ಹಾವು-ಇಲಿ ಬೇಟೆ! ಹಾವಿನ ಬಾಯಿಯಿಂದ ತಪ್ಪಿಸಿಕೊಳ್ಳಲು ಇಲಿ ಮಾಡಿತು ಅಮೋಘ ಪ್ರಯತ್ನ; ಸೌತ್ ಸ್ಟಾರ್ ಎಂದ ನೆಟ್ಟಿಗರು.
ವೈಲ್ಡ್ ಫೋಟೋಗ್ರಾಫರ್ ಗಳು ಕೆಲವೊಂದು ದೃಶ್ಯಗಳನ್ನು ಸೆರೆ ಹಿಡಿಯಲು ತುಂಬಾ ಪರಿಶ್ರಮ ಪಡುತ್ತಾರೆ. ಈ ಫೋಟೋಗ್ರಾಫರ್ ಗಳು ಎಷ್ಟೋ ಸಲ ವರ್ಷವರ್ಷಗಳವರೆಗೆ ಕಾಡಿನಲ್ಲಿ ಜೀವನ ತೆಗೆಯುತ್ತಾರೆ. ಅಂದಾಗ ಮಾತ್ರ ಕಾಡಿನಲ್ಲಿ ಜೀವಿಸುವ ಪ್ರಾಣಿಗಳ ಅದ್ಭುತ ಅಷ್ಟೇ ರೋಚಕ ದೃಶ್ಯಗಳನ್ನು ಸೆರೆ ಹಿಡಿಯಲು ಸಾಧ್ಯವಾಗುತ್ತದೆ. ಇವರ ಸಂಯಮ ಅಗಾಧವಾಗಿರುತ್ತದೆ. ಇಂತಹ ಸೀನ್ಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿಯುವ ಸಲುವಾಗಿ ಅನೇಕ ಗಂಟೆಗಳವರೆಗೆ ಅಲುಗಾಡದೆ ಒಂದೇ ಪೊಸಿಷನ್ನಲ್ಲಿ ಕುಳಿತುಕೊಳ್ಳುತ್ತಾರೆ. ಎಷ್ಟೋ ಸಲ ಹಗಲು ಬಿಡಿ, ರಾತ್ರಿಯೂ ಸಹ ನಿದ್ರೆ ಇಲ್ಲದೆ ಕ್ಯಾಮೆರಾ ತೆಗೆದುಕೊಂಡು ಕುಳಿತಿರುತ್ತಾರೆ.
ಸದ್ಯ ಇಲ್ಲಿ ನೋಡಲಿರುವ ಒಂದು ವಿಶೇಷ ವಿಡಿಯೋ ನಿಮ್ಮ ಹೃದಯವನ್ನು ಗೆಲ್ಲಬಹುದು. ಪ್ರಸ್ತುತ ವಿಡಿಯೋದಲ್ಲಿಯ ದೃಶ್ಯ ರಾತ್ರಿಯಲ್ಲಿ ಸೆರೆಹಿಡಿದದ್ದಾಗಿದೆ. ಇಲ್ಲಿ ಒಂದು ಹಾವು ಬೇಟೆಯಾಡುವ ದೃಶ್ಯ ಕಂಡುಬರುತ್ತಿದೆ. ಇಲ್ಲಿಯ ಹೋರಾಟ ಸೆರೆ ಹಿಡಿದಿರುವ ಶ್ರೇಯ ನಿಜಕ್ಕೂ ಕ್ಯಾಮೆರಾಮನ್ ನ ಪರಿಶ್ರಮವೇ ಎನ್ನಬೇಕು. ಹಾವು ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಇಲಿಯ ಬೇಟೆಯಾಡುತ್ತಿದ್ದರೆ, ಇಲಿ ತಾನು ಬದುಕುಳಿಯಲು ಅದ್ಭುತ ಹೋರಾಟ ಮಾಡಿದೆ.
