VIDEO : ಕೊನೆಯುಸಿರೆಳೆಯವ ಕೊನೆಯ ಕ್ಷಣದಲ್ಲೂ ತನ್ನ ಪ್ರೀತಿಪಾತ್ರನ್ನು ನೆನೆದು ಭಾವುಕವಾದ ಚಿಂಪಾಂಜಿಯ ಮನಕಲಕುವ ವಿಡಿಯೊ
ಪ್ರಾಣಿಗಳೇ ಹಾಗೆ, ಮನುಷ್ಯರನ್ನು ಇನ್ನಿಲ್ಲದಂತೆ ಪ್ರೀತಿಸಿಬಿಡುತ್ತವೆ. ಆತನಿಗಾಗಿ ಪ್ರಾ’ಣ ಕೊಡಲೂ ಅವು ಹಿಂಜರಿಯುವುದಿಲ್ಲ. ಬೆಕ್ಕು, ನಾಯಿ, ಹಸು ಸೇರಿದಂತೆ ಅನೇಕ ಪ್ರಾಣಿಗಳು ತಮ್ಮನ್ನು ಸಾಕುವವರಿಗೆ ಕೊನೆಯ ಕ್ಷಣದವರೆಗೂ ನಿಯತ್ತಾಗಿ ಬದುಕುತ್ತವೆ. ಹೃದಯದಾಳದಿಂದ ಪ್ರೀತಿಸುತ್ತವೆ. ಇಲ್ಲೊಂದು ಚಿಂಪಾಂಜಿಯದೂ ಇದೇ ಕಥೆ ನೋಡಿ…
ಇದೊಂದು ಭಾವನಾತ್ಮಕ ದೃಶ್ಯ, ಎಂಥವರನ್ನು ಕರಗಿಸುತ್ತದೆ. ಚಿಂಪಾಂಜಿ ತನ್ನ ಜೀವನದ ಕೊನೆ ಕ್ಷಣದಲ್ಲಿ ತನಗೆ ಅತ್ಯಂತ ಪ್ರೀತಿಪಾತ್ರನಾದ ಹಳೆಯ ಸ್ನೇಹಿತನನ್ನು ನೋಡಿತು. ಆತನ ಸ್ಪರ್ಶ, ಆತನ ಮಾತು ಸಂಪೂರ್ಣ ನಿಸ್ತೇಜವಾಗಿ ಮಲಗಿದ್ದ ಅದಕ್ಕೆ ಗೊತ್ತಾಯಿತು, ಎಚ್ಚರವಾಗಿ ಖುಷಿಯಿಂದ ಪ್ರತಿಕ್ರಿಯಿಸಿತು.
ಪ್ರಾಣಿಗಳಾದರೇನು, ತಮ್ಮ ಪ್ರೀತಿ ಹಾಗೂ ಭಾವನೆಯನ್ನು ಸ್ಪಷ್ಟವಾಗಿ ತೋರ್ಪಡಿಸಬಲ್ಲವು ಎಂಬುದಕ್ಕೆ ಇದು ನಿಚ್ಚಳವಾದ ವಿಡಿಯೊ. ಸಾಕಷ್ಟು ವಯಸ್ಸಾಗಿದ್ದ ಚಿಪಾಂಜಿ ತನ್ನ ಕೊನೆ ಕ್ಷಣದಲ್ಲಿ ತಂಬಾ ವರ್ಷದಿಂದ ತನ್ನ ಸ್ನೇಹಿತನಾಗಿದ್ದ ವ್ಯಕ್ತಿಯನ್ನು ಗುರುತಿಸಿ ಆತನ ಗಲ್ಲ ಸವರಿತು, ತಲೆ ನೇವರಿಸಿತು, ಹತ್ತಿರ ಎಳೆದುಕೊಂಡು ಮುದ್ದಿಸಿತು.
ಮನೆಯ ಹಿರಿಯರು ಕೊನೆ ಉಸಿರು ತಗೆದುಕೊಳ್ಳುತ್ತಿರುವಾಗ ಹೇಗೆ ಪ್ರತಕ್ರಿಯಿಸುತ್ತಾರೊ, ಹಾಗೇಯೇ ಇತ್ತು ಇಲ್ಲಿ ಚಿಂಪಾಂಜಿಯ ವರ್ತನೆ. 2 ನಿಮಿಷ 20 ಸೆಕೆಂಡಿನ ಈ ವಿಡಿಯೊದಲ್ಲಿ ಮೊದಲು ಸಂಪೂರ್ಣ ಶಕ್ತಿ ಕಳೆದುಕೊಂಡು ಮಲಗಿರುತ್ತದೆ. ನಂತರ ತನ್ನನ್ನು ಈ ಮೊದಲು ಪ್ರೀತಿಯಿಂದ ನೋಡಿಕೊಂಡ ಪ್ರೊಫೆಸರ್ ಜಾನ್ ವ್ಯಾನ್ ಹೂಫ್ ರವರು ಅಲ್ಲಿಗೆ ಬಂದಾಗ ಗುರುತಿಸಿ ಎದ್ದು ಪ್ರೀತಿಯಿಂದ ಮಾತಾಡಿಸಿತು.
Damn. Made me tear up. Clearly, we’ve evolved in the wrong direction… pic.twitter.com/rKR8sOX8yy
— anand mahindra (@anandmahindra) June 15, 2021
ಅಷ್ಟರವರೆಗೆ ಕೈ ಕೂಡ ಎತ್ತಲಾರದೆ ಮಲಗಿದ್ದ ಅದು, ಪ್ರೊಫೆಸರ್ ರವರನ್ನು ಕಂಡ ಕೂಡಲೇ ಯಾವುದೋ ಶಕ್ತಿ ಬಂದಂತಾಗಿ ಮುಖದಲ್ಲಿ ಕಳೆ ಬಂದಿತು, ತಲೆ ಎತ್ತಿ ನೋಡತೊಡಗಿತು, ನಡುಗುವ ಕೈಗಳಲ್ಲೂ ಲವಲವಿಕೆ ಮೂಡಿತು. ಉದ್ಯಮಿ ಆನಂದ್ ಮಹಿಂದ್ರಾರವರು ಶೇರ್ ಮಾಡಿಕೊಂಡ ವಿಡಿಯೊ ಮೇಲಿದೆ ನೋಡಿ.
-Team Infotrend