ಪುಲ್ ಅಪ್ಸ್ ಗಳನ್ನು ಮಾಡುವ ಮೂಲಕ ವಿಶ್ವದಾಖಲೆ ಬರೆದ ಮಹಿಳೆ: ವಯಸ್ಸಿಗೂ ಸಾಧನೆಗೂ ಸಂಬಂಧವಿಲ್ಲ ಎಂದ ಜನ! ನೋಡಿ ಈ Video

ಫಿಟ್ನೆಸ್ ಎನ್ನುವುದಕ್ಕೆ ಇತ್ತೀಚಿನ ವರ್ಷಗಳಲ್ಲಿ ಇರುವಷ್ಟು ಪ್ರಾಮುಖ್ಯತೆ ಹಿಂದೆಂದೂ ಕೂಡಾ ಇರಲಿಲ್ಲ ಎನ್ನುವುದನ್ನು ನಾವೆಲ್ಲರೂ ಕೂಡಾ ಒಪ್ಪಲೇ ಬೇಕಾಗಿದೆ. ಆಧುನಿಕ ಜೀವನ ಶೈಲಿಯಿಂದಾಗಿ ಹಾಗೂ ರಾಸಾಯನಿಕ ಮಿಶ್ರಿತ ಆಹಾರ ಪದಾರ್ಥಗಳಿಂದ ಹಾಗೂ ಮಾ ಲಿ ನ್ಯ ತುಂಬಿದ ಪರಿಸರದಿಂದಾಗಿ ಎಲ್ಲೆಲ್ಲೂ ಅನಾರೋಗ್ಯ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ಚಿತ್ರ ವಿಚಿತ್ರ ಎನಿಸುವ ರೋ ಗ ಗಳು ಕಾಣಿಸಿಕೊಳ್ಳುವುದು ಒಂದು ಸಮಸ್ಯೆ ಆದರೆ ಇನ್ನೊಂದು ಕಡೆ ವೈದ್ಯಕೀಯ ಸೌಲಭ್ಯಗಳು ಎನ್ನುವುದು ದುಬಾರಿಯಾಗಿರುವುದು ಮಾತ್ರವೇ ಅಲ್ಲದೇ ಸಾಮಾನ್ಯರು ಹಾಗೂ ಬಡವರಿಗೆ ಇದು ಕೈಗೆಟುಕದಂತೆ ಆಗಿದೆ.

ಇಂತಹ ಪರಿಸ್ಥಿತಿಯಲ್ಲಿ ನಮ್ಮನ್ನು ನಾವು ರಕ್ಷಿಸಿ ಕೊಳ್ಳಲು ಇರುವ ಏಕೈಕ ದಾರಿ ಎಂದರೆ ಆರೋಗ್ಯ ಭರಿತ ಸತ್ವಯುತ ಆಹಾರದ ಸೇವನೆ ಹಾಗೂ ಫಿಟ್ನೆಸ್ ಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುವುದು. ಇದಕ್ಕೆ ವಯಸ್ಸಿನ ಬೇಧವಿಲ್ಲ. ಅಲ್ಲದೇ ಸೋಷಿಯಲ್ ಮೀಡಿಯಾಗಳಲ್ಲಿ ಕೂಡಾ ಅನೇಕ ಸೆಲೆಬ್ರಿಟಿಗಳು ಹಾಗೂ ಫಿಟ್ನೆಸ್ ಟ್ರೈನರ್ ಗಳು ಜನರಿಗೆ ತರಬೇತಿಯನ್ನು ನೀಡುವ ವೀಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಅಂತಹ ಫಿಟ್ನೆಸ್ ಟ್ರೈನರ್ ಗಳಲ್ಲಿ ಒಬ್ಬರು ಒಂದು ಹೊಸ ದಾಖಲೆಯನ್ನೇ ಬರೆದಿದ್ದು ವಿಶ್ವದ ಗಮನವನ್ನು ತನ್ನ ಕಡೆಗೆ ಸೆಳೆದಿರುವ ಅಪರೂಪದ ಘಟನೆಯೊಂದು ನಡೆದಿದೆ. ಬನ್ನಿ ಅವರು ಯಾರೆಂದು ತಿಳಿಯೋಣ.

