VIDEO : ಆನೆ ಕ್ರಿಕೆಟ್ ಆಡುವುದನ್ನು ನೋಡಿದ್ದಿರಾ? ಸೆಹ್ವಾಗ್ ಶೇರ್ ಮಾಡಿದ ಆನೆ ಬ್ಯಾಟಿಂಗ್ ಮಾಡುವ ವಿಡಿಯೊ ಇಲ್ಲಿದೆ ನೋಡಿ!
ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಅವರು ಆಗಾಗ್ಗೆ ಆಟಗಾರರ ಬಗ್ಗೆ ಮತ್ತು ಅವರ ಫಾರ್ಮ್ ಬಗ್ಗೆ ಪ್ರತಿಕ್ರಿಯಿಸುತ್ತಲೇ ಇರುತ್ತಾರೆ. ಇದಲ್ಲದೆ ಅವರು ಇತರೆ ವಿಷಯಗಳ ಬಗ್ಗೆಯೂ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತಪಡಿಸುತ್ತಿರುತ್ತಾರೆ.
ಆಗಾಗ ತಮಾಷೆಯ ವೀಡಿಯೊಗಳನ್ನು ಕೂಡ ಹಂಚಿಕೊಳ್ಳುವ ಸೆಹ್ವಾಗ್ ನಿನ್ನೆ ಅಂತಹ ಒಂದು ತಮಾಷೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ವೀರೇಂದ್ರ ಸೆಹ್ವಾಗ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದರಲ್ಲಿ ಆನೆ ಕ್ರಿಕೆಟ್ ಆಡುತ್ತಿರುವುದು ಕಂಡುಬರುತ್ತದೆ.
ಸಾಮಾನ್ಯವಾಗಿ ಕೆಲವು ಪ್ರಾಣಿಗಳು ಫಿಲ್ಡಿಂಗ್ ಮಾಡುವುದನ್ನು ಅಂದರೆ ಚೆಂಡು ತಂದು ಕೊಡುವುದನ್ನು ನಾವು ನೋಡಿದ್ದೇವೆ. ಆದರೆ ಯಾವುದಾದರೂ ಪ್ರಾಣಿ ಬ್ಯಾಟ್ ಹಿಡಿದು ಬ್ಯಾಟಿಂಗ್ ಮಾಡಿದ ಉದಾಹರಣೆ ಇಲ್ಲ. ಅದಕ್ಕಾಗೇ ಸೆಹ್ವಾಗ್ ಹಂಚಿಕೊಂಡಿರುವ ವಿಡಿಯೊ ವಿಶಿಷ್ಟವಾಗಿದೆ.
ಆನೆ ಬ್ಯಾಟಿಂಗ್ :
ಇನ್ಸ್ಟಾಗ್ರಾಮ್ನಲ್ಲಿ ವೀರೇಂದ್ರ ಸೆಹ್ವಾಗ್ ಹಂಚಿಕೊಂಡಿರುವ ವಿಡಿಯೋದಲ್ಲಿ ಆನೆ ಬ್ಯಾಟಿಂಗ್ ಮಾಡುವುದನ್ನು ಕಾಣಬಹುದು. ಒಬ್ಬ ವ್ಯಕ್ತಿಯು ಆನೆಗೆ ಬೌಲಿಂಗ್ ಮಾಡುತ್ತಿದ್ದಾನೆ. ಫಿಲ್ಡಿಂಗ್ ಮಾಡಲು ಕೂಡ ಕೆಲವರು ಆನೆಯ ಬಳಿ ನಿಂತಿದ್ದಾರೆ. ಒಬ್ಬ ಕೀಪರ್ ಕೂಡ ಇದ್ದಾನೆ. ಆನೆ ತನ್ನ ಸೊಂಡಿಲಲ್ಲಿ ಬ್ಯಾಟ್ ಹಿಡಿದಿದ್ದು, ಬರುವ ಬಾಲ್ ಗಳನ್ನು ಮನುಷ್ಯರಂತೆಯೇ ಹೊಡೆಯುತ್ತಿದೆ.
ಹರ್ಭಜನ್ ಸಿಂಗ್ ಕೂಡ ಪ್ರತಿಕ್ರಿಯಿಸಿದ್ದಾರೆ :
ಆನೆ ಕ್ರಿಕೆಟ್ ಆಡುವ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿ ಎಲ್ಲರಿಗೂ ಆಶ್ಚರ್ಯವಾಗುತ್ತಿದೆ. ವೀರೇಂದ್ರ ಸೆಹ್ವಾಗ್ ಅವರ ಈ ಪೋಸ್ಟ್ ಬಗ್ಗೆ ಕ್ರಿಕೆಟಿಗ ಹರ್ಭಜನ್ ಸಿಂಗ್ ಕೂಡ ಕಾಮೆಂಟ್ ಮಾಡಿದ್ದಾರೆ. ಹರ್ಭಜನ್ ಅವರು ವಾಹ್, ವಾಹ್ ಅಂತ ಹಾರ್ಟ್ ಎಮೋಜಿಯೊಂದಿಗೆ ಕಾಮೆಂಟಿಸಿದ್ದಾರೆ.
-Team Infotrend