VIDEO : ಹಸುವನ್ನು ಆಲಂಗಿಸಿಕೊಂಡರೆ ಮಾನಸಿಕ ನೆಮ್ಮದಿ : ಅಮೆರಿಕದಲ್ಲಿ ಹೆಚ್ಚುತ್ತಿದೆ ಈ ಪ್ರವೃತ್ತಿ! ಇದಕ್ಕಾಗಿ ಅಲ್ಲಿನ ಜನರು ತಲಾ 200 ಡಾಲರ್ ಖರ್ಚು ಮಾಡುತ್ತಿದ್ದಾರೆ!
ಕರೋನಾ ವೈರಸ್‌ನ ಎರಡನೇ ಅಲೆಯಿಂದಾಗಿ ದೇಶದ ಮತ್ತು ಪ್ರಪಂಚದ ಸ್ಥಿತಿ ಅಯೋಮಯವಾಗಿದೆ. ಜನರು ನಿರಂತರವಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸೋಂಕನ್ನು ತಡೆಗಟ್ಟಲು ಜನರನ್ನು ಲಾಕ್ ಡೌನ್ ಅಡಿಯಲ್ಲಿ ಮನೆಗಳಲ್ಲಿಯೇ ಇರುವಂತೆ ಮಾಡಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಭಾರತ ಸೇರಿದಂತೆ ವಿಶ್ವದ ಬಹುತೇಕ ದೇಶಗಳ ಜನರಲ್ಲಿ ಖಿನ್ನತೆ ಮತ್ತು ಆತಂಕದ ಸಮಸ್ಯೆ ಸಹ ಸಾಮಾನ್ಯವಾಗುತ್ತಿದೆ.
ಜನರು ಈ ಆತಂಕ ಮತ್ತು ಖಿನ್ನತೆಯೊಂದಿಗೆ ತಮ್ಮದೇ ಆದ ರೀತಿಯಲ್ಲಿ ಹೋರಾಡುತ್ತಿದ್ದರೂ, ಅಮೆರಿಕದಲ್ಲಿ ಇದಕ್ಕಾಗಿ ವಿಶಿಷ್ಟ ತಂತ್ರಗಳನ್ನು ರೂಪಿಸಲಾಗಿದೆ. ನೀವು ನಂಬ್ತಿರೊ ಇಲ್ವೊ, ಇಲ್ಲಿ ಮಾನಸಿಕ ಶಾಂತಿ ಪಡೆಯಲು ಹಸುವನ್ನು ತಬ್ಬಿಕೊಳ್ಳಲಾಗುತ್ತಿದೆ! ಹೌದು ಭಾರತದಲ್ಲಿ ಇದು ಸಾಮಾನ್ಯವಾದರೂ ಅಮೇರಿಕದಲ್ಲಿ ಇದು ಜನಪ್ರಿಯವಾಗುತ್ತಿದೆ.
ಹಸುವನ್ನು ಅಪ್ಪಿಕೊಳ್ಳುವ ಪ್ರವೃತ್ತಿ :
ಇನ್ನೂ ಅಚ್ಚರಿ ಸಂಗತಿಯೆಂದರೆ, ಕರೋನಾ ಯುಗದಲ್ಲಿ ಅಮೆರಿಕದಲ್ಲಿ ಹಸುವನ್ನು ಅಪ್ಪಿಕೊಳ್ಳಲು ಜನರು ಹಣವನ್ನು ಕೂಡ ಪಾವತಿಸುತ್ತಿದ್ದಾರೆ! ಕಾಂಗ್ರೆಸ್ ಮುಖಂಡ ಮಿಲಿಂದ್ ಡಿಯೋರಾ ಟ್ವಿಟ್ಟರ್ ನಲ್ಲಿ ಹಂಚಿಕೊಂಡ ಸಿಎನ್ಬಿಸಿ ವಿಡಿಯೋವೊಂದರಲ್ಲಿ ಯುಎಸ್ನಲ್ಲಿ ಜನರು ಹಸುವನ್ನು ತಬ್ಬಿಕೊಳ್ಳಲು ಒಂದು ಗಂಟೆಗೆ $ 200 ವರೆಗೆ ಪಾವತಿಸುತ್ತಿದ್ದಾರೆ!

