VIDEO : ಆನೆಯ ಸೊಂಡಿಲನ್ನು ಹಿಡಿದ ಮೊಸಳೆ : ನಂತರ ಆನೆಗಳು ಏನು ಮಾಡಿದವು ನೋಡಿ ರೋಚಕ ವಿಡಿಯೋ

ಹಸಿದಿರುವಾಗ ಅದು ಮನುಷ್ಯನಾಗಿರಲಿ ಅಥವಾ ಪ್ರಾಣಿಯಾಗಿರಲಿ ಎಲ್ಲರೂ ಚಡಪಡಿಸುತ್ತಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಆಹಾರವನ್ನು ಹುಡುಕುತ್ತಾ ಅಲ್ಲಿ ಇಲ್ಲಿ ಅಲೆದಾಡುವುದು ಸಹಜ. ಹುಲಿ, ಸಿಂಹ, ಚಿರತೆಗಳಷ್ಟೇ ಅಲ್ಲ ನೀರಿನಲ್ಲಿ ವಾಸಿಸುವ ಮೊಸಳೆಗಳು ಸಹ ದೊಡ್ಡ ಬೇಟೆಗಾರ ಜೀವಿ. ಈ ದಿನಗಳಲ್ಲಿ ಮೊಸಳೆ ಆನೆಗಳ ಹಿಂಡಿನ ಮೇಲೆ ದಾ'”ಳಿ ಮಾಡಿರುವ ಒಂದು ರೋಚಕ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಪ್ರಾಣಿಗಳ ವೀಡಿಯೊಗಳು ತುಂಬಾ ಇಷ್ಟವಾಗುತ್ತವೆ. ವನ್ಯಜೀವಿಗಳ ಬಗ್ಗೆ ಆಸಕ್ತಿ ಹೊಂದಿರುವವರು ಹೆಚ್ಚಿನ ಸಮಯವನ್ನು ಕಾಡುಗಳಲ್ಲಿ ಕಳೆಯುತ್ತಾರೆ ಇದರಿಂದ ಅವರು ಕೆಲವು ಅದ್ಭುತ ಚಿತ್ರ ಅಥವಾ ವೀಡಿಯೊವನ್ನು ಪಡೆಯಬಹುದು. ಅಂತಹ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಈ ದಿನಗಳಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿದೆ.

ಒಂದು ಮೊಸಳೆ ಆನೆಯನ್ನು ಬೇಟೆಯಾಡಲು ಪ್ರಯತ್ನಿಸುವುದನ್ನು ವಿಡಿಯೊದಲ್ಲಿ ಕಾಣಬಹುದು. ಕೊಳದ ದಂಡೆಯಲ್ಲಿ ನೀರು ಕುಡಿಯಲು ಆನೆಗಳ ಹಿಂಡು ಬಂದಿರುತ್ತವೆ. ಆಗ ಇದ್ದಕ್ಕಿದ್ದಂತೆ ಒಂದು ಮೊಸಳೆ ಆನೆಯ ಮೇಲೆರಗಿ ಅವುಗಳಲ್ಲಿ ಒಂದು ಆನೆಯ ಸೊಂಡಿಲನ್ನು ಹಿಡಿಯುತ್ತದೆ.

ಮೊಸಳೆಯ ತೀಕ್ಷ್ಣವಾದ ಹಾಗೂ ಬಲಶಾಲಿಯಾದ ದವಡೆಗಳ ಹಿಡಿತದಿಂದ ಬಿಡಿಸಿಕೊಳ್ಳಲು ಆನೆಯಂಥ ಆನೆಗೇ ಸಾಧ್ಯವಾಗುವುದಿಲ್ಲ. ಆನೆಯು ಸಹ ಕಡಿಮೆ ಶಕ್ತಿಯದೇನಲ್ಲ, ಆನೆ ಆ ಮೊಸಳೆಯನ್ನು ನೀರಿನಿಂದ ಹೊರಗೆ ಎಳೆಯುತ್ತದೆ. ಎರಡೂ ಬಿಟ್ಟುಕೊಡಲು ಸಿದ್ಧರಿರಲ್ಲ. ಆಗ ಓಡಿಹೊಂಟಿದ್ದ ಇತರೆ ಆನೆಗಳಲ್ಲಿ ಒಂದು ವಾಪಸ್ ಬಂದಿತು.

ಆ ಆನೆ ಸಹ ತನ್ನ ಸಂಗಾತಿಗೆ ಸಹಾಯ ಮಾಡಲು ಬರುತ್ತದೆ ಮತ್ತು ಎರಡೂ ಶಕ್ತಿಶಾಲಿ ಜೀವಿಗಳು ಒಟ್ಟಾಗಿ ಮೊಸಳೆಯನ್ನು ನೀರಿಗೆ ಮರಳುವಂತೆ ಮಾಡುತ್ತವೆ. ಮೊಸಳೆಯ ತಂತ್ರವು ಆನೆಯ ಶಕ್ತಿಯ ಮುಂದೆ ಪ್ರಯೋಜನವಾಗುವುದಿಲ್ಲ. ಸಹಾಯ ಮಾಡಲು ಬಂದ ಆನೆ ಮೊಸಳೆಯನ್ನು ತುಳಿಯಲು ಹೋಗುತ್ತದೆ. ಆಗ ಮೊಸಳೆ ಹೆದರಿ ಹಿಂಜರಿಯುತ್ತದೆ.

ಈ ಶಾ’ಕಿಂ’ಗ್ ವೀಡಿಯೊವನ್ನು ಟ್ವಿಟರ್‌ ನಲ್ಲಿ ಲೈಫ್ ಅಂಡ್ ನೇಚರ್ ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಜನರು ಈ ವೀಡಿಯೊವನ್ನು ತುಂಬಾ ಇಷ್ಟಪಡುತ್ತಿದ್ದಾರೆ. ಮೊಸಳೆ ಮತ್ತು ಆನೆಗಳ ನಡುವೆ ಮೊದಲ ಬಾರಿಗೆ ಈ ರೀತಿ ಹೋ’ರಾ’ಟ ನೋಡುತ್ತಿದ್ದೇವೆ ಎಂದು ಜನರು ಹೇಳಿದ್ದಾರೆ. ಸಾಕಷ್ಟು ಜನರು ಈ ವೀಡಿಯೊ ಕ್ಲಿಪ್ ಅನ್ನು ಹಂಚಿಕೊಳ್ಳುತ್ತಿದ್ದಾರೆ.

ಈ ವಿಡಿಯೊ ಬಗ್ಗೆ ವಿಭಿನ್ನ ರೀತಿಯ ಕಾಮೆಂಟ್‌ಗಳನ್ನು ಮತ್ತು ಪ್ರತಿಕ್ರಿಯೆಗಳನ್ನು ಜನರು ನೀಡುತ್ತಿದ್ದಾರೆ. ವಿಡಿಯೊ ಮೇಲೆ ಇದ್ದು, ನೋಡಿ ಹಾಗೂ ತಮಗೆ ಏನನಿಸುತ್ತದೆ ಕಾಮೆಂಟ್ ಮಾಡಿ…
-Team Infotrend