ENG VS NED: ಡೇವಿಡ್ ಮಲಾನ್ ಬಾರಿಸಿದ ಸಿಕ್ಸ್ ಗೆ ಬಾಲ್ ಕಳೆಯಿತು ಕಾಡಿನಲ್ಲಿ; ಹುಡುಕುತ್ತಿದ್ದಾರೆ ನಮ್ಮಂತೆ…ವಿಡಿಯೋ ನೋಡಿ.

ಹೆಚ್ಚು ಕಡಿಮೆ ಎಲ್ಲರೂ ಚಿಕ್ಕ ಮೈದಾನದಲ್ಲಿ ಇಲ್ಲವೇ ಓಣಿಯಲ್ಲಿ ಕ್ರಿಕೆಟ್ ಆಡಿರಲೇಬೇಕು. ಇಂಥಲ್ಲಿ ಬಾಲ್ ಯಾವತ್ತೂ ಪೊದೆಯಲ್ಲಿ ಇನ್ನೊಬ್ಬರ ಮನೆಯ ಅಂಗಳದಲ್ಲಿ ಇಲ್ಲವೇ ಕಿಟಕಿಯಲ್ಲಿ ಹೀಗೆ ಎಲ್ಲೆಂದರಲ್ಲಿ ಕಳೆದು ಹೋಗುತ್ತಿತ್ತು. ನಂತರ ಎಲ್ಲರೂ ಆಟವನ್ನು ಬಿಟ್ಟು ಬಾಲ್ ಹುಡುಕುವುದರಲ್ಲಿಯೇ ಸಮಯ ಹೋಗುತ್ತಿತ್ತು. ಇರುವ ಒಂದು ಬಾಲ್ ಸಿಗುವವರೆಗೆ ಸಾಕು ಸಾಕಾಗಿ ಹೋಗುತ್ತಿತ್ತು. ಎಲ್ಲ ಊರ್ಜೆ ಖತಮ್ ಆದಮೇಲೆ ಆಗ ಬಾಲ್ ಸಿಗುತ್ತಿತ್ತು. ಎಲ್ಲರ ಮುಖದ ಮೇಲೆ ಮತ್ತೆ ಸ್ಫೂರ್ತಿ, ಸಂತೋಷ ಮಿನುಗುತ್ತಿತ್ತು. ವಿಚಾರ ಮಾಡಿ ಒಂದು ವೇಳೆ ಈ ರೀತಿಯ ದೃಶ್ಯ ಇಂಟರ್ ನ್ಯಾಷನಲ್ ಕ್ರಿಕೆಟ್ ನಲ್ಲೂ ಕಂಡು ಬಂದರೆ?

ಹೌದು ಈ ರೀತಿ ಕಂಡು ಬಂದಿದೆ, ಅದಕ್ಕಾಗಿಯೇ ಈ ವಿಡಿಯೋ ನಿಮಗಾಗಿ ತಂದಿದ್ದೇವೆ.

ಡೇವಿಡ್ ಮಲಾನ್ ಬಾರಿಸಿದರು ಬಾನೆತ್ತರದ ಭರ್ಜರಿ ಸಿಕ್ಸ್.

ಇಂಗ್ಲೆಂಡ್ ಮತ್ತು ನೇದರ್ಲ್ಯಾಂಡ್ ಮಧ್ಯೆ ಶುಕ್ರವಾರ ಆಡಿದ ಮೊದಲ ಏಕದಿನ ಪಂದ್ಯದಲ್ಲಿ ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೊದಲು ಬ್ಯಾಟ್ ಮಾಡಿದ ಇಂಗ್ಲಿಷ್ ಟೀಮ್ ನ ಬ್ಯಾಟ್ಸ್ಮನ್ ಡೇವಿಡ್ ಮಲಾನ್ ಮತ್ತು ಜೋಸ್ ಬಟ್ಲರ್ ಅಕ್ಷರಶಃ ಸ್ಟೇಡಿಯಂ ನಲ್ಲಿ ಧೂಳ್ ಎಬ್ಬಿಸಿದ್ದರು. ಅದರಲ್ಲೂ ಡೇವಿಡ್ ಅವರು ಬಾರಿಸಿದ ಸಿಕ್ಸ್ ಅಂತೂ ನೇರ ಸ್ಟೇಡಿಯಂ ಹೊರೆಗೆ ಕಾಡಿನಲ್ಲಿ ಬಿದ್ದಿದೆ. ಆಮೇಲೆ ಬಾಲ್ ತರಲು ಫೀಲ್ಡರ್ ಗಳು ಸ್ಟೇಡಿಯಂ ಬದಿಯಲ್ಲಿರುವ ಕಾಡಿಗೆ ಹೋಗಿದ್ದಾರೆ, ಅವರ ಹಿಂದೆ ಹಿಂದೆ ಕ್ಯಾಮೆರಾಮನ್ ಸಹಿತ ಹೋಗಿ ಬಾಲ್ ಶೋಧಿಸುವ ಅಲ್ಲಿಯ ದೃಶ್ಯದ ಶೂಟ್ ಮಾಡಿದ್ದಾನೆ.

ಸ್ವಲ್ಪ ಸಮಯದ ಕಳೆದ ಮೇಲೆ ಎಲ್ಲರೂ ಹುಡುಕಾಡಿದ ನಂತರ ತಡಕಾಡಿಂದ ನಂತರ ಬಾಲ್ ಸಿಕ್ಕಿದೆ. ಬಾಲ್ ಸಿಗುವ ಮುನ್ನ ಫೀಲ್ಡರ್ ಗಳು ಚಿಕ್ಕ ಮಕ್ಕಳ ತರ ಗಿಡ ಮರಗಳನ್ನು ಅಲುಗಾಡಿಸಿ ನೋಡಿದ್ದಾರೆ. ಕೊನೆಗೂ ಸ್ವಲ್ಪ ಸಮಯದ ನಂತರ ಬಾಲ್ ಶೋಧಿಸುವಲ್ಲಿ ಫೀಲ್ಡರ್ ಗಳು ಯಶಸ್ವಿಯಾಗಿದ್ದಾರೆ. ಬಾಲ್ ಸಿಕ್ಕ ತಕ್ಷಣ ನೆದರ್ಲ್ಯಾಂಡ್ ತಂಡದ ಆಟಗಾರರು ಮಕ್ಕಳಂತೆ ಚೀರುತ್ತಾ, ಕಿರುಚುತ್ತಾ ತಮ್ಮ ಖುಷಿಯನ್ನು ವ್ಯಕ್ತ ಮಾಡಿದ್ದಾರೆ. ಇಂಟರ್ ನ್ಯಾಷನಲ್ ಪಂದ್ಯ ಒಂದರಲ್ಲಿ ನಡೆದ ಈ ಘಟನೆಯನ್ನು ನೋಡಿದ ನಂತರ ಲಕ್ಷಾವಧಿ ಕ್ರಿಕೆಟ್ ಅಭಿಮಾನಿಗಳಿಗೆ ತಮ್ಮ ಬಾಲ್ಯ ನೆನಪಾಗಿದೆ.
ವಿಡಿಯೋ ನೋಡಿ

ಸದ್ಯ ಇಂಗ್ಲೆಂಡ್ ತಂಡ 3 ಏಕದಿನ ಪಂದ್ಯಗಳಿಗಾಗಿ ನೆದರ್ಲ್ಯಾಂಡ್ ಪ್ರವಾಸದಲ್ಲಿದೆ.