ಹತ್ತೇ ನಿಮಿಷದಲ್ಲಿ 10 ರೂಪಾಯಿಯ ಪರಿಸರ ಸ್ನೇಹಿ ಪೆನ್ ತಯಾರಿಸುವ ರಾಜು : ಈ ಪೆನ್ ಯಾವುದರಿಂದ ತಯಾರಿಸಿದ್ದಾರೆ ಗೊತ್ತಾ?
ಪ್ರಪಂಚದಾದ್ಯಂತ ಪರಿಸರ ಸಂರಕ್ಷಣೆಗಾಗಿ ಅನೇಕ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೂ ಪರಿಸರ ಸಂರಕ್ಷಣೆ ಎನ್ನುವುದು ಒಂದು ದೊಡ್ಡ ಸವಾಲಾಗಿದೆ. ಇದರ ನಡುವೆಯೇ ಕೆಲವು ವ್ಯಕ್ತಿಗಳು ಪರಿಸರದ ಸಂರಕ್ಷಣೆಗಾಗಿ ತಮ್ಮ ಮಟ್ಟದಲ್ಲಿಯೇ ತಮ್ಮಿಂದ ಆಗುವಂತಹ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅವರ ಪ್ರಯತ್ನಗಳು ಸಣ್ಣದಾದರೂ ಅವರಿಡುತ್ತಿರುವ ಅರ್ಥಪೂರ್ಣವಾದ ಹೆಜ್ಜೆಗಳು ಒಂದು ಸಾರ್ಥಕತೆಯನ್ನು ಮರೆಯುತ್ತಿವೆ. ಅನೇಕರಿಗೆ ಅದು ಮಾದರಿ ಹಾಗೂ ಸ್ಪೂರ್ತಿ ಆಗುತ್ತಿದೆ.
ಅಂತಹದೊಂದು ಪರಿಸರ ಪ್ರೇಮವನ್ನು ಮೆರೆಯುತ್ತಿದ್ದಾರೆ ತೆಲಂಗಾಣದ ವಾರಂಗಲ್ ನ ರಾಜು ಮುಪ್ಪರಕು. ಇವರು ಕಡಿಮೆ ವೆಚ್ಚದಲ್ಲಿ ಬೀದಿ ದೀಪಗಳಿಗೆ ಸೆನ್ಸಾರ್ ಗಳನ್ನು, ಬ್ಯಾಟರಿ ಚಾಲಿತ ವಾದ ಬೈಸಿಕಲ್ ಗಳನ್ನು ಸಿದ್ಧಪಡಿಸಿದ್ದಾರೆ. ಕಡಿಮೆ ವೆಚ್ಚದ ಇಂತಹ ಅನೇಕ ಆವಿಷ್ಕಾರಗಳನ್ನು ಮಾಡಿರುವ ಅವರು ಇದೇ ವರ್ಷ ಏಪ್ರಿಲ್ 27ಕ್ಕೆ ಮತ್ತೊಂದು ಹೊಸ ಆವಿಷ್ಕಾರವನ್ನು ಮಾಡಿದ್ದಾರೆ.

30 ವರ್ಷ ವಯಸ್ಸಿನ ರಾಜು ಅವರು ಜೋಳದ ಹೊಟ್ಟಿನಿಂದ ಅಥವಾ ಜೋಳದ ಮೇಲೆ ಇರುವ ಎಲೆಗಳ ಹಾಗಿನ ಸಿಪ್ಪೆಯಿಂದ ಪೆನ್ನುಗಳನ್ನು ಸಿದ್ಧಪಡಿಸಿದ್ದಾರೆ. ರಾಜು ಅವರು ತಮ್ಮ ಊರಿನ ಸುತ್ತಮುತ್ತ ಕೃಷಿಕರು ಹೆಚ್ಚಾಗಿ ಜೋಳವನ್ನು ಬೆಳೆಯುತ್ತಾರೆ, ಫಸಲು ಬಂದ ಮೇಲೆ ಜೋಳದ ಮೇಲಿನ ಸಿಪ್ಪೆ ಅಥವಾ ಅದರ ಹೊಟ್ಟನ್ನು ಬಿಡಿಸಿ ಜೋಳವನ್ನು ಮಾರುಕಟ್ಟೆಗೆ ಕಳುಹಿಸಿ ಮಾರಾಟ ಮಾಡುತ್ತಾರೆ.
