VIDEO : ಆಗ ತಾನೆ ಜನಿಸಿದ ಪುಟಾಣಿ ಜಿರಾಫೆ ತನ್ನ ಮೊದಲ ಹೆಜ್ಜೆ ಇಡಲು ಪ್ರಯತ್ನಿಸುತ್ತಿರುವ ಕ್ಯೂಟ್ ವಿಡಿಯೊ ವೈರಲ್

ಪ್ರಾಣಿಪ್ರಿಯರಿಗಾಗಿ ಮತ್ತೊಂದು ಕ್ಯೂಟ್ ವಿಡಿಯೊ ಇಲ್ಲಿದೆ ನೋಡಿ. ಅದ್ಯಾವುದೇ ಪ್ರಾಣಿಯದಾಗಿರಲಿ, ಘ ತಾನೆ ಜನಿಸಿದ ಅಥವಾ ಪುಟಾಣಿ ಮರಿಗಳು ಎಲ್ಲರ ಗಮನ ಸೆಳೆಯುತ್ತವೆ. ಬೆಕ್ಕು, ನಾಯಿ, ಹಸುವಿನಿಂದ ಹಿಡಿದು ಆನೆ, ಹುಲಿ, ಸಿಂಹಗಳ ಮರಿ ಕೂಡ ಪ್ರಾಣಿಪ್ರಿಯರನ್ನು ಸೆಳೆಯುತ್ತವೆ. ಅಷ್ಟೇ ಏಕೆ ಹಿಂದೊಮ್ಮೆ ಪುಟ್ಟ ಓತಿಕ್ಯಾತ ಮರಿ ಹಾಕಿದ ವಿಡಿಯೊ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಸದರಿ ವಿಡಿಯೊದಲ್ಲಿ ಪುಟಾಣಿ ಜಿರಾಫೆಯೊಂದು ತನ್ನ ಮೊದಲ ಹೆಜ್ಜೆ ಇಡಲು ಪಡಿಪಾಟಲು ಪಡುತ್ತಿದೆ. ಎದ್ದು ಬಿದ್ದು ಹೆಜ್ಜೆ ಇಡುವ ಅದರ ಪ್ರಯತ್ನ ಎಲ್ಲರಿಗೂ ಇಷ್ಟವಾಗಿದೆ‌. ಮೊದಲೇ ಇಷ್ಟುದ್ದ ಕಾಲುಗಳಿರುವ ಜಿರಾಫೆ ಮರಿ ಅವುಗಳನ್ನು ಸಂಬಾಳಿಸಿಕೊಂಡು ಎದ್ದು ನಿಲ್ಲಲು ಕಷ್ಟಪಡುತ್ತಿದೆ.

22 ಸೆಕೆಂಡುಗಳ ಈ ವಿಡಿಯೊ ತುಣುಕನ್ನು ಮೃಗಾಲಯವೊಂದರಲ್ಲಿ ಚಿತ್ರೀಕರಿಸಲಾಗಿದ್ದು ಕೊನೆಗೂ ಮರಿ ಜಿರಾಫೆ ತನ್ನ ತಾಯಿಯ ಬಳಿ ಎದ್ದು ನಿಂತಿದೆ. ನಡೆಯಲೂ ಕಲಿತಿದೆ. ಇದೇ ವಿಡಿಯೊ ಈಗ ಎಲ್ಲ ಕಡೆ ವೈರಲ್ ಆಗುತ್ತಿದೆ.

ಟ್ವಿಟರ್ ನಲ್ಲಿ A page to make smile again ಎಂಬ ಖಾತೆಯಲ್ಲಿ ಈ ವಿಡಿಯೊ ಅಪ್ ಲೋಡ್ ಮಾಡಲಾಗಿದೆ. First steps of baby giraffe ಎಂಬ ಶಿರ್ಷಿಕೆಯಡಿ ಪಬ್ಲಿಷಾದ ಈ ವಿಡಿಯೊವನ್ನು ಇದುವರೆಗೆ 30 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಇದಕ್ಕೆ ಸಾಕಷ್ಟು ಜನ ಕಾಮೆಂಟ್ ಮಾಡಿದ್ದು, ವಿಡಿಯೊಗಾಗಿ ಧನ್ಯವಾದ ಕೂಡ ಅರ್ಪಿಸಿದ್ದಾರೆ. ವಿಡಿಯೊ ಇಲ್ಲಿದೆ ನೋಡಿ.

-Team Infotrend