ಮೊದಲ ಸಿನಿಮಾ ಶೂಟ್ ನಲ್ಲೇ ಗರ್ಭ ನಿರೋಧಕ ಮಾತ್ರೆ ತೆಗೆದುಕೊಂಡಿದ್ದೆ: ಬಾಲಿವುಡ್ ನಟಿ ಸಂಚಲನ ಹುಟ್ಟಿಸಿದ ಹೇಳಿಕೆ!
ಯಾವುದೇ ಗಾಡ್ ಫಾದರ್ ಅಥವಾ ಸಿನಿಮಾ ಬ್ಯಾಗ್ರೌಂಡ್ ಇರುವ ಕುಟುಂಬಗಳಿಂದ ಬಂದಿರದ ಕಲಾವಿದರಿಗೆ ಬಾಲಿವುಡ್ ಪ್ರವೇಶ ಮಾಡುವುದು ಹಾಗೂ ಅಲ್ಲಿ ಬಂದು ಹೆಸರನ್ನು ಮಾಡುವುದು ಇತ್ತೀಚಿನ ವರ್ಷಗಳಲ್ಲಿ ಮಕ್ಕಳ ಆಟ ಖಂಡಿತ ಅಲ್ಲ ಎನಿಸಿದೆ. ಹೀಗೆ ಯಾವುದೇ ಸಿನಿಮಾ ಬ್ಯಾಗ್ರೌಂಡ್ ಇಲ್ಲದೇ ಬಾಲಿವುಡ್ ಗೆ ಪ್ರವೇಶ ನೀಡಿದಂತಹ ಒಬ್ಬ ನಟಿಯ ಕುರಿತಾಗಿ ನಾವು ಇಂದು ನಿಮಗೆ ತಿಳಿಸಲು ಹೊರಟಿದ್ದೇವೆ. ಈ ನಟಿಯ ಜೀವನ ಬಹಳಷ್ಟು ಆಸಕ್ತಿಕರ ಹಾಗೂ ಕುತೂಹಲಕಾರಿಯಾಗಿದೆ. ನಾವು ಈಗ ಹೇಳಲು ಹೊರಟಿರುವುದು ನಟಿ ರಾಧಿಕಾ ಮದಾನ್ ಅವರ ಕುರಿತಾಗಿ. ಈ ನಟಿ ಕಿರುತೆರೆಯಲ್ಲಿ ಬಹಳಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿರುವ ಅಂತಹ ನಟಿಯಾಗಿ ಅನಂತರ ಬಾಲಿವುಡ್ ಪ್ರವೇಶ ಮಾಡಿದ್ದಾರೆ.
ತನ್ನ ನಟನೆಯ ಸಾಮರ್ಥ್ಯದಿಂದಾಗಿ ಬಹಳಷ್ಟು ಅವಕಾಶಗಳನ್ನು ತನ್ನದಾಗಿಸಿಕೊಂಡು ಯಶಸ್ಸನ್ನು ಪಡೆದುಕೊಂಡು, ಬಹಳಷ್ಟು ಜನರ ಮೊದಲ ಆಯ್ಕೆ ಎನಿಸಿಕೊಂಡಂತಹ ನಟಿಯಾಗಿದ್ದಾರೆ ರಾಧಿಕಾ ಮದಾನ್. ಹೀಗೆ ಯಶಸ್ಸಿನ ಮೆಟ್ಟಿಲನ್ನು ಏರುತ್ತಿರುವ ನಟಿಯು ಇತ್ತೀಚಿಗಷ್ಟೇ ಬಂದು ಶಾಕಿಂಗ್ ಹೇಳಿಕೆಯನ್ನು ನೀಡಿದ್ದು, ಈ ಹೇಳಿಕೆಯ ನಂತರ ಒಂದು ಸಂಚಲನವೇ ಸೃಷ್ಟಿಯಾಗಿತ್ತು. ರಾಧಿಕಾ ಮದಾನ್ ತಮ್ಮ ಈ ಹೇಳಿಕೆಯಿಂದಾಗಿ ಇದ್ದಕ್ಕಿದ್ದಂತೆ ಮಾಧ್ಯಮಗಳ ಪ್ರಮುಖ ಸುದ್ದಿಯಾಗಿ ಮಾರ್ಪಾಟಾಗಿದ್ದರು. ಕೆಲವು ದಿನಗಳ ಹಿಂದೆ ರಾಧಿಕಾ ಅವರು ಒಂದು ಸಂದರ್ಶನದಲ್ಲಿ ಮಾತನಾಡುತ್ತಾ ಆಶ್ಚರ್ಯಕರ ಎನಿಸುವಂತಹ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ವಾಸ್ತವವಾಗಿ ರಾಧಿಕಾ ಕಲರ್ಸ್ ಚಾನೆಲ್ ಮೇರಿ ಆಶಿಕಿ ತುಮ್ ಸೇ ಎನ್ನುವ ಸೀರಿಯಲ್ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿರುವ ಅಂತಹ ನಟಿಯಾಗಿದ್ದಾರೆ. ಈ ಧಾರಾವಾಹಿಯ ಪ್ರಮುಖ ಪಾತ್ರವನ್ನು ಪೋಷಿಸುತ್ತಿದ್ದ ನಟಿ ರಾಧಿಕಾ ಅವರು ಬಹಳಷ್ಟು ಪ್ರೇಕ್ಷಕರ ಅಭಿಮಾನವನ್ನು ಗಳಿಸಿ ಯಶಸ್ಸನ್ನು ಪಡೆದುಕೊಂಡಿದ್ದಾರೆ. ಬಾಲಿವುಡ್ ನ ಪಟಾಕಾ ಎನ್ನುವ ಸಿನಿಮಾದ ಮೂಲಕ ಚಿತ್ರರಂಗದಲ್ಲಿ ಸಹ ಅವರಿಗೆ ಒಂದು ಒಳ್ಳೆಯ ಬ್ರೇಕ್ ದೊರೆತಿದೆ. ರಾಧಿಕಾ ಹೇಳುವ ಪ್ರಕಾರ ಅವರ ಮೊದಲ ಸಿನಿಮಾ ಮರ್ದ್ ಕೋ ದರ್ದ್ ನಹೀ ಹೋತಾ.