ಭಾರತದಲ್ಲಿ 3000 ವರ್ಷಗಳಿಂದ ಹಸುಗಳನ್ನು ಪೂಜಿಸಲಾಗುತ್ತಿದೆ, ಮನೆಯ ಸದಸ್ಯರಂತೆ ನೋಡಿಕೊಳ್ಳಲಾಗುತ್ತಿದೆ, ಚಿಕ್ಕಮಕ್ಕಳಿಂದ ಹಿಡಿದು ವೃದ್ದರವರೆಗೆ ಎಲ್ಲರೂ ಹಸುಗಳ ಮೈದಡವಿ ಆಲಂಗಿಸುವುದು ಸಾಮಾನ್ಯ. ಆದರೆ ಅಮೆರಿಕೆಯಂಥ ಮುಂದುವರೆದ ದೇಶದಲ್ಲಿ ತೀರ ಇದು ಅಪರೂಪದ ಬೆಳವಣಿಗೆ.
ಹಸುವನ್ನು ತಬ್ಬಿಕೊಳ್ಳುವ ಭಾವನೆ ಮನೆಯಲ್ಲಿ ಮಗು ಅಥವಾ ಸಾಕುಪ್ರಾಣಿಗಳನ್ನು ಬೆಳೆಸುವಂತೆಯೇ ಇರುತ್ತದೆ ಎಂದು ವೈದ್ಯರು ಹೇಳುತ್ತಾರೆ. ಒಂದು ‘ಹಗ್ ಹ್ಯಾಪಿ’ ಹಾರ್ಮೋನ್ ಆಕ್ಸಿಟೋಸಿನ್, ಸಿರೊಟೋನಿನ್ ಮತ್ತು ಡೋಪಮೈನ್ ಅನ್ನು ಪ್ರಚೋದಿಸುತ್ತದೆ, ಇದರಿಂದಾಗಿ ಕಾರ್ಟಿಸೋಲ್ (ಒತ್ತಡದ ಹಾರ್ಮೋನ್) ಕಡಿಮೆಯಾಗುತ್ತದೆ. ಇದು ಆತಂಕ ಮತ್ತು ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆಯಂತೆ!
‘ಹಸು ಅಪ್ಪುಗೆ’ ರೋಗನಿರೋಧಕ ಶಕ್ತಿಯನ್ನು ನಿಯಂತ್ರಿಸುತ್ತದೆ!
ಹಸುಗಳು ಸ್ವಭಾವತಃ ಶಾಂತ, ಸೌಮ್ಯ ಮತ್ತು ತಾಳ್ಮೆಯಿಂದಿರುತ್ತವೆ. ಅದನ್ನು ಅಪ್ಪಿಕೊಳ್ಳುವವರು ಅದರ ಬೆಚ್ಚಗಿನ ದೇಹದ ಉಷ್ಣತೆ, ನಿಧಾನ ಹೃದಯ ಬಡಿತ ಮತ್ತು ದೊಡ್ಡ ಗಾತ್ರದಿಂದ ಪ್ರಯೋಜನ ಪಡೆಯುತ್ತಾರೆ. ಇವೆಲ್ಲವೂ ದೇಹದ ಚಯಾಪಚಯ, ರೋಗನಿರೋಧಕ ಶಕ್ತಿ ಮತ್ತು ಒತ್ತಡದ ಪ್ರತಿಕ್ರಿಯೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆಯಂತೆ.

