Fast weight loss tips- ತೂಕ ಇಳಿಸಿಕೊಳ್ಳಲು ಫಾಲೋ ಮಾಡಿ ಈ ಸರಳ ಉಪಾಯಗಳನ್ನು; ಕೆಲವೇ ವಾರಗಳಲ್ಲಿ ಕಂಡುಬರುವುದು ಬದಲಾವಣೆ.
ದೇಹದ ತೂಕವು ಹೆಚ್ಚಾಗಲು ಶುರುವಾದಂತೆ ಜನರಿಗೆ ಅನೇಕ ಸಮಸ್ಯೆಗಳು ಕಾಡಲು ಶುರುವಾಗುತ್ತವೆ. ನಂತರ ಇದರ ಉಪಚಾರಕ್ಕಾಗಿ ಅನೇಕರು ನೀರಿನಂತೆ ಹಣವನ್ನು ಖರ್ಚು ಮಾಡುತ್ತಾರೆ. ಇಷ್ಟೆಲ್ಲ ಮಾಡಿದರೂ ದೇಹದ ತೂಕ ಮಾತ್ರ ಇಳಿಯುವುದೇ ಇಲ್ಲ. ಆಗ ಮಾತ್ರ ತುಂಬಾ ನಿರಾಶೆಯಾಗುತ್ತದೆ.
ನಿಮಗೆ ಅಥವಾ ನಿಮ್ಮ ಮಿತ್ರರು ಇಲ್ಲ ಸಂಬಂಧಿಕರಿಗೆ ಈ ಸಮಸ್ಯೆ ಇದ್ದರೆ ಅಷ್ಟೊಂದು ಕಾಳಜಿ ಮಾಡುವಂತಹ ವಿಷಯವಲ್ಲ. ಕಾರಣ ಇಂದಿನ ಈ ಲೇಖನದಲ್ಲಿ ಬೊಜ್ಜು ಕರಗಿಸುವ ಉಪಾಯಗಳ ಬಗ್ಗೆ ಕೆಲವೊಂದು ಟಿಪ್ಸ್ ಗಳನ್ನು ಹೇಳುವವರಿದ್ದೇವೆ. ಈ ಟಿಪ್ಸ್ ಗಳನ್ನು ಫಾಲೋ ಮಾಡಿದರೆ ಕೆಲವೇ ತಿಂಗಳುಗಳಲ್ಲಿ ನಿಶ್ಚಿತವಾಗಿಯೂ ವೇಗದಿಂದ ದೇಹದ ಬೊಜ್ಜು ಕರಗುವುದು. ಒಂದು ಸಮೀಕ್ಷೆಯ ಪ್ರಕಾರ ಅತೀ ಬೊಜ್ಜಿನಿಂದಾಗಿ ಟೈಪ್ 2 ಮಧುಮೇಹ ಮತ್ತು ಕೆಲವು ಪ್ರಕಾರದ ಕ್ಯಾನ್ಸರ್ ಗಳು ಆಗುವ ಸಾಧ್ಯತೆ ಇರುತ್ತವೆಯಂತೆ. ಆದ್ದರಿಂದ ಆದಷ್ಟು ಶರೀರವು ಸಮತೋಲನದಲ್ಲಿರುವದು ಅವಶ್ಯಕವಾಗಿದೆ. ಇಲ್ಲವಾದರೆ ದೇಹದ ಹೆಚ್ಚಿನ ತೂಕ ಅನೇಕ ರೋಗಗಳಿಗೆ ಎಡೆ ಮಾಡಿಕೊಡುತ್ತವೆ.
ಆಹಾರ ತಜ್ಞರಾದ ಡಾಕ್ಟರ್ ರಂಜನಾ ಸಿಂಹ ಅವರು ಜೀ ನ್ಯೂಸ್ ಗೆ ನೀಡಿದ ಸಂದರ್ಶನದಲ್ಲಿ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕಾದರೆ ವ್ಯಕ್ತಿಗೆ ಒಳ್ಳೆಯ ಆರೋಗ್ಯಪೂರ್ಣ ಆಹಾರ, ಮತ್ತು ವ್ಯಾಯಾಮ ಇವುಗಳ ಜೊತೆಗೆ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಎಂದು ಹೇಳುತ್ತಾರೆ. ಆಹಾರದಲ್ಲಿ ಪ್ರೋಟೀನ್, ಫೈಬರ್ ಮತ್ತು ಎಲ್ಲ ಪ್ರಕಾರದ ಪೋಷಕ ಘಟಕಗಳ ಸಮಾವೇಶ ಮಾಡಿಕೊಳ್ಳುವುದು ತುಂಬಾ ಮಹತ್ವದ್ದಾಗಿದೆ. ಇದರ ಹೊರತಾಗಿ ಅವಶ್ಯಕತೆ ಇದ್ದಷ್ಟು ನಿದ್ರೆ ಮತ್ತು ದೈಹಿಕ ಚಲನವಲನಗಳು ತುಂಬಾ ಮಹತ್ವದ ಪಾತ್ರವನ್ನು ವಹಿಸುತ್ತವೆ.