ಹೀಗೆ ಜೋಳದಿಂದ ಪ್ರತ್ಯೇಕಿಸಿದ ಅದರ ಹೊಟ್ಟು ವ್ಯರ್ಥ ಎನ್ನುವ ಕಾರಣದಿಂದಾಗಿ ಅದನ್ನು ಸುಟ್ಟು ಹಾಕಲಾಗುತ್ತದೆ. ಆದರೆ ಹಾಗೆ ಸುಡುವುದರ ಬದಲು ಅದರಿಂದ ಏನಾದರೂ ಒಂದು ಉಪಯುಕ್ತವಾದ ವಸ್ತುವನ್ನು ತಯಾರಿಸುವ ಬಗ್ಗೆ ತಾನು ಆಲೋಚನೆ ಮಾಡಿದ್ದಾಗಿ ಹೇಳುತ್ತಾರೆ.
ಶಾಲೆಯ ದಿನಗಳಲ್ಲಿ ಅವರು ಕಲಿತುಕೊಂಡಿದ್ದ ಕೌಶಲ್ಯವನ್ನು ನೆನಪಿನಲ್ಲಿ ಇರಿಸಿಕೊಂಡು ಜೋಳದ ಸಿಪ್ಪೆಯಿಂದ ಪೆನ್ನಿನ ರೀಫಿಲ್ ತಯಾರುಮಾಡಲು ಆಲೋಚಿಸಿದರು. ಅದಕ್ಕಾಗಿ ಜೋಳದ ಹೊಟ್ಟಿಗೆ ಅವರು ಸಿಲೆಂಡರ್ ಆಕಾರವನ್ನು ನೀಡಲು ನಿರ್ಧರಿಸಿದರು.

ಜೋಳದ ಹೊಟ್ಟಿನಿಂದ ನೂರಾರು ಪೆನ್ನುಗಳನ್ನು ಸಿದ್ಧಪಡಿಸಿರುವ ರಾಜು ಅವರು ಉಪಯೋಗಿಸಿ ಎಸೆಯುವ ಈ ಪೆನ್ನುಗಳನ್ನು ಬಳಸುವುದರ ಮೂಲಕ ನಾವು ಮೂಲಕ ಪ್ಲಾಸ್ಟಿಕ್ ತ್ಯಾಜ್ಯದ ಪ್ರಮಾಣವನ್ನು ಕಡಿಮೆ ಮಾಡಬಹುದು ಹಾಗೂ ಜೋಳದ ಹೊಟ್ಟು ಸುಡುವುದನ್ನು ಕೂಡಾ ತಪ್ಪಿಸಬಹುದು ಎಂದು ಹೇಳಿದ್ದಾರೆ.
ಪೆನ್ನನ್ನು ಸಿದ್ಧಪಡಿಸುವ ಆಲೋಚನೆ ಮಾಡಿದ ಮೇಲೆ ಅವರು ಜೋಳದ ತೋಟಗಳ ಬಳಿಗೆ ಹೋಗಿ ಅಲ್ಲಿಂದ ಅದರ ಹೊಟ್ಟನ್ನು ಸಂಗ್ರಹಿಸಿದರು. ಅದನ್ನು ನೀರಿನಿಂದ ನೆನೆಸಿದ ಬಟ್ಟೆಯಿಂದ ಸ್ವಚ್ಛವಾಗಿ ಒರೆಸಿ ಟೇಬಲ್ ಮೇಲೆ ಇಟ್ಟು, ಕೈಯಿಂದಲೇ ಅದನ್ನು ಸಮತಟ್ಟಾಗಿ ಮಾಡಿ, ಅನಂತರ ಒಂದು ಕಟಿಂಗ್ ಮಿಷನ್ ನ ಸಹಾಯದಿಂದ ಅವುಗಳಿಗೆ ಆಯತ ಆಕಾರವನ್ನು ನೀಡಲಾಯಿತು ಎಂದು ಹೇಳಿದ್ದಾರೆ.