ಭಾರತದಲ್ಲಿ ಭಾರತೀಯ ಮೂಲದ ಹಸುಗಳಲ್ಲಿ ಅದ್ಭುತ ಶಕ್ತಿ ಇರುವುದು ಮೊದಲಿನಿಂದಲೂ ಎಲ್ಲರಿಗೂ ಗೊತ್ತು, ಹಾಗೆಯೇ ಅದು ವೈಜ್ಞಾನಿಕವಾಗಿ ಕೂಡ ಸಾಬೀತಾಗಿದೆ. ನಮ್ಮ ದೇಶಿ ಹಸುಗಳ ದೈವಿಶಕ್ತಿ ಎಂಥದು ಅಂತ ಭಾರತೀಯರಾದ ನಮಗೆಲ್ಲ ಗೊತ್ತೇ ಇದೆ. ಇನ್ನು ಅದರ ದೇಹದಲ್ಲಿ 33 ಕೋಟಿ ದೇವರಿದ್ದಾರೆ ಎಂದು ಕೂಡ ನಂಬುವವರಿದ್ದಾರೆ.
ಆದರೆ ಅದರ ದೇಹದಲ್ಲಿ 33 ಕೋಟಿ ದೇವರಿದ್ದಾರೊ ಇಲ್ಲವೊ ಗೊತ್ತಿಲ್ಲ, ಆದರೆ ಅದರ ಹಾಲು- ತುಪ್ಪ ಇತ್ಯಾದಿಗಳು ಅಮೃತಕ್ಕೆ ಸಮಾನ ಅನ್ನುವುದಂತೂ ಸತ್ಯ. ಸಾಕಷ್ಟು ಔಷಧೀಯ ಗುಣ ಹೊಂದಿರುವ ದೇಶಿ ಹಸುವಿನ ಹಾಲು – ತುಪ್ಪಕ್ಕೆ ಜಗತ್ತಿನಲ್ಲೇ ಅತಿ ಹೆಚ್ಚಿನ ಬೆಲೆ. ಗಿರ್, ಸಾಹಿವಾಲ್, ಕಾಂಕ್ರೇಜ್ ಮುಂತಾದ ಹಸುಗಳ ತುಪ್ಪ ಕೆ.ಜಿ ಗೆ 2 ರಿಂದ 3 ಸಾವಿರವರೆಗೆ ಇರುತ್ತದೆ!
ಇನ್ನು ನಮ್ಮ ದೇಶಿ ಹಸುಗಳ ಸಗಣಿ – ಗಂಜಲಕ್ಕೂ ಭಾರಿ ಡಿಮ್ಯಾಂಡ್ ಇದೆ, ಅವುಗಳಲ್ಲೂ ಸಾಕಷ್ಟು ಔಷಧೀಯ ಗುಣ ಇದ್ದು ತುಂಬಾ ತಮ್ಮ ಅನೇಕ ಕಾಯಿಲೆಗಳಿಗೆ ಗೋಮೂತ್ರ ಸೇವಿಸುವುದು ನೂರಾರು ವರ್ಷದಿಂದ ನಡೆದು ಬಂದಿದೆ. ಕೆಲವರು ಇದನ್ನು ಟೀಕಿಸುತ್ತಾರಾದರೂ ಗೋಮೂತ್ರ ಸೇವನೆ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ.
At $200 an hour, cow hugging is a growing wellness trend in the United States.
— Milind Deora | मिलिंद देवरा ☮️ (@milinddeora) May 22, 2021
Clearly, India was ahead of the curve — dharmic scriptures have venerated cows & cattle for over 3,000 years 🕉🐮pic.twitter.com/7xPKCGYUhf
ಇದು ಭಾರತದ ಕಥೆಯಾಯಿತು, ಆದರೆ ಅತ್ಯಂತ ಮುಂದುವರೆದ ದೇಶವಾದ ಅಮೆರಿಕದಲ್ಲಿ ಹಸುಗಳನ್ನು ತಬ್ಬಿಕೊಳ್ಳುವುದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ ಎಂದು ವಿಜ್ಞಾನಿಗಳೇ ಹೇಳಿರುವುದು, ವೈದ್ಯರು ಮಾತಾಡಿರುವುದು, ಜನ ಪಾಲಿಸುತ್ತಿರುವುದು ಅಚ್ಚರಿಯ ಸಂಗತಿಯಾಗಿದೆ. ಆ ಬಗೆಗೆ ಒಂದು ವಿಡಿಯೊ ಮೇಲಿದೆ ನೋಡಿ.
-Team Infotrend