VIDEO : ತಮ್ಮ ತಾಯಿ ಜೀವನ್ಮರಣದ ನಡುವೆ ಹೋರಾಡುವುದನ್ನು ಕಂಡು ಆಕೆಯ ಹೆಣ್ಣುಮಕ್ಕಳು ಬಾಯಿಯ ಮೂಲಕವೇ ಉಸಿರು ನೀಡಿದರು! ಆದರೆ…

ಆಮ್ಲಜನಕದ ಕೊರತೆಯಿಂದಾಗಿ ಸಾವುಗಳ ಸರಪಳಿ ಮುಂದುವರಿಯುತ್ತಲೇ ಇದೆ. ರೋಗಿಗಳ ಜೀ’ವ ಉಳಿಸಲು ಸಿಬ್ಬಂದಿ ಅಲ್ಲಿ ಇಲ್ಲಿ ಅಲೆದಾಡುತ್ತಿದ್ದಾರೆ, ಸಿಲಿಂಡರ್ ಪಡೆಯಲು ಸುತ್ತಾಡುತ್ತಿದ್ದಾರೆ, ಆದರೆ ಎಲ್ಲ ಕಡೆಯೂ ಕೊರತೆ ಎದ್ದು ಕಾಣುತ್ತಿದೆ. ಆಮ್ಲಜನಕದ ಕೊರತೆಯಿಂದಾಗಿ, ತಮ್ಮ ತಾಯಿಗೆ ತಮ್ಮ ಬಾಯಿಯಿಂದಲೇ ಆಮ್ಲಜನಕವನ್ನು ನೀಡುತ್ತಿರುವುದನ್ನು ನಾವಿಲ್ಲಿ ನೋಡಬಹುದು.

ಇತ್ತೀಚೆಗೆ ಆಗ್ರಾದ ವಿಡಿಯೋವೊಂದು ವೈರಲ್ ಆಗಿತ್ತು. ಇದರಲ್ಲಿ ಮಹಿಳೆ ತನ್ನ ಗಂಡನ ಜೀ’ವವನ್ನು ಉಳಿಸಲು ತನ್ನ ಬಾಯಿಯಿಂದ ಆಮ್ಲಜನಕವನ್ನು ನೀಡುತ್ತಿರುವುದು ಕಂಡುಬಂತು, ಇದರ ನಂತರವೂ ಗಂಡನ ಜೀವ ಉಳಿಸಲಾಗಲಿಲ್ಲ. ಮಹಿಳೆಯ ಪತಿ ಹೆಂಡತಿಯ ತೊಡೆಯ ಮೇಲೆಯೇ ಸಾ’ವನ್ನಪ್ಪಿದ್ದಾನು.

ಇದೇ ರೀತಿಯ ವಿಡಿಯೋ ಮತ್ತೆ ವೈರಲ್ ಆಗಿದೆ. ವಿಡಿಯೋವು ಬಹ್ರೇಚ್‌ನ ಆಸ್ಪತ್ರೆಯಾಗಿದ್ದು, ಇಲ್ಲಿ ಇಬ್ಬರು ಹೆಣ್ಣುಮಕ್ಕಳು ತಮ್ಮ ಅನಾರೋಗ್ಯಪೀಡಿತ ತಾಯಿಯನ್ನು ವೈದ್ಯಕೀಯ ಕಾಲೇಜಿನ ಎಮರ್ಜೆನ್ಸಿ ವಾರ್ಡಿಗೆ ಕರೆದೊಯ್ದಿದ್ದಾರೆ. ಇಲ್ಲಿ ಉಸಿರಾಟದ ತೊಂದರೆಯಿಂದಾಗಿ ಆಕೆ ಒದ್ದಾಡುತ್ತಿದ್ದಾಗ ಅದನ್ನು ನೋಡಲಾಗದೇ ಆಕೆಯ ಮಕ್ಕಳು ತಮ್ಮ ಬಾಯಿಯ ಮೂಲಕವೇ ಉಸಿರು ನೀಡಿದರು.

ಆಕೆಗೆ ತಕ್ಷಣ ಆಕ್ಸಿಜನ್ ಸಿಲಿಂಡರ್ ಅಗತ್ಯವಿತ್ತು. ಅದನ್ನು ಒದಗಿಸಲು ಕುಟುಂಬವು ಸಾಕಷ್ಟು ಪ್ರಯತ್ನಿಸಿದರೂ ಅದು ವಿಫಲವಾಯಿತು. ತಾಯಿ ಬಳಲುತ್ತಿರುವದನ್ನು ನೋಡಿ, ಹೆಣ್ಣುಮಕ್ಕಳು ಬಾಯಿಂದ ಆಮ್ಲಜನಕವನ್ನು ನೀಡಲು ಪ್ರಾರಂಭಿಸಿದರು. ಈ ಹೆಣ್ಣುಮಕ್ಕಳು ದೀರ್ಘಕಾಲದವರೆಗೆ ಬಾಯಿಯಿಂದ ಆಮ್ಲಜನಕವನ್ನು ನೀಡುತ್ತಲೇ ಇದ್ದರು.