ವಿಡಿಯೋದ ದೃಶ್ಯದಲ್ಲಿ ಕಂಡುಬರುವ ಪ್ರಕಾರ ಕಿರುಗುಟ್ಟುವ ರಾತ್ರಿಯ ಸಮಯದಲ್ಲಿ ಹಾವೊಂದು ಇಲಿಯ ಬೇಟೆಯಾಡಲು ಕತ್ತಲಲ್ಲಿ ಹೊಂಚು ಹಾಕಿ ಕಾದು ಕುಳಿತಿದೆ. ಈ ಸ್ಮಶಾನ ಮೌನದಲ್ಲಿ ಇಲಿಯು ತನ್ನ ಹೊಟ್ಟೆಪಾಡಿಗಾಗಿ ಅತ್ತಿತ್ತ ಮೂಸಿ ನೋಡಿ ಸಿಕ್ಕಿದ್ದನ್ನು ತಿನ್ನುತ್ತಿದೆ. ಹಾವು ತನ್ನ ಮುಂದೆ ಓಡಾಡುತ್ತಿರುವ ಇಲಿಯನ್ನು ಸಮಯ ನೋಡಿ ನುಂಗುವ ಹುನ್ನಾರದಲ್ಲಿ ಕುಳಿತಿದೆ. ಇನ್ನೇನು ಇಲಿಯನ್ನು ಹಾವು ಸರಿಯಾಗಿ ಜಂಪ್ ಮಾಡಿ ತನ್ನ ಬಾಯಿಯಲ್ಲಿ ಕ್ಯಾಚ್ ಮಾಡಬೇಕು ಎಂದು ಮುಂದೆ ಸರಿದಾಗ ಅಲ್ಲಿ ನಡೆದ ಹೋರಾಟ ನಿಜಕ್ಕೂ ಅದ್ಭುತವಾಗಿತ್ತು.
ಇಲಿ ತನ್ನ ಜೀವ ಉಳಿಸಿಕೊಳ್ಳುವ ಸಲುವಾಗಿ ಮಾಡಿದ ಒಂದೊಂದು ಪ್ರಯತ್ನ ಕ್ಯಾಮೆರಾದಲ್ಲಿ ಅದ್ಭುತವಾಗಿ ಸೆರೆಯಾಗಿದೆ. ಈ ಪ್ರಯತ್ನದಲ್ಲಿ ಇಲಿಯು ಹಾವಿನ ಜೊತೆಗೆ ಯಾವ ರೀತಿಯಾಗಿ ಫೈಟ್ ಮಾಡಿ, ತನ್ನ ಜೀವವನ್ನು ಉಳಿಸಿಕೊಂಡು ಅಲ್ಲಿಂದ ಓಡಿದೆ ಎಂಬುದನ್ನು ಈ ವಿಡಿಯೋದಲ್ಲಿ ನೋಡಿ.
ನೋಡಿ ಈ ವಿಡಿಯೋ…
View this post on Instagram
ನೋಡಿದಿರಲ್ಲ ಮಿತ್ರರೇ ಈ ವಿಡಿಯೋ? ಇಲಿ ಇಲ್ಲಿ ಚಲನಚಿತ್ರದಲ್ಲಿ ಕಂಡುಬರುವ ಕಿಕ್ ಯೂಸ್ ಮಾಡಿದೆ. ತನ್ನ ಶಕ್ತಿಯುತವಾದ ಕಿಕ್ ನಿಂದಾಗಿ ತನಗಿಂತಲೂ ದೊಡ್ಡದಾದ ಹಾವನ್ನು ಸುಮಾರು ಎರಡರಿಂದ ಮೂರು ಅಡಿ ದೂರ ತಳ್ಳಿದೆ.
ಈ ಸುಂದರವಾದ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ instagram ನಲ್ಲಿ paridhi _080 ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ 7.9 ಮಿಲಿಯನ್ ವೀಕ್ಷಣೆ ಪಡೆದಿದ್ದು ಸುಮಾರು ಒಂದು ಮಿಲಿಯನ್ ಲೈಕ್ಸ್ ಗಳನ್ನು ಪಡೆಯುವತ್ತ ಸಾಗುತ್ತಿದೆ.
ಕಮೆಂಟ್ಸ್ ಗಳ ಬಗ್ಗೆ ಹೇಳುವುದಾದರೆ ಪ್ರಸ್ತುತ ವಿಡಿಯೋ ನೋಡಿ ನೆಟ್ಟಿಗರು ತುಂಬಾ ತಮಾಷೆಯ ಕಮೆಂಟ್ಗಳನ್ನು ಮಾಡಿದ್ದಾರೆ. ಒಬ್ಬ ಯುಸರ್ ಹಾವಿಗೆ “ನೀನೆಂತ ಹಾವು?” ಎಂದಿದ್ದಾನೆ. ಇನ್ನೊಬ್ಬ ಯೂಸರ್ ಈ ಇಲಿ ಬಹುಶಃ ಸೌತ್ ಸ್ಟಾರ್ ಗಳ ಮೂವಿ ನೋಡಿರಬೇಕು ಎಂದಿದ್ದಾನೆ. ಮೂರನೇ ನೆಟ್ಟಿಗ ಪ್ರಸ್ತುತ ಇಲಿ ಜಾಕಿಚಾನ್ ನಿಂದ ಟ್ರೇನಿಂಗ ತೆಗೆದುಕೊಂಡಿದೆ ಎಂದಿದ್ದಾನೆ.