ಕರೋನದಿಂದ ರಕ್ಷಿಸಿಕೊಳ್ಳಲು ಗೋಮುತ್ರ ಹಾಗೂ ಸಗಣಿಯನ್ನು ಬಳಸುತ್ತಿರುವ ಜನ! ಇದರಿಂದ ಏನಾಗುತ್ತದೆ, ವೈದ್ಯರು ಏನ್ ಹೇಳ್ತಾರೆ ನೋಡಿ…

ಕರೋನ ವೈರಸ್ ಮಹಾಮಾರಿಯ ಎರಡನೇ ಅಲೆಯು ಭಾರತವನ್ನು ಸಂಪೂರ್ಣ ನಡುಗಿಸುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ. ಈ ಮಹಾಮಾರಿ ಇಷ್ಟು ದಿನ ಕೇವಲ ನಗರಗಳಲ್ಲಿ ಮಾತ್ರ ತನ್ನ ಕಬಂಧ ಬಾಹುಗಳನ್ನು ಚಾಚಿತ್ತು, ಆದರೆ ಇತ್ತೀಚೆಗೆ ಇದು ಹಳ್ಳಿ ಹಳ್ಳಿಗೂ ಹರಡುತ್ತಿರುವುದು ವಿಷಾದನೀಯ ಸಂಗತಿ. ಇಂತಹ ಸಂದರ್ಭದಲ್ಲಿ ಅಸಹಾಯಕ ಹಳ್ಳಿಯ ಜನರು ಈ ವೈರಸ್ ನಿಂದ ರಕ್ಷಿಸಿಕೊಳ್ಳಲು ತರಹೇವಾರಿ ಪ್ರಯತ್ನಗಳನ್ನು ಮಾಡುತ್ತಿದ್ದಾರೆ, ಆದರೆ ಇವುಗಳ ಬಗ್ಗೆ ಡಾಕ್ಟರ್ ಕಳವಳ ವ್ಯಕ್ತಪಡಿಸಿದ್ದಾರೆ.

ಗುಜರಾತ್ ನಲ್ಲಿನ ಕೆಲವು ಜನರು ಗೋಶಾಲೆಗಳಿಗೆ ತೆರಳಿ ಅಲ್ಲಿನ ಗೋವುಗಳ ಸಗಣಿಯನ್ನು ಮೈಗೆಲ್ಲ ಬಳಿದುಕೊಂಡು ಗೋಮೂತ್ರ ಸೇವನೆ ಮಾಡುತ್ತಿದ್ದಾರೆ, ಇದರಿಂದ ಅವರ ಇಮ್ಮ್ಯೂನ್ ಪವರ್ ಹೆಚ್ಚಾಗುತ್ತದೆ ಹಾಗೂ ಕರೋನ ಬರದಂತೆ ತಡೆಯುತ್ತದೆ ಎಂದು ನಂಬಿದ್ದಾರೆ.

ಇದರ ಬಗ್ಗೆ ಅಲ್ಲಿನ ಸ್ಥಳೀಯ ಗೋಶಾಲೆಯ ಮ್ಯಾನೇಜರ್ ಒಬ್ಬರು ಹೇಳುವ ಪ್ರಕಾರ ಕೋವಿಡ್ ಪೇಷಂಟ್ ಗಳಿಗೆ ಟ್ರೀಟ್ಮೆಂಟ್ ಕೊಡಲು ಹೋಗುವ ಮುನ್ನ ಕೆಲವು ಡಾಕ್ಟರ್ ಗಳು ಸಹ ಗೋಶಾಲೆಗೆ ಬಂದು ಗೋವಿನ ಸಗಣಿ ಬಳಿದುಕೊಂಡು ಗೋಮುತ್ರ ಸೇವನೆ ಮಾಡಿ ಕೋವಿಡ್ ವಾರ್ಡ್ ಗೆ ಧೈರ್ಯದಿಂದ ಹೋಗುತ್ತಾರಂತೆ!

