ಅಪ್ಪನನ್ನು ಮೊದಲು ಬಾರಿಗೆ ಬೋಳು ತಲೆಯಲ್ಲಿ ನೋಡಿದ ಮಕ್ಕಳು: ಗುರುತಿಸಲು ಒಪ್ಪದೇ ನೀಡಿದರು ವಿಚಿತ್ರ ಪ್ರತಿಕ್ರಿಯೆ! ನೋಡಿ ಈ Video

ನೀವು ನಿಮ್ಮ ತಂದೆಯನ್ನು ಮೊದಲ ಬಾರಿಗೆ ತಲೆಯಲ್ಲಿ ಕೂದಲು ಇಲ್ಲದೇ ನೋಡಿದ್ದು ಯಾವಾಗ? ಬಹುಶಃ ಅದು ನೆನಪಿಸಿಕೊಳ್ಳುವುದು ಕಷ್ಟ ಎಂದೇ ಹೇಳಬಹುದು. ಆದರೆ ಒಂದಂತೂ ನಿಜ ವರ್ಷಗಳ ಕಾಲ ತಲೆ ತುಂಬ ಕೂದಲಿದ್ದ ತಂದೆ ಇದ್ದಕ್ಕಿದ್ದಂತೆ ಒಂದು ದಿನ ತಲೆಯಲ್ಲಿ ಒಂದು ಕೂದಲು ಇಲ್ಲದಂತೆ ಬೋಳು ತಲೆಯೊಂದಿಗೆ ಬಂದು ಎದುರು ನಿಂತಾಗ ಒಂದು ಕ್ಷಣ ಅವರನ್ನು ಗುರುತಿಸುವುದು ಸಹಜವಾಗಿಯೇ ಕಷ್ಟವಾಗಿರುತ್ತದೆ. ಅವರು ಯಾರೋ ಅಪರಿಚಿತರು ಎನ್ನುವಂತೆ ನಮಗೆ ಭಾಸವಾಗುವುದು ವಾಸ್ತವ. ಆದರೆ ನಾವು ಸ್ವಲ್ಪ ಬೆಳೆದಿರುವ ಮಕ್ಕಳಾಗಿದ್ದಾಗ, ಅಥವಾ ದೊಡ್ಡವರಾದ ಮೇಲೆ ಇಂತಹುದೊಂದು ಘಟನೆ ನಡೆದರೆ ನಾವು ಅದು ತಂದೆ ಎಂದು ಗುರುತಿಸಿಬಿಡುತ್ತೇವೆ. ಆದರೆ ಇಂತಹ ಸನ್ನಿವೇಶ ಪುಟ್ಟ ಮಕ್ಕಳ ಮುಂದೆ ಬಂದರೆ ಅವರು ಆಗ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದನ್ನು ನಾವು ಊಹಿಸುವುದು ಸಾಧ್ಯವಿಲ್ಲ ಎಂದೇ ಹೇಳಬಹುದು.

ಈಗ ಸೋಷಿಯಲ್ ಮೀಡಿಯಾದಲ್ಲಿ ಇಂತಹುದೊಂದು ಸನ್ನಿವೇಶವನ್ನು ಒಳಗೊಂಡ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಾ ಸಾಗಿದೆ. ವೀಡಿಯೋ ನೋಡಿದವರಿಗೆಲ್ಲಾ ಇದೊಂದು ಹೊಸ ಅನುಭವವನ್ನು ನೀಡುವಂತೆ ಕಾಣುತ್ತಿದೆ. ಇಂತಹ ಅನುಭವ ಕಂಡಿರುವುದು ಇಬ್ಬರು ಪುಟ್ಟ ಮಕ್ಕಳ ಮುಂದೆ. ತಮ್ಮ ಅಪ್ಪನನ್ನು ಮೊದಲ ಬಾರಿಗೆ ತಲೆಯಲ್ಲಿ ಕೂದಲೇ ಇಲ್ಲದ ಬೋಳು ತಲೆಯ ವ್ಯಕ್ತಿಯಾಗಿ ಕಂಡಿವೆ. ಆ ಪುಟ್ಟ ಮಕ್ಕಳ ಅಪ್ಪ ಅವರ ಮುಂದೆ ಹೊರ ಅವತಾರದಲ್ಲಿ ಬಂದಾಗ ಮೊದಲು ಮಕ್ಕಳ ಪರಿಸ್ಥಿತಿ ಸಾಮಾನ್ಯವಾಗಿ ಇರುವಂತೆ ಕಂಡಿದೆ. ಆದರೆ ಅನಂತರ ಆ ಮಕ್ಕಳ ವರ್ತನೆಯಲ್ಲಿ ಬದಲಾವಣೆ ಕಂಡು ಬಂದಿದೆ.