ರೂಪಾ ಹೆಸರಿನ ಈ ಮಹಿಳೆ ಒಬ್ಬ ಫಿಟ್ನೆಸ್ ಟ್ರೈನರ್. ಇವರಲ್ಲೇನು ವಿಶೇಷ ದೇಶದಲ್ಲಿ ಬೇಕಾದಷ್ಟು ಜನ ಫಿಟ್ನೆಸ್ ಟ್ರೈನರ್ಸ್ ಇದ್ದಾರಲ್ವ ಅನ್ನೋದಾದ್ರೆ, ನಿಜಕ್ಕೂ ಇವರು ವಿಶೇಷ ಅನ್ನೋದನ್ನು ಈ ಸುದ್ದಿ ಓದಿದ ಮೇಲೆ ನೀವೇ ಒಪ್ಪಿಕೊಳ್ತೀರಾ. ರೂಪ ಅವರು ದೊಡ್ಡ ದೊಡ್ಡ ಫಿಟ್ನಿಸ್ ಟ್ರೈನರ್ ಗಳೇ ಮಾಡದ ಒಂದು ಸಾಧನೆಯನ್ನು ಮಾಡಿ, ಗಿನ್ನೆಸ್ ವಿಶ್ವ ದಾಖಲೆಯಲ್ಲಿ ತಮ್ಮ ಹೆಸರನ್ನು ನಮೂದು ಮಾಡಿದ್ದಾರೆ ರೂಪ. ಅವರು ಗಿನ್ನೆಸ್ ದಾಖಲೆ ಮಾಡಿರುವ ಸಾಧನೆ ಏನು ಎನ್ನುವುದಾದರೆ ರೂಪ ಅವರು ಒಂದು ನಿಮಿಷದಲ್ಲಿ ಬರೋಬ್ಬರಿ 34 ಪುಲ್ ಅಪ್ ಗಳನ್ನು ಮಾಡುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯ ಪುಸ್ತಕದಲ್ಲಿ ತನ್ನ ಈ ಹೊಸ ದಾಖಲೆಯನ್ನು ಸೇರಿಸಿದ್ದಾರೆ.

ವಾಸ್ತವವಾಗಿ ಕೊರೊನಾ ಲಾಕ್ ಡೌನ್ ಕಾಲದಲ್ಲಿ ರೂಪ ಅವರು ಇಂತಹುದೊಂದು ಸಾಧನೆಯನ್ನು ಮಾಡುವ ಸವಾಲನ್ನು ಸ್ವೀಕಾರ ಮಾಡಿದರು. ಆಕೆ ಪ್ರತಿದಿನ ನೂರು ಪುಲ್ ಅಪ್ಸ್ ಮಾಡುವುದನ್ನು ಆರಂಭಿಸಿದರು. ಅದಾದ ನಂತರದ ದಿನಗಳಲ್ಲಿ ಆಕೆ ಪುಲ್ ಅಪ್ಸ್ ಗಳಲ್ಲಿ ಈಗಾಗಲೇ ದಾಖಲಾಗಿದ್ದ ದಾಖಲೆಗಳ ಮಾಹಿತಿಯನ್ನು ಸಂಗ್ರಹ ಮಾಡಲು ಆರಂಭಿಸಿದರು. ಹೀಗೆ ಆರಂಭವಾದ ಆಸಕ್ತಿಯಲ್ಲಿ ಕೊನೆಗೆ ರೂಪ ತಾನೇ ಒಂದು ದಾಖಲೆಯನ್ನು ಸೃಷ್ಟಿಸಲು ತೀರ್ಮಾನವೊಂದನ್ನು ಕೂಡಾ ಮಾಡಿಯೇ ಬಿಟ್ಟರು. ನಿಮಗೆ ಆಕೆಯ ವಯಸ್ಸು ಎಷ್ಟು ತಿಳಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ರೂಪ ಅವರಿಗೆ ಈಗ ವಯಸ್ಸು 45 ಎಂದರೆ ನಂಬಲು ಅಸಾಧ್ಯ ಎನಿಸಿದರೂ ಕೂಡಾ ಅದು ನಿಜ.

ರೂಪಾ ಅವರು ಒಬ್ಬ ಫಿಟ್ನೆಸ್ ಟ್ರೈನರ್ ಅದು ಮಾತ್ರವೇ ಅಲ್ಲದೇ ಆಕೆ ವೃತ್ತಿಪರವಾಗಿ ಒಬ್ಬ ಕೋಡರ್ ಆಗಿದ್ದಾರೆ. ಇವರು ಅಮೆರಿಕದಲ್ಲಿ ನೆಲೆಸಿದ್ದು ತಮ್ಮ ಪತಿಯೊಂದಿಗೆ ವರ್ಕೌಟ್ ಆರಂಭಿಸಿದ ಅವರಿಗೆ ಈಗ ಅದು ಜೀವನದ ಒಂದು ಅವಿಭಾಜ್ಯ ಅಂಗವೇ ಆಗಿಬಿಟ್ಟಿದೆ. ವಯಸ್ಸು ಎನ್ನುವುದು ಕೇವಲ ಸಂಖ್ಯೆ ಮಾತ್ರ ಸಾಧಿಸಬೇಕು ಎನ್ನುವ ಗುರಿ ಹಾಗೂ ಆಸಕ್ತಿ ಇದ್ದರೆ ಏನನ್ನಾದರೂ ಮಾಡಬಹುದು ಎನ್ನುವುದಕ್ಕೆ ರೂಪಾ ಒಂದು ಅತ್ಯುತ್ತಮ ಉದಾಹರಣೆ ಆಗಿದ್ದು, ವರ್ಕೌಟ್ ಎಷ್ಟು ಮುಖ್ಯ ಎನ್ನುವುದನ್ನು ಇವರು ತೋರಿಸಿದ್ದಾರೆ.‌