ಆ ಮ್ಯಾನೇಜರ್ ಗೌತಮ್ ಅವರು ಸಹ ಕಳೆದ ವರ್ಷ ಕರೋನ ಪಾಸಿಟಿವ್ ಬಂದಾಗ ಶ್ರೀ ಸ್ವಾಮೀನಾರಾಯಣ ವಿಶ್ವ ವಿದ್ಯಾಲಯ ಪ್ರತಿಷ್ಠಾನ ಕ್ಕೆ ತೆರಳಿ ಅಲ್ಲಿ ಈ ಥೆರಪಿ ಗೆ ಒಳಗಾಗಿ ಕರೋನದಿಂದ ಗುಣಮುಖರಾದರಂತೆ. ಇನ್ನೂ ಇಲ್ಲಿನ ಜನ ಗೋಶಾಲೆಗೆ ತೆರಳಿ ಗೋವಿನ ಸಗಣಿ ಬಳಿದುಕೊಂಡು, ಯೋಗಾಭ್ಯಾಸ ಮಾಡಿ ನಂತರ ಗೋಮುತ್ರ ಸೇವಿಸಿ ಬರುತ್ತಾರಂತೆ.

ಆದರೆ ಇದರಿಂದ ಜನರಿಗೆ ಇನ್ನೂ ಹೆಚ್ಚಿನ ತೊಂದರೆಯಾಗಬಹುದು ಎಂದು ಹಲವು ಡಾಕ್ಟರ್ ಗಳ ಅಭಿಪ್ರಾಯ. ಇದರ ಬಗ್ಗೆ ಮಾತನಾಡಿದ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ನ ಡಾಕ್ಟರ್ ಜೆ. ಜಯಲಾಲ್ ಅವರ ಪ್ರಕಾರ, ಗೋಮುತ್ರ ಹಾಗೂ ಸಗಣಿಯ ಥೆರಪಿಗೆ ಯಾವುದೇ ತೆರನಾದ ವೈಜ್ಞಾನಿಕ ಹಿನ್ನೆಲೆ ಇಲ್ಲ.

ಇದು ಜನರು ತಮ್ಮಷ್ಟಕ್ಕೆ ತಾವೇ ಮಾಡಿಕೊಳ್ಳುತ್ತಿರುವ ಕೆಲಸ ಇದರಿಂದ ಎಷ್ಟು ಲಾಭವಿದೆಯೋ ಗೊತ್ತಿಲ್ಲ ಬದಲಾಗಿ ಇದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡುವುದರಲ್ಲಿ ಸಂಶಯವಿಲ್ಲ ಎಂದು ಹೇಳುತ್ತಾರೆ. ಅವರ ಪ್ರಕಾರ ಗೋವಿನ ಸಗಣಿಯ ಥೆರಪಿ ಮಾಡುವಾಗ ಅಕಸ್ಮಾತ್ ಆ ಹಸುವಿಗೆ ಯಾವುದಾದರೂ ವೈರಲ್ ಅಥವಾ ಇನ್ನಿತರೇ ಸೂಕ್ಷ್ಮ ಜೀವಿಗಳಿಂದ ಬಂದ ರೋಗವಿದ್ದರೆ ಅದು ಕೂಡ ಮನುಷ್ಯನ ದೇಹ ಸೇರುವ ಸಾಧ್ಯತೆ ಹೆಚ್ಚಿರುತ್ತದೆ.

ಅಷ್ಟೇ ಅಲ್ಲದೇ ಈ ಥೆರಪಿಗೆ ಹೆಚ್ಚು ಜನ ಸೇರುವದರಿಂದ ಕರೋನ ಸೋಶಿಯಲ್ ಡಿಸ್ಟನ್ಸ್ ಮೇಂಟೈನ್ ಮಾಡೋದು ಕೂಡ ಅಸಾಧ್ಯ. ಇದರಿಂದಾಗಿ ಕರೋನ ಕೂಡ ಹೆಚ್ಚಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಆದ ಕಾರಣ ಯಾರು ಕೂಡ ಈ ರೀತಿಯ ಪ್ರಯೋಗಗಳನ್ನು ಮಾಡದೇ ಇರುವುದು ಒಳ್ಳೆಯದು.
-Team Infotrend