ವೇಗವಾಗಿ ತೂಕ ಇಳಿಸಿಕೊಳ್ಳುವ ಕೆಲವು ಉಪಾಯಗಳು…
- ತೂಕವನ್ನು ಕಡಿಮೆ ಮಾಡಿಕೊಳ್ಳುವ ಗುರಿಯನ್ನು ಸಾಧಿಸುವ ಛಲ ನಿಮ್ಮಲ್ಲಿ ಮೊದಲು ಇರಲಿ. ನೀವು ಏನು ಮಾಡುತ್ತೀರಿ? ಎಷ್ಟೊಂದು ಆಹಾರ ತಿನ್ನುತ್ತೀರಿ? ಈ ಎಲ್ಲ ಘಟಕಗಳ ಪರಿಣಾಮ ದೇಹದ ಮೇಲೆ ಆಗುತ್ತದೆ. ಇವುಗಳ ಗಂಭೀರವಾಗಿ ವಿಚಾರ ಮಾಡಿದಾಗಲೇ ದೇಹದ ತೂಕ ಕಡಿಮೆಯಾಗುತ್ತದೆ.
- ಮುಂಜಾನೆ ಎದ್ದ ನಂತರ ನಿಯಮಿತವಾಗಿ ಕನಿಷ್ಠ ಅರ್ಧ ಲೀಟರ್ ನೀರು ಕುಡಿಯಬೇಕು. ಇದರಿಂದಾಗಿ ಮುಂಜಾನೆಯ ಸಮಯದಲ್ಲಿ ಹೊಟ್ಟೆಯು ಸಂಪೂರ್ಣವಾಗಿ ಶುದ್ಧವಾಗುವುದು. ಮುಂಜಾನೆ ಕುಡಿಯಲು ಉಗುರು ಬೆಚ್ಚಗಿನ ನೀರನ್ನು ಉಪಯೋಗಿಸುತ್ತಿದ್ದರೆ ದೇಹಕ್ಕೆ ತೂಕ ಕಡಿಮೆ ಮಾಡಲು ಅದು ಇನ್ನಷ್ಟು ಲಾಭವನ್ನು ಕೊಡುತ್ತದೆ.
- ಬೆಳಗಿನ ಉಪಹಾರವು ದೇಹದ ತೂಕವನ್ನು ಇಳಿಸಲು ತುಂಬಾ ಮಹತ್ವದ ಪಾತ್ರವನ್ನು ವಹಿಸುತ್ತದೆ. ಬೆಳಗಿನ ಉಪಹಾರವು ಸಂಪೂರ್ಣ ದಿನದ ಡಯಟ್ ಪ್ಲಾನ್ ಸೆಟ್ ಮಾಡುತ್ತದೆ. ನಿಮ್ಮ ಉಪಹಾರದಲ್ಲಿ ಮೊಳಕೆ ಒಡೆದ ಧಾನ್ಯಗಳು, ಸೋಯಾ, ಬೀನ್ಸ್, ಸ್ಪ್ರಾವುಟ್ಸ್, ಮೊಸರು ಮತ್ತು ಮೊಟ್ಟೆಗಳ ಸಮಾವೇಶವಿರಲಿ.
- ದೇಹದ ತೂಕವನ್ನು ಕಡಿಮೆ ಮಾಡಬೇಕಾದರೆ ಆಹಾರದ ಮೇಲೆ ನಿಯಂತ್ರಣವಿಟ್ಟುಕೊಳ್ಳುವದು ತುಂಬಾ ಮಹತ್ವದ್ದಾಗಿದೆ. ದೇಹದ ತೂಕವನ್ನು ಹೆಚ್ಚಿಸುವ ಪದಾರ್ಥಗಳನ್ನು ಸೇವಿಸಬಾರದು. ಇವುಗಳಲ್ಲಿ ಎವೊಕ್ಯಾಡೋ, ಸಕ್ಕರೆಯುಕ್ತ ಒಟ್ ಮೀಲ್, ಬಾಳೆಹಣ್ಣು ಮತ್ತು ಹೆಚ್ಚಿನಂಶದ ಕಾರ್ಬೋಹೈಡ್ರೇಟ್ಸ್ ಇರುವ ಪದಾರ್ಥಗಳನ್ನು ಸೇವಿಸುವುದರಿಂದ ದೂರವಿರಬೇಕು. ಹಸಿರು ತರಕಾರಿಗಳು, ವಿಟಮಿನ್ ಸಿ ಇರುವ ಪದಾರ್ಥಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು.
- ಮುಂಜಾನೆಯ ಹೊತ್ತಿನಲ್ಲಿಯ ನಡಿಗೆ ಅಥವಾ ವಾಕಿಂಗ್ ತೂಕವನ್ನು ಕಡಿಮೆ ಮಾಡಿಕೊಳ್ಳಲು ಅತೀ ಒಳ್ಳೆಯ ಉಪಾಯವಾಗಿದೆ. ದಿನಂಪ್ರತಿ ಸೂರ್ಯನ ಸೌಮ್ಯ ಕಿರಣಗಳಲ್ಲಿ ಕನಿಷ್ಠ 20 ರಿಂದ 30 ನಿಮಿಷಗಳಾದರೂ ನಡೆಯಬೇಕು. ಇದರಿಂದ ದೇಹದ ತೂಕ ಇಳಿಸಿಕೊಳ್ಳಲು ತುಂಬಾ ಸಹಾಯವಾಗುತ್ತದೆ. ಯಾವ ವ್ಯಕ್ತಿಗಳಲ್ಲಿ ವಿಟಮಿನ್-ಡಿ ಘಟಕವು ಕಡಿಮೆಯಾಗಿರುತ್ತದೆಯೋ ಅಂಥವರ ತೂಕ ಬಹುಬೇಗನೆ ಹೆಚ್ಚಿಸುತ್ತದೆ. ಮುಂಜಾನೆಯ ಸೂರ್ಯನ ಕಿರಣಗಳಲ್ಲಿ ವಿಟಮಿನ್ ಡಿ ಘಟಕ ಹೇರಳವಾಗಿರುತ್ತದೆ.