ಸೂರ್ಯಾಸ್ತದ ನಂತರ ಈ 5 ಕೆಲಸಗಳನ್ನು ಮಾಡಬೇಡಿ : ಹಿರಿಯರು ಹಾಗೂ ಧರ್ಮಗ್ರಂಥಗಳಲ್ಲಿ ಉಲ್ಲೇಖ
ನಮ್ಮ ದಿನವು ಸೂರ್ಯೋದಯದಿಂದ ಪ್ರಾರಂಭವಾಗುತ್ತದೆ ಮತ್ತು ಸಂಜೆ ಸೂರ್ಯಾಸ್ತದೊಂದಿಗೆ ಅಂತ್ಯವಾಗುತ್ತದೆ. ಸೂರ್ಯೋದಯ ಮತ್ತು ಸೂರ್ಯಾಸ್ತದ ನಡುವಿನ ಸಮಯವನ್ನು ಹಗಲು ಮತ್ತು ರಾತ್ರಿಯ ಸಂಧಿ ಸಮಯ ಎಂದೂ ಪರಿಗಣಿಸಲಾಗುತ್ತದೆ. ಜ್ಯೋತಿಷ್ಯದಲ್ಲಿ ಈ ಸಮಯವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ನೀವು ಗಮನಿಸಿರಬಹುದು…
ಮನೆಯ ಹಿರಿಯರು ಸಂಜೆ ಸಮಯದಲ್ಲಿ ಕೆಲವು ಕೆಲಸ ಮಾಡುವುದನ್ನು ನಿಲ್ಲಿಸುತ್ತಾರೆ. ನಮ್ಮ ಧರ್ಮಗ್ರಂಥಗಳಲ್ಲಿ ಸೂರ್ಯಾಸ್ತದ ನಂತರ ಕೆಲವು ಕೆಲಸಗಳನ್ನು ಮಾಡುವುದು ಸರಿಯಲ್ಲವೆಂದು ಪರಿಗಣಿಸಲಾಗುತ್ತದೆ. ಇಂದು ನಾವು ನಿಮಗೆ 5 ಅಂತಹ ವಿಷಯಗಳ ಬಗ್ಗೆ ಹೇಳುತ್ತೇವೆ, ಅವುಗಳನ್ನು ಸೂರ್ಯಾಸ್ತದ ನಂತರ ಮಾಡಬಾರದು.

ಈ ತಪ್ಪನ್ನು ಮಾಡಬೇಡಿ :
ತುಳಸಿ ಸಸ್ಯವು ಬಹುತೇಕ ಎಲ್ಲ ಸಂಪ್ರದಾಯಸ್ಥರ ಮನೆಯಲ್ಲೂ ಕಂಡುಬರುತ್ತದೆ. ಮನೆಯಲ್ಲಿ ತುಳಸಿಯನ್ನು ಹೊಂದಿರುವುದು ಬಹಳ ಶುಭವೆಂದು ಪರಿಗಣಿಸಲಾಗಿದೆ. ಧರ್ಮಗ್ರಂಥಗಳ ಪ್ರಕಾರ, ಆದರೆ ಸೂರ್ಯಾಸ್ತದ ನಂತರ ತುಳಸಿ ಸಸ್ಯವನ್ನು ಮುಟ್ಟಬಾರದು ಅಥವಾ ಅದಕ್ಕೆ ನೀರು ಹಾಕಬಾರದು. ಇದರಿಂದ ಸಂಪತ್ತಿನ ದೇವತೆಯಾದ ಲಕ್ಷ್ಮಿ ಕೋಪಗೊಂಡು ಮನೆಯಿಂದ ಸಮೃದ್ಧಿಯನ್ನು ಕಸಿದುಕೊಳ್ಳುತ್ತಾಳೆ ಎಂಬ ಪ್ರತೀತಿಯಿದೆ.
ಮೊಸರು ಕೊಡಬೇಡಿ :
ಹಿಂದೂ ಧರ್ಮದಲ್ಲಿ ದಾನಕ್ಕೆ ವಿಶೇಷ ಮಹತ್ವವಿದೆ, ಆದರೆ ಸೂರ್ಯಾಸ್ತದ ನಂತರ ಮೊಸರನ್ನು ಎಂದಿಗೂ ದಾನ ಮಾಡಬಾರದು ಎಂದು ಹೇಳಲಾಗುತ್ತದೆ. ವಾಸ್ತವವಾಗಿ ಮೊಸರು ಶುಕ್ರ ಗ್ರಹಕ್ಕೆ ಸಂಬಂಧಿಸಿದೆ ಮತ್ತು ಇದು ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಸಂಜೆ ಮೊಸರು ದಾನ ಮಾಡುವುದರಿಂದ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯ ಕೊರತೆ ಉಂಟಾಗುತ್ತದೆ ಎಂದು ನಂಬಲಾಗುತ್ತದೆ.