ಸ್ಟ್ರೆಚರ್ನಲ್ಲಿ ಆಕೆ ದೀರ್ಘಕಾಲದವರೆಗೆ ಜೀವನ ಮತ್ತು ಸಾ’ವಿನೊಂದಿಗೆ ಹೋರಾಡುತ್ತಿದ್ದಳು. ಆದರೆ ಕೊನೆಗೆ ಆ ಹೆಣ್ಣುಮಕ್ಕಳನ್ನು ತಾಯಿಯನ್ನು ಉಳಿಸಲು ಮಾಡಿದ ಪ್ರಯತ್ನವೆಲ್ಲ ವಿಫಲವಾಯಿತು. ಕೆಲವೇ ನಿಮಿಷಗಳಲ್ಲಿ ತಾಯಿ ಮಕ್ಕಳ ಕಣ್ಣ ಮುಂದೆಯೇ ಕೊ’ನೆಯು’ಸಿರೆ’ಳೆದರು. ಇದರ ನಂತರ ಹೆಣ್ಣುಮಕ್ಕಳು ತಾಯಿಯ ದೇಹಕ್ಕೆ ಅಪ್ಪಿಕೊಂಡು ಅಳುವ ದೃಶ್ಯ ಮನ ಕಲುಕುವಂತಿತ್ತು.

ಶನಿವಾರ ಮಧ್ಯರಾತ್ರಿಯ ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ, ವೈದ್ಯಕೀಯ ಕಾಲೇಜು ನಿರ್ವಹಣೆಯ ಕುರಿತು ಮತ್ತೊಮ್ಮೆ ಪ್ರಶ್ನೆಗಳು ಎದ್ದಿವೆ. ಶುಕ್ರವಾರ ರಾತ್ರಿ ಎಂಟು ಗಂಟೆಗೆ ಮಹಿಳೆಯನ್ನು ಆಸ್ಪತ್ರೆಯನ್ನು ತರಲಾಗಿದೆ ಎಂದು ಬಹ್ರೇಚ್ ವೈದ್ಯಕೀಯ ಕಾಲೇಜಿನ ಸಿಎಂಎಸ್ ಡಾ.ಡಿಕೆ ಸಿಂಗ್ ತಿಳಿಸಿದ್ದಾರೆ.

ಆ ಸಮಯದಲ್ಲಿ ಅವರು ಕೊ’ನೆಯ ಉಸಿರು ಎಳೆಯುತ್ತಿದ್ದರು. ತಕ್ಷಣ ಆಮ್ಲಜನಕವನ್ನು ತರಿಸಲಾಯಿತು, ಆದರೆ ಚಿಕಿತ್ಸೆ ಕೊಡುವ ಮೊದಲೇ ಅವರು ಸ’ತ್ತರು. ಉಸ್ತುವಾರಿ ಸಿಎಮ್ಎಸ್ ಡಾ.ಕೆ.ಕೆವರ್ಮಾ ಅವರು ತಕ್ಷಣವೇ ಡಾ. ಆಶಿಶ್ ಅಗರ್ವಾಲ್ ಸೇರಿದಂತೆ ಇಬ್ಬರು ವೈದ್ಯರನ್ನು ಕರೆದು ತೋರಿಸಿದರು. ಇಬ್ಬರೂ ಆಕೆಯ ಸಾ’ವನ್ನು ದೃಢಪಡಿಸಿದರು.

ಬಾಯಿಯ ಮೂಲಕ ಉಸಿರಾಟವನ್ನು ನೀಡಿ ತಾಯಿಯ ಜೀವವನ್ನು ಉಳಿಸಬಹುದು, ಎಂದು ಆ ಹುಡುಗಿಯರು ಅಂದುಕೊಂಡಿದ್ದು ತಪ್ಪಾಯಿತು, ಕೊನೆಗೂ ತಾಯಿಯನ್ನು ಕಳೆ’ದುಕೊಂಡರು. ಸ್ವಲ್ಪ ಸಮಯದ ನಂತರ ಮೃ’ತ ದೇ’ಹದೊಂದಿಗೆ ಹೋದರು. ವಿಚಿತ್ರವೇನೆಂದರೆ ಆಸ್ಪತ್ರೆಯವರು ಮೃ’ತ’ದೇ’ಹವನ್ನು ಅವರಿಗೇ ಕೊಟ್ಟಿದ್ದಾರೆ, ಅವರ ಎಂಟ್ರಿ ಕೂಡ ಮಾಡಿಲ್ಲ! ವಿಡಿಯೊ ಕೆಳಗಿದೆ ನೋಡಿ…

-Team Infotrend