VIDEO : ಮಾರಾಟ ಮಾಡಲು ಅವಕಾಶ ಕೊಡದಿದ್ದಕ್ಕೆ CMO ಹಾಗೂ ನಗರ ಪಾಲಿಕೆ ಸಿಬ್ಬಂದಿಯನ್ನು ಅಟ್ಟಾಡಿಸಿ ಹೊಡೆದ ಹಣ್ಣಿನ ವ್ಯಾಪಾರಿ! ವಿಡಿಯೊ ನೋಡಿ
ಇದು ಮಧ್ಯಪ್ರದೇಶದ ರಾಯಸೇನ್ ನಲ್ಲಿ ನಡೆದ ಘಟನೆ. ಕರೋನಾ ಕರ್ಫ್ಯೂ ಸಮಯದಲ್ಲಿ, ಹಣ್ಣಿನ ವ್ಯಕ್ತಿಯೊಬ್ಬ CMO ಮತ್ತು ನಗರ ಸಭೆಯ ಸಿಬ್ಬಂದಿಯ ಮೇಲೆ ಹ'”ಲ್ಲೆ ನಡೆಸಿದ್ದಾರೆ. ಮಧ್ಯಪ್ರದೇಶದ ರಾಯಸೇನ್ ಜಿಲ್ಲೆಯ ಸಿಲ್ವಾನಿಯಲ್ಲಿನ ಸರಕು ಮಾರಾಟಗಾರ ಸಲೀಂ ಹಣ್ಣು ವ್ಯಾಪಾರ ತಡೆದಿದ್ದಕ್ಕೆ ಹೀಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಹ'”ಲ್ಲೆ ನಡೆಸಿದ್ದಾನೆ.
ವಾಸ್ತವವಾಗಿ ಸರ್ಕಾರವು ಇಲ್ಲಿ ಕರೋನಾ ಕರ್ಫ್ಯೂ ಜಾರಿಗೆ ತಂದಿದೆ. ಸಿಎಂಒ ರಾಜೇಂದ್ರ ಶರ್ಮಾ ಅವರು ತಮ್ಮ ತಂಡದೊಂದಿಗೆ ನಗರದಲ್ಲಿ ರೌಂಡ್ಸ್ ಹೊಡೆಯುತ್ತಿದ್ದರು. ಈ ಸಮಯದಲ್ಲಿ ಸಲೀಂ 3 ಗಂಟೆ ಸುಮಾರಿಗೆ ಸಿಯರ್‌ಮೌ ರಸ್ತೆಯಲ್ಲಿ ತಳ್ಳುಗಾಡಿಯಲ್ಲಿ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದ. ಕೆಲವರು ಹಣ್ಣುಗಳನ್ನು ಸಹ ಖರೀದಿಸುತ್ತಿದ್ದರು.
ಆದರೆ ಇದು ನಿಯಮಗಳ ಉಲ್ಲಂಘನೆ ಎಂದು ಸಿಎಂಒ ಸಲೀಂಗೆ ತಿಳಿಸಿದರು, ಇಬ್ಬರ ನಡುವೆ ವಾದ ಕೂಡ ನಡೆಯಿತು. ಎಲ್ಲರೂ ಹೀಗೇ ಮಾರಾಟ ಮಾಡಲು ನಿಂತರೆ ಕರ್ಪ್ಯೂ ಹಾಕಿಯಾದರೂ ಏನು ಪ್ರಯೋಜನ ಎಂದು ಸಿಎಂಓ ರವರು ಚಲನ್ ಹರಿದು ವಶಪಡಿಸಿಕೊಳ್ಳುವಿಕೆ ಪ್ರಾರಂಭಿಸಿದರು.
ಇದರ ನಂತರ, ನಗರ ಸಭೆಯ ಸಿಬ್ಬಂದಿ ತಳ್ಳುಗಾಡಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಪ್ರಾರಂಭಿಸಿದರು. ಇದನ್ನು ನೋಡಿದ ಸಲೀಂ ಗೆ ಕೋಪ ಬಂದು ಮತ್ತು ಹಣ್ಣುಗಳನ್ನು ಕೆಳಕ್ಕೆ ಕೆಡವಿ ಓಡಿ ಹೋಗಿ ಕಾರಲ್ಲಿ ಕುಳಿತಿದ್ದ ಸಿಎಂಒ ರವರ ಮೇಲೆ ದಾ'”ಳಿ ನಡೆಸಿದ. ಬಿಡಿಸಿಕೊಳ್ಳಲು ಬಂದ ನೌಕರರ ಮೇಲೂ ಕೈಗೆ ಸಿಕ್ಕ ವಸ್ತುವಿನಿಂದ ಹಲ್ಲೆ ನಡೆಸಿದ್ದು, ಮೂವರು ನೌಕರರು ಗಾಯಗೊಂಡಿದ್ದಾರೆ. ಹಲ್ಲೆ ನಡೆಸಿದವನೇ ಅಲ್ಲಿಂದ ಓಡಿ ಹೋಗಿದ್ದಾನೆ.
ಸಧ್ಯ ಸಲಿಂ ವಿರುದ್ಧ ವಿವಿಧ ಪ್ರಕರಣಗಳ ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಸರ್ಕಾರ ಕರ್ಪ್ಯೂ ಅಥವಾ ಲಾಕ್ ಡೌನ್ ಹೇರುವುದು ನಮ್ಮ ಸಲುವಾಗಿ, ಕೊರೋನ ನಿಯಮಗಳನ್ನು ಪಾಲಿಸದಿದ್ದರೆ ಏನಾಗುತ್ತದೆ ಎಂದು ಈಗಾಗಲೇ ಗೊತ್ತಾಗಿದೆ, ದಿನಕ್ಕೆ ನಾಲ್ಕೈದು ಸಾವಿರ ಜನ ಸಾಯುತ್ತಿದ್ದಾರೆ. ಈಗಲೂ ಹೀಗೆ ಅಧಿಕಾರಿಗಳ ಮೇಲೆಯೇ ಹ'”ಲ್ಲೆ ನಡೆಸುವ ಇಂಥವರ ಮೇಲೆ ಕಠಿಣ ಕ್ರಮ ಅನಿವಾರ್ಯ.-Team Infotrend