ಸೂರ್ಯಾಸ್ತದ ಸಮಯದಲ್ಲಿ ಮಲಗಬೇಡಿ :
ಸೂರ್ಯಾಸ್ತದ ಸಮಯದಲ್ಲಿ ಅಥವಾ ಸೂರ್ಯಾಸ್ತದ ನಂತರ ಮಲಗಬಾರದು ಅಥವಾ ಆಹಾರವನ್ನು ಸೇವಿಸಬಾರದು. ಇದರಿಂದ ಹಣ ನಷ್ಟವಾಗುತ್ತದೆ, ಇದರ ಜೊತೆಗೆ ಆರೋಗ್ಯ ಸಮಸ್ಯೆಗಳೂ ಬರಲಾರಂಭಿಸುತ್ತವೆ. ರಾತ್ರಿ ಮಲಗುವ ಒಂದೂವರೆ ತಾಸು ಮೊದಲು ಆಹಾರ ಸೇವಿಸಬೇಕು.
ಮನೆಯ ಸಂತೋಷಕ್ಕೆ ಗ್ರಹಣ :
ಸೂರ್ಯಾಸ್ತದ ನಂತರ ಅಂದರೆ ಹೊತ್ತು ಮುಳುಗಿದ ಮೇಲೆ ಮನೆಯನ್ನು ಗುಡಿಸಬೇಡಿ ಅಥವಾ ಸ್ವಚ್ಚಗೊಳಿಸಬೇಡಿ. ಸೂರ್ಯಾಸ್ತದ ನಂತರ ಮನೆಯನ್ನು ಗುಡಿಸುವುದರ ಮೂಲಕ ಮನೆಯ ಸಂತೋಷವು ಕೊನೆಗೊಳ್ಳಲು ಪ್ರಾರಂಭಿಸುತ್ತದೆ ಎಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಸೂರ್ಯಾಸ್ತದ ಸಮಯದಲ್ಲಿ ನೀವು ಆಟವಾಡಬಹುದು ಮತ್ತು ವ್ಯಾಯಾಮವನ್ನು ಮಾಡಬಹುದು.

ಕೂದಲು ಕತ್ತರಿಸಬೇಡಿ :
ಸೂರ್ಯಾಸ್ತದ ನಂತರ ಕೂದಲನ್ನು ಕತ್ತರಿಸಬಾರದು. ಸೂರ್ಯಾಸ್ತದ ನಂತರ ಅನೇಕ ಜನರು ತಮ್ಮ ಕೂದಲನ್ನು ಕ್ಷೌರ ಮಾಡಿಸಿಕೊಳ್ಳುತ್ತಾರೆ. ಶೇವಿಂಗ್ ಮಾಡಿಕೊಳ್ಳುತ್ತಾರೆ, ಆದರೆ ಇದನ್ನು ಮಾಡುವುದರಿಂದ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ಹಣ ನಷ್ಟವಾಗುತ್ತದೆ ಎನ್ನಲಾಗುತ್ತದೆ.
ಇವುಗಳಲ್ಲಿ ಹಲವು ಸಂಗತಿಗಳನ್ನು ತುಂಬಾ ಜನರು ನಂಬುವುದಿಲ್ಲ, ಅಪಹಾಸ್ಯ ಮಾಡುತ್ತಾರೆ. ಆದರೆ ನಮ್ಮ ಹಿರಿಯರು ಈ ನಿಯಮಗಳನ್ನು ಮಾಡಿದ್ದಾರೆಂದಮೇಲೆ, ನಮ್ಮ ಗ್ರಂಥಗಳಲ್ಲಿ ಉಲ್ಲೇಖವಿದೆ ಎಂದ ಮೇಲೆ ಇವುಗಳಿಗೆ ಅರ್ಥವಿರಲೇಬೇಕು. ಪಾಲಿಸುವುದು ಕಷ್ಟವಲ್ಲವಾದ್ದರಿಂದ ಪಾಲಿಸುವುದರಲ್ಲಿ ತಪ್ಪೇನಿಲ್ಲ.
-Team Infotrend