ಪರಿಸರ ಸ್ನೇಹಿ ಪೆನ್ ತಯಾರು ಮಾಡುವ ಉದ್ದೇಶದಿಂದ ಒಂದು ಲೋಹದ ರಾಡ್ ಮತ್ತು ಅಳತೆ ಮಾಪಕವನ್ನು ಬಳಸಿಕೊಂಡಿದ್ದರು ಎನ್ನಲಾಗಿದ್ದು, ಅದಕ್ಕೆ ಜೋಳದ ಹೊಟ್ಟನ್ನು ಆ ರಾಡ್ ಗೆ ಸುತ್ತಿ ಇಡುತ್ತಿದ್ದರು. ನಿರ್ದಿಷ್ಟ ಅವಧಿಯ ನಂತರ ರಾಡನ್ನು ತೆಗೆದ ನಂತರ ಜೋಳದ ಹೊಟ್ಟು ಸಿಲಿಂಡ್ರಿಕಲ್ ಆಕಾರದಲ್ಲಿ ಇರುತ್ತಿತ್ತು.

ಮೇಲ್ಭಾಗ ಮತ್ತು ಕೆಳಭಾಗ ತೆರೆದಿರುವಂತೆ ಇದ್ದು, ಮೇಲಿನಿಂದ ರೀಫಿಲ್ ಅನ್ನು ಹಾಕಲಾಗುತ್ತದೆ. ಅದು ಜೋಳದ ಹೊಟ್ಟಿನ ಪೆನ್ ಒಳಗೆ ಅಚ್ಚುಕಟ್ಟಾಗಿ ಕೂರುವವರೆಗೂ ಹೊರಗಿನಿಂದ ಬಿಗಿಗೊಳಿಸಲಾಗುತ್ತದೆ. ಅನಂತರ ಪೆನ್ನಿನ ಹಿಂಭಾಗವನ್ನು ಚುಚ್ಚುವ ಮೂಲಕ ಆದಾಗ ಮುಚ್ಚಲ್ಪಡುತ್ತದೆ. ಮುಂದಿನ ಭಾಗವೂ ಕೂಡ ಅದೇ ರೀತಿಯ ಮುಚ್ಚಲ್ಪಡುತ್ತದೆ.
ಪೆನ್ನಿನ ಕ್ಯಾಪ್ ತಯಾರುಮಾಡಲು ಸಹಾ ಅವರು ಜೋಳದ ಹೊಟ್ಟನ್ನು ಬಳಸಿಕೊಳ್ಳುತ್ತಾರೆ. ರಾಜು ಅವರು ತಯಾರಿಸುವ ಈ ಪರಿಸರ ಪ್ರೇಮಿ ಪೆನ್ನಿನ ಬೆಲೆ 10 ರೂ. ಮಾತ್ರವೇ ಆಗಿದ್ದು, ಇದು ಪರಿಸರಕ್ಕೆ ಹಾನಿ ಉಂಟು ಮಾಡುವುದಿಲ್ಲ ಎನ್ನುವುದು ಬಹಳ ವಿಶೇಷ.
ಅವರು ಮೊದಲ ಪೆನ್ ತಯಾರು ಮಾಡಿ ಅದರಿಂದ ಬರೆಯಲು ಆರಂಭಿಸಿದಾಗ ಅದು ಇತರೆ ಸಾಮಾನ್ಯ ಪೆನ್ ಗಳ ಮಾದರಿಯಲ್ಲೇ ಇತ್ತು ಎನ್ನುತ್ತಾರೆ ರಾಜು. ಸಾವಿರ ಪೆನ್ನುಗಳನ್ನು ಸಿದ್ದಪಡಿಸುವ ಯೋಜನೆ ಮಾಡಿರುವ ಅವರು ಇನ್ನುಳಿದ 900 ಪೆನ್ನುಗಳ ಕಡೆಗೆ ಗಮನವನ್ನು ಹರಿಸಿದ್ದಾರೆ.
-Team Infotrend