ಚಾಲೆಂಜ್; zoom ಮಾಡಿ ನೋಡಿ; 10/20 ಸೆಕೆಂಡುಗಳಲ್ಲಿ ಹಸುಗಳ ಮಧ್ಯೆ ಅವಿತು ಕುಳಿತ ನಾಯಿ ಹುಡುಕಲು ಸಾಧ್ಯವೇ? ಟ್ರೈ ಮಾಡಿ ನೋಡೋಣ.
ಸೋಷಿಯಲ್ ಮೀಡಿಯಾದಿಂದ ಮತ್ತೊಂದು ತಲೆ ಕೆಡಿಸುವ ಫೋಟೋ ಒಂದನ್ನು ನಿಮಗಾಗಿ ತಂದಿದ್ದೇವೆ. ನಿಮ್ಮ ಕಣ್ಣುಗಳಿಗೆ ಚಾಲೆಂಜ್ ಸ್ವೀಕರಿಸುವ ಶಕ್ತಿ ಇದ್ದರೆ ಒಂದು ಕೈ ಆಗಿಯೇ ಬಿಡಲಿ, ಏನಂತೀರಾ?
ಪ್ರಸ್ತುತ ಚಿತ್ರ ತುಂಬಾ ಕನ್ಫ್ಯೂಸ್ ನಿಂದ ಕೂಡಿದೆ. ಚಿತ್ರದ ತುಂಬಾ ಬರೀ ಹಸುಗಳೇ ಕಾಣಿಸುತ್ತಿವೆ. ಆದರೆ ಈ ಹಸುಗಳ ಮಧ್ಯೆ ನಾಯಿಯೊಂದು ಅವಿತು ಕುಳಿತಿದೆ. ಆ ನಾಯಿಯು 90 ಪ್ರತಿಶತ ನೆಟ್ಟಿಗರಿಗೆ ಎಲ್ಲಿದೆ ಎಂಬುದೇ ಗೊತ್ತಾಗುತ್ತಿಲ್ಲ. ಹಸುಗಳ ಮಧ್ಯೆ ಅಡಗಿ ಕುಳಿತ ನಾಯಿಯನ್ನು ನಿಮ್ಮ ಕಣ್ಣುಗಳು ಶೋಧಿಸಿ ಅದು ಎಲ್ಲಿದೆ ಎಂದು ಪತ್ತೆ ಹಚ್ಚಬೇಕಾಗಿದೆ. ಈ ಚಾಲೆಂಜಿನಲ್ಲಿ ನೀವು ಗೆಲ್ಲಬೇಕಾದರೆ ನಿಮ್ಮ ಹತ್ತಿರ ಮುಖ್ಯವಾಗಿ ಇರಬೇಕಾಗಿರುವುದು ಪೇಶನ್ಸ್. ಕಾರಣ ಈ ಆಟದಲ್ಲಿ ವಿಜಯ ಸಾಧಿಸಲು ಎಲ್ಲಕ್ಕೂ ಮುಖ್ಯವಾಗಿ ಬೇಕಾಗಿರುವುದು ಸಂಯಮ. ತದನಂತರ ತುಂಬಾ ಸೂಕ್ಷ್ಮತೆಯನ್ನು ಹುಡುಕುವ ತೀಕ್ಷ್ಣ ಕಣ್ಣುಗಳು.
ಈ ಪ್ರಶ್ನೆಯ ಉತ್ತರವನ್ನು ಹುಡುಕಲು ಥಟ್ಟನೆ ಸ್ಕ್ರೋಲ್ ಮಾಡಿ ಕೆಳಗೆ ಹೋಗಬೇಡಿ. ಕಾರಣ ಉತ್ತರವನ್ನು ಕೆಳಗೆ ನೀಡಲಾಗಿದೆ. ಅದಕ್ಕಾಗಿ ಯಾವುದೇ ರೀತಿಯಲ್ಲಿ ಚೀಟಿಂಗ್ ಮಾಡದೆ ಉತ್ತರವನ್ನು 10 ರಿಂದ 20 ಸೆಕೆಂಡುಗಳಲ್ಲಿ ಹುಡುಕಿರಿ.

ಈ ಆಪ್ಟಿಕಲ್ ಇಲ್ಯೂಷನ್ ಚಿತ್ರ “ಬೇಯರ್ಸ್ ಸ್ಪೂಕಿ ಬುಕ್ ಆಫ್ ಹಿಡನ್ ಥಿಂಗ್ಸ್” ನ ಕಾನ್ಸೆಪ್ಟ್ ಮೇಲೆ ಆಧಾರಿತವಾಗಿದೆ. ಇದರಲ್ಲಿ ಅಸಂಖ್ಯ ಹಸುಗಳ ಮಧ್ಯೆ ಅವಿತು ಕುಳಿತಿರುವ ನಾಯಿಯನ್ನು ಶೋಧಿಸುವ ಅಥವಾ ಪತ್ತೆ ಹಚ್ಚಿ ಇದರಲ್ಲಿ ಯಶಸ್ಸು ಸಾಧಿಸಬೇಕಾಗಿದೆ. ಈ ಪ್ರಶ್ನೆಗೆ ಉತ್ತರವನ್ನು ಹುಡುಕಿ ಚಾಲೆಂಜ್ ಕಂಪ್ಲೀಟ್ ಮಾಡಿ.
ಇಲ್ಲಿದೆ ಉತ್ತರ ನೋಡಿ…
ಈ ಹಸುಗಳ ಗುಂಪಿನಲ್ಲಿ ನಾಯಿಯನ್ನು ಹುಡುಕುವುದು ಸ್ವಲ್ಪ ಕಷ್ಟದ ಕೆಲಸವೇ ಆಗಿದೆ. ಕಾರಣ ನಾಯಿ ಮತ್ತು ಹಸುಗಳ ಪೃಷ್ಠಭಾಗದ ಮೇಲಿನ ಬಣ್ಣ ಒಂದೇ ರೀತಿಯಾಗಿದೆ. ಆದರೆ ಒಂದು ಡಿಫರೆನ್ಸ್ ಏನಿದೆ ಅಂದರೆ ಪ್ರತಿಯೊಂದು ಹಸುವಿನ ತಲೆಯ ಮೇಲೆ ಕೊಂಬುಗಳು ಇವೆ ಮತ್ತು ನಾಯಿಯ ತಲೆಯ ಮೇಲೆ ಕೊಂಬಿಲ್ಲದೆ ಅದರ ಕಿವಿಗಳು ಸ್ವಲ್ಪ ಬಾಗಿವೆ.
ಇಷ್ಟಾದರೂ ನಿಮಗೆ ಈ ಪ್ರಶ್ನೆಯ ಉತ್ತರ ಹುಡುಕುವಲ್ಲಿ ಅಸಾಧ್ಯವಾದರೆ ಉತ್ತರವನ್ನು ನಾವೇ ಹೇಳುತ್ತೇವೆ ನೋಡಿ…

ಪ್ರಸ್ತುತ ಚಿತ್ರದಲ್ಲಿ ಕೆಳಗಿನಿಂದ ಮೂರನೆಯ ಸಾಲು ಮತ್ತು ನಿಮ್ಮ ಬಲಬದಿಯಿಂದ 5 ನೇ ನಂಬರಿಗೆ ನಾಯಿ ಅವಿತು ಕುಳಿತಿರುವುದು ಕಂಡು ಬರುತ್ತದೆ ನೋಡಿ.