Video; ಹಾವಿನ ಹವೆಯಲ್ಲಿಯ ಈ ವಿಚಿತ್ರ ಜಂಪ್ ನೋಡಿ..!ಇದು ಯಾವ ಸೀಮೆಯ ಹಾವು? ಎಂದ ನೆಟ್ಟಿಗರು.

ಹಾವಿನ ವಿಡಿಯೋಗಳು ಅಂತರ್ಜಾಲದಲ್ಲಿ ತುಂಬಾ ಸಂಚಲನ ಮೂಡಿಸುತ್ತವೆ. ಇಂಥ ವಿಡಿಯೋಗಳು ಕೆಲವೊಮ್ಮೆ ನೋಡುಗರಿಗೆ ಭಯವೂ ಹುಟ್ಟಿಸುತ್ತವೆ. ಇತ್ತೀಚೆಗೆ ಹಾವಿನ ಬಗ್ಗೆ ಮನುಷ್ಯ ಸಾಕಷ್ಟು ತಿಳಿದುಕೊಂಡಿದ್ದಾನೆ. ಆದರೂ ಹಾವನ್ನು ನೋಡಿದ ನಂತರ ಭಯ ಮಾತ್ರ ಸಹಜವಾಗಿ ಬಂದೇ ಬರುತ್ತದೆ. ಈಗೀಗ ಯಾವ ಜಾತಿಯ ಹಾವುಗಳು ತುಂಬಾ ವಿಷಕಾರಿಯಾಗಿವೆ, ಯಾವುದು ಇಲ್ಲ ಎಂಬುದು ಮನುಷ್ಯ ಹೆಚ್ಚು ಕಡಿಮೆ ಅಭ್ಯಾಸ ಮಾಡಿದ್ದಾನೆ.

ಮನುಷ್ಯ ಎಷ್ಟೇ ಅಭ್ಯಾಸ ಮಾಡಿದರೂ ಹಾವಿನ ಬಗ್ಗೆ ಹೊಸ ಹೊಸ ರೋಚಕ ವಿಷಯಗಳು, ದೃಶ್ಯಗಳು ಕಂಡು ಬಂದಾಗ ಮತ್ತೆ ಅವುಗಳನ್ನು ನೋಡುವ ತಿಳಿದುಕೊಳ್ಳುವ ಕುತೂಹಲ ಕಡಿಮೆಯೇ ಆಗುವದಿಲ್ಲ. ಬದಲಾಗಿ ಇನ್ನಷ್ಟು ಹೆಚ್ಚಾಗುತ್ತದೆ.

ಸದ್ಯ ಇಲ್ಲಿ ನೋಡುವ ಒಂದು ವಿಶೇಷ ವಿಡಿಯೋ ದೃಶ್ಯ ಹಾವಿನ ಮತ್ತೊಂದು ಮುಖವನ್ನು ತೋರಿಸುತ್ತದೆ. ಈ ವಿಡಿಯೋ ದೃಶ್ಯದಲ್ಲಿ ಹಾವು ರಸ್ತೆಯ ಬದಿಗೆ ಇರುವ ಕಟ್ಟಡದ ಮಾಳಿಗೆಯ ತುತ್ತ ತುದಿಗೆ ಬಂದು ಕೆಳಗೆ ವಿಕ್ಷಿಸುವಂತಿದೆ. ಬಹುಶಃ ಅದು ಇಲ್ಲಿಂದ ಕೆಳಗೆ ಇಳಿದು ಹೋಗಬೇಕೆನ್ನುವ ವಿಚಾರದಲ್ಲಿದೆ ಎಂದು ತಿಳಿದು ಬರುತ್ತದೆ. ಆದರೆ ಅದಕ್ಕೆ ಅಲ್ಲಿ ಇಳಿಯಲು ಮಾರ್ಗವಿಲ್ಲ. ಆಗ ಆ ಹಾವು ಮಾಡಿದ ಕೆಲಸ ನೋಡಿ ಅಕ್ಷರಶಃ ಶಾಕ್ ಆಗುತ್ತದೆ.

ವಿಡಿಯೋ ನೋಡುಗರಿಗೆ ಹಾವು ಹೇಗೆ ಇಳಿಯಬಲ್ಲುದು ಎಂಬ ಪ್ರಶ್ನೆ ಎದುರಾಗುತ್ತದೆ, ಅಷ್ಟರಲ್ಲೇ ಹಾವು ಹಠಾತ್ತನೆ ಜೋರಾದ ಜಿಗಿತದೊಂದಿಗೆ ನೇರ ಕೆಳಗೆ ಜಂಪ್ ಮಾಡಿ ಹರಿದಾಡುತ್ತ ರಸ್ತೆಯ ಬದಿಗಿರುವ ಪೊದೆಯಲ್ಲಿ ಹೋಗಲು ಮುಂದಾಗುತ್ತದೆ. ಸಾಮಾನ್ಯವಾಗಿ ಹಾವುಗಳು ಈ ರೀತಿಯ ಜಂಪ್ ಮಾಡಲು ಮುಂದಾಗುವುದಿಲ್ಲ, ಅಥವಾ ಜಂಪ್ ಮಾಡಿದ ದೃಶ್ಯಗಳನ್ನು ಇಲ್ಲಿಯವರೆಗೆ ನೋಡಿರಲಿಲ್ಲ. ಆದರೆ ಹಾವಿನ ಈ ಜಿಗಿತ ನಿಜಕ್ಕೂ ವಿಶೇಷವಾಗಿದೆ.

ನೋಡಿ ಈ ವಿಡಿಯೋ…

ಪ್ರಸ್ತುತ ಹಾವಿನ ಬೇರೆಯೇ ಗುಣವನ್ನು ತೋರಿಸುವ ಈ ವಿಶೇಷ ವಿಡಿಯೋವನ್ನು ಸೋಷಿಯಲ್ ಮೀಡಿಯಾ ಸೈಟ್ ಆದ ಟ್ವಿಟರ್ ನಲ್ಲಿ ಸುಪ್ರಿಯಾ ಸಾಹು ಅವರು ಶೇರ್ ಮಾಡಿದ್ದಾರೆ. ಈ ವಿಡಿಯೋ ಇಲ್ಲಿಯವರೆಗೆ ಸುಮಾರು 1 ಮಿಲಿಯನ್ ಸಮೀಪ ವೀಕ್ಷಣೆಯನ್ನು ಪಡೆದಿದ್ದು ಸಾವಿರಾರು ಜನರು ವಿಡಿಯೋಗೆ ತಮ್ಮ ಮೆಚ್ಚುಗೆಯನ್ನು ನೀಡಿದ್ದಾರೆ.