Video; ದಸರೆಯ ಹಬ್ಬದ ಶುಭಮೂರ್ತದಲ್ಲಿ ಮನೆಗೆ ತಂದನು ಹೊಸ ಕಾರು; ಆದರೆ ಅದೃಷ್ಟ ಸರಿ ಇರಲಿಲ್ಲವೇನೋ ಪಾಪ!

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ಕೆಲಸಕ್ಕೆ ಮಹೂರ್ತಗಳನ್ನು ನೋಡುತ್ತೇವೆ. ಒಳ್ಳೆಯ ಮುಹೂರ್ತದ ಸಂದರ್ಭದಲ್ಲಿ ಒಳ್ಳೆಯ ಮಹತ್ವದ ಕೆಲಸಗಳನ್ನು ಮಾಡುವ ಪರಂಪರೆ ಮೊದಲಿನಿಂದಲೇ ನಡೆದುಕೊಂಡು ಬಂದಿದೆ. ಒಟ್ಟಿನಲ್ಲಿ ಅನೇಕ ದಿನಗಳ ಕನಸುಗಳು ಯಾವುದೇ ರೀತಿಯ ದೃಷ್ಟಿ ತಗುಲದೆ ಸರಳತೆಯಿಂದ ನಡೆಯಬೇಕು ಎಂಬ ಉದ್ದೇಶ ಇದರ ಹಿಂದೆ ಇರುತ್ತದೆ. ಅದೇ ರೀತಿ ದಸರೆಯ ಮುಹೂರ್ತ ವರ್ಷದಲ್ಲಿ ಎಲ್ಲಕ್ಕೂ ಒಳ್ಳೆಯ ಹಾಗೂ ಅಪರೂಪದ ಮಹೂರ್ತ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಹೆಚ್ಚಿನ ಜನರು ಇಂತಹ ಶುಭ ಮುಹೂರ್ತದಲ್ಲಿಯೇ ಮನೆ ಖರೀದಿ, ವಾಸ್ತು ಶಾಂತಿ, ವಾಹನಗಳ ಖರೀದಿ ಅಥವಾ ಇನ್ನಿತರ ಟಿವಿ, ಫ್ರಿಡ್ಜ್ ಈ ರೀತಿಯ ವಿಶೇಷ ವಸ್ತುಗಳ ಖರೀದಿಯನ್ನು ಮಾಡುತ್ತಾರೆ.

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಮೂರ್ನಾಲ್ಕು ದಿನಗಳಿಂದ ವಿಡಿಯೋ ಒಂದು ವೈರಲ್ ಆಗುತ್ತಿದೆ. ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ದಸರೆಯ ಹಬ್ಬದ ಶುಭಗಳಿಗೆಯಲ್ಲಿ ಫೋರ್ ವೀಲರ್ ಒಂದನ್ನು ಖರೀದಿ ಮಾಡಿ ಮನೆಗೆ ತೆಗೆದುಕೊಂಡು ಬರುತ್ತಿದ್ದಾನೆ. ಈ ಸಂದರ್ಭದಲ್ಲಿ ಮನಸ್ಸಿಗೆ ಬೇಜಾರಾಗುವ ಘಟನೆಯೊಂದು ಆತನ ಜೊತೆಗೆ ನಡೆದಿದೆ. ಪ್ರಸ್ತುತ ದೃಶ್ಯ ಸೊಸೈಟಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದೃಶ್ಯದಲ್ಲಿ ಕಂಡು ಬರುವ ಪ್ರಕಾರ, ಸೊಸೈಟಿಯಲ್ಲಿ ಕಾರು ಪ್ರವೇಶ ಮಾಡುವಾಗ ವ್ಯಕ್ತಿಯೊಬ್ಬ ಮುಖ್ಯ ಗೇಟ್ ಓಪನ್ ಮಾಡಿ ಕಾರು ಚಾಲಕನಿಗೆ ಒಳಗೆ ಬರಲು ಹೇಳುತ್ತಾನೆ. ಆಗ ಕಾರುಚಾಲಕ ತುಂಬಾ ಜಾಗೃತೆಯಿಂದಲೇ ಕಾರನ್ನು ಒಳಗೆ ತರುತ್ತಾನೆ. ಮುಂದಿನ ಕ್ಷಣವೇ ಚಾಲಕ ತನ್ನ ಕಾರಿನ ಮೇಲಿನ ನಿಯಂತ್ರಣವನ್ನು ಕಳೆದುಕೊಂಡು ನೇರ ಬದಿಗೆ ಪಾರ್ಕ್ ಮಾಡಲಾದ ಬೈಕುಗಳ ಮೇಲೆ ಕಾರನ್ನು ನುಗ್ಗಿಸುತ್ತಾನೆ. ಕಾರು ಹಾಗೆಯೇ ಬೈಕ್ ಗಳ ಮೇಲೆ ನುಗ್ಗುತ್ತಾ ಮುಂದೆ ಹೋಗಿ ಇನ್ನೇನು ಕೆಳಗೆ ವಾಲಿ ಬೀಳುತ್ತದೆ ಎನ್ನುವಷ್ಟರಲ್ಲಿ ಹಾಗೆ ನಿಂತುಬಿಡುತ್ತದೆ. ಈ ದೃಶ್ಯವು ನೋಡಲು ತುಂಬಾ ಕೆಡಕಿನಿಸುತ್ತದೆ. ಕಾರಣ ಹೊಸದಾದ ಕಾರು ಎಷ್ಟೊಂದು ಆಸೆಯಿಂದ ಮನೆಗೆ ತರುವ ಹವ್ಯಾಸವಿರುತ್ತದೆ. ಮನೆಗೆ ಬಂದ ನಂತರ ಕೆಲವೇ ಕ್ಷಣಗಳಲ್ಲಿ ಈ ರೀತಿ ಇನ್ಸಿಡೆಂಟ್ ನಡೆದಾಗ ಸಂಬಂಧಪಟ್ಟ ವ್ಯಕ್ತಿಯ ಮನಸ್ಸಿಗೆ ತುಂಬಾ ನೋವು ಉಂಟಾಗುತ್ತದೆ. ಮಿತ್ರರೇ ಇಂತ ಕೆಲಸ ಮಾಡುವಾಗ ದಯವಿಟ್ಟು ನುರಿತ ಚಾಲಕರನ್ನೇ ನಡೆಸಲು ನೀಡಬೇಕು. ಕಾರಣ ಅತಿಯಾದ ಆತ್ಮವಿಶ್ವಾಸವು ಕೆಲವೊಮ್ಮೆ ಹಾನಿಗೆ ಒಳಪಡಿಸುತ್ತದೆ.

ವೀಡಿಯೋ ನೋಡಿ

ಪ್ರಸ್ತುತ ವಿಡಿಯೋ ನೋಡಿದ ನಂತರ ನೇಟಿಜನ್ಸ್ ಗಳಿಗೂ ಸಹ ತುಂಬಾ ಕೆಡುಕಿನಿಸಿದೆ. ವಿಡಿಯೋ ನೋಡಿದ ನೇಟಿಜನ್ಸ್ ಗಳು ಅನೇಕ ರೀತಿಯ ನೋವಿನ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.