ಆದರೆ ಪಟಾಕಾ ಸಿನಿಮಾ ಅದಕ್ಕಿಂತ ಮೊದಲೇ ಮುಕ್ತಾಯವಾದ ಕಾರಣ ಅವರ ಎರಡನೇ ಸಿನಿಮಾ ಮೊದಲೇ ಬಿಡುಗಡೆಯಾಗಿತ್ತು. ಈ ಸಿನಿಮಾವನ್ನು ವಿಶಾಲ್ ಭಾರದ್ವಾಜ್ ನಿರ್ಮಾಣ ಮಾಡಿದ್ದಾರೆ.
ರಾಧಿಕಾ ಸಂದರ್ಶನದಲ್ಲಿ ಮಾತನಾಡುತ್ತಾ, ತನ್ನ ಮೊದಲ ಸಿನಿಮಾದ ಮೊದಲ ಶಾಟ್ ನಲ್ಲಿ ತಾನು ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವ ದೃಶ್ಯ ಇತ್ತು. ಅದಕ್ಕಾಗಿ ನನಗೆ ಮಾತ್ರೆಗಳನ್ನು ಖರೀದಿಸಲು ಹೇಳಿದರು. ಆ ವೇಳೆ ನಾನು ಅವುಗಳನ್ನು ಖರೀದಿಸಿ ಮನೆಯಲ್ಲಿ ಇಟ್ಟಿದ್ದೆ. ನನ್ನ ತಂದೆ ತಾಯಿ ನನಗೆ ಸರ್ಪ್ರೈಸ್ ನೀಡಬೇಕೆಂದು ನನ್ನ ದೆಹಲಿಯ ಮನೆಗೆ ಬಂದರು.

ನನ್ನ ತಂದೆ ಮನೆಯಲ್ಲಿ ಗರ್ಭನಿರೋಧಕ ಮಾತ್ರೆಯನ್ನು ನೋಡಿ ಶಾ ಕ್ ಆಗಿದ್ದರು. ಆಗ ಅವರ ಕಾಲುಗಳ ಕೆಳಗಿನ ಭೂಮಿ ಕುಸಿದು ಬಿದ್ದಂತೆ ಅವರಿಗೆ ಭಾಸವಾಗಿತ್ತು. ಮಗಳ ಬಳಿ ಗರ್ಭ ನಿರೋಧಕ ಮಾತ್ರೆ ಕಂಡು ಅವರ ಪರಿಸ್ಥಿತಿ ಹೇಗಾಗಿರಬಹುದು ಯೋಚಿಸಿ. ನಾನು ನನ್ನ ಮೊದಲ ಸಿನಿಮಾದ ಮೊದಲ ಶಾಟ್ ನೋಡಿ ನನ್ನ ತಂದೆ ಬಹಳ ಖುಷಿ ಪಡುತ್ತಾರೆ ಎಂದು ಭಾವಿಸಿದ್ದೆ. ಆದರೆ ಗರ್ಭ ನಿರೋಧಕ ಮಾತ್ರೆಗಳನ್ನು ನೋಡಿದ ನಮ್ಮ ತಂದೆಗೆ ಆದ ಶಾ ಕ್ ನಿಂದಾಗಿ ಅವರಿಗೆ ನಾನು ಮಾಡಿದ ಸಿನಿಮಾದ ಮೊದಲ ಶಾ ಟ್ ವಿಶೇಷ ಎನ್ನಿಸಿರಲಿಲ್ಲ ಎಂದು ಹೇಳಿದ್ದಾರೆ.
ರಾಧಿಕಾ ಮದಾನ್ ತಮ್ಮ ಮೊದಲ ಸಿನಿಮಾದಲ್ಲಿ ಬಾಲಿವುಡ್ ನಟಿ ಭಾಗ್ಯಶ್ರೀ ಅವರ ಮಗ ಅಭಿಮನ್ಯು ದಸಾನಿ ಅವರ ಜೊತೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಸಿನಿಮಾ ಕೆಲವೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು ಹಾಗೂ ಅಷ್ಟೊಂದು ದೊಡ್ಡ ಯಶಸ್ಸನ್ನೇನೂ ಪಡೆದುಕೊಳ್ಳಲಿಲ್ಲ. ಆದರೆ ರಾಧಿಕಾ ದಿವಂಗತ ನಟ ಇರ್ಫಾನ್ ಖಾನ್ ಅವರ ಕೊನೆಯ ಚಿತ್ರ ಅಂಗ್ರೇಜಿ ಮೀಡಿಯಂ ನಲ್ಲೂ ನಟಿಸಿದ್ದರು. ಈ ಸಿನಿಮಾ ದೊಡ್ಡ ಮಟ್ಟದ ಯಶಸ್ಸನ್ನು ಪಡೆದುಕೊಂಡ ನಂತರ ಈಗ ರಾಧಿಕಾ ಅವರನ್ನು ಅನೇಕ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.