಮ ಕಾರಣ ಸಕಾರಣವಾಗಿದ್ದರೆ ಮಾತ್ರ ಹೊರಗೆ ಹೋಗಲು ನಿಮಗೆ ಅನುಮತಿ ಸಿಗುತ್ತದೆ. ಬಿಹಾರದ ಪೂರ್ಣಿಯಾ ಜಿಲ್ಲೆಯ ಡಿಎಂ ರಾಹುಲ್ ಕುಮಾರ್ ಅವರು ಫೋಟೋವನ್ನು ಟ್ವೀಟ್ ಮಾಡಿದ್ದಾರೆ, ಈ ಫೋಟೋ ಒಂದು ಅರ್ಜಿಯಾಗಿದ್ದು, ಇದರಲ್ಲಿ ಚಿಕಿತ್ಸೆಗಾಗಿ ಬೇರೆ ಜಿಲ್ಲೆಗೆ ಹೋಗಲು ಅನುಮತಿ ಕೋರಲಾಗಿದೆ.
ಚಿಕಿತ್ಸೆ ಏನಪ್ಪಾ ಅಂದ್ರೆ ಮುಖ ಮತ್ತು ತಲೆಯ ಭಾಗದಲ್ಲಿ ಕೆಲವು ಗುಳ್ಳೆಗಳಾಗಿವೆ, ಅವುಗಳಿಗೆ ಚಿಕಿತ್ಸೆ ಪಡೆಯಲು ಬರೀ ಆಸ್ಪತ್ರೆ ಅಲ್ಲ, ಬೇರೆ ಊರೂ ಅಲ್ಲ, ಜಿಲ್ಲಾದಿಂದಲೇ ಮತ್ತೊಂದು ಜಿಲ್ಲೆಗೆ ಹೋಗಬೇಕಂತೆ! ಲಾಕ್ ಡೌನ್ ಮಾಡಿರುವುದು, ಆರೋಗ್ಯ ಕಾರ್ಯಕರ್ತರು ಮತ್ತು ಪೊಲೀಸರು ಶ್ರಮಿಸುತ್ತಿರುವುದು ನಮ್ಮ ಸಲುವಾಘಿ, ನಾವು ಹೀಗೆ ಬೇಜವಾಬ್ದಾರಿಯಿಂದ ನಡೆದುಕೊಂಡರೆ ಹೇಗೆ?

ರಾಹುಲ್ ಕುಮಾರ್ ಬರೆದಿದ್ದಾರೆ : ಲಾಕ್ಡೌನ್ ಸಮಯದಲ್ಲಿ ಇ-ಪಾಸ್ ಗಳನ್ನು ಪಡೆಯಲು ಬಂದ ಹೆಚ್ಚಿನ ಅರ್ಜಿಗಳು ನಿಜವಾದವು. ಆದರೆ ಇಂಥಹ ಅರ್ಜಿಗಳೂ ಕೂಡ ಬಂದಿವೆ. ಸಹೋದರ ನಿಮ್ಮ ಮೊಡವೆಗಳ ಚಿಕಿತ್ಸೆ ಕಾಯಬಹುದು” ಎಂದಿದ್ದಾರೆ. ಆದರೆ ಪೊಲೀಸರು ಏನು ಮಾಡಬೇಕೊ ಗೊತ್ತಾಗದೇ ತಲೆಗೆ ಪೊಲೀಸರು ಕೈ ಹಚ್ಚಿ ಕುಳಿತಿದ್ದಾರೆ.
ರಾಹುಲ್ ಕುಮಾರ್ ಅವರ ಈ ಟ್ವೀಟ್ನಲ್ಲಿ ವಿಭಿನ್ನ ಪ್ರತಿಕ್ರಿಯೆಗಳು ಬರುತ್ತಿವೆ. ಕೆಲವರು ಇದನ್ನು ಕಾಮಿಡಿ ಎಂದರೆ, ಮತ್ತೆ ಕೆಲವರು ಸೂಕ್ಷ್ಮತೆ ಇಲ್ಲದವರು ಎಂದಿದ್ದಾರೆ. ತುಂಬಾ ಜನ ಅವರ ಈ ಅರ್ಜಿ ಕುರಿತು ಎರ್ರಾಬಿರ್ರಿ ಉಗಿದಿದ್ದಾರೆ. ನಿಮ್ಮಂಥವರಿಂದಲೇ ಕೊರೋನ ಹೆಚ್ಚುತ್ತಿರುವುದು ಎಂದು ಕೂಡ ಕೆಲವರು ಜರಿದಿದ್ದಾರೆ.
ಇನ್ನೂ ಕೆಲವರು, ನೀವೂ ಲಘುವಾಗಿ ತೆಗೆದುಕೊಳ್ಳಬೇಡಿ, ವೈದ್ಯಕೀಯ ತಜ್ಞರೊಂದಿಗೆ ಮಾತನಾಡಿದರೆ, ಮೊಡವೆಗಳಿಂದ ಖಿನ್ನತೆ ಮತ್ತು ಆತಂಕ ಉಂಟಾಗುತ್ತದೆ ಎಂದು ಗೊತ್ತಾಗುತ್ತದೆ. ಸಂಬಂಧಪಟ್ಟ ವ್ಯಕ್ತಿಯು ತನ್ನ ನೈಜ ಅನಾರೋಗ್ಯವನ್ನು ಮರೆಮಾಚುತ್ತಿದ್ದಾನೆ, ಏಕೆಂದರೆ ಅದು ಅವನ ಗೌಪ್ಯತೆಯ ವಿಷಯವಾಗಿದೆ. ಎಂದು ಆತನನ್ನು ಸಮರ್ಥಿಸಿಕೊಂಡಿದ್ದಾರೆ.
ಅವರು ವೈದ್ಯರ ಬಳಿಗೆ ಹೋಗಬೇಕೆ ಅಥವಾ ಬೇಡವೇ ಎಂಬುದು ಪರಿಸ್ಥಿತಿಯ ತೀವ್ರತೆಯನ್ನು ಅವಲಂಬಿಸಿರುತ್ತದೆ ಎಂದು ಅನೇಕ ಜನರು ಬರೆದಿದ್ದಾರೆ. ಆದರೆ ರಾಹುಲ್ ಕುಮಾರ್ ಅವರ ಪೋಸ್ಟ್ ನೋಡಿ ಅನೇಕ ಜನರು ನಕ್ಕರು. ಇಂತಹ ಸಮಯದಲ್ಲಿ ಅವರು ಜನರಿಗೆ ಕಾಮಿಕ್ ರಿಲೀಫ್ ನೀಡುತ್ತಿರುವುದು ಒಳ್ಳೆಯದು ಎಂದು ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ!
ಬಿಹಾರದಲ್ಲಿ ಕರೋನಾ ವೈರಸ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ನಿನ್ನೆ ಮೇ 5 ರಂದು ರಾಜ್ಯದಲ್ಲಿ 14,816 ಹೊಸ ಕರೋನಾ ಸೋಂಕಿನ ಪ್ರಕರಣಗಳು ಬಂದವು. ರಾಜ್ಯದಲ್ಲಿ ಕರೋನಾ ಸೋಂಕಿನ ಪ್ರಮಾಣವು 15.55 ಪ್ರತಿಶತದಷ್ಟಿದೆ. ಪಾಟ್ನಾದಲ್ಲಿ ಗರಿಷ್ಠ 2420 ಮತ್ತು ಪೂರ್ಣಿಯಾದಲ್ಲಿ 333 ಪ್ರಕರಣಗಳು ಪತ್ತೆಯಾಗಿವೆ.
-Team Infotrend