ಆ ವ್ಯಕ್ತಿಯನ್ನು ನೋಡುತ್ತಾ ಸ್ವಲ್ಪ ಹೊತ್ತಿನಲ್ಲೇ ಮಕ್ಕಳೆರಡು ಅಳಲು ಆರಂಭಿಸಿವೆ. ಸೋಷಿಯಲ್ ಮೀಡಿಯಾಗಳಲ್ಲಿ ಪುಟ್ಟ ಮಕ್ಕಳ ಈ ಆಕಸ್ಮಿಕ ಪ್ರತಿಕ್ರಿಯೆ, ಊಹಿಸಿರದ ರಿಯಾಕ್ಷನ್ ನ ಈ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪುಟ್ಟ ಮಕ್ಕಳ ಈ ವಿಚಿತ್ರ ರಿಯಾಕ್ಷನ್ ನೋಡಿದವರ ಮುಖದಲ್ಲಿ ಒಂದು ನಗು ಖಚಿತವಾಗಿ ಮೂಡುತ್ತದೆ. ಈ ವೀಡಿಯೋ ವನ್ನು ಆಕ್ವಾಲೇಡಿ ಎನ್ನುವ ಟ್ವಿಟರ್ ಬಳಕೆದಾರರೊಬ್ಬರು ತಮ್ಮ ಖಾತೆಯಲ್ಲಿ ಶೇರ್ ಮಾಡಿಕೊಂಡು, ಅವರು ಶೀರ್ಷಿಕೆಯಲ್ಲಿ ಇಬ್ಬರು ಅವಳಿ ಮಕ್ಕಳು ಅವರಪ್ಪನನ್ನು ಮೊದಲ ಬಾರಿಗೆ ಬೋಳು ತಲೆಯಲ್ಲಿ ನೋಡಿದಾಗ ಅವರು ಕೊಟ್ಟ ರಿಯಾಕ್ಷನ್ ಇದು ನೋಡಿ ಎಂದು ಬರೆದುಕೊಂಡಿದ್ದಾರೆ.

ಈ ವೀಡಿಯೋದಲ್ಲಿ ಆ ವ್ಯಕ್ತಿಯು ಬೋಳು ತಲೆಯಲ್ಲಿ ಕಾಣಿಸುತ್ತಾನೆ. ಆತ ಬೋಳು ತಲೆಯಲ್ಲಿ ತನ್ನ ಮಕ್ಕಳ ಮುಂದೆ ಬಂದು ನಿಲ್ಲುತ್ತಾನೆ. ಅವರನ್ನು ಮುಟ್ಟಲು, ಮಾತನಾಡಲು ಮುಂದಾಗುತ್ತಾನೆ. ಮೊದಲು ಆತ ಮಕ್ಕಳನ್ನು ನೋಡುತ್ತಾನೆ. ಮಕ್ಕಳು ಕೂಡಾ ಯಾರೋ ಅಪರಿಚಿತ ಎನ್ನುವಂತೆ ಅವನನ್ನು ನೋಡುತ್ತಾರೆ. ಮಕ್ಕಳು ಹಾಗೂ ತಂದೆಯ ದೃಷ್ಟಿ ಬೆರೆಯುತ್ತದೆ‌. ಆಗ ಸ್ವಲ್ಪ ಸಮಯದ ನಂತರ ಮಗು ಅಳಲು ಪ್ರಾರಂಭಿಸುತ್ತದೆ. ಆ ವ್ಯಕ್ತಿಯು ಮಗುವಿನ ಕಡೆಗೆ ತನ್ನ ಕೈಯನ್ನು ಚಾಚುತ್ತಾನೆ ಆಗ ಇಬ್ಬರೂ ಮಕ್ಕಳು ಕೂಡಾ ಅಳಲು ಪ್ರಾರಂಭಿಸುತ್ತಾರೆ.
ಇಬ್ಬರು ಮಕ್ಕಳ ಪ್ರತಿಕ್ರಿಯೆ ಒಂದೇ ರೀತಿ ಇರುವ ಈ ವೀಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ.

ವಿಡಿಯೋ ನೋಡಿ

ಈ ವೀಡಿಯೊವು ಸೋಶಿಯಲ್ ಮೀಡಿಯಾಗಳಲ್ಲಿ ಸುದ್ದಿಯಾಗುವ ವೇಳೆಗೆ ಸುಮಾರು 18 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದ್ದರೆ, 93 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ಸಾವಿರಾರು ಜನರು ವೀಡಿಯೋಗೆ ಕಾಮೆಂಟ್ ಗಳನ್ನು ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ. ಜನರು ಕೂಡಾ ವೀಡಿಯೋ ನೋಡಿ ವೈವಿದ್ಯಮಯ ವಾದ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಕೆಲವರು ಮಕ್ಕಳ ಪ್ರತಿಕ್ರಿಯೆ ನೋಡಿ ಅದರ ಬಗ್ಗೆ ಪ್ರತಿಕ್ರಿಯೆ ನೀಡಿದರೆ, ಇನ್ನೂ ಕೆಲವರು ಈ ಸನ್ನಿವೇಶಕ್ಕೆ ತಕ್ಕಂತೆ ಹಾಸ್ಯ ಚಟಾಕಿಗಳನ್ನು ಹಾರಿಸುವ ಕಾಮೆಂಟ್ ಗಳನ್ನು ಹಾಕಿದ್ದಾರೆ.