VIDEO : ಸಾಕು ನಾಯಿಗಳನ್ನು ಉಳಿಸಲು ಕರಡಿಯನ್ನೂ ಲೆಕ್ಕಿಸದೇ ನು’ಗ್ಗಿ’ದ 17 ವರ್ಷದ ಹುಡುಗಿ : ವೀಡಿಯೊ ನೋಡಿ
ಸೋಷಿಯಲ್ ಮೀಡಿಯಾದಲ್ಲಿ 17 ವರ್ಷದ ಬಾಲಕಿ ತನ್ನ ಹಿತ್ತಲಿನಲ್ಲಿ ಕರಡಿಯನ್ನು ತಳ್ಳಿ ನಾಯಿಗಳನ್ನು ಉಳಿಸಿದ ವಿಡಿಯೋವೊಂದು ಬೆಳಕಿಗೆ ಬಂದಿದೆ. ಈ ವೀಡಿಯೊ ಕ್ಯಾಲಿಫೋರ್ನಿಯಾದ್ದು, ಇದರಲ್ಲಿ ಮೂರು ಸಾಕು ನಾಯಿಗಳು ತನ್ನೆಡೆಗೆ ಬಂದು ಮೇಲೆ ಬೊಗಳುವುದನ್ನು ನೋಡಿದ ಕರಡಿ ಅವುಗಳ ಜೊತೆ ಜ’ಗ’ಳಕ್ಕಿಳಿಯಿತು. ಕಂಪೌಂಡ್ ಮೇಲಿಂದಲೇ ಅವುಗಳ ಮೇಲೆ ದಾ'”ಳಿಯೆಸಗಲು ಪ್ರಯತ್ನಿಸುತ್ತಿತ್ತು.
ಒಂದು ದೊಡ್ಡ ಕರಡಿ ತನ್ನೆರಡು ಮರಿಗಳೊಂದಿಗೆ ಜನವಸತಿಗೆ ನುಗ್ಗಿ ಮನೆಯ ಕಂಪೌಂಡ್ ಮೇಲೆ ತಿರುಗುತ್ತಿತ್ತು. ಎರಡು ಮರಿಗಳನ್ನು ಕೂಡ ಅದರ ಜೊತೆಗೇ ಕರೆದುಕೊಂಡಿತ್ತು. ಕರಡಿ ನಾಯಿಯ ಮೇಲೆ ಆ’ಕ್ರ’ಮ’ಣ ಮಾಡಲು ಪ್ರಾರಂಭಿಸುತ್ತದೆ ಆದರೆ ಆ ಹುಡುಗಿ ಅದೆಲ್ಲಿತ್ತೋ, ತನ್ನ ನಾಯಿಗಳನ್ನು ಉಳಿಸಿಕೊಳ್ಳಲು ದಾವಿಸಿ ಬಂದಳು.

ಹೇಲಿ ಮೊರೊನಿಕೊ (Hailey Moronico) ಎಂಬ ಆ ಹುಡುಗಿ ಸಮಯಕ್ಕೆ ಸರಿಯಾಗಿ ಬಂದು ಕರಡಿಯ ಕಡೆಗೆ ಓಡುತ್ತಾಳೆ. ನಂತರ ಅವಳು ತನ್ನ ನಾಯಿಗಳನ್ನು ಉಳಿಸಲು ಕರಡಿಯನ್ನು ತನ್ನ ಎರಡೂ ಕೈಗಳಿಂದ ಕಂಪೌಂಡ್ ಮೇಲಿಂದ ತಳ್ಳುತ್ತಾಳೆ. ಇದರಿಂದಾಗಿ ಕರಡಿ ಆಯತಪ್ಪಿ ಹಿಂದಕ್ಕೆ ಬೀಳುತ್ತದೆ.
ಜೋರಾಗಿ ಬೊಗಳುವ ಶಬ್ದದಿಂದ ಭ’ಯ’ಭೀ’ತವಾಗಿದ್ದ ಕರಡಿ ಮರಿಗಳು ಆಗಲೇ ಹೊರಟು ಹೋಗಿದ್ದವು. ಮೊರೊನಿಕೊ ನಂತರ ಸಣ್ಣ ನಾಯಿಗಳಲ್ಲಿ ಒಂದನ್ನು ಎತ್ತಿಕೊಂಡಳು, ಮತ್ತು ಉಳಿದವುಗಳನ್ನೂ ಜೊತೆಗೆ ಕರೆದುಕೊಂಡು ಓಡಿಬಂದಳು. ಹೇಲಿಯ ತಾಯಿ ಸಿಟ್ಲಾಲಿ ಮೊರಿನಿಕೊ ಇದನ್ನು ಫೇಸ್‌ಬುಕ್‌ನಲ್ಲಿ “ಜೀವನದ ಭ’ಯಾ’ನಕ ಕ್ಷಣಗಳಲ್ಲಿ ಒಂದು” ಎಂದು ಬಣ್ಣಿಸಿದ್ದಾರೆ.
ಘಟನೆ ನಡೆದಾಗ ಕುಟುಂಬವು ಅಂಗಳದ ಇನ್ನೊಂದು ತುದಿಯಲ್ಲಿ ಗಾರ್ಡನ್ ನಲ್ಲಿ ಇತ್ತು ಎಂದು ಹೇಲಿ ಮಾಧ್ಯಮಗಳಿಗೆ ತಿಳಿಸಿದ್ದಾಳೆ. ಆ ಹುಡುಗಿ ಮೊದಲಿಗೆ ನಾಯಿಗಳು ಇತರ ನಾಯಿಗಳ ಮೇಲೆ ಬೊಗಳುತ್ತಿವೆ ಎಂದು ಭಾವಿಸಿದ್ದಳು ಆದರೆ ನೋಡಲು ಅಲ್ಲಿಗೆ ಹೋದಾಗ ಕರಡಿಯನ್ನು ನೋಡಿ ಅವಳಿಗೆ ಶಾ’ಕ್ ಆಯಿತು. ಅಕಸ್ಮಾತ್ ಅದು ಮರಳಿ ದಾ”ಳಿ ಮಾಡಿದ್ದರೆ ಹುಡುಗಿಯ ಕಥೆ ಗಂಭೀರವಾಗುತ್ತಿತ್ತು.
ಕರಡಿ ಅವರ ನಾಯಿ ವ್ಯಾಲೆಂಟಿನಾವನ್ನು ಹಿಡಿಯುವುದರಲ್ಲಿತ್ತು ಅಷ್ಟರಲ್ಲಿ ಅವಳು ಕರಡಿಯನ್ನು ಹಿಂದಕ್ಕೆ ತಳ್ಳಿದಳು. ನಂತರ ಅವಳು ನಾಯಿಯನ್ನು ತೆಗೆದುಕೊಂಡು ಕರಡಿಯಿಂದ ದೂರ ಓಡಿಹೋದಳು. ಹೇಲಿ ತನ್ನ ಬೆರಳನ್ನು ಉಳುಕಿಸಿಕೊಂಡು ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದಾಳೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟಿಜನ್ ಸಕತ್ ಇಷ್ಟಪಟ್ಟಿದ್ದಾರೆ.
-Team Infotrend