ಗರ್ಲ್ ಫ್ರೆಂಡ್ ಜೊತೆಗಿನ ಫೋಟೊ ಶೇರ್ ಮಾಡಿದ ಲೋಕೇಶ್ ರಾಹುಲ್; ಮತ್ತಿನ್ನೇನು? ಶುರುವಾಯಿತು ಬಿಸಿ ಬಿಸಿ ಚರ್ಚೆ!

ಭಾರತೀಯ ಕ್ರಿಕೆಟ್ ತಂಡದ ಯುವ ಮತ್ತು ಭರವಸೆಯ ಆಟಗಾರ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಮತ್ತು ಕರ್ನಾಟಕದವರೇ ಆದ K L ರಾಹುಲ್ ಅವರು ಗರ್ಲ್ ಫ್ರೆಂಡ್ ಜೊತೆಗಿನ ತಮ್ಮ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ.

ರಾಹುಲ್ ಅವರು ಈ ಫೋಟೋ ಶೇರ್ ಮಾಡಿದ ನಂತರ ಬಹಳ ದಿನಗಳ ನಂತರ ಮತ್ತೆ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದ್ದಾರೆ. ಇದರಿಂದ ಲೋಕೇಶ್ ರಾಹುಲ್ ಮತ್ತು ಅವರ ಗರ್ಲ್ ಫ್ರೆಂಡ್ ಅಥಿಯಾ ಶೆಟ್ಟಿ ಇವರಿಬ್ಬರ ಪ್ರಣಯದ ಸಾಕ್ಷಿಯೇ ಇದಾಗಿದೆ ಎಂಬಂತೆ ಸದ್ಯ ಈ ಫೋಟೋ ವೈರಲ್ ಆಗುತ್ತಿದೆ.

ಅಥಿಯಾ ಶೆಟ್ಟಿ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ರಾಹುಲ್ ಅವರು ವಿಶೇಷ ಫೋಟೋವನ್ನು ಶೇರ್ ಮಾಡಿ ತಮ್ಮ ಪ್ರೀತಿಯನ್ನು ವ್ಯಕ್ತ ಮಾಡುವ ಪ್ರಯತ್ನ ಮಾಡಿದ್ದಾರೆ. ಅದರಲ್ಲಿ ಅಭಿಮಾನಿಗಳು ತಮ್ಮ ತಮ್ಮ ನೆಚ್ಚಿನ ಆಟಗಾರರಾಗಲಿ ಮತ್ತು ನಟರಾಗಲಿ ಅವರ ಮೇಲೆ ತಮ್ಮ ಗಮನವನ್ನು ಇಟ್ಟೆ ಇರುತ್ತಾರೆ. ಇದೇ ಕಾರಣದಿಂದ ರಾಹುಲ್ ಮತ್ತು ಅಥಿಯಾ ಇವರಿಬ್ಬರ ಮದುವೆಯ ಸುದ್ದಿಗಳು ಏಳುತ್ತಿವೆ.

ಸದ್ಯ ಅಥಿಯಾ ಶೆಟ್ಟಿ 28 ನೆ ವರ್ಷಕ್ಕೆ ಕಾಲಿಟ್ಟರು. ಅದೇ ಸಂಭ್ರಮದಲ್ಲಿ ಈಗ ಲೋಕೇಶ್ ರಾಹುಲ್ ಅವರು ತಮ್ಮ ಭಾವನೆಗಳ ಜೊತೆಗೆ ‘ಹ್ಯಾಪಿ ಬರ್ತಡೇ ಮ್ಯಾಡ್ ಬಚ್ಚಿ’ ಎಂಬ ಕ್ಯಾಪ್ಷನ್ ಕೊಟ್ಟು ಫೋಟೋ ಶೇರ್ ಮಾಡಿದ್ದಾರೆ.

ಅಥಿಯಾ ಶೆಟ್ಟಿ ಯಾರ ಮಗಳಿದ್ದಾಳೆ ಎಂಬುದು ಎಲ್ಲರಿಗೂ ಮೊದಲೇ ಗೊತ್ತಿದೆ ಅಲ್ವಾ? ಗೊತ್ತಿಲ್ಲದಿದ್ದರೆ ಕೇಳಿ ಬಾಲಿವುಡ್ ಬಿಗ್ ಬ್ರದರ್ ಸುನಿಲ್ ಶೆಟ್ಟಿಯವರ ಮಗಳಿದ್ದಾಳೆ. ಹೀಗಾಗಿ ಈ ಫೋಟೋಕ್ಕೆ ಮತ್ತಷ್ಟು ಬೆಲೆ ಬಂದಿದೆ.

ಲೋಕೇಶ್ ರಾಹುಲ್ ಮತ್ತು ಅಥಿಯಾ ಅವರ ಪ್ರೀತಿಯ ಬಗ್ಗೆ ಈ ಮೊದಲು ಅನೇಕ ಗಾಸಿಪ್ ಗಳು ಮೀಡಿಯಾದಲ್ಲಿ ಬಂದಿದ್ದವು. ಆದರೆ ಇಬ್ಬರೂ ತಮ್ಮ ಪ್ರೀತಿಯ ಬಗ್ಗೆ ಇನ್ನುವರೆಗೂ ಮುಕ್ತವಾಗಿ ಹೇಳಿಕೊಂಡಿಲ್ಲ.

ಆದರೆ ಗೂಗಲ್ ಸರ್ಚ್ ಎಂಜಿನ್ ಗೆ ಮಾತ್ರ K L ರಾಹುಲ್ ಪತ್ನಿಯ ಬಗ್ಗೆ ಕೇಳಿದಾಗ ಅಥಿಯಾ ಶೆಟ್ಟಿಯ ಹೆಸರನ್ನು ಮುಂದೆ ತಂದಿಡುತ್ತದೆ. ಹೀಗಾಗಿ ಗೂಗಲ್ ಸಹ ಇವರಿಬ್ಬರ ಪ್ರೀತಿಯನ್ನು ಎತ್ತಿ ತೋರಿಸುತ್ತಿದೆ.

ಈ ಮೊದಲು ಟೀಮ್ ಇಂಡಿಯಾದ ಸದಸ್ಯರಾದ ಯುವರಾಜ್ ಸಿಂಗ್, ನಾಯಕ ವಿರಾಟ್ ಕೊಹ್ಲಿ, ಹಾರ್ದಿಕ ಪಾಂಡ್ಯಾ ಇವರೆಲ್ಲರ ಪ್ರೇಮ ಪ್ರಕರಣಗಳು ತುಂಬಾ ಚರ್ಚೆಯಾದವು. ಅವರ ನಂತರ ಈಗ ಸರದಿ ಲೋಕೇಶ್ ರಾಹುಲ್ ಅವರದ್ದು ಅಂತೆ ಕಾಣುತ್ತೆ.